ಆಟೋ ಎಕ್ಸ್‌ಪೋದ ಹೊಸ ಆತಿಥಿ ನೋಡಲು ಮರೆಯದಿರಿ!

By Nagaraja

ಮುಂಬರುವ 2016 ಆಟೋ ಎಕ್ಸ್ ಪೋದಲ್ಲಿ ಹೊಸ ಆತಿಥಿಯೊಂದರ ಪ್ರವೇಶವಾಗಲಿದೆ. ನಿಮಗೆಲ್ಲರಿಗೂ ತಿಳಿದಿರುವಂತೆಯೇ ಜಪಾನ್ ಮೂಲದ ಟೊಯೊಟಾ ಸಂಸ್ಥೆಯು ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿರುವ ಇನ್ನೋವಾ ಹೆಚ್ಚಿನ ಬದಲಾವಣೆಗಳೊಂದಿಗೆ ಭರ್ಜರಿ ಬಿಡುಗಡೆ ಮಾಡಲಿದೆ.

2016 ಟೊಯೊಟಾ ಇನ್ನೋವಾ ಬಹು ಬಳಕೆಯ ವಾಹನವು ಹಿಂದಿನ ಮಾದರಿಗಿಂತಲೂ ಹಗುರ ಭಾರವಾಗಿರಲಿದ್ದು, ಹೆಚ್ಚಿನ ಇಂಧನ ಕ್ಷಮತೆಯನ್ನು ನೀಡಲಿದೆ.

2016 ಟೊಯೊಟಾ ಇನ್ನೋವಾ


ಟೊಯೊಟಾದ ನೂತನ ಗ್ಲೋಬಲ್ ಆರ್ಕಿಟೆಕ್ಚರ್ (ಟಿಎನ್‌ಜಿಎ) ತಳಹದಿಯಲ್ಲಿ ನಿರ್ಮಾಣವಾಗುತ್ತಿರುವ ನೂತನ ಇನ್ನೋವಾ ಹೊರಗಡೆ ನೂತನ ಗ್ರಿಲ್, ಹೆಡ್ ಲ್ಯಾಂಪ್, ಎಲ್ ಇಡಿ ಡೇಟೈಮ್ ರನ್ನಿಂಗ್ ಲ್ಯಾಂಪ್ ಹಾಗೂ ಫಾಗ್ ಲ್ಯಾಂಪ್ ಪಡೆಯಲಿದೆ. ಹಿಂಬದಿಯಲ್ಲೂ ಹೊಸ ಬಂಪರ್ ಮತ್ತು ಟೈಲ್ ಲ್ಯಾಂಪ್ ಕಂಡುಬರಲಿದೆ.

ಕಾರಿನೊಳಗೆ ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಪವರ್ ವಿಂಡೋ, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್, ಟಚ್ ಸ್ಕ್ರೀನ್ ಇನ್ಪೋಟೈನ್ಮೆಂಟ್ ಸಿಸ್ಟಂ ಜೊತೆ ನೇವಿಗೇಷನ್, ಬ್ಲೂಟೂತ್ ಕನೆಕ್ಟಿವಿಟಿ, ಯುಎಸ್ ಬಿ ಮತ್ತು ಆಕ್ಸ್ ಇನ್ ಇತ್ಯಾದಿ ವೈಶಿಷ್ಟ್ಯಗಳಿರಲಿದೆ.

ಜಾಗತಿಕ ಮಾರುಕ್ಟಟೆಯಲ್ಲಿ ನೂತನ ಇನ್ನೋವಾ ಎರಡು ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. ಇದು 2.0 ಲೀಟರ್ ವಿವಿಟಿ-ಐ ಪೆಟ್ರೋಲ್ ಹಾಗೂ 2.4 ಲೀಟರ್ ಜಿಡಿ ಡೀಸೆಲ್ ಎಂಜಿನ್ ಪಡೆದುಕೊಂಡಿದೆ. ಇದರ ಪೆಟ್ರೋಲ್ ಎಂಜಿನ್ 183 ಎನ್‌ಎಂ ತಿರುಗುಬಲದಲ್ಲಿ 137 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಅದೇ ಹೊತ್ತಿಗೆ ಡೀಸೆಲ್ ಮ್ಯಾನುವಲ್ ಹಾಗೂ ಆಟೋಮ್ಯಾಟಿಕ್ ಮಾದರಿಯು ಅನುಕ್ರಮವಾಗಿ 342 ಎನ್ ಎಂ ಹಾಗೂ 360 ಎನ್‌ಎಂ ತಿರುಗುಬಲದಲ್ಲಿ 147 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಅಂತೆಯೇ ಮ್ಯಾನುವಲ್ ಹಾಗೂ ಆರು ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಕಂಡುಬರಲಿದೆ.

ಹಾಗಿದ್ದರೂ ಭಾರತದಲ್ಲಿ ಬಿಡುಗಡೆಯಾಗಲಿರುವ ಮಾದರಿಯು ಡೀಸೆಲ್ ಎಂಜಿನ್ ಆಯ್ಕೆಯನ್ನು ಮಾತ್ರ ಪಡೆಯುವ ಸಾಧ್ಯತೆಯಿದೆ. ಇದು ಈಗಿರುವ ಡೀಸೆಲ್ ಎಂಜಿನ್ ಗಿಂತಲೂ ಹೆಚ್ಚು ಪವರ್ ಫುಲ್ ಎನಿಸಿಕೊಳ್ಳಲಿದೆ.

ಆಯಾಮ

  • ಉದ್ದ: 4735 ಎಂಎಂ
  • ಅಗಲ: 1830 ಎಂಎಂ
  • ಎತ್ತರ: 1795 ಎಂಎಂ
  • ಚಕ್ರಾಂತರ: 2750 ಎಂಎಂ

More from DriveSpark

Article Published On: Friday, January 22, 2016, 12:58 [IST]
English summary
New Toyota Innova Set For Indian Debut At 2016 Auto Expo
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+