ನಿಸ್ಸಾನ್ ಜೊತೆಗೆ ದಟ್ಸನ್ ಕಾರುಗಳಿಗೂ ತಟ್ಟಿದ ಬೆಲೆ ಏರಿಕೆ ಬಿಸಿ

ದೇಶದಲ್ಲಿ ನಿಸ್ಸಾನ್ ಕಾರುಗಳಿಗೆ 30,000 ರು.ಗಳ ವರೆಗೆ ಬೆಲೆ ಏರಿಕೆಗೊಳಿಸಲಾಗಿದೆ.

By Nagaraja

ದೇಶದ ವಾಹನ ಮಾರುಕಟ್ಟೆಯಲ್ಲಿರುವ ಮಗದೊಂದು ಮುಂಚೂಣಿಯ ವಾಹನ ಸಂಸ್ಥೆಯು ಬೆಲೆ ಏರಿಕೆ ನೀತಿ ಪ್ರಕಟಿಸಲು ನಿರ್ಧರಿಸಿದೆ. ಜಪಾನ್ ಮೂಲದ ನಿಸ್ಸಾನ್ ಸಂಸ್ಥೆಯು ತನ್ನ ಶ್ರೇಣಿಯ ಕಾರುಗಳಿಗೆ ಗರಿಷ್ಠ 30,000 ರು.ಗಳ ವರೆಗೆ ಬೆಲೆ ಏರಿಕೆಗೊಳಿಸಲು ನಿರ್ಧರಿಸಿದೆ.

ನಿಸ್ಸಾನ್ ಜೊತೆಗೆ ದಟ್ಸನ್ ಕಾರುಗಳಿಗೂ ತಟ್ಟಿದ ಬೆಲೆ ಏರಿಕೆ ಬಿಸಿ

ಇಲ್ಲಿ ಗಮನಾರ್ಹ ಅಂಶವೆಂದರೆ ನಿಸ್ಸಾನ್ ಒಡೆತನದಲ್ಲಿರುವ ದಟ್ಸನ್ ಶ್ರೇಣಿಯ ಬಜೆಟ್ ಕಾರುಗಳಿಗೂ ಬೆಲೆ ಏರಿಕೆ ಬಿಸಿ ತಟ್ಟಲಿದೆ.

ನಿಸ್ಸಾನ್ ಜೊತೆಗೆ ದಟ್ಸನ್ ಕಾರುಗಳಿಗೂ ತಟ್ಟಿದ ಬೆಲೆ ಏರಿಕೆ ಬಿಸಿ

ನಿರ್ಮಾಣ ವೆಚ್ಚ ಏರಿಕೆಯಾಗಿರುವುದೇ ನಿಸ್ಸಾನ್ ಬೆಲೆ ಏರಿಕೆ ನೀತಿಗೆ ಪ್ರೇರಣೆಯಾಗಿದೆ. ಇದರೊಂದಿಗೆ ಹೊಸ ವರ್ಷದಿಂದ ನಿಸ್ಸಾನ್ ಕಾರುಗಳು ದುಬಾರಿಯೆನಿಸಲಿದೆ.

ನಿಸ್ಸಾನ್ ಜೊತೆಗೆ ದಟ್ಸನ್ ಕಾರುಗಳಿಗೂ ತಟ್ಟಿದ ಬೆಲೆ ಏರಿಕೆ ಬಿಸಿ

ಭಾರತದಲ್ಲಿ ನಿಸ್ಸಾನ್ ಸಂಸ್ಥೆಯು ದೆಹಲಿ ಎಕ್ಸ್ ಶೋರೂಂ ಬೆಲೆಯ ಪ್ರಕಾರ 3.28 ಲಕ್ಷ ರು.ಗಳ ದಟ್ಸನ್ ಶ್ರೇಣಿಯಿಂದ ಆರಂಭವಾಗಿ ಅತ್ಯಂತ ದುಬಾರಿ 1.99 ಕೋಟಿ ರುಪಾಯಿ ಬೆಲೆ ಬಾಳುವ ನಿಸ್ಸಾನ್ ಬಿಟಿಆರ್ ಕಾರುಗಳನ್ನು ಮಾರಾಟ ಮಾಡುತ್ತಿದೆ.

ನಿಸ್ಸಾನ್ ಜೊತೆಗೆ ದಟ್ಸನ್ ಕಾರುಗಳಿಗೂ ತಟ್ಟಿದ ಬೆಲೆ ಏರಿಕೆ ಬಿಸಿ

ಪ್ರಸಕ್ತ ಸಾಲಿನಲ್ಲಿ ನಿಸ್ಸಾನ್ ಸಂಸ್ಥೆಯು ಎರಡು ಕಾರುಗಳನ್ನು ಬಿಡುಗಡೆಗೊಳಿಸಿತ್ತು. ಇವುಗಳಲ್ಲಿ ದಟ್ಸನ್ ರೆಡಿ ಗೊ ಸಣ್ಣ ಕಾರು ಮತ್ತು ನಿಸ್ಸಾನ್ ಜಿಟಿಆರ್ ಸ್ಪೋರ್ಟ್ಸ್ ಕೂಪೆ ಕಾರು ಸೇರಿವೆ.

ನಿಸ್ಸಾನ್ ಜೊತೆಗೆ ದಟ್ಸನ್ ಕಾರುಗಳಿಗೂ ತಟ್ಟಿದ ಬೆಲೆ ಏರಿಕೆ ಬಿಸಿ

ಕೆಲವು ತಿಂಗಳುಗಳ ಹಿಂದೆಯಷ್ಟೇ ನಿಸ್ಸಾನ್ ಮೈಕ್ರಾ ಸಿಟಿಟಿ ಮಾದರಿಗೆ ಬೆಲೆ ಕಡಿತವನ್ನು ನಿಸ್ಸಾನ್ ಘೋಷಿಸಿತ್ತು. ತನ್ಮೂಲಕ ದೇಶದಲ್ಲಿ ಅತ್ಯಂತ ಸ್ಪರ್ಧಾತ್ಮಕ ಬೆಲೆಗಳಲ್ಲಿ ದೊರಕುವ ಸಿಟಿವಿ ಹ್ಯಾಚ್ ಬ್ಯಾಕ್ ಕಾರೆನಿಸಿಕೊಂಡಿತ್ತು.

ನಿಸ್ಸಾನ್ ಜೊತೆಗೆ ದಟ್ಸನ್ ಕಾರುಗಳಿಗೂ ತಟ್ಟಿದ ಬೆಲೆ ಏರಿಕೆ ಬಿಸಿ

2017ನೇ ಸಾಲಿನಲ್ಲಿ ನಿಸ್ಸಾನ್ ಸಂಸ್ಥೆಯು ಎಕ್ಸ್ ಟ್ರೈಲ್ ಹೈಬ್ರಿಡ್ ಕ್ರೀಡಾ ಬಳಕೆಯ ವಾಹನವನ್ನು ಬಿಡುಗಡೆ ಮಾಡಲಿದೆ. ಭಾರತವು ಈ ಪ್ರತಿಷ್ಠಿತ ಎಸ್ ಯುವಿ ಗಿಟ್ಟಿಸಿಕೊಳ್ಳಲಿರುವ ನಾಲ್ಕನೇ ಮಾರುಕಟ್ಟೆಯಾಗಿರಲಿದೆ.

ನಿಸ್ಸಾನ್ ಜೊತೆಗೆ ದಟ್ಸನ್ ಕಾರುಗಳಿಗೂ ತಟ್ಟಿದ ಬೆಲೆ ಏರಿಕೆ ಬಿಸಿ

ಅದೇ ಹೊತ್ತಿಗೆ ಮುಂದಿನ ತಲೆಮಾರಿನ ಮೈಕ್ರಾ ಕಾರನ್ನು 2017ನೇ ಸಾಲಿನಲ್ಲಿ ಬಿಡುಗಡೆ ಮಾಡುವ ಯೋಜನೆಯನ್ನು ನಿಸ್ಸಾನ್ ಹೊಂದಿದೆ.

Article Published On: Tuesday, December 13, 2016, 17:20 [IST]
English summary
Mahindra's Luxurious 'Made In India' Odyssea 55-Foot Yacht Revealed
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+