ಅಬ್ಬಬ್ಬಾ ಬಂದೇ ಬಿಡ್ತು ನಿಸ್ಸಾನ್ 'ಗಾಡ್ಜಿಲ್ಲಾ'; ಬೆಲೆ 1.99 ಕೋಟಿ ರು.
ನಿಸ್ಸಾನ್ ಜಿಟಿಆರ್ ಕ್ರೀಡಾ ಕಾರು ಭಾರತದಲ್ಲಿ ಭರ್ಜರಿ ಬಿಡುಗಡೆ ಕಂಡಿದೆ.
ವಿಶ್ವದೆಲ್ಲೆಡೆ 'ಗಾಡ್ಜಿಲ್ಲಾ' ಖ್ಯಾತಿಯ ನಿಸ್ಸಾನ್ ಜಿಟಿಆರ್ ಕ್ರೀಡಾ ಕಾರು ಭಾರತೀಯ ಮಾರುಕಟ್ಟೆಗೆ ಭರ್ಜರಿ ಪ್ರವೇಶ ಪಡೆದಿದೆ. ನೂತನ ನಿಸ್ಸಾನ್ ಜಿಟಿಆರ್ ಸ್ಪೋರ್ಟ್ಸ್ ಕಾರು ಭಾರತದಲ್ಲಿ ದೆಹಲಿ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ 1.99 ಕೋಟಿ ರುಪಾಯಿಗಳಷ್ಟು ದುಬಾರಿಯೆನಿಸಲಿದೆ.

2016 ಆಟೋ ಎಕ್ಸ್ ಪೋದಲ್ಲಿ ಮೊದಲ ಬಾರಿಗೆ ಪ್ರದರ್ಶನ ಕಂಡಿರುವ ನಿಸ್ಸಾನ್ ಜಿಟಿಆರ್ ಆಗಮನಕ್ಕಾಗಿ ವಾಹನ ಪ್ರೇಮಿಗಳು ಕಾತರದಿಂದ ಕಾದು ಕುಳಿತಿದ್ದರು. ಕೊನೆಗೂ ಈ ಸುವರ್ಣ ನಿಮಿಷ ಆಗಮನವಾಗಿದೆ.

ನಿಸ್ಸಾನ್ ಜಿಟಿಆರ್ ಕಾರಿನಡಿಯಲ್ಲಿರುವ ಅತ್ಯಂತ ಶಕ್ತಿಶಾಲಿ ವಿ6 ಎಂಜಿನ್ 637 ಎನ್ ಎಂ ತಿರುಗುಬಲದಲ್ಲಿ ಗರಿಷ್ಠ 562 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಆರು ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಇದರಲ್ಲಿರುತ್ತದೆ.

1752 ಕೆ.ಜಿ. ತೂಕ ಹೊಂದಿರುವ ಹೊರತಾಗಿಯೂ ನಿಸ್ಸಾನ್ ಜಿಟಿಆರ್ ಕೇವಲ ಮೂರು ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ. ವೇಗವರ್ಧನೆ ಮತ್ತು ಗಂಟೆಗೆ ಗರಿಷ್ಠ 315 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ.

1969ನೇ ಇಸವಿಯಲ್ಲಿ ಸ್ಕೈಲೈನ್ ಶ್ರೇಣಿಯ ಟಾಪ್ ಎಂಡ್ ರೂಪದಲ್ಲಿ ಎಂಟ್ರಿ ಕೊಟ್ಟಿರುವ ನಿಸ್ಸಾನ್ ಜಿಟಿಆರ್ ಕಳೆದ ಐದು ದಶಕಗಳಿಂದ ಹಲವಾರು ಬದಲಾವಣೆಗಳನ್ನು ಗಿಟ್ಟಿಸಿಕೊಂಡಿದೆ.

ಕಳೆದ ಮಾರ್ಚ್ ತಿಂಗಳಲ್ಲಿ ನಡೆದ ನ್ಯೂಯಾರ್ಕ್ ಶೋದಲ್ಲಿ ಆರನೇ ತಲೆಮಾರಿನ ನಿಸ್ಸಾನ್ ಜಿಟಿಆರ್ ಪಾದಾರ್ಪಣೆಗೈದಿತ್ತು. ಇದು ನೈಜ ಕ್ರೀಡಾ ಕಾರಿನ ಪ್ರತಿಬಿಂಬವಾಗಿದೆ.

ಎರಡು ಡೋರ್ ಗಳ ಕೂಪೆ ಶೈಲಿಯ ನಿಸ್ಸಾನ್ ಜಿಟಿಆರ್ ಕ್ರೀಡಾ ಕಾರಿನಲ್ಲಿ ನಾಲ್ಕು ಮಂದಿಗೆ ಆರಾಮದಾಯಕವಾಗಿ ಕುಳಿತುಕೊಳ್ಳಬಹುದಾಗಿದೆ.

ನವೀಕೃತ ವಿನ್ಯಾಸ, ಹೊಸತಾದ ಬಂಪರ್, ಗ್ರಿಲ್, ಎಲ್ ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್ ಸೇರಿದಂತೆ ಪ್ರತಿಯೊಂದು ಘಟಕಗಳನ್ನು ವಿಶ್ವದರ್ಜೆಯ ಮಟ್ಟದಲ್ಲಿ ರೂಪಿಸಲಾಗಿದೆ.

ಏಳು ಆಕರ್ಷಕ ಬಣ್ಣಗಳು
ಕ್ಯಾಟಾಸುರಾ ಆರಂಜ್,
ಪಿಯರ್ಲ್ ಬ್ಲ್ಯಾಕ್,
ಗನ್ ಮೆಟ್ಯಾಲಿಕ್,
ಅಲ್ಟಿಮೇಟ್ ಸಿಲ್ವರ್,
ಡೇಟೋನಾ ಬ್ಲೂ,
ವೈಬ್ರಂಟ್ ರೆಡ್,
ಸ್ಟೋರ್ಮ್ ವೈಟ್

ಕಾರಿನೊಳಗೆ ಗರಿಷ್ಠ ಗುಣಮಟ್ಟದ ಲೆಥರ್ ಸೀಟು, ಪ್ರೀಮಿಯಂ ವೈಶಿಷ್ಟ್ಯ, ಸೆಂಟರ್ ಕನ್ಸಾಲ್, ಡೋರ್ ಪ್ಯಾನೆಲ್, ಮಾರ್ಪಾಡುಗೊಳಿಸಬಹುದಾದ ಇನ್ಪೋಟೈನ್ಮೆಂಟ್ ಸಿಸ್ಟ್, ಬಹು ಕ್ರಿಯಾತ್ಮಕ ಸ್ಟೀರಿಂಗ್ ವೀಲ್, ರಿಯರ್ ವ್ಯೂ ಕ್ಮಾರಾ ಮತ್ತು ಬೋಸ್ 11 ಸ್ಪೀಕರ್ ಆಡಿಯೋ ಸಿಸ್ಟಂಗಳಿರಲಿದೆ.

ಆಯಾಮ (ಎಂಎಂ)
ಉದ್ದ: 4710
ಅಗಲ: 1895
ಎತ್ತರ: 1370
ಚಕ್ರಾಂತರ: 2780

ವೈ ಸ್ಪೋಕ್ ಅಲಾಯ್ ವೀಲ್
ಚಕ್ರಗಳು
255/40 ಆರ್20 (ಮುಂಭಾಗ)
285/35 ಆರ್20 (ಹಿಂಭಾಗ)

ವಿಶಿಷ್ಟತೆಗಳು
ಕರಕುಶಲ
ಆಲ್ ವೀಲ್ ಡ್ರೈವ್,
ಟೈಟಾನಿಂಯ ಎಕ್ಸಾಸ್ಟ್ ಜೊತೆ ಓಪನ್ ವಾಲ್ವ್ ಸಿಸ್ಟಂ,
ಬಹು ಕ್ರಿಯಾತ್ಮಕ ಡಿಸ್ ಪ್ಲೇ,
ನಿಸ್ಸಾನ್ ಇಂಟೆಲಿಜನ್ಸ್ ಕೀ,
ರಿಯರ್ ವ್ಯೂ ಮಾನಿಟರ್,
ಬ್ಲ್ಯಾಕ್, ರೆಡ್, ಐವರಿ ಅಥವಾ ಟ್ಯಾನ್ ಟೂರಿಂಗ್ ಲೆಥರ್ ಸೀಟು ಮತ್ತು ಇಂಟಿರಿಯರ್

ಸುರಕ್ಷತೆ
ಆರ್ ಏರ್ ಬ್ಯಾಗ್
ಆಟೋ ಆನ್/ಆಫ್ ಹೆಡ್ ಲ್ಯಾಂಪ್,
ವೆಹಿಕಲ್ ಡೈನಾಮಿಕ್ ಕಂಟ್ರೋಲ್,
ಟ್ರಾಕ್ಷನ್ ಕಂಟ್ರೋಲ್ ಸಿಸ್ಟಂ,
ಆ್ಯಂಟಿ ಲಾಕ್ ಬ್ರೇಕಿಂಗ್ ಸಸ್ಟಂ,
ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯೂಷನ್
ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ,
ಸೀಟ್ ಬೆಲ್ಟ್ ಪ್ರಿಟೆನ್ಷನರ್
ಮುಂಗಡ ಬುಕ್ಕಿಂಗ್ ದರ: 25 ಲಕ್ಷ ರು.


Click it and Unblock the Notifications








