ನಿಸ್ಸಾನ್ ಟೆರನೊ ಎಎಂಟಿ ಬುಕ್ಕಿಂಗ್ ಆರಂಭ; ಬೆಲೆ ಎಷ್ಟು?

By Nagaraja

ಬಹುನಿರೀಕ್ಷಿತ ನಿಸ್ಸಾನ್ ಟೆರೆನೊ ಎಎಂಟಿ ಬುಕ್ಕಿಂಗ್ ಪ್ರಕ್ರಿಯೆ ಆರಂಭಗೊಂಡಿದೆ. ಆರು ಸ್ಪೀಡ್ ಅಡ್ವಾನ್ಸ್ಡ್ ಆಟೋ ಡ್ರೈವ್ ಗೇರ್ ಬಾಕ್ಸ್ ಪಡೆದಿರುವ ನಿಸ್ಸಾನ್ ಟೆರನೊ ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ ಆವೃತ್ತಿಗಾಗಿ 25,000 ರು.ಗಳನ್ನು ಮುಂಗಡವಾಗಿ ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ.

ನಿಸ್ಸಾನ್ ಟೆರನೊ ಎಎಂಟಿ ಬುಕ್ಕಿಂಗ್ ಆರಂಭ

ಡಸ್ಟರ್ ಹಾದಿಯನ್ನೇ ಹಿಡಿದಿರುವ ನಿಸ್ಸಾನ್ ಇದೀಗ ಟಾಪ್ ಎಂಡ್ ಎಕ್ಸ್ ವಿಡಿ ಪ್ರೀಮಿಯಂ ವೆರಿಯಂಟ್ ನಲ್ಲಿ ಎಎಂಟಿ ಆಯ್ಕೆಯನ್ನು ನೀಡುತ್ತದೆ. ಆಸಕ್ತರು ನಿಸ್ಸಾನ್ ಅಧಿಕೃತ ಡೀಲರುಗಳನ್ನು ಸಂಪರ್ಕಿಸಬಹುದಾಗಿದೆ.

ನಿಸ್ಸಾನ್ ಟೆರನೊ ಎಎಂಟಿ ಬುಕ್ಕಿಂಗ್ ಆರಂಭ

ನಿಸ್ಸಾನ್ ಟೆರನೊ ಎಎಂಟಿ ಬೆಲೆ ಈಗಲೂ ಕುತೂಹಲ ಮೂಡಿಸಿದೆ. ಬಲ್ಲ ಮೂಲಗಳ ಪ್ರಕಾರ ಎಎಂಟಿ ಆವೃತ್ತಿಯು 13.75 ಲಕ್ಷ ರು.ಗಳಿಂದ 13.85 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ.

ನಿಸ್ಸಾನ್ ಟೆರನೊ ಎಎಂಟಿ ಬುಕ್ಕಿಂಗ್ ಆರಂಭ

ನಿಸ್ಸಾನ್ ಟೆರನೊ ಎಎಂಟಿ ವಿತರಣೆ ಪ್ರಕ್ರಿಯೆಯು ತಿಂಗಳಾಂತ್ಯದಲ್ಲಿ ಆರಂಭವಾಗಲಿದೆ. ಇದರೊಂದಿಗೆ ಬೆಳಕಿನ ಹಬ್ಬ ದೀಪಾವಳಿ ಸಂಭ್ರಮವನ್ನು ಇಮ್ಮಡಿಗೊಳಿಸಲಿದೆ.

ನಿಸ್ಸಾನ್ ಟೆರನೊ ಎಎಂಟಿ ಬುಕ್ಕಿಂಗ್ ಆರಂಭ

ಇದಕ್ಕೂ ಮೊದಲು ನಿಸ್ಸಾನ್ ನ ಫ್ರಾನ್ಸ್ ಜೊತೆಗಾರನಾಗಿರುವ ರೆನೊ ಸಂಸ್ಥೆಯು ತನ್ನ ಜನಪ್ರಿಯ ಡಸ್ಟರ್ ಪರಿಷ್ಕೃತ ಆವೃತ್ತಿಯಲ್ಲಿ ಎಎಂಟಿ ಗೇರ್ ಬಾಕ್ಸ್ ಪರಿಚಯಿಸಿತ್ತು. ಇದು ಈಸಿ-ಆರ್ ಎಂಬ ಆರು ಸ್ಪೀಡ್ ಎಎಂಟಿ ಗೇರ್ ಬಾಕ್ಸ್ ಪಡೆದಿತ್ತು.

ನಿಸ್ಸಾನ್ ಟೆರನೊ ಎಎಂಟಿ ಬುಕ್ಕಿಂಗ್ ಆರಂಭ

ರೆನೊದಿಂದ ಆಮದು ಮಾಡಲಾಗಿರುವ 1.5 ಲೀಟರ್ ಡೀಸೆಲ್ ಎಂಜಿನ್ 108 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ನಿಸ್ಸಾನ್ ಟೆರನೊ ಎಎಂಟಿ ಬುಕ್ಕಿಂಗ್ ಆರಂಭ

ಭಾರತದಲ್ಲಿ ಡಸ್ಟರ್ ಎಎಂಟಿ ಆರ್ ಎಕ್ಸ್ ಎಳ್ ಮತ್ತು ಆರ್ ಎಕ್ಸ್ ಝಡ್ ಗಳೆಂಬ ಎರಡು ವೆರಿಯಂಟ್ ಗಳಲ್ಲಿ ಲಭ್ಯವಿದೆ. ಇವೆರಡು ಅನುಕ್ರಮವಾಗಿ 11.76 ಹಾಗೂ 12.97 ಲಕ್ಷ ರು.ಗಳಷ್ಟು ದುಬಾರಿಯೆನಿಸುತ್ತದೆ. ಅಂದರೆ ಟೆರನೊ ಎಎಂಟಿಗಿಂತಲೂ ಕಡಿಮೆ ದುಬಾರಿಯೆನಿಸಲಿದೆ.

ನಿಸ್ಸಾನ್ ಟೆರನೊ ಎಎಂಟಿ ಬುಕ್ಕಿಂಗ್ ಆರಂಭ

ವಿದ್ಯುನ್ಮಾನವಾಗಿ ಮಡಚಬಹುದಾದ ಹೊರಗಿನ ರಿಯರ್ ವ್ಯೂ ಮಿರರ್, ಇಂಟೇಗ್ರೇಟಡ್ ಟರ್ನ್ ಸಿಗ್ನಲ್, ಡ್ರೈವರ್ ಆರ್ಮ್ ರೆಸ್ಟ್, ಸಾಫ್ಟ್ ಟಚ್ ಪ್ಲಾಸ್ಟಿಕ್ ಡ್ಯಾಶ್ ಬೋರ್ಡ್ ಸೇರಿದಂತೆ ಇನ್ನಿತರ ಗಮನಾರ್ಹ ವೈಶಿಷ್ಟ್ಯಗಳು ಕಂಡುಬರಲಿದೆ.

More from DriveSpark

Article Published On: Friday, October 7, 2016, 17:21 [IST]
English summary
Nissan Now Accepting Bookings For Terrano AMT Pan India
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+