ನಿಸ್ಸಾನ್ ಜಿಟಿಆರ್ ಪವರ್‌ಫುಲ್ ಗಾಡಿ ಭಾರತಕ್ಕೆ

By Nagaraja

ಇದೀಗ ಎಲ್ಲವೂ ಅಂತಿಮಗೊಂಡಿದ್ದು, ನಿಸ್ಸಾನ್ ಜಿಟಿಆರ್ ಶಕ್ತಿಶಾಲಿ ಕಾರು ಭಾರತಕ್ಕೆ ಕಾಲಿಡಲು ಕಾಲ ಸನ್ನಿಹಿತವಾಗಿದೆ. ಈ ಬಗ್ಗೆ ಎದ್ದಿರುವ ಕುತೂಹಲಗಳಿಗೆ ವಿರಾಮ ಹಾಡಿರುವ ಜಪಾನ್ ಮೂಲದ ದೈತ್ಯ ವಾಹನ ತಯಾರಿಕಾ ಸಂಸ್ಥೆ ನಿಸ್ಸಾನ್, ಮುಂಬರುವ 2016 ಆಟೋ ಎಕ್ಸ್ ಪೋದಲ್ಲಿ ನಿಸ್ಸಾನ್ ಜಿಟಿಆರ್ ಬಿಡುಗಡೆಗೊಳಿಸುವುದಾಗಿ ತಿಳಿಸಿದೆ.

ಜಗತ್ತಿನದ್ಯಾಂತ ಗೋಡ್ಜಿಲಾ ಎಂದೇ ಅರಿಯಲ್ಪಡುವ ಎರಡು ಡೋರ್ ಗಳ ನಿಸ್ಸಾನ್ ಜಿಟಿಆರ್ ದೇಶದ ವಾಹನ ಪ್ರೇಮಿಗಳ ಪಾಲಿಗೆ ಹೊಸ ಅನುಭವವಾಗಲಿದೆ. ಇದರ 3.8 ಲೀಟರ್ ವಿ6 ಎಂಜಿನ್ 652 ಎನ್‌ಎಂ ತಿರುಗುಬಲದಲ್ಲಿ 600 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಅಂತೆಯೇ ಆರು ಸ್ಪೀಡ್ ಡ್ಯುಯಲ್ ಕ್ಲಚ್ ಗೇರ್ ಬಾಕ್ಸ್ ಇದರಲ್ಲಿರಲಿದೆ.


ವೇಗವರ್ಧನೆ: 3 ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ
ಗರಿಷ್ಠ ವೇಗ: 307 ಕೀ.ಮೀ.

ಅಂದ ಹಾಗೆ ಭಾರತದಲ್ಲಿ ನಿಸ್ಸಾನ್ ಜಿಟಿಆರ್ ಮೂರು ಕೋಟಿ ರುಪಾಯಿಗಳ ಬೆಲೆ ಪರಿಧಿಯಲ್ಲಿ ಬಿಡುಗಡೆಯಾಗಲಿದೆ. ಅಲ್ಲದೆ ದೇಶವನ್ನು ಕಂಪ್ಲೀಟ್ ಬಿಲ್ಟ್ ಯುನಿಟ್ ಮುಖಾಂತರ ತಲುಪಲಿದೆ.


ಮಗದೊಂದು ಮೂಲದ ಮಾಹಿತಿಯ ಪ್ರಕಾರ ಭಾರತದಲ್ಲಿ ನಿಸ್ಸಾನ್ ಜಿಟಿಆರ್ ಕೇವಲ ಸೀಮಿತ ಸಂಖ್ಯೆಯಲ್ಲಿ ಅಂದರೆ ಐದು ಯುನಿಟ್ ಗಳಷ್ಟು ಮಾತ್ರ ಮಾರಾಟಕ್ಕೆ ಲಭ್ಯವಾಗಲಿದೆ.

More from DriveSpark

Article Published On: Tuesday, January 19, 2016, 11:25 [IST]
English summary
2016 Auto Expo: Nissan Confirms GT-R Launch
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+