ನಿಸ್ಸಾನ್ ನಿಂದ ಚೊಕ್ಕದಾದ ಎಲೆಕ್ಟ್ರಿಕ್ ಹ್ಯಾಚ್ ಬ್ಯಾಕ್ ಕಾರು
ಭವಿಷ್ಯತ್ತಿನ ವಾಹನಗಳ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿರುವ ಜಪಾನ್ ಮೂಲದ ದೈತ್ಯ ವಾಹನ ಸಂಸ್ಥೆ ನಿಸ್ಸಾನ್, ಚೊಕ್ಕದಾದ ವಿದ್ಯುತ್ ಚಾಲಿತ ಎಲೆಕ್ಟ್ರಿಕ್ ಕಾರಿನ ನಿರ್ಮಾಣವನ್ನು ಆರಂಭಿಸಿದೆ.
ಎಲೆಕ್ಟ್ರಿಕ್ ಕಾರುಗಳ ಶ್ರೇಣಿಯವನ್ನು ವಿಸ್ತರಿಸಿಕೊಳ್ಳುವ ಯೋಜನೆಯಲ್ಲಿರುವ ನಿಸ್ಸಾನ್ ಗ್ರಾಹಕರಿಗೆ ಕೈಗೆಟುಕುವ ಬೆಲೆಗಳಲ್ಲಿ ವಿದ್ಯುತ್ ಚಾಲಿತ ಕಾರುಗಳನ್ನು ತಲುಪಿಸಲಿದೆ. ತನ್ಮೂಲಕ ಪರಿಸರ ಸ್ನೇಹಿ ಎಲೆಕ್ಟ್ರಿಕ್ ಕಾರುಗಳಿಗೆ ಉತ್ತೇಜನ ನೀಡಲಿದೆ.

2010 ಆಗಸ್ಟ್ ತಿಂಗಳಲ್ಲಿ ಲೀಫ್ ಎಲೆಕ್ಟ್ರಿಕ್ ಕಾರನ್ನು ಅನಾವರಣಗೊಳಿಸಿದ್ದ ನಿಸ್ಸಾನ್ ಇದುವರೆಗೆ 2,30,000 ಯುನಿಟ್ ಗಳನ್ನು ಮಾರಾಟ ಮಾಡಿದೆ.

ಲೀಫ್ ತಳಹದಿಯಲ್ಲೇ ನೂತನ ಎಲೆಕ್ಟ್ರಿಕ್ ಹ್ಯಾಚ್ ಬ್ಯಾಕ್ ಕಾರು ನಿರ್ಮಿಸುವುದು ನಿಸ್ಸಾನ್ ಗುರಿಯಾಗಿದೆ. ಇದು ನಿರ್ಮಾಣ ವೆಚ್ಚ ಕಡಿತ ಮಾಡಲು ನೆರವಾಗಲಿದೆ.

ಬ್ಲೇಡ್ ಗ್ಲೈಡರ್ ಕಾನ್ಸೆಪ್ಟ್ ಕಾರಿಗೂ ಮುಂಚಿತವಾಗಿ ನಿಸ್ಸಾನ್ ಹ್ಯಾಚ್ ಬ್ಯಾಕ್ ಕಾರು ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ.

ಲೀಫ್ ಕಿರಿಯ ಸೋದರ ಎಂದೆನಿಸಿಕೊಳ್ಳಲಿರುವ ಈ ಸೂಪರ್ ಮಿನಿ ಕಾರು ಒಂದು ಚಾರ್ಜ್ ನಲ್ಲಿ 200 ಮೈಲುಗಳಷ್ಟು ದೂರ ಕ್ರಮಿಸಲಿದೆ.

ಆಗಲೇ ಷೆವರ್ಲೆ ಬೋಲ್ಟ್ ಮತ್ತು ಟೆಸ್ಲಾ ಮಾಡೆಲ್ 3 ಪ್ರತಿಸ್ಪರ್ಧಿಯಾಗಿರುವ ಮುಂದಿನ ತಲೆಮಾರಿನ ಲೀಫ್ ಕಾರಿನ ಅಭಿವೃದ್ಧಿಯಲ್ಲಿ ನಿಸ್ಸಾನ್ ತೊಡಗಿಸಿಕೊಂಡಿದೆ.


Click it and Unblock the Notifications