ಭಾರತಕ್ಕೆ ಲಗ್ಗೆಯಿಟ್ಟ 2017 ಪೋರ್ಷೆ 911 ಶ್ರೇಣಿಯ ಕಾರುಗಳು
ಹೆಚ್ಚು ಶಕ್ತಿಶಾಲಿ, ಪರಿಷ್ಕೃತ ವಿನ್ಯಾಸ, ವರ್ಧಿತ ಇಂಧನ ಕ್ಷಮತೆ ಹೀಗೆ ಹತ್ತು ಹಲವಾರು ವೈಶಿಷ್ಟ್ಯಗಳೊಂದಿಗೆ ಪೋರ್ಷೆ 911 ಶ್ರೇಣಿಯ ಕಾರುಗಳು ಭಾರತಕ್ಕೆ ಭರ್ಜರಿ ಎಂಟ್ರಿ ಕೊಟ್ಟಿದೆ. ನೂತನ ಪೋರ್ಷೆ ಕಾರಿನಲ್ಲಿರುವ ಕಟ್ಟಿಂಗ್ ಎಡ್ಜ್ ತಂತ್ರಗಾರಿಕೆಯು ಎಲ್ಲ ಪ್ರತಿಸ್ಪರ್ಧಿಗಿಂತಲೂ ವಿಭಿನ್ನವಾಗಿಸಲಿದೆ.
ಭಾರತದಲ್ಲೂ ತನ್ನ ಬದ್ಧತೆಯನ್ನು ಪ್ರದರ್ಶಿಸಿರುವ ಪೋರ್ಷೆ, ಕೂಪೆ ಹಾಗೂ ಕ್ಯಾಬ್ರಿಯೊ ಶೈಲಿಯೊಂದಿಗೆ ಸಂಪೂರ್ಣ ಹೊಸತಾದ ಟರ್ಬೊಚಾರ್ಜ್ಡ್ ಎಂಜಿನ್ ಆಯ್ಕೆಗಳನ್ನು ನೀಡಲಿದೆ.

ಜಗತ್ತಿನ ಅತಿ ಹೆಚ್ಚು ಮಾರಾಟವಾಗುವ ಕ್ರೀಡಾ ಕಾರುಗಳಲ್ಲಿ ಒಂದಾಗಿರುವ ಪೋರ್ಷೆ 911 ಹೊರಮೈಯಲ್ಲಿ ನಿಖರವಾದ ವಿನ್ಯಾಸ ಹಾಗೂ ಕಾರಿನೊಳಗೆ ಪೋರ್ಷೆ ಕಮ್ಯೂನಿಕೇಷನ್ ಮ್ಯಾನೇಜ್ ಮೆಂಟ್ ಸಿಸ್ಟಂಗಳಂತಹ ಆಧುನಿಕ ತಂತ್ರಜ್ಞಾನಗಳನ್ನು ಒಳಗೊಂಡಿರಲಿದೆ.

ಎಲ್ ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್, ಪ್ರೊಜೆಕ್ಟರ್ ಹೆಡ್ ಲ್ಯಾಂಪ್, ಬಂಪರ್ ಕೇಂದ್ರಿತವಾದ ದೊಡ್ಡದಾದ ಏರ್ ಇಂಟೇಕ್ ಗಳು, ಹಿಂದುಗಡೆಯೂ ಎಲ್ ಇಡಿ ಟೈಲ್ ಲೈಟ್ ಗಳ ಸೇವೆಗಳಿರಲಿದೆ.

ಇನ್ನುಳಿದಂತೆ ಪೋರ್ಷೆ ಆಕ್ಟಿವ್ ಸಸ್ಪೆನ್ಷನ್ ಮ್ಯಾನೇಜ್ ಮೆಂಟ್, ಪೋರ್ಷೆ ಡೈನಾಮಿಕ್ ಚಾಸೀ ಕಂಟ್ರೋಲ್ ರೋಲ್ ಕಾಂಪೆನ್ಸೆಷನ್, ಪೋರ್ಷೆ ಸೆರಾಮಿಕ್ ಕಾಂಪೊಸಿಟ್ ಬ್ರೇಕ್ ಮತ್ತು 20 ಇಂಚುಗಳ ಟ್ವಿನ್ ಸ್ಪೋಕ್ ಅಲಾಯ್ ವೀಲ್ ಗಳಿರಲಿದೆ.

ನಾಲ್ಕು ಚಾಲನಾ ವಿಧಗಳು: ನಾರ್ಮಲ್, ಸ್ಪೋರ್ಟ್, ಸ್ಪೋರ್ಟ್ ಪ್ಲಸ್ ಮತ್ತು ಇಂಡ್ಯುವಿಜಲ್.

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ಕರ್ನಾಟಕ)
911 ಕರೆರಾ: 14,486,000 ರು.
911 ಕರೆರಾ ಕ್ಯಾಬ್ರಿಯೊ: 15,852,000 ರು.
911 ಕರೆರಾ ಎಸ್: 16,639,000 ರು.
911 ಕರೆರಾ ಎಸ್ ಕ್ಯಾಬ್ರಿಯೊ: 17,952,000 ರು.

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ಕರ್ನಾಟಕ)
911 ಟರ್ಬೊ: 22,994,000 ರು.
911 ಟರ್ಬೊ ಕ್ಯಾಬ್ರಿಯೊ: 24,359,000 ರು.
911 ಟರ್ಬೊ ಎಸ್: 27,090,000 ರು.
911 ಟರ್ಬೊ ಎಸ್ ಕ್ಯಾಬ್ರಿಯೊ: 28,665,000 ರು.

ಪೋರ್ಷೆ ಕರೆರಾ ಮಾದರಿಗಳು
ನೂತನ 911 ಕರೆರಾ ಮತ್ತು 911 ಕರೆರಾ ಎಸ್ ಮಾದರಿಗಳು ಅನುಕ್ರಮವಾಗಿ 370 (450 ಎನ್ ಎಂ ತಿರುಗುಬಲ) ಹಾಗೂ 420 ಅಶ್ವಶಕ್ತಿಗಳನ್ನು (500 ಎನ್ ಎಂ ತಿರುಗುಬಲ) ಉತ್ಪಾದಿಸಲಿದೆ. ಅಂತೆಯೇ ಇವೆರಡು ಅನುಕ್ರಮವಾಗಿ 4.2 ಹಾಗೂ 3.9 ಸೆಕೆಂಡುಗಳಲ್ಲೇ ಗಂಟೆಗೆ 100 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ.

911 ಟರ್ಬೊ ಮಾದರಿಗಳು
3.8 ಲೀಟರ್ ಸಿಕ್ಸ್ ಸಿಲಿಂಡರ್ ಬೈ-ಟರ್ಬೊ ಎಂಜಿನ್ ನಿಂದ ಕೂಡಿರುವ 911 ಟರ್ಬೊ ಆವೃತ್ತಿಯು 540 ಅಶ್ವಶಕ್ತಿಯನ್ನು ನೀಡಲಿದೆ. ಅಲ್ಲದೆ 3 ಸೆಕೆಂಡುಗಳಲ್ಲೇ ಗಂಟೆಗೆ 0-100ಕೀ.ಮೀ. ವೇಗವರ್ಧಿಸಲಿದ್ದು, ಗಂಟೆಗೆ ಗರಿಷ್ಠ 320 ಕೀ.ಮೀ. ವೇಗದಲ್ಲಿ ಸಾಗಲಿದೆ.

ಇನ್ನೊಂದೆಡೆ ಪೋರ್ಷೆ 911 ಟರ್ಬೊ ಎಸ್ ಮಾದರಿಯು 580 ಅಶ್ವಶಕ್ತಿ ಉತ್ಪಾದಿಸಲಿದ್ದು, 2.9 ಸೆಕೆಂಡುಗಳಲ್ಲಿ ಗಂಟೆಗೆ 0-100 ಕೀ.ಮೀ. ವೇಗವರ್ಧಿಸಲಿದೆ. ಹಾಗೆಯೇ ಗಂಟೆಗೆ ಗರಿಷ್ಠ 330 ಕೀ.ಮೀ. ವೇಗ ಪಡೆಯಲಿದೆ.


Click it and Unblock the Notifications








