ಕೈಗೆಟುಕುವ ಲಗ್ಷುರಿ ಎಸ್‌ಯುವಿ ಷೋರ್ಷೆ ಮಾಷನ್ ಆರ್4 ಭರ್ಜರಿ ಬಿಡುಗಡೆ

ಪೋರ್ಷೆ ಮಾಷನ್ ಆರ್4 ಐಷಾರಾಮಿ ಕ್ರೀ ಬಳಕೆಯ ವಾಹನವು ಭಾರತದಲ್ಲಿ ಭರ್ಜರಿ ಬಿಡುಗಡೆ ಕಂಡಿದೆ.

By Nagaraja

ಜರ್ಮನಿಯ ಮೂಲದ ಐಷಾರಾಮಿ ಕಾರು ಸಂಸ್ಥೆ ಪೋರ್ಷೆ, ಅತಿ ನೂತನ ಮಾಷನ್ ಆರ್4 ಕ್ರೀಡಾ ಬಳಕೆಯ ವಾಹನವನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ. ಇದು ಮಹಾರಾಷ್ಟ್ರ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ 76.84 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ.

ಕೈಗೆಟುಕುವ ಲಗ್ಷುರಿ ಎಸ್‌ಯುವಿ ಷೋರ್ಷೆ ಮಾಷನ್ ಆರ್4 ಭರ್ಜರಿ ಬಿಡುಗಡೆ

ಇತರೆ ಐಷಾರಾಮಿ ಮಾದರಿಗಳನ್ನು ಹೋಲಿಸಿದಾಗ ಇದು ಪೋರ್ಷೆಯಿಂದ ಬಿಡುಗಡೆಯಾಗುತ್ತಿರುವ ಸ್ಪರ್ಧಾತ್ಮಕ ಬೆಲೆಯ ಕ್ರೀಡಾ ಬಳಕೆಯ ವಾಹನವಾಗಿರಲಿದೆ.

ಕೈಗೆಟುಕುವ ಲಗ್ಷುರಿ ಎಸ್‌ಯುವಿ ಷೋರ್ಷೆ ಮಾಷನ್ ಆರ್4 ಭರ್ಜರಿ ಬಿಡುಗಡೆ

ದೇಶದಲ್ಲಿ ನೂತನ ಪೋರ್ಷೆ ಮಾಷನ್ ಆರ್4 ಎಸ್ ಯುವಿ ಕಾರಿನ ಬುಕ್ಕಿಂಗ್ ಪ್ರಕ್ರಿಯೆ ಪ್ರಾರಂಭಗೊಂಡಿದ್ದು, ಆಸಕ್ತ ಗ್ರಾಹಕರು 10 ಲಕ್ಷ ರುಪಾಯಿಗಳನ್ನು ಮುಂಗಡವಾಗಿ ಪಾವತಿಸಿ ತಮ್ಮ ಕನಸಿನ ಕಾರನ್ನು ಕಾಯ್ದಿರಿಸಿಕೊಳ್ಳಬಹುದಾಗಿದೆ.

ಕೈಗೆಟುಕುವ ಲಗ್ಷುರಿ ಎಸ್‌ಯುವಿ ಷೋರ್ಷೆ ಮಾಷನ್ ಆರ್4 ಭರ್ಜರಿ ಬಿಡುಗಡೆ

ಪ್ರಮುಖವಾಗಿಯೂ ಭಾರತದಲ್ಲಿ ಟಾಟಾ ಮೋಟಾರ್ಸ್ ಅಧೀನತೆಯಲ್ಲಿರುವ ಜಾಗ್ವಾರ್ ಎಫ್-ಪೇಸ್ ಮುಂತಾದ ಮಾದರಿಗಳಿಗೆ ಪೋರ್ಷೆ ನೂತನ ಮಾಷನ್ ಆರ್4 ಪ್ರತಿಸ್ಪರ್ಧೆಯನ್ನು ಒಡ್ಡಲಿದೆ.

ಕೈಗೆಟುಕುವ ಲಗ್ಷುರಿ ಎಸ್‌ಯುವಿ ಷೋರ್ಷೆ ಮಾಷನ್ ಆರ್4 ಭರ್ಜರಿ ಬಿಡುಗಡೆ

ಇದರಲ್ಲಿರುವ 2.0 ಲೀಟರ್ 4 ಸಿಲಿಂಡರ್ ಟರ್ಬೊಚಾರ್ಜ್ಡ್ ಪೆಟ್ರೋಲ್ ಎಂಜಿನ್ 370 ಎನ್ ಎಂ ತಿರುಗುಬಲದಲ್ಲಿ 248 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಕೈಗೆಟುಕುವ ಲಗ್ಷುರಿ ಎಸ್‌ಯುವಿ ಷೋರ್ಷೆ ಮಾಷನ್ ಆರ್4 ಭರ್ಜರಿ ಬಿಡುಗಡೆ

ಕಾರಿನಡಿಯಲ್ಲಿ ಎರಡು ಲೀಟರ್ ಪರಿಧಿಯೊಳಗೆ ಎಂಜಿನ್ ಜೋಡಣೆ ಮಾಡಿರುವುದರಿಂದ ತೆರಿಗೆಯನ್ನು ಕಡಿಮೆ ಮಾಡಲು ನೆರವಾಗಿದ್ದು, ಸ್ಪರ್ಧಾತ್ಮಕ ಬೆಲೆಗಳಲ್ಲಿ ಬಿಡುಗಡೆ ಮಾಡಲು ಸಹಕಾರಿಯಾಗಿದೆ.

ಕೈಗೆಟುಕುವ ಲಗ್ಷುರಿ ಎಸ್‌ಯುವಿ ಷೋರ್ಷೆ ಮಾಷನ್ ಆರ್4 ಭರ್ಜರಿ ಬಿಡುಗಡೆ

ನೂತನ ಪೋರ್ಷೆ ಮಾಷನ್ ಆರ್4 ಕೇವಲ 6.7 ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ. ವೇಗವರ್ಧನೆ ಮತ್ತು ಗಂಟೆಗೆ ಗರಿಷ್ಠ 229 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ.

ಕೈಗೆಟುಕುವ ಲಗ್ಷುರಿ ಎಸ್‌ಯುವಿ ಷೋರ್ಷೆ ಮಾಷನ್ ಆರ್4 ಭರ್ಜರಿ ಬಿಡುಗಡೆ

ಇದರ ಗೇರ್ ಬಾಕ್ಸ್ ಜವಾಬ್ದಾರಿಯನ್ನು ಸೆವೆನ್ ಸ್ಪೀಡ್ ಡ್ಯುಯಲ್ ಕ್ಲಚ್ ಪಿಕೆಡಿ ಆಟೋ ಬಾಕ್ಸ್ ನೋಡಿಕೊಳ್ಳಲಿದೆ. ಇದು ಎಲ್ಲ ನಾಲ್ಕು ಚಕ್ರಗಳಿಗೆ ಶಕ್ತಿಯನ್ನು ರವಾನಿಸಲಿದೆ.

ಕೈಗೆಟುಕುವ ಲಗ್ಷುರಿ ಎಸ್‌ಯುವಿ ಷೋರ್ಷೆ ಮಾಷನ್ ಆರ್4 ಭರ್ಜರಿ ಬಿಡುಗಡೆ

ಪೋರ್ಷೆ ಆಕ್ಟಿವ್ ಸಸ್ಪೆನ್ಷನ್ ಮ್ಯಾನೇಜ್ ಮೆಂಟ್ (ಪಿಎಎಸ್ ಎಂ) ವ್ಯವಸ್ಥೆಯು ರಸ್ತೆಯಲ್ಲಿ ಹೆಚ್ಚು ಅಧಿಪತ್ಯಯುಕ್ತ ಹ್ಯಾಂಡ್ಲಿಂಗ್ ಪ್ರದಾನ ಮಾಡುವಲ್ಲಿ ನೆರವಾಗಿದೆ.

ಕೈಗೆಟುಕುವ ಲಗ್ಷುರಿ ಎಸ್‌ಯುವಿ ಷೋರ್ಷೆ ಮಾಷನ್ ಆರ್4 ಭರ್ಜರಿ ಬಿಡುಗಡೆ

ಮಾಷನ್ ಶ್ರೇಣಿಯಲ್ಲಿ ದೊರಕುತ್ತಿರುವ ನಾಲ್ಕನೇ ವೆರಿಯಂಟ್ ಇದಾಗಿದೆ. ಇದ್ದಲ್ಲದೆ ಮಾಷನ್ ಎಸ್ ಡೀಸೆಲ್, ಮಾಷನ್ ಟರ್ಬೊ ಮತ್ತು ಮಾಷನ್ ಟರ್ಬೊ ಜೊತೆ ಫಾರ್ಫಮೆನ್ಸ್ ಪ್ಯಾಕೇಜ್ ಆವೃತ್ತಿಗಳು ಈಗಾಗಲೇ ಮಾರಾಟದಲ್ಲಿದೆ.

ಕೈಗೆಟುಕುವ ಲಗ್ಷುರಿ ಎಸ್‌ಯುವಿ ಷೋರ್ಷೆ ಮಾಷನ್ ಆರ್4 ಭರ್ಜರಿ ಬಿಡುಗಡೆ

ಮೇಲೆ ತಿಳಿಸಿದ ಈ ಎಲ್ಲ ಮೂರು ಮಾದರಿಗಿಂತಲೂ ಕಡಿಮೆ ಬೆಲೆ ಬಾಳುವ ಪೋರ್ಷೆ ಮಾಷನ್ ಆರ್4, ಒಂದು ಕೋಟಿ ಬೆಲೆ ಪರಿಧಿಯೊಳಗೆ ಲಭ್ಯವಿರುವ ಪೋರ್ಷೆ ಕಾರೆನಿಸಿಕೊಂಡಿದೆ.

ಕೈಗೆಟುಕುವ ಲಗ್ಷುರಿ ಎಸ್‌ಯುವಿ ಷೋರ್ಷೆ ಮಾಷನ್ ಆರ್4 ಭರ್ಜರಿ ಬಿಡುಗಡೆ

ವೈಶಿಷ್ಟ್ಯಗಳ ಬಗ್ಗೆ ಮಾತನಾಡುವುದಾದ್ದಲ್ಲಿ 3 ವಿಧಗಳ ಕ್ಲೈಮೇಟ್ ಕಂಟ್ರೋಲ್, ಎಂಟು ವಿಧಗಳಲ್ಲಿ ಹೊಂದಾಣಿಸಬಹುದಾದ ಚಾಲಕ ಸೀಟು, ಕ್ರೂಸ್ ಕಂಟ್ರೋಲ್, ಬಹು ಕ್ರಿಯಾತ್ಮಕ ಸ್ಟೀರಿಂಗ್ ವೀಲ್ ಜೊತೆ ಪೆಡಲ್ ಶಿಫ್ಟರ್ ವ್ಯವಸ್ಥೆಗಳಿರಲಿದೆ.

ಕೈಗೆಟುಕುವ ಲಗ್ಷುರಿ ಎಸ್‌ಯುವಿ ಷೋರ್ಷೆ ಮಾಷನ್ ಆರ್4 ಭರ್ಜರಿ ಬಿಡುಗಡೆ

ಡೇಟೈಮ್ ರನ್ನಿಂಗ್ ಎಲ್ ಇಡಿ, 18 ಇಂಚುಗಳ ಅಲಾಯ್ ಚಕ್ರಗಳು, ವೈಯಕ್ತಿಕರಣಗೊಳಿಸುವ ಆಯ್ಕೆಗಳು, ಬೈ ಕ್ಸೆನನ್ ಅಥವಾ ಎಲ್ ಇಡಿ ಹೆಡ್ ಲ್ಯಾಂಪ್, ಹೀಟಡ್ ಸೀಟು ಮತ್ತು ಪ್ಯಾನರಾಮಿಕ್ ಸನ್ ರೂಫ್ ಸೇವೆಯಿರಲಿದೆ.

ಕೈಗೆಟುಕುವ ಲಗ್ಷುರಿ ಎಸ್‌ಯುವಿ ಷೋರ್ಷೆ ಮಾಷನ್ ಆರ್4 ಭರ್ಜರಿ ಬಿಡುಗಡೆ

ಮೈಲೇಜ್: 12.71km/l

ಢಿಕ್ಕಿ ಜಾಗ: 500 ಲೀಟರ್

More from DriveSpark

Article Published On: Tuesday, November 15, 2016, 14:50 [IST]
English summary
Porsche Macan R4 Launched In India; Priced At Rs. 76.84 Lakh
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+