ರೆನೊ ಕ್ಯಾಪ್ಚರ್ ತಳಹದಿಯಲ್ಲಿ ನೂತನ ಕ್ರಾಸೋವರ್ ಕಾರು ಭಾರತಕ್ಕೆ
ಡಸ್ಟರ್ ಮತ್ತು ಕ್ವಿಡ್ ಕಾರುಗಳ ಯಶಸ್ಸಿನ ಬಳಿಕ ಫ್ರಾನ್ಸ್ ಮೂಲದ ಮುಂಚೂಣಿಯ ವಾಹನ ತಯಾರಿಕ ಸಂಸ್ಥೆಯಾಗಿರುವ ರೆನೊ, ಹೊಚ್ಚ ಹೊಸ ಕ್ರಾಸೋವರ್ ಕಾರನ್ನು ಭಾರತದಲ್ಲಿ ಬಿಡುಗಡೆ ಮಾಡುವ ಯೋಜನೆ ಹೊಂದಿದೆ.
ಎಲ್ಲವೂ ಅಂದುಕೊಂಡಂತೆ ನಡೆದ್ದಲ್ಲಿ ರೆನೊ ಕ್ಯಾಪ್ಚರ್ ತಳಹದಿಯಲ್ಲಿ ನಿರ್ಮಾಣವಾಗಲಿರುವ ನೂತನ ಕ್ರಾಸೋವರ್ ಕಾರು ಭಾರತ ಪ್ರವೇಶ ಪಡೆಯಲಿದೆ. ಭಾರತ ವಾಹನ ಮಾರುಕಟ್ಟೆಯಲ್ಲಿ ಉಪಯುಕ್ತ ವಾಹನಗಳಿಗೆ ಅತಿ ಹೆಚ್ಚಿನ ಬೇಡಿಕೆ ಇರುವುದರಿಂದ ರೆನೊ ಇಂತಹದೊಂದು ನಡೆ ಗಮನಾರ್ಹವೆನಿಸುತ್ತಿದೆ.

ಇದು ಯುರೋಪ್ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಕ್ಯಾಪ್ಚರ್ ಮಾದರಿಗಿಂತಲೂ ಸಣ್ಣದಾಗಿರಲಿದೆ. ಯಾಕೆಂದರೆ ಭಾರತದಲ್ಲಿ ಬೆಲೆ ನಿರ್ಣಾಯಕ ಘಟಕವೆನಿಸಲಿದೆ.

ಬಲ್ಲ ಮೂಲಗಳ ಪ್ರಕಾರ ನೂತನ ಕಾರು ಎಚ್‌ಎಚ್ಎ ಕೋಡ್ ಪಡೆದಿದ್ದು, ರೆನೊ ಪರೀಕ್ಷಾರ್ಥ ಸಂಚಾರ ಪರೀಕ್ಷೆಯಲ್ಲಿ ತೊಡಗಿಸಿಕೊಂಡಿದೆ. ಈ ಸಂಬಂಧ ಆಕರ್ಷಕ ಚಿತ್ರವನ್ನು ಬಿಡುಗಡೆ ಮಾಡಿದೆ.

ಮೂರನೇ ಸಾಲಿನಲ್ಲೂ ಆಸನ ವ್ಯವಸ್ಥೆ ಭಾರತದಂತಹ ಬೆಳೆದು ಬರುತ್ತಿರುವ ಮಾರುಕಟ್ಟೆಯಲ್ಲಿ ಹೆಚ್ಚು ಜನಪ್ರಿಯತೆ ಗಿಟ್ಟಿಸಿಕೊಳ್ಳುವುದರಿಂದ ಗರಿಷ್ಠ ಸ್ಥಳಾವಕಾಶಕ್ಕೆ ರೆನೊ ಆದ್ಯತೆ ಕೊಡುತ್ತಿದೆ.

ಸದ್ಯ ಮಾರಾಟದಲ್ಲಿರುವ ಡಸ್ಟರ್ ಗಿಂತಲೂ ಮೇಲ್ದರ್ಜೆಯಲ್ಲಿ ಗುರುತಿಸಿಕೊಳ್ಳಲಿರುವ ನೂತನ ಕಾರು 4.4 ಮೀಟರ್ ಗಳಷ್ಟು ಉದ್ದವನ್ನು ಹೊಂದಿರಲಿದೆ.

ಇನ್ನುಳಿದಂತೆ ಹೆಚ್ಚು 1.5 ಲೀಟರ್ ಡೀಸೆಲ್ ಎಂಜಿನ್ ಬಳಕೆಯಾಗುವ ಸಾಧ್ಯತೆಯಿದೆ. ಅಲ್ಲದೆ 5 ಸ್ಪೀಡ್ ಮ್ಯಾನುವಲ್ ಹಾಗೂ ಈಸಿ-ಆರ್ ಎಎಂಟಿ ಜೊತೆಗೆ ಆಲ್ ವೀಲ್ ಡ್ರೈವ್ ಚಾಲನಾ ವ್ಯವಸ್ಥೆಯು ಇರಲಿದೆ.

ಅಂದ ಹಾಗೆ ಭಾರತ ಮಾರುಕಟ್ಟೆ ಯಾವಾಗ ಪ್ರವೇಶಿಸಲಿದೆ ಎಂಬುದಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವಿವರಗಳು ಲಭ್ಯವಾಗಿಲ್ಲ.


Click it and Unblock the Notifications








