ರೆನೊ ಡಸ್ಟರ್, ಲೊಡ್ಜಿ ಕಾರುಗಳಿಗೆ 1 ಲಕ್ಷದ ವರೆಗೆ ಆಫರ್
ಹೊಸ ವರ್ಷ ಆರಂಭವಾಗಿರುವಂತೆಯೇ ಭಾರತದ ಮುಂಚೂಣಿಯ ರೆನೊ ಸಂಸ್ಥೆಯು ವಿಶೇಷ ಆಫರ್ ಗಳನ್ನು ಗ್ರಾಹಕರ ಮುಂದಿರಿಸಿದೆ. ಪಂಜಾಬ್ ಸೇರಿದಂತೆ ಉತ್ತರ ಭಾರತದಲ್ಲಿ ಲೊಹ್ರಿ ಹಬ್ಬದ ಸಂಭ್ರಮ ಆರಂಭವಾಗಿರುವಂತೆಯೇ ತನ್ನ ಜನಪ್ರಿಯ ಡಸ್ಟರ್ ಹಾಗೂ ಲೊಡ್ಜಿ ಕಾರುಗಳಿಗೆ ಗರಿಷ್ಠ ಪ್ರಯೋಜನಗಳನ್ನು ರೆನೊ ನೀಡುತ್ತಿದೆ.

ಡಸ್ಟರ್ ಎಲ್ಲ ರಾಜ್ಯಗಳಲ್ಲೂ...
ಡಸ್ಟರ್ ಪೆಟ್ರೋಲ್ ಹಾಗೂ ಡೀಸೆಲ್ (85 ಅಶ್ವಶಕ್ತಿ) ಮಾದರಿಗಳಿಗೆ 51,000 ರು.ಗಳ ವರೆಗೆ ಪ್ರಯೋಜನ
ಡೀಸೆಲ್ (110 ಅಶ್ವಶಕ್ತಿ) ಮಾದರಿಗೆ ಗರಿಷ್ಠ 81,000 ರು.ಗಳ ವರೆಗೆ ಪ್ರಯೋಜನ
ಹೆಚ್ಚುವರಿ ಕಾರ್ಪೋರೇಟ್ ಬೋನಸ್,
8.99 ಬಡ್ಡಿದರದಲ್ಲಿ ವಿಶೇಷ ಹಣಕಾಸು ನೆರವು.
ಕರ್ನಾಟಕ ಸೇರಿದಂತೆ ಆಯ್ದ ರಾಜ್ಯಗಳಲ್ಲಿ ಡಸ್ಟರ್ (85 ಅಶ್ವಶಕ್ತಿ) ಆರ್‌ಎಕ್ಸ್‌ಎಲ್ ಖರೀದಿಯಲ್ಲಿ 9.99 ಲಕ್ಷ ರು.ಗಳ ವಿಶೇಷ ದರ
*ಡಸ್ಟರ್ ಎಕ್ಸ್ ಪ್ಲೋರ್ ಎಡಿಷನ್‌ಗೆ ಮೇಲಿನ ಆಫರ್ ಅನ್ವಯವಾಗುವುದಿಲ್ಲ.

ರೆನೊ ಲೊಡ್ಜಿ ಎಲ್ಲ ರಾಜ್ಯಗಳಲ್ಲೂ...
ಒಂದು ಲಕ್ಷ ರು.ಗಳ ವರೆಗೂ ವಿಶೇಷ ಪ್ರಯೋಜನ,
ಹೆಚ್ಚುವರಿ ಒಂದು ಲಕ್ಷ ರು.ಗಳ ವರೆಗೆ ಎಕ್ಸ್‌ಚೇಂಜ್ ಪ್ರಯೋಜನ,
ಪ್ಲಾಟಿನಾಂ ಹೊರತಾಗಿ ಇತರೆಲ್ಲ ವೆರಿಯಂಟ್ ಗಳಿಗೆ 71,000 ರು.ಗಳ ವರೆಗೆ ಪ್ರಯೋಜನ ಖಾತರಿ,
*2016 ಜನವರಿ 31ರ ವರೆಗೆ ಮಾತ್ರ ಆಫರ್ ಜಾರಿಯಲ್ಲಿರಲಿದೆ.


Click it and Unblock the Notifications








