ಅತಿ ಶೀಘ್ರದಲ್ಲೇ ರೆನೊ ಕ್ವಿಡ್ ಎಎಂಟಿ ಕಾರು ಬಿಡುಗಡೆ

ರೆನೊ ಕ್ವಿಡ್ ಎಎಂಟಿ ಕಾರಿಗೂ ದೇಶದಲ್ಲಿ ಅತಿ ಹೆಚ್ಚು ಬೇಡಿಕೆ ವ್ಯಕ್ತವಾಗುವ ನಿರೀಕ್ಷೆಯನ್ನಿಟ್ಟುಕೊಳ್ಳಲಾಗಿದೆ.

By Nagaraja

ಎಂಟ್ರಿ ಲೆವೆಲ್ ಸಣ್ಣ ಕಾರು ವಿಭಾಗದಲ್ಲಿ ಭಾರಿ ಸಂಚಲನ್ನುಂಟು ಮಾಡಿರುವ ರೆನೊ ಕ್ವಿಡ್, ಕೆಲವು ಸಮಯಗಳ ಹಿಂದೆಯಷ್ಟೇ ಹೆಚ್ಚು ಶಕ್ತಿಶಾಲಿ ಒಂದು ಲೀಟರ್ ಎಂಜಿನ್ ನೊಂದಿಗೆ ಬಿಡುಗಡೆಗೊಂಡಿತ್ತು. ಈಗ 2016 ಆಟೋ ಎಕ್ಸ್ ಪೋದಲ್ಲಿ ಕೊಟ್ಟಿರುವ ಮಾತಿನಂತೆ ನಡೆದುಕೊಳ್ಳುತ್ತಿರುವ ಫ್ರಾನ್ಸ್ ಮೂಲದ ರೆನೊ ಸಂಸ್ಥೆಯೀಗ ಕ್ವಿಡ್ ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ (ಎಎಂಟಿ) ಆವೃತ್ತಿಯನ್ನು ಬಿಡುಗಡೆ ಮಾಡುವ ತಯಾರಿಯಲ್ಲಿದೆ.

ಅತಿ ಶೀಘ್ರದಲ್ಲೇ ರೆನೊ ಕ್ವಿಡ್ ಎಎಂಟಿ ಕಾರು ಬಿಡುಗಡೆ

ಬಲ್ಲ ಮೂಲಗಳ ಪ್ರಕಾರ ರನೊ ಕ್ವಿಡ್ ಪ್ರಸಕ್ತ ತಿಂಗಳಲ್ಲೇ ಬಿಡುಗಡೆಯಾಗಲಿದ್ದು, ಇದರಂತೆ ಡೀಲರುಗಳು ಬುಕ್ಕಿಂಗ್ ಪ್ರಕ್ರಿಯೆಯನ್ನು ಆರಂಭಿಸಿದ್ದಾರೆ.

ಅತಿ ಶೀಘ್ರದಲ್ಲೇ ರೆನೊ ಕ್ವಿಡ್ ಎಎಂಟಿ ಕಾರು ಬಿಡುಗಡೆ

ಈ ನಡುವೆ ನೂತನ ಕಾರಿನ ಟೀಸರ್ ಚಿತ್ರವನ್ನು ರೆನೊ ಬಿಡುಗಡೆಗೊಳಿಸಿದೆ. ಇದರಲ್ಲಿ ನೀವು ಚಾಲನೆ ಮಾಡುವ ವಿಧವನ್ನು ಬದಲಾಯಿಸಿಕೊಳ್ಳಲು ತಯಾರಾಗಿರಿ ಎಂದು ಉಲ್ಲೇಖಿಸಲಾಗಿದೆ.

ಏನಿದು ಈಸಿ-ಆರ್ ಎಎಂಟಿ ಗೇರ್ ಬಾಕ್ಸ್

ಏನಿದು ಈಸಿ-ಆರ್ ಎಎಂಟಿ ಗೇರ್ ಬಾಕ್ಸ್

ಸಾಂಪ್ರದಾಯಿಕ ಗೇರ್ ಲಿವರ್ ಗಳಿಗಿಂತ ವಿಭಿನ್ನವಾಗಿ ಇದು ವೃತ್ತಾಕಾರದಲ್ಲಿದ್ದು, ತಿರುಗಿಸುವ ಮೂಲಕ ಚಾಲನಾ ವಿಧಗಳನ್ನು ಬದಲಾಯಿಸಬಹುದಾಗಿದೆ. ಇದು ನ್ಯೂಟ್ರಲ್, ಡ್ರೈವ್ ಅಥವಾ ರಿವರ್ಸ್ ಚಾಲನಾ ವ್ಯವಸ್ಥೆಗಳನ್ನು ಪಡೆದಿದೆ.

ಅತಿ ಶೀಘ್ರದಲ್ಲೇ ರೆನೊ ಕ್ವಿಡ್ ಎಎಂಟಿ ಕಾರು ಬಿಡುಗಡೆ

ಈಗಷ್ಟೇ ಬಿಡುಗಡೆಯಾಗಿರುವ ರೆನೊ ಕ್ವಿಡ್ ಟಾಪ್ ಎಂಡ್ 1.0 ಲೀಟರ್ ಆರ್ ಎಕ್ಸ್ ಟಿ ವೆರಿಯಂಟ್ ನಲ್ಲಿ ಈಸಿ ಆರ್ ಎಎಂಟಿ ಗೇರ್ ಬಾಕ್ಸ್ ಆಯ್ಕೆಯೂ ಲಭ್ಯವಾಗಲಿದೆ.

ಅತಿ ಶೀಘ್ರದಲ್ಲೇ ರೆನೊ ಕ್ವಿಡ್ ಎಎಂಟಿ ಕಾರು ಬಿಡುಗಡೆ

ಇದರಲ್ಲಿರುವ 999 ಸಿಸಿ ಎಂಜಿನ್ 91 ಎನ್ ಎಂ ತಿರುಗುಬಲದಲ್ಲಿ 67 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಅತಿ ಶೀಘ್ರದಲ್ಲೇ ರೆನೊ ಕ್ವಿಡ್ ಎಎಂಟಿ ಕಾರು ಬಿಡುಗಡೆ

ಇದಕ್ಕೂ ಮೊದಲು ಡಸ್ಟರ್ ನಲ್ಲೂ ಎಎಂಟಿ ಆಯ್ಕೆಯನ್ನು ಕೊಡಲಾಗಿತ್ತು. ಆದರೆ ನೂತನ ಕ್ವಿಡ್, ಡಯಲ್ ಆಕಾರದ ಗೇರ್ ಬಾಕ್ಸ್ ಪಡೆದುಕೊಳ್ಳುತ್ತಿರುವುದು ಹೆಚ್ಚಿನ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.

ಅತಿ ಶೀಘ್ರದಲ್ಲೇ ರೆನೊ ಕ್ವಿಡ್ ಎಎಂಟಿ ಕಾರು ಬಿಡುಗಡೆ

ವಿನ್ಯಾಸದ ಬಗ್ಗೆ ಮಾತನಾಡುವುದಾದ್ದಲ್ಲಿ ರೆನೊ ಕ್ವಿಡ್ 1.0 ಲೀಟರ್ ಆವೃತ್ತಿಗೆ ಸಮಾನವಾದ ವೈಶಿಷ್ಟ್ಯಗಳನ್ನು ಪಡೆಯಲಿದೆ. ಆದರೆ ಹೊರಮೈಯಲ್ಲಿ ಈಸಿ ಆರ್ ಲಾಂಛನವು ಪ್ರಮುಖ ಆಕರ್ಷಣೆಯಾಗಲಿದೆ.

ಅತಿ ಶೀಘ್ರದಲ್ಲೇ ರೆನೊ ಕ್ವಿಡ್ ಎಎಂಟಿ ಕಾರು ಬಿಡುಗಡೆ

ನೂತನ ಕ್ವಿಡ್ ಕಾರಿನಲ್ಲೂ ಏಳು ಇಂಚುಗಳ ಮೀಡಿಯಾ ನೇವ್ ಟಚ್ ಸ್ಕ್ರೀನ್ ಡಿಸ್ ಪ್ಲೇ, ಫ್ರಂಟ್ ಪವರ್ ವಿಂಡೋ ಇತ್ಯಾದಿ ವೈಶಿಷ್ಟ್ಯಗಳಿರಲಿದೆ.

ಅತಿ ಶೀಘ್ರದಲ್ಲೇ ರೆನೊ ಕ್ವಿಡ್ ಎಎಂಟಿ ಕಾರು ಬಿಡುಗಡೆ

ರೆನೊ ಕ್ವಿಡ್ ಎಎಂಟಿ ಆವೃತ್ತಿಯು ಪ್ರಮುಖವಾಗಿಯೂ ಮಾರುತಿ ಸುಜುಕಿ ಆಲ್ಟೊ ಕೆ10 ಕಾರಿಗೆ ಪ್ರತಿಸ್ಪರ್ಧೆಯನ್ನು ಒಡ್ಡಲಿದೆ.

ಅತಿ ಶೀಘ್ರದಲ್ಲೇ ರೆನೊ ಕ್ವಿಡ್ ಎಎಂಟಿ ಕಾರು ಬಿಡುಗಡೆ

ಕೊನೆಯದಾಗಿ ಬೆಲೆಯ ಬಗ್ಗೆ ಮಾಹಿತಿಗಳು ಹೊರಬಂದಿಲ್ಲ. ಇದು ಮ್ಯಾನುವಲ್ ಮಾದರಿಗಿಂತಲೂ ಸರಿ ಸುಮಾರು 45,000 ರು.ಗಳಷ್ಟು ದುಬಾರಿಯೆನಿಸುವ ಸಾಧ್ಯತೆಯಿದೆ.

More from DriveSpark

Article Published On: Wednesday, November 2, 2016, 13:20 [IST]
English summary
Renault Kwid Easy-R AMT Option Teased Ahead Of Its Launch In India
Read more on ರೆನೊ renault
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+