ಸದ್ದಿಲ್ಲದೆ ರಸ್ತೆಯಿಂದ ಹಿಂದಕ್ಕೆ ಸರಿದ ರೆನೊ ಲೊಡ್ಜಿ ?
ರೆನೊ ಲೊಡ್ಜಿ ಆರ್ ಎಕ್ಸ್ ಝಡ್ ವೆರಿಯಂಟ್ ಹಿಂಪಡೆದುಕೊಳ್ಳಲು ಸಂಸ್ಥೆಯು ನಿರ್ಧರಿಸಿದೆ. ತನ್ಮೂಲಕ ಈಗಷ್ಟೇ ಬಿಡುಗಡೆಯಾಗಿರುವ ಲೊಡ್ಜಿ ವರ್ಲ್ಡ್ ಎಡಿಷನ್ ಮಾರಾಟಕ್ಕೆ ಹೆಚ್ಚಿನ ಉತ್ತೇಜನವನ್ನು ತುಂಬಲಿದೆ.
ಕೆಲವು ಸಮಯಗಳ ಹಿಂದೆಯಷ್ಟೇ ಫ್ರಾನ್ಸ್ ಮೂಲದ ರೆನೊ ಸಂಸ್ಥೆಯು ತನ್ನ ಜನಪ್ರಿಯ ಲೊಡ್ಜಿ ಬಹು ಬಳಕೆಯ ವಾಹನದ ಮಾರಾಟಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ 25 ವೈಶಿಷ್ಟ್ಯಗಳನ್ನು ಒಳಗೊಂಡಿರುವ ಲೊಡ್ಜಿ ವರ್ಲ್ಡ್ ಎಡಿಷನ್ ಬಿಡುಗಡೆಗೊಳಿಸಿತ್ತು. ಇದಾದ ಬೆನ್ನಲ್ಲೇ ಇದೀಗ ಲೊಡ್ಜಿ ಶ್ರೇಣಿಯಿಂದ ಆರ್ ಎಕ್ಸ್ ಝಡ್ ವೆರಿಯಂಟ್ ಹಿಂಪಡೆದುಕೊಳ್ಳಲು ರೆನೊ ನಿರ್ಧರಿಸಿದೆ.

ಕಳೆದ ಜುಲೈ ತಿಂಗಳಲ್ಲಿ ರೆನೊ ಲೊಡ್ಜಿ ವರ್ಲ್ಡ್ ಎಡಿಷನ್ ಬಿಡುಗಡೆಗೊಳಿಸಿತ್ತು. ಈಗ ಸದ್ದಿಲ್ಲದೆ ಆರ್ ಎಕ್ಸ್ ಝಡ್ ವೆರಿಯಂಟ್ ಹಿಂಪಡೆಯುವುದರೊಂದಿಗೆ 110 ಅಶ್ವಶಕ್ತಿ ಎಂಜಿನ್ ಆಯ್ಕೆಯೀಗ ಲೊಡ್ಜಿ ವರ್ಲ್ಡ್ ಎಡಿಷನ್ ನಲ್ಲಿ ಮಾತ್ರ ಲಭ್ಯವಾಗಲಿದೆ.

ಲೊಡ್ಜಿ ಆರ್ ಎಕ್ಸ್ ಝಡ್ ವೆರಿಯಂಟ್ ಗೆ ಕತ್ತರಿ ಪ್ರಯೋಗದೊಂದಿಗೆ ಅನೇಕ ವೈಶಿಷ್ಟ್ಯಗಳು ನಷ್ಟವಾಗಲಿದೆ. ಇದರಲ್ಲಿ ಪ್ರಮುಖವಾಗಿಯೂ ಪ್ರಯಾಣಿಕ ಏರ್ ಬ್ಯಾಗ್ ಆಗಿದೆ.

ರೆನೊ ಲೊಡ್ಜಿ ಟಾಪ್ ಎಂಡ್ 110 ಆವೃತ್ತಿಯಲ್ಲಿ ಚಾಲಕ ಬದಿಯ ಏರ್ ಬ್ಯಾಗ್, ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ ತನ್ನೆಲ್ಲ ಶ್ರೇಣಿಗಳಲ್ಲಿ ಸ್ಟ್ಯಾಂಡರ್ಡ್ ಆಗಿ ದೊರಕುತ್ತಿತ್ತು.

ಅತ್ತ ರಿಯರ್ ವಾಶರ್, ವೈಪರ್, ಡಿಫಾಗರ್ ವೈಶಿಷ್ಟ್ಯಗಳಿಗೂ ಕತ್ತರಿ ಪ್ರಯೋಗವಾಗಲಿರುವುದು ನಿರಾಸೆ ತಂದಿದೆ.

ಕ್ರೂಸ್ ಕಂಟ್ರೋಲ್, ರಿವರ್ಸ್ ಸೆನ್ಸಾರ್, ಕ್ಯಾಮೆರಾ, ಚಾಲಕ ಆರ್ಮ್ ರೆಸ್ಟ್, ಸ್ಟೀರಿಂಗ್ ಮೌಂಟೆಡ್ ಆಡಿಯೋ, ಫೋನ್ ಕಂಟ್ರೋಲ್, ಟಚ್ ಸ್ಕ್ರೀನ್ ಇನ್ಪೋಟೈನ್ಮೆಂಟ್ ಸಿಸ್ಟಂ ಜೊತೆ ಜಿಪಿಎಸ್ ನೇವಿಗೇಷನ್ ಸಹ ಮಿಸ್ ಆಗಲಿದೆ.

ರೆನೊ ಲೊಡ್ಜಿ ವೆರಿಯಂಟ್, ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)
ಲೊಡ್ಜಿ 85 ಅಶ್ವಶಕ್ತಿ ಸ್ಟ್ಯಾಂಡರ್ಡ್ (ಎಂಟು ಸೀಟು): 7,58,831 ರು.
ಲೊಡ್ಜಿ 85 ಅಶ್ವಶಕ್ತಿ ಆರ್ ಎಕ್ಸ್ ಇ (ಎಂಟು ಸೀಟು): 8,56,831 ರು.
ಲೊಡ್ಜಿ 85 ಅಶ್ವಶಕ್ತಿ ಆರ್ ಎಕ್ಸ್ ಇ (ಏಳು ಸೀಟು): 8,56,831 ರು.
ಲೊಡ್ಜಿ 85 ಅಶ್ವಶಕ್ತಿ ಆರ್ ಎಕ್ಸ್ ಎಲ್ (ಎಂಟು ಸೀಟು): 9,43,831 ರು.

ರೆನೊ ಲೊಡ್ಜಿ ವರ್ಲ್ಡ್ ಎಡಿಷನ್ ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)
ಲೊಡ್ಜಿ ವರ್ಲ್ಡ್ ಎಡಿಷನ್ 85 ಅಶ್ವಶಕ್ತಿ (ಎಂಟು ಸೀಟು): 9,73,831 ರು.
ಲೊಡ್ಜಿ ವರ್ಲ್ಡ್ ಎಡಿಷನ್ 110 ಅಶ್ವಶಕ್ತಿ (ಎಂಟು ಸೀಟು): 10,39,831 ರು.

ಇವನ್ನೂ ಓದಿ:
01. 25 ಆಕರ್ಷಕ ವೈಶಿಷ್ಟ್ಯಗಳೊಂದಿಗೆ ರೆನೊ ಲೊಡ್ಜಿ ವರ್ಲ್ಡ್ ಎಡಿಷನ್ ಬಿಡುಗಡೆ
02. ರೆನೊ ಕ್ವಿಡ್ ಕಾರಿನಲ್ಲಿ ಸಮಸ್ಯೆ, 50,000 ವಾಪಾಸ್; ನಿಮ್ಮ ಕಾರು ಸೇಫ್ ಆಗಿದೆಯಾ?
03. ಸಾಹಸ ಪ್ರಿಯರಿಗಾಗಿ ರೆನೊ ಡಸ್ಟನ್ ಅಡ್ವೆಂಚರ್ ಎಡಿಷನ್ ಬಿಡುಗಡೆ


Click it and Unblock the Notifications








