ವಾವ್! ರೆನೊ ಕಾರುಗಳಿಗೆ 80,000 ರು.ಗಳ ವರೆಗೆ ಆಫರ್
ಹಬ್ಬದ ಆವೃತ್ತಿಗೆ ಮೆರಗು ತುಂಬಿರುವ ಫ್ರಾನ್ಸ್ ಮೂಲದ ಪ್ರಖ್ಯಾತ ವಾಹನ ಸಂಸ್ಥೆ ತನ್ನೆಲ್ಲ ಶ್ರೇಣಿಯ ಕಾರುಗಳಿಗೆ ವಿಶೇಷ ಆಫರ್ ಗಳನ್ನು ಮುಂದಿಟ್ಟಿದೆ. ಈ ಹಬ್ಬದ ಆವೃತ್ತಿಯ ಸಂದರ್ಭದಲ್ಲಿ ರೆನೊ ಕಾರುಗಳನ್ನು ಖರೀದಿಸುವಾಗ ಗರಿಷ್ಠ 80,000 ರು.ಗಳ ವರೆಗೆ ಆಫರ್ ಗಿಟ್ಟಿಸಿಕೊಳ್ಳಬಹುದಾಗಿದೆ. ಜೊತೆ ಜೊತೆಗೆ ಎರಡು ಗ್ರಾಂ ಚಿನ್ನದ ನಾಣ್ಯ ನಿಮ್ಮದಾಗಿಸಬಹುದಾಗಿದೆ.

ಈ ಬಾರಿ ರೆನೊ ಕಾರನ್ನು ಖರೀದಿಸುವಾಗ ಅದೃಷ್ಟಶಾಲಿಗಳಿಗೆ ಸಂಸ್ಥೆಯ ಮುಖ್ಯ ಪ್ರಚಾರ ರಾಯಭಾರಿ ಕೂಡಾ ಆಗಿರುವ ಬಾಲಿವುಡ್ ನಟ ರಣಬೀರ್ ಕಪೂರ್ ಅವರನ್ನು ಭೇಟಿ ಮಾಡುವ ಅವಕಾಶವಿರುತ್ತದೆ. ಇದರ ಜೊತೆಗೆ ಪ್ರತಿ ಟೆಸ್ಟ್ ಡ್ರೈವ್ ಗೂ ಗಿಫ್ಟ್ ನೀಡಲಾಗುತ್ತದೆ.

ರೆನೊ ಡಸ್ಟರ್ ಆಫರ್
80,000 ರು.ಗಳ ವರೆಗೆ ಪ್ರಯೋಜನ,
40,000 ರು.ಗಳ ವರೆಗೆ ಗಿಫ್ಟ್ ಚೆಕ್ ಅಥವಾ ಶೇಕಡಾ 7.77 ಬಡ್ಡಿದರದಲ್ಲಿ ಸಾಲ,
2 ಗ್ರಾಂ ಚಿನ್ನದ ನಾಣ್ಯ
ಡಸ್ಟರ್ ಎಎಂಟಿ ಕಾರುಗಳಿಗೆ 80,000 ರು.ಗಳ ವರೆಗೆ ಆಫರ್ ಲಭ್ಯವಾಗಲಿದೆ.

ರೆನೊ ಲೊಡ್ಜಿ ಆಫರ್
40,000 ರು.ಗಳ ಗಿಫ್ಟ್ ಚೆಕ್
2 ಗ್ರಾಂ ಚಿನ್ನದ ನಾಣ್ಯ
40,000 ರು.ಗಳ ಗಿಫ್ಟ್ ಚೆಕ್ ರೆನೊ ಲೊಡ್ಜಿ ಆರ್ ಎಕ್ಸ್ ಎಲ್ ಆವೃತ್ತಿಯಲ್ಲಿ ಮಾತ್ರ ಲಭ್ಯವಿರುತ್ತದೆ. ಇನ್ನೊಂದೆಡೆ ಲೊಡ್ಜಿ ಆರ್ ಎಕ್ಸ್ ಇ, ಆರ್ ಎಕ್ಸ್ ಎಲ್ ವೆರಿಯಂಟ್ ಗಳಲ್ಲಿ 20,000 ರು.ಗಳ ಗಿಫ್ಟ್ ಚೆಕ್ ನೀಡಲಾಗುತ್ತದೆ.

ರೆನೊ ಪಲ್ಸ್
2 ಗ್ರಾಂ ಚಿನ್ನದ ನಾಣ್ಯ
40,000 ರು.ಗಳ ವರೆಗೆ ನಗದು ಪ್ರಯೋಜನ ಅಥವಾ ಶೇಕಡಾ 4.49 ಬಡ್ಡಿದರದಲ್ಲಿ ಆಕರ್ಷಕ ಸಾಲ

ರೆನೊ ಸ್ಕಾಲಾ
2 ಗ್ರಾಂ ಚಿನ್ನದ ನಾಣ್ಯ
ಕೇವಲ ಒಂದು ರುಪಾಯಿಗೆ ವಿಮಾ ಸೌಲಭ್ಯ

ಹಾಗಿದ್ದರೂ ಮಾರುಕಟ್ಟೆಯಲ್ಲಿ ಹಾಟ್ ಕೇಕ್ ತರಹನೇ ಮಾರಾಟವಾಗುತ್ತಿರುವ ರೆನೊ ಕ್ವಿಡ್ ಕಾರಿಗೆ ಆಫರ್ ಗಳು ಅನ್ವಯವಾಗುವುದಿಲ್ಲ. ಅಲ್ಲದೆ ಚಿನ್ನದ ನಾಣ್ಯ ಗಿಟ್ಟಿಸಿಕೊಳ್ಳುವ ಅವಕಾಶದಿಂದ ವಂಚಿತರಾಗಲಿದ್ದಾರೆ.

ಈ ಎಲ್ಲ ಆಫರ್ ಗಳು ಅಕ್ಟೋಬರ್ 31ರ ವರೆಗೆ ಮಾತ್ರ ಆಫರ್ ಜಾರಿಯಲ್ಲಿರುತ್ತದೆ. ಹಾಗಾಗಿ ಗ್ರಾಹಕರು ಆದಷ್ಟು ಬೇಗನೇ ನಿಮ್ಮ ಹತ್ತಿರದ ರೆನೊ ಡೀಲರುಗಳನ್ನು ಸಂಪರ್ಕಿಸಿರಿ.


Click it and Unblock the Notifications








