ರೆನೊ ಕ್ವಿಡ್ ಎಎಂಟಿ ಕಾರು ಭರ್ಜರಿ ಬಿಡುಗಡೆ
ರೆನೂ ಕ್ವಿಡ್ ಕಾರಿಗೆ ಅತಿ ಹೆಚ್ಚಿನ ಬೇಡಿಕೆ ವ್ಯಕ್ತವಾಗುತ್ತಿದ್ದು, ಇದರ ಬೆನ್ನಲ್ಲೇ ನೂತನ ಎಎಂಟಿ ಆವೃತ್ತಿಯನ್ನು ಸಂಸ್ಥೆಯು ಬಿಡುಗಡೆಗೊಳಿಸಿದೆ.
ಸಣ್ಣ ಕಾರು ವಿಭಾಗದಲ್ಲಿ ಭಾರಿ ಸಂಚಲನವನ್ನೇ ಮೂಡಿಸಿರುವ ರೆನೊ ಕ್ವಿಡ್, ಇದೀಗ ಹೊಸ ರೂಪದಲ್ಲಿ ಪ್ರತ್ಯಕ್ಷಗೊಂಡಿದೆ. ಈ ವರ್ಷಾಂತ್ಯದ ಅವಧಿಯಲ್ಲಿ ಫ್ರಾನ್ಸ್ ಮೂಲದ ರೆನೊ ಸಂಸ್ಥೆಯು ಅತ್ಯಾಕರ್ಷಕ ಕ್ವಿಡ್ ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ (ಎಎಂಟಿ) ಮಾದರಿಯನ್ನು ಬಿಡುಗಡೆಗೊಳಿಸಿದೆ. ತನ್ಮೂಲಕ ಕ್ವಿಡ್ 800 ಸಿಸಿ ಮತ್ತು 1000 ಸಿಸಿ ಆವೃತ್ತಿಯ ಬಳಿಕವೀಗ ಈ ಶ್ರೇಣಿಗೆ ಮಗದೊಂದು ಆಕರ್ಷಕ ಕಾರಿನ ಸೇರ್ಪಡೆಯಾಗಿದೆ.

ರೆನೊ ಕ್ವಿಡ್ ಎಎಂಟಿ ಕಾರು ಟಾಪ್ ಎಂಡ್ ಆರ್ ಎಕ್ಸ್ ಟಿ (ಐಚ್ಛಿಕ) ವೆರಿಯಂಟ್ ನಲ್ಲಿ ಲಭ್ಯವಾಗಲಿದ್ದು, ದೆಹಲಿ ಎಕ್ಸ್ ಶೋ ರೂಂ 4.25 ಲಕ್ಷ ರುಪಾಯಿಗಳ ಪರಿಚಯತ್ಮಾಕ ಬೆಲೆಗಳಲ್ಲಿ ಬಿಡುಗಡೆಗೊಳಿಸಲಾಗಿದೆ.

ಕಾಂಪಾಕ್ಟ್ ಹ್ಯಾಚ್ ಬ್ಯಾಕ್ ವಿಭಾಗದಲ್ಲಿ ಕ್ವಿಡ್ ವಾಹನ ಪ್ರೇಮಿಗಳಿಗೆ ಸುಲಭ ಚಾಲನೆಯ ಅನುಭವ ನೀಡಲಿದೆ. ದೇಶದಲ್ಲಿ ಎಎಂಟಿ ಕಾರುಗಳಿಗೆ ಬೇಡಿಕೆ ಹೆಚ್ಚಿದ್ದರಿಂದ ಕ್ವಿಡ್ ಇದರ ಸಂಪೂರ್ಣ ಪ್ರಯೋಜನವನ್ನು ಗಿಟ್ಟಿಸಿಕೊಳ್ಳಲಿದೆ.

ಇತರೆಲ್ಲ ಎಎಂಟಿ ಕಾರುಗಳ ಬದಲಾಗಿ ನೂತನ ಕ್ವಿಡ್ ಶಿಫ್ಟ್ ಕಂಟ್ರೋಲ್ ಎಎಂಟಿ ಡೈಯಲ್ ಎಂಬ ನೂತನ ಗೇರ್ ಬಾಕ್ಸ್ ಪಡೆಯಲಿದೆ. ಇದು 'ರಿವರ್ಸ್-ನ್ಯೂಟ್ರಲ್-ಡ್ರೈವ್' ಗಳೆಂಬ ಮೂರು ಚಾಲನಾ ವ್ಯವಸ್ಥೆಗಳನ್ನು ಪಡೆಯಲಿದೆ.

ಸಾಂಪ್ರದಾಯಿಕ ಗೇರ್ ಲಿವರ್ ಗಳಿಗಿಂತ ವಿಭಿನ್ನವಾಗಿ ವೃತ್ತಾಕಾರದಲ್ಲಿರುವ ಇದನ್ನು ತಿರುಗಿಸುವ ಮೂಲಕ ಚಾಲನಾ ವಿಧಗಳನ್ನು ಬದಲಾಯಿಸಬಹುದಾಗಿದೆ.

ರೆನೊ ಕ್ವಿಡ್ ನಲ್ಲಿರುವ ಈಸಿ-ಆರ್ ಗೇರ್ ಬಾಕ್ಸ್ ಐದು ಸ್ಪೀಡ್ ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ (ಎಎಂಟಿ) ತಂತ್ರಜ್ಞಾನವನ್ನು ಪಡೆದುಕೊಂಡಿದೆ. ಈ ಕ್ಲಚ್ ರಹಿತ ಗೇರ್ ಬಾಕ್ಸ್ ವ್ಯವಸ್ಥೆಯು ಅತ್ಯುತ್ತಮ ಇಂಧನ ಕ್ಷಮತೆ ಮತ್ತು ನಿರ್ವಹಣೆ ನೀಡುವಲ್ಲಿ ಸಕ್ಷಮವಾಗಿರಲಿದೆ.

ಸೆಂಟ್ರಲ್ ಕನ್ಸಾಲ್ ನಲ್ಲಿರುವ ಇನ್ಪೋಟೈನ್ಮೆಂಟ್ ಸಿಸ್ಟಂ ಕೆಳಗಡೆಯಾಗಿ ಶಿಫ್ಟ್ ಕಂಟ್ರೋಲ್ ಡಯಲ್ ಗೇರ್ ಬಾಕ್ಸ್ ವ್ಯವಸ್ಥೆಯನ್ನು ಜೋಡಿಸಲಾಗಿದೆ.

ಪ್ರಸ್ತುತ ಕಾರಿನಲ್ಲಿ ಮುಂದುವರಿದ ಥ್ರಾಟಲ್ ಕಂಟ್ರೋಲ್ ವ್ಯವಸ್ಥೆಯು ಇರಲಿದ್ದು, ಇದು ಆಕ್ಸಿಲೇರೇಷನ್ ಮತ್ತು ಗೇರ್ ಬದಲಾವಣೆಯನ್ನು ನೋಡಿಕೊಳ್ಳಲಿದೆ.

ಸ್ಮಾರ್ಟ್ ಕಂಟ್ರೋಲ್ ಎಫಿಸಿಯೆನ್ಸಿ (ಎಸ್ ಸಿಇ) ಎಂಜಿನ್ ಜೊತೆಗೆ ಪ್ರತಿ ಸಿಲಿಂಡರ್ ಗೆ ನಾಲ್ಕು ವಾಲ್ವ್ ಎಂಜಿನ್ ನಿಂದ ನಿಯಂತ್ರಿಸ್ಪಡಲಿರುವ ರೆನೊ ಕ್ವಿಡ್, ಡಬಲ್ ಹೆಡ್ ಕ್ಯಾಮ್ ಶಾಫ್ಟ್ (ಡಿಒಎಚ್ ಸಿ) ವ್ಯವಸ್ಥೆಯನ್ನು ಪಡೆದಿದೆ.

ರೆನೊ ಕ್ವಿಡ್ ಎಎಂಟಿ ಕಾರು 91 ಎನ್ ಎಂ ತಿರುಗುಬಲದಲ್ಲಿ ಗರಿಷ್ಠ 68 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಹಾಗೆಯೇ ಪ್ರತಿ ಲೀಟರ್ ಗೆ 24.04 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿರಲಿದೆ. ಅಂದರೆ ಮ್ಯಾನುವಲ್ ಮಾದರಿಗಿಂತಲೂ ಹೆಚ್ಚು ಇಂಧನ ಕ್ಷಮತೆಯನ್ನು ಕಾಪಾಡಿಕೊಳ್ಳಲಿದೆ.

ಚಾಲಕ ಬದಿಯ ಏರ್ ಬ್ಯಾಗ್ ಸೇವೆಯು ಇದರಲ್ಲಿರುತ್ತದೆ. ಇನ್ನು ಈ ವಿಭಾಗದಲ್ಲಿ ಇದೇ ಮೊದಲ ಬಾರಿಗೆ ಪ್ರೊ-ಸೆನ್ಸ್ ಪ್ರಿಟೆನ್ಷನರ್ ಜೊತೆ ಲೋಡ್ ಲಿಮಿಟರ್ ಇತ್ಯಾದಿ ವ್ಯವಸ್ಥೆಗಳನ್ನು ಖಾತ್ರಿಪಡಿಸಲಾಗಿದೆ.

ಐದು ಆಕರ್ಷಕ ಬಣ್ಣಗಳು
ಫಿಯರಿ ರೆಡ್,
ಐಸ್ ಕೂಲ್ ವೈಟ್,
ಮೂನ್ ಲೈಟ್ ಸಿಲ್ವರ್,
ಔಟ್ ಬ್ಯಾಕ್ ಬ್ರಾನ್ಜ್,
ಪ್ಲಾನೆಟ್ ಗ್ರೇ.

ದೇಶದಲ್ಲಿ ಸ್ಥಿತಗೊಂಡಿರುವ ಎಲ್ಲ ರೆನೊ ಡೀಲರ್ ಶಿಪ್ ಗಳಲ್ಲಿ ಬುಕ್ಕಿಂಗ್ ಸ್ವೀಕರಿಸಲಾಗುತ್ತಿದೆ. ಇನ್ನು ಗೂಗಲ್ ಪ್ಲೇ ಅಥವಾ ಆಪಲ್ ಸ್ಟೋರ್ ಮುಖಾಂತರವೂ ರೆನೊ ಕ್ವಿಡ್ ಆಪ್ ಡೌನ್ ಲೋಡ್ ಮಾಡಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ.

ರೆನೊ ಕ್ವಿಡ್ ಆರ್ ಎಕ್ಸ್ ಟಿ (ಐಚ್ಚಿಕ) ಮ್ಯಾನುವಲ್ ವೆರಿಯಂಟ್ 3.95 ಲಕ್ಷ ರು.ಗಳಷ್ಟು (ದೆಹಲಿ ಎಕ್ಸ್ ಶೋರೂಂ ಬೆಲೆ) ದುಬಾರಿಯೆನಿಸುತ್ತಿದೆ. ಅಂದರೆ ಎಎಂಟಿ ಆವೃತ್ತಿಯು ಇದಕ್ಕಿಂತಲೂ 30,000 ರು.ಗಳಷ್ಟು ಹೆಚ್ಚು ದುಬಾರಿಯೆನಿಸಲಿದೆ.

ಹಾಗೆಯೇ ಸೆಂಟರ್ ಕನ್ಸಾಲ್ ನಲ್ಲಿ ಗೇರ್ ಬಾಕ್ಸ್ ಲಗತ್ತಿಸಿರುವುದರಿಂದ ಚಾಲಕ ಮತ್ತು ಸಹ ಚಾಲಕ ನಡುವೆ ಹಚ್ಚಿನ ಸ್ಥಳಾವಕಾಶ ಲಭ್ಯವಾಗಲಿದೆ.

1.0 ಲೀಟರ್ ಆರ್ ಎಕ್ಸ್ ಟಿ ವೆರಿಯಂಟ್ ನಲ್ಲಿರುವುದಕ್ಕೆ ಸಮಾನವಾಗಿ ಮೀಡಿಯಾ ನೇವ್ ಮಲ್ಟಿ ಮೀಡಿಯಾ ಮತ್ತು ನೇವಿಗೇಷನ್ ವ್ಯವಸ್ಥೆ ಮತ್ತು ಬ್ಲೂಟೂತ್ ಕನೆಕ್ಟಿವಿಟಿ ಸೌಲಭ್ಯವಿರುತ್ತದೆ.

ಆಯಾಮ (ಎಂಎಂ)
ಉದ್ದ: 3679
ಅಗಲ: 1579
ಎತ್ತರ: 1478
ಚಕ್ರಾಂತರ: 2422
ಗ್ರೌಂಡ್ ಕ್ಲಿಯರನ್ಸ್: 180

300 ಲೀಟರ್ ಲಗ್ಗೇಜ್ ಜಾಗವನ್ನು ಹೊಂದಿರುವ ರೆನೊ ಕ್ವಿಡ್ ಹಿಂದುಗಡೆ ಸೀಟನ್ನು ಮಡಚುವ ಮೂಲಕ ಢಿಕ್ಕಿ ಜಾಗವನ್ನು 1115 ಲೀಟರ್ ಗಳಿಗೆ ಏರಿಸಬಹುದಾಗಿದೆ. ಹಾಗೆಯೇ 28 ಲೀಟರ್ ಗಳ ಇಂಧನ ಟ್ಯಾಂಕ್ ಇದರಲ್ಲಿದೆ.


Click it and Unblock the Notifications








