ಢಿಕ್ಕಿ ಪರೀಕ್ಷೆಯಲ್ಲಿ ರೆನೊ ಕ್ವಿಡ್ ಗೆ ಒಂದು ಸ್ಟಾರ್; ಮೊಬಿಲಿಯೊ ಶೂನ್ಯ ಸಂಪಾದನೆ

By Nagaraja

ಗ್ಲೋಬಲ್ ಎನ್ ಸಿಎಪಿ ನಡೆಸಿರುವ ತಾಜಾ ಢಿಕ್ಕಿ ಪರೀಕ್ಷೆಯಲ್ಲಿ ದೇಶದ ಜನಪ್ರಿಯ ಸಣ್ಣ ಕಾರುಗಳಲ್ಲಿ ಒಂದಾಗಿರುವ ರೆನೊ ಕ್ವಿಡ್ ಒಂದು ಸ್ಟಾರ್ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಅದೇ ಹೊತ್ತಿಗೆ ಹೋಂಡಾ ಮೊಬಿಲಿಯೊ ಬಹು ಬಳಕೆಯ ವಾಹನ ಶೂನ್ಯ ಸಂಪಾದಿಸುವ ಮೂಲಕ ಮುಜುಗರಕ್ಕೊಳಗಾಗಿದೆ.

ಭಾರತದಲ್ಲಿ ನಿರ್ಮಿತ ಕಾರುಗಳ ಭದ್ರತೆಯ ಬಗ್ಗೆ ಕಳೆದ ಕೆಲವು ಸಮಯಗಳಿಂದ ವಾಹನ ವಲಯಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಜಾಗತಿಕ ಢಿಕ್ಕಿ ಪರೀಕ್ಷೆಯಲ್ಲಿ ಪದೇ ಪದೇ ಹಿನ್ನಡೆಗೊಳಗಾಗುತ್ತಿರುವುದು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ. ಮುಂದಿನ ವರ್ಷದಿಂದ ದೇಶದಲ್ಲಿ ಭಾರತ್ ಎನ್ ಸಿಎಪಿ ಢಿಕ್ಕಿ ಪರೀಕ್ಷೆ ಕಡ್ಡಾಯವಾಗಿ ಜಾರಿಯಾಗುವ ಹಿನ್ನೆಲೆಯಲ್ಲಿ ಈಗಿನ ಪರಿಸ್ಥಿತಿಯಲ್ಲಿ ಬದಲಾವಣೆಯಾಗುವ ನಿರೀಕ್ಷೆಯಿದೆ.

ಢಿಕ್ಕಿ ಪರೀಕ್ಷೆಯಲ್ಲಿ ರೆನೊ ಕ್ವಿಡ್ ಗೆ ಒಂದು ಸ್ಟಾರ್; ಮೊಬಿಲಿಯೊ ಶೂನ್ಯ ಸಂಪಾದನೆ

ಗ್ಲೋಬಲ್ ಎನ್ ಸಿಎಪಿ ನಡೆಸಿರುವ ಢಿಕ್ಕಿ ಪರೀಕ್ಷೆಯಲ್ಲಿ ಚಾಲಕ ಬದಿಯ ಏರ್ ಬ್ಯಾಗ್ ಸುರಕ್ಷತೆಯನ್ನು ಹೊಂದಿರುವ ರೆನೊ ಕ್ವಿಡ್ ಪ್ರಾಪ್ತ ವಯಸ್ಕರ ಪ್ರಯಾಣಿಕ ಭದ್ರತೆಯಲ್ಲಿ ಒಂದು ಸ್ಟಾರ್ ಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಢಿಕ್ಕಿ ಪರೀಕ್ಷೆಯಲ್ಲಿ ರೆನೊ ಕ್ವಿಡ್ ಗೆ ಒಂದು ಸ್ಟಾರ್; ಮೊಬಿಲಿಯೊ ಶೂನ್ಯ ಸಂಪಾದನೆ

ಇನ್ನೊಂದೆಡೆ ಹೋಂಡಾ ಮೊಬಿಲಿಯೊ ಬೇಸ್ ವೆರಿಯಂಟ್ ಶೂನ್ಯಂಕ ಸಂಪಾದಿಸಿದೆ. ಅದೇ ಹೊತ್ತಿಗೆ ಎರಡು ಏರ್ ಬ್ಯಾಗ್ ಹೊಂದಿರುವ ಮೊಬಿಲಿಯೊ ಆವೃತ್ತಿಯು ಮೂರು ನಕ್ಷತ್ರಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಢಿಕ್ಕಿ ಪರೀಕ್ಷೆಯಲ್ಲಿ ರೆನೊ ಕ್ವಿಡ್ ಗೆ ಒಂದು ಸ್ಟಾರ್; ಮೊಬಿಲಿಯೊ ಶೂನ್ಯ ಸಂಪಾದನೆ

ಈ ಸಂಬಂಧ ಪ್ರತಿಕ್ರಿಯಿಸಿರುವ ಗ್ಲೋಬಲ್ ಎನ್ ಸಿಎಪಿ ಪ್ರಧಾನ ಕಾರ್ಯದರ್ಶಿ ಡೇವಿಡ್ ವಾರ್ಡ್, "ಇತರ ಮಾರುಕಟ್ಟೆಯಲ್ಲಿ ರೆನೊ ಹಾಗೂ ಹೋಂಡಾ ಸಂಸ್ಥೆಗಳು ಸುರಕ್ಷಿತ ಕಾರುಗಳನ್ನು ನಿರ್ಮಾಣ ಮಾಡುತ್ತಿದ್ದು, ಭಾರತೀಯ ಕಾರುಗಳನ್ನು ಹೇಗೆ ಮತ್ತಷ್ಟು ಸುರಕ್ಷಿತವಾಗಿ ನಿರ್ಮಿಸುವುದು ಸಹ ಗೊತ್ತು. ಈಗಿನಿಂದಲೇ ಈ ಕಾರ್ಯ ಆರಂಭವಾಗಬೇಕಿದೆ" ಎಂದಿದ್ದಾರೆ.

ಢಿಕ್ಕಿ ಪರೀಕ್ಷೆಯಲ್ಲಿ ರೆನೊ ಕ್ವಿಡ್ ಗೆ ಒಂದು ಸ್ಟಾರ್; ಮೊಬಿಲಿಯೊ ಶೂನ್ಯ ಸಂಪಾದನೆ

ರೆನೊ ಕ್ವಿಡ್ ಕಾರಿಗೆ ಭಾರತದಲ್ಲಿ ಅತೀವ ಬೇಡಿಕೆಯಿದೆ. ಸಂಸ್ಥೆಯು ಇತ್ತೀಚೆಗಷ್ಟೇ ಹೆಚ್ಚು ಶಕ್ತಿಶಾಲಿ 1.0 ಲೀಟರ್ ಕ್ವಿಡ್ ಆವೃತ್ತಿಯನ್ನು ಬಿಡುಗಡೆಗೊಳಿಸಿತ್ತು. ಇದು ಪ್ರಮುಖವಾಗಿಯೂ ಮಾರುತಿ ಆಲ್ಟೊ ಹಾಗೂ ಆಲ್ಟೊ ಕೆ10 ಮಾದರಿಗಳಿಗೆ ಪೈಪೋಟಿಯನ್ನು ಒಡ್ಡುತ್ತಿದೆ.

ಢಿಕ್ಕಿ ಪರೀಕ್ಷೆಯಲ್ಲಿ ರೆನೊ ಕ್ವಿಡ್ ಗೆ ಒಂದು ಸ್ಟಾರ್; ಮೊಬಿಲಿಯೊ ಶೂನ್ಯ ಸಂಪಾದನೆ

ಗ್ಲೋಬಲ್ ಎನ್ ಸಿಎಪಿ ನಿರಂತರ ಅಂತರಾಳದಲ್ಲಿ ಭಾರತದ ಸುರಕ್ಷಿತ ಕಾರುಗಳನ್ನು ಹುಡುಕುವ ಪ್ರಯತ್ನದಲ್ಲಿ ತೊಡಗಿಸಿಕೊಂಡಿದೆ. 2013ರಲ್ಲಿ ಆರಂಭವಾಗಿರುವ ಕಾರ್ಯಕ್ರಮದಲ್ಲಿ ಫೋರ್ಡ್ ಫಿಗೊ, ಫೋಕ್ಸ್ ವ್ಯಾಗನ್ ಪೊಲೊ, ಹ್ಯುಂಡೈ ಐ10, ಮಾರುತಿ ಸುಜುಕಿ ಆಲ್ಟೊ 800, ಟಾಟಾ ನ್ಯಾನೋ, ಮಾರುತಿ ಸ್ವಿಫ್ಟ್, ದಟ್ಸನ್ ಗೊ, ಮಹೀಂದ್ರ ಸ್ಕಾರ್ಪಿಯೊ, ಮಾರುತಿ ಸುಜುಕಿ ಇಕೊ, ಮಾರುತಿ ಸೆಲೆರಿಯೊ ಹಾಗೂ ಹ್ಯುಂಡೈ ಇಯಾನ್ ಕಾರುಗಳು ಮಕಾಡೆ ಮಲಗಿದ್ದವು.

ರೆನೊ ಕ್ವಿಡ್ - ಚಾಲಕ ಏರ್ ಬ್ಯಾಗ್ ಢಿಕ್ಕಿ ಪರೀಕ್ಷೆ ವಿಡಿಯೋ

ಹೋಂಡಾ ಮೊಬಿಲಿಯೊ ಬೇಸ್ ವೆರಿಯಂಟ್ ಢಿಕ್ಕಿ ಪರೀಕ್ಷೆ ವಿಡಿಯೋ

ಹೋಂಡಾ ಮೊಬಿಲಿಯೊ ಎರಡು ಏರ್ ಬ್ಯಾಗ್ ಢಿಕ್ಕಿ ಪರೀಕ್ಷೆ ವಿಡಿಯೋ

More from DriveSpark

Article Published On: Tuesday, September 20, 2016, 9:58 [IST]
English summary
Renault Kwid and Honda Mobilio crash test results from Global NCAP
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+