ಕ್ಲೈಂಬರ್, ರೇಸರ್; ರೆನೊ ಕ್ವಿಡ್ ಸಾಲಿಗೆ ಮತ್ತಷ್ಟು ಕಾರುಗಳು..!
ರೆನೊ ಕ್ವಿಡ್ ಯಶಸ್ಸಿನಿಂದ ಉತ್ತೇಜನ ಪಡೆದಿರುವ ರೆನೊ ಸಂಸ್ಥೆಯೀಗ ಮತ್ತಷ್ಟು ಕ್ವಿಡ್ ಶ್ರೇಣಿಯ ಕಾರುಗಳನ್ನು ಬಿಡುಗಡೆ ಮಾಡುವ ಸಿದ್ಧತೆ ನಡೆಸಿದೆ.
ಇತ್ತೀಚೆಗಿನ ವರ್ಷಗಳಲ್ಲಿ ಅತಿ ಹೆಚ್ಚು ಯಶಸ್ಸು ಪಡೆದಿರುವ ಕಾರುಗಳ ಸಾಲಿನಲ್ಲಿ ರೆನೊ ಕ್ವಿಡ್ ಸಣ್ಣ ಕಾರು ಗುರುತಿಸಿಕೊಳ್ಳಲಿದೆ ಎಂಬುದರಲ್ಲಿ ಸಂಶಯವೇ ಇಲ್ಲ. ಇದರಿಂದ ಪುಳಕಿತಗೊಂಡಿರುವ ಫ್ರಾನ್ಸ್ ಮೂಲದ ರೆನೊ ಸಂಸ್ಥೆಯು ಆರಂಭಿಕ 800 ಸಿಸಿ ಬಳಿಕವೀಗ ಹೆಚ್ಚು ಶಕ್ತಿಶಾಲಿ 1.0 ಲೀಟರ್ ಮತ್ತು ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ (ಎಎಂಟಿ) ಆವೃತ್ತಿಗಳನ್ನು ಬಿಡುಗಡೆಗೊಳಿಸಿತ್ತು. ಇಲ್ಲಿಗೆ ರೆನೊ ಯೋಜನೆಯು ಕೊನೆಗೊಳ್ಳುವುದಿಲ್ಲ. ರೆನೊ ಕ್ವಿಡ್ ಸಾಲಿನಲ್ಲಿ ಮತ್ತಷ್ಟು ಮಾದರಿಗಳನ್ನು ಬಿಡುಗಡೆ ಮಾಡುವ ಯೋಜನೆ ಹೊಂದಿದೆ.

2015 ಸೆಪ್ಟೆಂಬರ್ ತಿಂಗಳಲ್ಲಿ ರೆನೊ ಕ್ವಿಡ್ ಮೊದಲ ಬಾರಿಗೆ ಮೊದಲ ಬಾರಿಗೆ ಬಿಡುಗಡೆಯಾಗಿತ್ತು. ಇದು ಎಂಟ್ರಿ ಲೆವೆಲ್ ಹ್ಯಾಚ್ ಬ್ಯಾಕ್ ವಿಭಾಗದಲ್ಲಿ ಜನಪ್ರಿಯ ಮಾರುತಿ ಸುಜುಕಿ ಆಲ್ಟೊ ಕಾರಿಗೆ ನಿಕಟ ಪ್ರತಿಸ್ಪರ್ಧೆಯನ್ನು ಒಡ್ಡುತ್ತಿದೆ.

ಬಲ್ಲ ಮೂಲಗಳ ಪ್ರಕಾರ ರೆನೊ ಕ್ವಿಡ್ ಹೊಸ ಆವೃತ್ತಿಗಾಗಿ ವಾಹನ ಪ್ರೇಮಿಗಳು ಹೆಚ್ಚು ಕಾಲ ಕಾದು ಕುಳಿತುಕೊಳ್ಳುವ ಅಗತ್ಯವಿಲ್ಲ. ಇನ್ನೇನು ಕೆಲವೇ ತಿಂಗಳುಗಳೊಳಗೆ ರೆನೊ ಕ್ವಿಡ್ ಹೊಸ ಮಾದರಿಗಳನ್ನು ಸಂಸ್ಥೆಯು ಪರಿಚಯಿಸಲಿದೆ.

ಪ್ರಮುಖವಾಗಿಯೂ ಮಾರಾಟದಲ್ಲಿ ಕಂಡುಬರುತ್ತಿರುವ ಏರುಗತಿಯೇ ಕ್ವಿಡ್ ನೂತನ ಮಾಡೆಲ್ ಗಳನ್ನು ಬಿಡುಗಡೆ ಮಾಡಲು ಸಂಸ್ಥೆಗೆ ಸ್ಪೂರ್ತಿಯಾಗಿದೆ.

ನಿಮ್ಮ ಮಾಹಿತಿಗಾಗಿ, 2016 ಫೆಬ್ರವರಿಯಲ್ಲಿ ನಡೆದ ದೆಹಲಿ ಆಟೋ ಎಕ್ಸ್ ಪೋದಲ್ಲಿ ನೂತನ ಕ್ಲೈಂಬರ್ ಮತ್ತು ರೇಸರ್ ಮಾದರಿಗಳನ್ನು ರೆನೊ ಅನಾವರಣಗೊಳಿಸಿತ್ತು. ಇದು ಅತಿ ಶೀಘ್ರದಲ್ಲೇ ನಿರ್ಮಾಣ ಹಂತವನ್ನು ತಲುಪಲಿದೆ ಎಂಬುದು ತಿಳಿದು ಬಂದಿದೆ.

ಈ ಪೈಕಿ ರೆನೊ ಕ್ಲೈಂಬರ್ ಆಫ್ ರೋಡ್ ಪ್ರೇಮಿಯಾಗಿದ್ದಲ್ಲಿ ರೇಸರ್ ಟ್ರ್ಯಾಕ್ ನತ್ತ ಹೆಚ್ಚು ಆಕರ್ಷಣೆ ಪಡೆಯಲಿದೆ. ಈ ಎರಡು ಮಾದರಿಗಳು 2017ನೇ ಸಾಲಿನಲ್ಲಿ ಸೀಮಿತ ಸಂಖ್ಯೆಯಲ್ಲಿ ಆಗಮನವಾಗುವ ಸಾಧ್ಯತೆಯಿದೆ.

ಟ್ರ್ಯಾಕ್ ಸ್ನೇಹಿ ಕ್ವಿಡ್ ರೇಸರ್ ಆವೃತ್ತಿಯು ಕಡಿಮೆ ಗ್ರೌಂಡ್ ಕ್ಲಿಯರನ್ಸ್ ಮತ್ತು ಹೆಚ್ಚು ಅಗಲವಾದ ಬಂಪರ್ ಜೊತೆಗೆ ಬಕೆಟ್ ಸೀಟು, 18 ಇಂಚುಗಳ ಅಲಾಯ್ ಚಕ್ರಗಳು, ನೀಲಿ ಮೆಟ್ಯಾಲಿಕ್ ಬಣ್ಣ ಇತ್ಯಾದಿ ವೈಶಿಷ್ಟ್ಯಗಳನ್ನು ಪಡೆಯಲಿದೆ.

ಅತ್ತ ಕ್ವಿಡ್ ಕ್ಲೈಂಬರ್ ಆಫ್ ರೋಡ್ ಸ್ನೇಹಿಯಾಗಿರಲಿದ್ದು, ವರ್ಧಿತ ಗ್ರೌಂಡ್ ಕ್ಲಿಯರನ್ಸ್ ಜೊತೆಗೆ ಆಫ್ ರೋಡ್ ಚಕ್ರಗಳು ಇದಕ್ಕೆ ಜೋಡಣೆಯಾಗಲಿದೆ. ಹಾಗೆಯೇ ಕಾರಿನೊಳಗೆ ಕೇಸರಿ ಮಿಶ್ರಿತ ವರ್ಣವು ಕಂಡುಬರಲಿದೆ.

ರೆನೊ ಸಂಸ್ಥೆಯು ಇದುವರೆಗೆ 1,07,033 ಯುನಿಟ್ ಗಳಷ್ಟು ಕ್ವಿಡ್ ಕಾರುಗಳನ್ನು ಮಾರಾಟ ಮಿಡೆದ. ತನ್ಮೂಲಕ 2008ರಲ್ಲಿ ದೇಶಕ್ಕೆ ಕೊಟ್ಟಿದ್ದ ಎಂಟ್ರಿ ರೆನೊದ ನಿರ್ದಿಷ್ಟ ಮಾದರಿ ಮೊದಲ ಬಾರಿಗೆ ಒಂದು ಲಕ್ಷ ಮಾರಾಟ ಮೈಲುಗಲ್ಲನ್ನು ದಾಟಿತ್ತು.

ಅಷ್ಟೇ ಯಾಕೆ ರೆನೊ ಸಂಸ್ಥೆಯು 2016 ಜನವರಿಯಿಂದ 2016 ಅಕ್ಟೋಬರ್ ತಿಂಗಳ ಅವಧಿಯಲ್ಲಿ ಒಟ್ಟು 1,11,387 ಯುನಿಟ್ ಗಳ ಮಾರಾಟ ದಾಖಲಿಸುವ ಮೂಲಕ ಶೇಕಡಾ 211.7ರಷ್ಟು ಭರ್ಜರಿ ಮಾರಾಟ ಏರಿಕೆ ಸಾಧಿಸಿದೆ. 2015ನೇ ಸಾಲಿನಲ್ಲಿ ಮಾರಾಟ ಸಂಖ್ಯೆಯು 35,786 ಯುನಿಟ್ ಗಳಾಗಿತ್ತು.


Click it and Unblock the Notifications








