16 ವಿಶಿಷ್ಟತೆಗಳೊಂದಿಗೆ ರೆನೊ ಲೊಡ್ಜಿ ಸ್ಟೆಪ್ ವೇ ಎಂಟ್ರಿ
ರೆನೊ ಲೊಡ್ಜಿ ಸ್ಟೆವ್ ವೇ ಕಾರು ಭರ್ಜರಿ ಬಿಡುಗಡೆ ಭಾಗ್ಯ ಕಂಡಿದೆ.
ಟೊಯೊಟಾ ಇನ್ನೋವಾದಂತಹ ಜನಪ್ರಿಯ ಹಾಗೂ ಗುಣಮಟ್ಟದ ಬಹು ಬಳಕೆಯ ವಾಹನಗಳು ಮಾರುಕಟ್ಟೆಯಲ್ಲಿ ನೆಲೆಯೂರಿ ನಿಂತಿರುವ ಸಂದರ್ಭದಲ್ಲಿ ಕೈಗೆಟುಕುವ ಬೆಲೆಗಳಲ್ಲಿ ಒಂದು ಅತ್ಯುತ್ತಮ ಎಂಬ ರೂಪದಲ್ಲಿ 2015ನೇ ಸಾಲಿನಲ್ಲಿ ರೆನೊ ಲೊಡ್ಜಿ ಪ್ರವೇಶ ಪಡೆದಿತ್ತು. ಹಾಗಿದ್ದರೂ ನಿರೀಕ್ಷಿತ ಯಶಸ್ಸು ಗಳಿಸುವಲ್ಲಿ ರೆನೊ ಲೊಡ್ಜಿ ವಿಫಲವಾಗಿತ್ತು.

ಇಲ್ಲಿಗೆ ಸೋಲೊಪ್ಪಿಕೊಳ್ಳಲು ತಯಾರಿಲ್ಲದ ರೆನೊ, ಲೊಡ್ಜಿ ವಿಶೇಷ ಆವೃತ್ತಿಗಳ ಮುಖಾಂತರ ಜನ ಮನ ಗೆಲ್ಲುವ ಪ್ರಯತ್ನ ನಡೆಸಿತ್ತು.

ರೆನೊ ಬಿಡುಗಡೆ ಮಾಡಿರುವ ವಿಶೇಷ ಆವೃತ್ತಿಗಳಲ್ಲಿ ಲೊಡ್ಜಿ ಸ್ಟೆಪ್ ವೇ ಸಹ ಒಂದಾಗಿತ್ತು. ತನ್ಮೂಲಕ ಮಾರಾಟಕ್ಕೆ ಉತ್ತೇಜನ ನೀಡಲು ಮುಂದಾಗಿತ್ತು.

ನೂತನ ರೆನೊ ಲೊಡ್ಜಿ ಸ್ಟೆಪ್ ವೇ ಶ್ರೇಣಿಯ ಕಾರುಗಳು 16 ವೈಶಿಷ್ಟ್ಯಗಳನ್ನು ಗಿಟ್ಟಿಸಿಕೊಳ್ಳಲಿದೆ.

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)
ಆರ್‌ಎಕ್ಸ್‌ಎಲ್ 85 ಅಶ್ವಶಕ್ತಿ (8 ಸೀಟು): 9,43,831 ರು.
ಆರ್‌ಎಕ್ಸ್‌ಎಲ್ 110 ಅಶ್ವಶಕ್ತಿ (8 ಸೀಟು): 10,09,831 ರು.
ಆರ್‌ಎಕ್ಸ್‌ಎಲ್ 85 ಅಶ್ವಶಕ್ತಿ (8 ಸೀಟು): 10,17,831 ರು.
ಆರ್‌ಎಕ್ಸ್‌ಎಲ್ 110 ಅಶ್ವಶಕ್ತಿ (8 ಸೀಟು): 10,96,831 ರು.
ಆರ್‌ಎಕ್ಸ್‌ಎಲ್ 110 ಅಶ್ವಶಕ್ತಿ (7 ಸೀಟು): 11,26,831 ರು.

1.5 ಲೀಟರ್ ಡಿಸಿಐ ಫೋರ್ ಸಿಲಿಂಡರ್ ಡೀಸೆಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ರೆನೊ ಸ್ಟೆಪ್ ವೇ, 110 ಮತ್ತು 85 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಈ ಪೈಕಿ 85 ಪಿಎಸ್ ವೆರಿಯಂಟ್ ಐದು ಸ್ಪೀಡ್ ಹಾಗೂ 110 ಪಿಎಸ್ ವೆರಿಯಂಟ್ ಆರು ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಗಿಟ್ಟಿಸಿಕೊಳ್ಳಲಿದೆ.

ಮುಖ್ಯವಾಗಿಯೂ ವಿನ್ಯಾಸ ಹಾಗೂ ವೈಶಿಷ್ಟ್ಯಗಳಲ್ಲಿ ಬದಲಾವಣೆ ಕಂಡುಬರಲಿದೆ. ಫ್ರಂಟ್ ಗ್ರಿಲ್, ಪರಿಷ್ಕೃತ ಬಂಪರ್, ಸ್ಕಿಡ್ ಪ್ಲೇಟ್, ಕ್ರೋಮ್ ಸ್ಪರ್ಶತೆ ಇತ್ಯಾದಿ ವಿಶಿಷ್ಟತೆಗಳಿರಲಿದೆ.

ಏಳು ಇಂಚುಗಳ ಮೀಡಿಯಾ ನೇವ್ ಕನ್ಸಾಲ್, ಆಖ್ಸ್, ಯುಎಸ್ ಬಿ, ಬ್ಲೂಟತ್ ವಿದ್ಯುನ್ಮಾನವಾಗಿ ಹೊಂದಾಣಿಸಬಹುದಾದ ಹೊರಗಿನ ರಿಯರ್ ವ್ಯೂ ಕ್ಯಾಮೆರಾ, ಸೆಂಟ್ರಲ್ ಲಾಕಿಂಗ್, ಕೀಲೆಸ್ ಎಂಟ್ರಿ, ಹೆಡ್ ಲೈಟ್ ಟರ್ನ್ ಆನ್ ರಿಮೈಂಡರ್, 12 ವಾಟ್ ಸಾಕೆಟ್ ಮುಂತಾದ ವೈಶಿಷ್ಟ್ಯಗಳಿರಲಿದೆ.

ಆಯಾಮ (ಎಂಎಂ)
ಉದ್ದ: 4522
ಅಗಲ: 1767
ಎತ್ತರ: 1709
ಚಕ್ರಾಂತರ: 2810


Click it and Unblock the Notifications








