ರೆನೊ-ನಿಸ್ಸಾನ್ ಜೊತೆಗಾರಿಕೆಯಲ್ಲಿ 10 ಲಕ್ಷದ ಕಾರು ಎಂಟ್ರಿ
ನಿಮಗೆಲ್ಲರಿಗೂ ತಿಳಿದಿರುವಂತೆಯೇ ವಿಸ್ತಾರವಾದ ಮಾರುಕಟ್ಟೆ ಯೋಜನೆ ಹೊಂದಿರುವ ರೆನೊ ಹಾಗೂ ನಿಸ್ಸಾನ್ ಸಂಸ್ಥೆಯು 10 ಲಕ್ಷದ ವಾಹನ ಹೊರ ತಂದಿದೆ.
ಚೆನ್ನೈ ಸಮೀಪದಲ್ಲಿ ಸ್ಥಿತಗೊಂಡಿರುವ ಓರಗಡಂ ಘಟಕದಲ್ಲಿ ರೆನೊ-ನಿಸ್ಸಾನ್ ಕಾರನ್ನು ಜಂಟಿಯಾಗಿ ಹೊರತಂದಿದೆ. ಈ ಅದೃಷ್ಟವನ್ನು ನಿಸ್ಸಾನ್ ಮೈಕ್ರಾ ಪಡೆದುಕೊಂಡಿದೆ.

2016 ಜನವರಿ 08ರಂದು ರೆನೊ-ನಿಸ್ಸಾನ್ ಕಾರು ಹೊರ ತಂದಿದೆ. ಇದಕ್ಕೂ ಮೊದಲು 2010ರಲ್ಲಿ 45 ಬಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆ ಮಾಡಿ ಘಟಕವನ್ನು ಆರಂಭಿಸಲಾಗಿತ್ತು.
ಪ್ರಸ್ತುತ ಇದೇ ಘಟಕದಿಂದ ದೇಶೀಯ ಹಾಗೂ ಅಂತರಾಷ್ಟ್ರೀಯ ಬೇಡಿಕೆಗಳನ್ನು ಈಡೇರಿಸಲಾಗುತ್ತದೆ. ಅಲ್ಲದೆ 106 ರಾಷ್ಟ್ರಗಳಿಗೆ ಆರು ಲಕ್ಷಕ್ಕೂ ಹೆಚ್ಚು ಯುನಿಟ್ ಗಳನ್ನು ರಫ್ತು ಮಾಡಲಾಗುವುದು. ಈ ಮೂಲಕ ಚೆನ್ನೈ ಮೂಲದವರಿಗೆ ಹೆಚ್ಚಿನ ಉದ್ಯೋಗವಕಾಶ ಸೃಷ್ಟಿಯಾಗಿದೆ.


Click it and Unblock the Notifications













