ಇನ್ನು ಮುಂದೆ ಜನಪ್ರಿಯ ಕ್ವಿಡ್ ಸೇರಿದಂತೆ ರೆನೊ ಕಾರುಗಳು ದುಬಾರಿ

By Nagaraja

ಪ್ರಿಯ ಗ್ರಾಹಕರೇ, ನೀವೇನಾದರೂ ರೆನೊ ಕಾರುಗಳನ್ನು ಖರೀದಿಸುವ ಯೋಚನೆಯಲ್ಲಿದ್ದರೆ ಇನ್ನು ತಡ ಮಾಡದಿರಿ. ಯಾಕೆಂದರೆ ಫ್ರಾನ್ಸ್ ಮೂಲದ ಈ ದೈತ್ಯ ಸಂಸ್ಥೆಯು ಸದ್ಯದಲ್ಲೇ ಬೆಲೆ ಏರಿಕೆ ಪ್ರಕಟಿಸಲಿದೆ. ನಿಮ್ಮ ಮಾಹಿತಿಗಾಗಿ, ಮಾರುಕಟ್ಟೆಯಲ್ಲಿ 'ಹಾಟ್ ಕೇಕ್' ತರಹನೇ ಮಾರಾಟವಾಗುತ್ತಿರುವ ರೆನೊ ಕ್ವಿಡ್ ಸಣ್ಣ ಕಾರಿಗೂ ಬೆಲೆ ಏರಿಕೆ ಬಿಸಿ ಮುಟ್ಟಲಿದೆ.

ಇನ್ನು ಮುಂದೆ ಜನಪ್ರಿಯ ಕ್ವಿಡ್ ಸೇರಿದಂತೆ ರೆನೊ ಕಾರುಗಳು ದುಬಾರಿ

ಡಸ್ಟರ್ ಬಳಿಕ ಕ್ವಿಡ್ ಸಣ್ಣ ಕಾರಿನ ಬಿಡುಗಡೆ ಮೂಲಕ ದೇಶದಲ್ಲಿ ಅತಿ ಹೆಚ್ಚು ಜನಪ್ರಿಯತೆ ಸಾಧಿಸಿರುವ ರೆನೊ ಇಂಡಿಯಾ, ದೇಶದಲ್ಲಿರುವ ತನ್ನ ಶ್ರೇಣಿಯ ಕಾರುಗಳಿಗೆ ಶೇಕಡಾ 2ರಷ್ಟು ಬೆಲೆ ಏರಿಕೆಗೊಳಿಸಲು ನಿರ್ಧರಿಸಿದೆ.

ಇನ್ನು ಮುಂದೆ ಜನಪ್ರಿಯ ಕ್ವಿಡ್ ಸೇರಿದಂತೆ ರೆನೊ ಕಾರುಗಳು ದುಬಾರಿ

ನಿರ್ಮಾಣ ವೆಚ್ಚ ಹೆಚ್ಚಾಗಿರುವುದೇ ರೆನೊ ಕಾರುಗಳು ದುಬಾರಿಯಾಗಲು ಕಾರಣವಾಗಿದೆ. ಇದು ಹಬ್ಬದ ಸಂಭ್ರಮದಲ್ಲಿರುವ ಗ್ರಾಹಕರಿಗೆ ಸ್ವಲ್ಪ ನಿರಾಸೆ ತಂದಿದೆ.

ಇನ್ನು ಮುಂದೆ ಜನಪ್ರಿಯ ಕ್ವಿಡ್ ಸೇರಿದಂತೆ ರೆನೊ ಕಾರುಗಳು ದುಬಾರಿ

"ಹೌದು, ನಿರ್ಮಾಣ ವೆಚ್ಚ ಹೆಚ್ಚಾಗಿರುವುದರಿಂದ ಬೆಲೆ ಏರಿಕೆಗೊಳಿಸಲು ನಿರ್ಧರಿಸಲಾಗಿದೆ. ಯಾವಾಗ ಬೆಲೆ ಏರಿಕೆ ಪ್ರಕಟಿಸಬೇಕು ಎಂಬುದರ ಬಗ್ಗೆ ಅವಲೋಕನ ನಡೆಸುತ್ತಿದ್ದೇವೆ" ಎಂದು ರೆನೊ ಇಂಡಿಯಾದ ಸಿಇಒ ಮತ್ತು ಎಂಡಿ ಸಮಿತ್ ಶೆನೋಯ್ ಸ್ಪಷ್ಟಪಡಿಸಿದ್ದಾರೆ.

ಇನ್ನು ಮುಂದೆ ಜನಪ್ರಿಯ ಕ್ವಿಡ್ ಸೇರಿದಂತೆ ರೆನೊ ಕಾರುಗಳು ದುಬಾರಿ

ಭಾರತದಲ್ಲಿ ಐದು ಮಾದರಿಗಳನ್ನು ರೆನೊ ಇಂಡಿಯಾ ಮಾಡುತ್ತಿದೆ. ಅವುಗಳೆಂದರೆ,

ಹ್ಯಾಚ್ ಬ್ಯಾಕ್: ಕ್ವಿಡ್ ಮತ್ತು ಪಲ್ಸ್,

ಸೆಡಾನ್: ಸ್ಕಾಲಾ,

ಎಂಪಿವಿ: ಲೊಡ್ಜಿ,

ಎಸ್ ಯುವಿ: ಡಸ್ಟರ್.

ಇನ್ನು ಮುಂದೆ ಜನಪ್ರಿಯ ಕ್ವಿಡ್ ಸೇರಿದಂತೆ ರೆನೊ ಕಾರುಗಳು ದುಬಾರಿ

ರೆನೊ ಶ್ರೇಣಿಯ ಕಾರುಗಳು ದೇಶದಲ್ಲಿ ದೆಹಲಿ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ 2.64 ಲಕ್ಷ ರು.ಗಳಿಂದ ಆರಂಭವಾಗಿ 13.77 ಲಕ್ಷ ರು.ಗಳ ವರೆಗೆ ದುಬಾರಿಯೆನಿಸುತ್ತದೆ.

ಇನ್ನು ಮುಂದೆ ಜನಪ್ರಿಯ ಕ್ವಿಡ್ ಸೇರಿದಂತೆ ರೆನೊ ಕಾರುಗಳು ದುಬಾರಿ

ಇನ್ನೊಂದೆಡೆ ನಿರ್ಮಾಣ ವೆಚ್ಚ ಹೆಚ್ಚಾಗಿರುವ ಹಿನ್ನಲೆಯಲ್ಲಿ ದೇಶದ ಅತಿ ದೊಡ್ಡ ಟಾಟಾ ಮೋಟಾರ್ಸ್ ಸಂಸ್ಥೆಯು ಸಹ ಬೆಲೆ ಏರಿಕೆಗೊಳಿಸಲು ನಿರ್ಧರಿಸಿದೆ.

ಇನ್ನು ಮುಂದೆ ಜನಪ್ರಿಯ ಕ್ವಿಡ್ ಸೇರಿದಂತೆ ರೆನೊ ಕಾರುಗಳು ದುಬಾರಿ

ಅತ್ತ ಎಸ್ ಯುವಿ ದೈತ್ಯ ಮಹೀಂದ್ರ ಆಂಡ್ ಮಹೀಂದ್ರ ಸಂಸ್ಥೆಯು ಆಗಲೇ ಶೇಕಡಾ 1ರಷ್ಟು ಬೆಲೆ ಏರಿಕೆಯನ್ನು ಘೋಷಿಸಿದೆ.

ಇನ್ನು ಮುಂದೆ ಜನಪ್ರಿಯ ಕ್ವಿಡ್ ಸೇರಿದಂತೆ ರೆನೊ ಕಾರುಗಳು ದುಬಾರಿ

ಇನ್ನು ದೇಶದ ಅಗ್ರಗಣ್ಯ ಕಾರು ಸಂಸ್ಥೆಗಳಾಗಿರುವ ಮಾರುತಿ ಸುಜುಕಿ ಮತ್ತು ಹ್ಯುಂಡೈ ಇಂಡಿಯಾ ಸಂಸ್ಥೆಯು ಈಗಾಗಲೇ ತನ್ನ ಶ್ರೇಣಿಯ ಕಾರುಗಳಿಗೆ ಗರಿಷ್ಠ 20,000 ರು.ಗಳ ವರೆಗೆ ಬೆಲೆ ಏರಿಕೆಗೊಳಿಸಿದೆ.

ರೆನೊ ಕ್ವಿಡ್ ಕೆಲವು ಪ್ರಥಮಗಳು

ರೆನೊ ಕ್ವಿಡ್ ಕೆಲವು ಪ್ರಥಮಗಳು

ಬೆಸ್ಟ್ ಇನ್ ಕ್ಲಾಸ್ ಮೈಲೇಜ್: 25 kmpl

ಬೆಸ್ಟ್ ಇನ್ ಕ್ಲಾಸ್ ಗ್ರೌಂಡ್ ಕ್ಲಿಯರನ್ಸ್: 1800 ಎಂಎಂ

ಬೆಸ್ಟ್ ಇನ್ ಕ್ಲಾಸ್ ಢಿಕ್ಕಿ ಜಾಗ: 300 ಲೀಟರ್

ಇವನ್ನೂ ಓದಿ:

ಇವನ್ನೂ ಓದಿ:

01. ರೆನೊ ಕ್ವಿಡ್; ಹತ್ತು ಹಲವಾರು ಪ್ರಶ್ನೆಗಳಿಗೆ ಉತ್ತರ

02. 25 ಆಕರ್ಷಕ ವೈಶಿಷ್ಟ್ಯಗಳೊಂದಿಗೆ ರೆನೊ ಲೊಡ್ಜಿ ವರ್ಲ್ಡ್ ಎಡಿಷನ್ ಬಿಡುಗಡೆ

03. ರೆನೊ ಕ್ವಿಡ್ 1.0 ಲೀಟರ್ ಶಕ್ತಿಶಾಲಿ ಆವೃತ್ತಿ ಬಿಡುಗಡೆ; ಬೆಲೆ, ವೈಶಿಷ್ಟ್ಯಗಳೇನು ?

More from DriveSpark

Article Published On: Wednesday, October 12, 2016, 13:25 [IST]
English summary
Renault Set To Hike Car Prices In India — Get Your Kwids Now
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+