ರೆನೊ ಲೊಡ್ಜಿ ಕಾರಿಗೂ ಬರುತ್ತಿದೆ ಈಸಿ-ಆರ್ ಎಎಂಟಿ ಗೇರ್ ಬಾಕ್ಸ್
2016 ಆಟೋ ಎಕ್ಸ್ ಪೋದಲ್ಲಿ ಫ್ರಾನ್ಸ್ ಮೂಲದ ಮುಂಚೂಣಿಯ ವಾಹನ ತಯಾರಿಕ ಸಂಸ್ಥೆ ರೆನೊ, ಅತಿ ನೂತನ ಈಸಿ-ಆರ್ ಎಎಂಟಿ ಗೇರ್ ಬಾಕ್ಸ್ ತಂತ್ರಗಾರಿಕೆಯನ್ನು ಪರಿಚಯಿಸಿತ್ತು. ಮಾರುತಟ್ಟೆಯಲ್ಲಿ ಭಾರಿ ಸದ್ದು ಮಾಡುತ್ತಿರುವ ರೆನೊ ಡಸ್ಟರ್ ನಲ್ಲಿ ಎಎಂಟಿ ಗೇರ್ ಬಾಕ್ಸ್ ತಂತ್ರಜ್ಞಾನ ಆಳವಡಿಸಲಾಗಿತ್ತು.
ಈ ನಡುವೆ ಈಗ ಬಂದಿರುವ ಶುಭ ಸುದ್ದಿಯ ಪ್ರಕಾರ, ರೆನೊದ ಬಹು ಬಳಕೆಯ ವಾಹನವಾಗಿರುವ (ಎಂಪಿವ) ಲೊಡ್ಜಿ ಕಾರಲ್ಲೂ ಇದೇ ತಂತ್ರಜ್ಞಾನವನ್ನು ಜೋಡಣೆ ಮಾಡಲಾಗುವುದು. ಇದು ನಿಮ್ಮ ಚಾಲನೆಯನ್ನು ಮತ್ತಷ್ಟು ಸರಳವಾಗಿಸಲಿದೆ.

ಬಲ್ಲ ಮೂಲಗಳ ಪ್ರಕಾರ ರನೊ ಲೊಡ್ಜಿ ಕಾರಲ್ಲಿ ಆರು ಸ್ಪೀಡ್ ಈಸಿ ಆರ್ ಎಎಂಟಿ ಗೇರ್ ಬಾಕ್ಸ್ ಆಳವಡಿಸುವ ಸಾಧ್ಯತೆಯಿದೆ. ರೆನೊ ಡಸ್ಟರ್ ಪ್ರಸ್ತುತ ತಂತ್ರಗಾರಿಕೆಯೊಂದಿಗೆ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ.

ನೂತನ ಬೇಸ್ ವೆರಿಯಂಟ್ ನಲ್ಲೂ ಎಎಂಟಿ ಆಯ್ಕೆಯನ್ನು ಒದಗಿಸುವುದು ರೆನೊ ಯೋಜನೆಯಾಗಿದೆ. ಅಲ್ಲದೆ ಡಸ್ಟರ್ ಗೆ ಸಮಾನವಾಗಿ ಆರ್ ಎಕ್ಸ್ ಎಲ್ ಮತ್ತು ಆರ್ ಎಕ್ಸ್ ಝಡ್ ವೆರಿಯಂಟ್ ಗಳಲ್ಲೂ ಲಭ್ಯವಾಗಲಿದೆ.

ಸಾಮಾನ್ಯ ಆವೃತ್ತಿಗಿಂತಲೂ ರೆನೊ ಲೊಡ್ಜಿ ಎಎಂಟಿ ಮಾದರಿಯು 50,000 ರು.ಗಳಷ್ಟು ದುಬಾರಿಯೆನಿಸಲಿದೆ. ಈ ಎಲ್ಲದರ ಬಗ್ಗೆ ಸಂಸ್ಥೆಯಿಂದ ಇನ್ನಷ್ಟೇ ಸ್ಪಷ್ಟನೆ ಬರಬೇಕಾಗಿದೆ.

ರೆನೊ ಲೊಡ್ಜಿ ಕಾರಿನಲ್ಲಿರುವ 1.5 ಡಿಸಿಐ ಎಂಜಿನ್ ಎರಡು ವಿಧಗಳಲ್ಲಿ ಶಕ್ತಿ ಬಿಡುಗಡೆ ಮಾಡಲಿದೆ. ಅದು ಅನುಕ್ರಮವಾಗಿ 83 (5 ಸ್ಪೀಡ್ ಮ್ಯಾನುವಲ್) ಮತ್ತು 108 ಅಶ್ವಶಕ್ತಿಯನ್ನು (6 ಸ್ಪೀಡ್ ಮ್ಯಾನುವಲ್) ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ.

ಈ ಎಲ್ಲ ನೀತಿಯೊಂದಿಗೆ ಟ್ಯಾಕ್ಸಿ ವಿಭಾಗವನ್ನು ರೆನೊ ಗುರಿ ಮಾಡಲಿದೆ. ಒಟ್ಟಿನಲ್ಲಿ ಮಾರುತಿ ಎರ್ಟಿಗಾಗೆ ನಿಕಟ ಪೈಪೋಟಿ ಒಡ್ಡುವ ಇರಾದೆಯಲ್ಲಿದೆ.

ಬಂದೇ ಬಿಡ್ತು ರೆನೊ ಡಸ್ಟರ್ ಎಎಂಟಿ; ಸಮಗ್ರ ವಿವರಗಳನ್ನು ಓದಿ


Click it and Unblock the Notifications








