ತಾಜಾತನದೊಂದಿಗೆ 2016 ಸ್ಕೋಡಾ ರಾಪಿಡ್ ಭರ್ಜರಿ ಬಿಡುಗಡೆ
2016 ರಾಪಿಡ್ ಮುಖಾಂತರ ಸ್ಕೋಡಾ ಭಾರತಕ್ಕೆ ಭರ್ಜರಿ ಪುನರಾಗಮನವನ್ನೇ ಮಾಡಿಕೊಂಡಿದೆ.
ಫೋಕ್ಸ್ ವ್ಯಾಗನ್ ಭಾಗವಾಗಿರುವ ಜೆಕ್ ಗಣರಾಜ್ಯದ ಸ್ಕೋಡಾ ಇಂಡಿಯಾ ಸಂಸ್ಥೆಯು ದೇಶದಲ್ಲಿ ಪರಿಷ್ಕೃತ 2016 ರಾಪಿಡ್ ಸೆಡಾನ್ ಕಾರನ್ನು ಬಿಡುಗಡೆಗೊಳಿಸಿದೆ. ಇದರ ಬೆಲೆ ದೆಹಲಿ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ 8.27 ಲಕ್ಷ ರುಪಾಯಿಗಳಿಂದ ಪ್ರಾರಂಭವಾಗುತ್ತದೆ.

ವೆರಿಯಂಟ್, ಬೆಲೆ ಮಾಹಿತಿ (ಎಕ್ಸ್ ಶೋ ರೂಂ ಮುಂಬೈ)
ಸ್ಕೋಡಾ ರಾಪಿಡ್ ಆಕ್ಟಿವ್: 8,34,906 ರು.
ಸ್ಕೋಡಾ ರಾಪಿಡ್ ಆಕ್ಟಿವ್ (ಡೀಸೆಲ್): 9,57,335 ರು.
ಸ್ಕೋಡಾ ರಾಪಿಡ್ ಆ್ಯಂಬಿಷನ್ ಮ್ಯಾನುವಲ್: 9,26,728 ರು.
ಸ್ಕೋಡಾ ರಾಪಿಡ್ ಆ್ಯಂಬಿಷನ್ ಆಟೋಮ್ಯಾಟಿಕ್: 10,38,841 ರು.
ಸ್ಕೋಡಾ ರಾಪಿಡ್ ಆ್ಯಂಬಿಷನ್ ಮ್ಯಾನುವಲ್ (ಡೀಸೆಲ್): 10,49,157 ರು.

ವೆರಿಯಂಟ್, ಬೆಲೆ ಮಾಹಿತಿ (ಎಕ್ಸ್ ಶೋ ರೂಂ ಮುಂಬೈ)
ಸ್ಕೋಡಾ ರಾಪಿಡ್ ಆಕ್ಟಿವ್: 8,34,906 ರು.
ಸ್ಕೋಡಾ ರಾಪಿಡ್ ಆಕ್ಟಿವ್ (ಡೀಸೆಲ್): 9,57,335 ರು.
ಸ್ಕೋಡಾ ರಾಪಿಡ್ ಆ್ಯಂಬಿಷನ್ ಮ್ಯಾನುವಲ್: 9,26,728 ರು.
ಸ್ಕೋಡಾ ರಾಪಿಡ್ ಆ್ಯಂಬಿಷನ್ ಆಟೋಮ್ಯಾಟಿಕ್: 10,38,841 ರು.
ಸ್ಕೋಡಾ ರಾಪಿಡ್ ಆ್ಯಂಬಿಷನ್ ಮ್ಯಾನುವಲ್ (ಡೀಸೆಲ್): 10,49,157 ರು.

ವೆರಿಯಂಟ್, ಬೆಲೆ ಮಾಹಿತಿ (ಎಕ್ಸ್ ಶೋ ರೂಂ ಮುಂಬೈ)
ಸ್ಕೋಡಾ ರಾಪಿಡ್ ಆ್ಯಂಬಿಷನ್ ಆಟೋಮ್ಯಾಟಿಕ್ (ಡೀಸೆಲ್): 11,71,471 ರು.
ಸ್ಕೋಡಾ ರಾಪಿಡ್ ಸ್ಟೈಲ್ ಮ್ಯಾನುವಲ್: 10,44,163 ರು.
ಸ್ಕೋಡಾ ರಾಪಿಡ್ ಸ್ಟೈಲ್ ಆಟೋಮ್ಯಾಟಿಕ್: 11,46,187 ರು.
ಸ್ಕೋಡಾ ರಾಪಿಡ್ ಸ್ಟೈಲ್ ಮ್ಯಾನುವಲ್ (ಡೀಸೆಲ್): 11,66,590 ರು.
ಸ್ಕೋಡಾ ರಾಪಿಡ್ ಸ್ಟೈಲ್ ಆಟೋಮ್ಯಾಟಿಕ್ (ಡೀಸೆಲ್): 12,78,590 ರು.

2011ನೇ ಸಾಲಿನಲ್ಲಿ ಮೊದಲ ಬಾರಿಗೆ ಪ್ರವೇಶ ಕೊಟ್ಟಿರುವ ಸಿ ಸೆಗ್ಮೆಂಟ್ ಸೆಡಾನ್ ವಿಭಾಗದ ಈ ಪರಿಷ್ಕೃತ ಸ್ಕೋಡಾ ರಾಪಿಡ್ ಕಾರು ಇದೇ ಮೊದಲ ಬಾರಿಗೆ ಸಮಗ್ರ ಬದಲಾವಣೆಗಳನ್ನು ಪಡೆದುಕೊಂಡಿದೆ.

ತೀಕ್ಷ್ಣವಾದ ಹೊರಮೈ ಶೈಲಿ, ಕೋನೀಯ ಹೆಡ್ ಲ್ಯಾಂಪ್ ಹಾಗೂ ಹೆಡ್ ಲ್ಯಾಂಪ್ ಗೆ ಹೊಂದಿಕೊಂಡಿರುವ ಕ್ರೋಮ್ ಸ್ಪರ್ಶತೆಯನ್ನು ಕಾಣಬಹುದಾಗಿದೆ.

ಹಿಂದುಗಡೆ ವಿಷಮ ಸಮಾನಾಂತರ ಚತುರ್ಭುಜಾಕಾರದ ಫಾಗ್ ಲ್ಯಾಂಪ್, ಬದಿಯಲ್ಲಿ ಮಸಲರ್ ರೇಖೆಗಳು ಇತ್ಯಾದಿ ವೈಶಿಷ್ಟ್ಯಗಳು ಇರಲಿದೆ.

ಕಾರಿನೊಳಗೆ ಕ್ರೂಸ್ ಕಂಟ್ರೋಲ್, ಆಟೋಮ್ಯಾಟಿಕ್ ಹೆಡ್ ಲ್ಯಾಂಪ್, ರೈನ್ ಸೆನ್ಸಿಂಗ್ ವೈಪರ್ ಜೊತೆ ಮಿರರ್ ಲಿಂಕ್ ಟಚ್ ಸ್ಕ್ರೀನ್ ಇನ್ಪೋಟೈನ್ಮೆಂಟ್ ಸಿಸ್ಟಂ ವ್ಯವಸ್ಥೆಯಿರಲಿದೆ.

ಸುರಕ್ಷತೆಗೂ ಹೆಚ್ಚಿನ ಆದ್ಯತೆ ಕೊಡಲಾಗಿದ್ದು, ಎಬಿಎಸ್ ಜೊತೆ ಡ್ಯುಯಲ್ ಏರ್ ಬ್ಯಾಗ್ ವ್ಯವಸ್ಥೆಗಳು ಸ್ಟ್ಯಾಂಡರ್ಡ್ ಆಗಿ ದೊರಕಲಿದೆ. ಅಂತೆಯೇ ಇಬಿಡಿ, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಹಿಲ್ ಹೋಲ್ಡ್ ಕಂಟ್ರೋಲ್, ಆಟೋಮ್ಯಾಟಿಕ್ ಡಿಮ್ಮಿಂಗ್ ರಿಯರ್ ವ್ಯೂ ಮಿರರ್ ಮತ್ತು ರಿಯರ್ ಪಾರ್ಕಿಂಗ್ ಸೆನ್ಸಾರ್ ವ್ಯವಸ್ಥೆಯಿರಲಿದೆ.

ನೂತನ ಸ್ಕೋಡಾ ರಾಪಿಡ್ ಎರಡು ಎಂಜಿನ್ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಇದು 1.6 ಲೀಟರ್ ಪೆಟ್ರೋಲ್ ಮತ್ತು ಫೋಕ್ಸ್ ವ್ಯಾಗನ್ ಎಮಿಯೊದಲ್ಲಿರುವದಕ್ಕೆ ಸಮಾನವಾದ 1.5 ಲೀಟರ್ ಟರ್ಬೊಚಾರ್ಜ್ಡ್ ಡೀಸೆಲ್ ಎಂಜಿನ್ ಗಿಟ್ಟಿಸಿಕೊಳ್ಳಲಿದೆ.

ಈ ಪೈಕಿ 1.6 ಲೀಟರ್ ಪೆಟ್ರೋಲ್ ಎಂಜಿನ್ 153 ಎನ್ ಎಂ ತಿರುಗುಬದಲಲ್ಲಿ 103 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಇದು ಆರು ಸ್ಪೀಡ್ ಡಿಎಸ್ ಜಿ ಆಟೋಮ್ಯಾಟಿಕ್ ಜೊತೆಗೆ ಮ್ಯಾನುವಲ್ ಶಿಫ್ಟಿಂಗ್ ಆಯ್ಕೆಗಳನ್ನು ಪಡೆಯಲಿದೆ.

ಪೆಟ್ರೋಲ್ ಆವೃತ್ತಿಯ ಮ್ಯಾನುವಲ್ ಹಾಗೂ ಆಟೋಮ್ಯಾಟಿಕ್ ಗೇರ್ ಬಾಕ್ಸ್ ವೆರಿಯಂಟ್ ಗಳು ಅನುಕ್ರಮವಾಗಿ ಪ್ರತಿ ಲೀಟರ್ ಗೆ 15.41 ಮತ್ತು 14.84 ಕೀ.ಮೀ. ಇಂಧನ ಕ್ಷಮತೆಯನ್ನು ನೀಡಲಿದೆ.

ಇನ್ನೊಂದೆಡೆ 1.5 ಲೀಟರ್ ಟರ್ಬೊಚಾರ್ಜ್ಡ್ ಡೀಸೆಲ್ ಎಂಜಿನ್ 250 ಎನ್ ಎಂ ತಿರುಗುಬಲದಲ್ಲಿ 108.6 ಅಶ್ವಶಕ್ತಿಯನ್ನು ಉತ್ಪಾದಿಸಲಿದ್ದು, ಐದು ಸ್ಪೀಡ್ ಮ್ಯಾನುವಲ್ ಹಾಗೂ ಏಳು ಸ್ಪೀಡ್ ಡಿಎಸ್ ಜಿ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಪಡೆಯಲಿದೆ.

ಡೀಸೆಲ್ ಆವೃತ್ತಿಯ ಮ್ಯಾನುವಲ್ ಹಾಗೂ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಗಳು ಅನುಕ್ರಮವಾಗಿ ಪ್ರತಿ ಲೀಟರ್ ಗೆ 21.13 ಮತ್ತು 21.72 ಕೀ.ಮೀ. ಮೈಲೇಜ್ ನೀಡಲಿದೆ.

ತನ್ನ ಪ್ರತಿಸ್ಪರ್ಧಿಗಳಾದ ಹೋಂಡಾ ಸಿಟಿ, ಮಾರುತಿ ಸುಜುಕಿ ಸಿಯಾಝ್ ಮತ್ತು ಹ್ಯುಂಡೈ ವೆರ್ನಾ ಮಾದರಿಗಳನ್ನು ಹೋಲಿಸಿದಾಗ ನೂತನ ಸ್ಕೋಡಾ ರಾಪಿಡ್ ಹೆಚ್ಚಿನ ತಾಜಾತನವನ್ನು ಮೈಗೂಡಿಸಿಕೊಂಡಿದೆ.

ಬಣ್ಣದ ಆಯ್ಕೆಗಳು
ಬ್ರಿಲಿಯಂಟ್ ಸಿಲ್ವರ್,
ಕ್ಯಾಂಡಿ ವೈಟ್,
ಕ್ಯಾಪಿಚಿನೊ ಬೀಜ್,
ಕಾರ್ಬನ್ ಸ್ಟೀಲ್,
ಸಿಲ್ಕ್ ಬ್ಲೂ,
ಫ್ಲ್ಯಾಶ್ ರೆಡ್


Click it and Unblock the Notifications