ಎರ್ಟಿಗೊ, ಮೊಬಿಲಿಯೊ ಡವಡವ; ಷೆವರ್ಲೆ ಸ್ಪಿನ್ ಟೆಸ್ಟಿಂಗ್ ಜೋರು!

By Nagaraja

ಮಾರುತಿ ಎರ್ಟಿಗೊ ಮತ್ತು ಹೋಂಡಾ ಮೊಬಿಲಿಯೊ ಮಾದರಿಗಳಿಗೆ ಡವಡವ ಎನ್ನಲು ಶುರುವಾಗಿ ಬಿಟ್ಟಿದೆ. ಏಕೆಂದರೆ ಈ ಜನಪ್ರಿಯ ಬಹು ಬಳಕೆಯ ವಾಹನ (ಎಂಪಿವಿ) ವಿಭಾಗಕ್ಕೆ ಮಗದೊಂದು ಆಕರ್ಷಕ ಕಾರು ಎಂಟ್ರಿ ಕೊಡಲು ಸಜ್ಜಾಗುತ್ತಿದೆ.

ಅಮೆರಿಕ ಮೂಲದ ಜನರಲ್ ಮೋಟಾರ್ಸ್ ಜನಪ್ರಿಯ ಕಾರು ಬ್ರಾಂಡ್ ಆಗಿರುವ ಷೆವರ್ಲೆ ಅತಿ ಶೀಘ್ರದಲ್ಲೇ ಸ್ಪಿನ್ ಎಂಪಿವಿ ಕಾರನ್ನು ಭಾರತದಲ್ಲಿ ಬಿಡುಗಡೆ ಮಾಡಲಿದೆ. ಇದರಂಗವಾಗಿ ಭಾರತೀಯ ರಸ್ತೆ ಪರಿಸ್ಥಿತಿಯಲ್ಲಿ ಸಂಚಾರ ಪರೀಕ್ಷೆಯು ಬಲು ಜೋರಾಗಿ ನಡೆಯುತ್ತಿದೆ.

ಎರ್ಟಿಗೊ, ಮೊಬಿಲಿಯೊ ಡವಡವ; ಷೆವರ್ಲೆ ಸ್ಪಿನ್ ಟೆಸ್ಟಿಂಗ್ ಜೋರು!

ಷೆವರ್ಲೆ ಸ್ಪಿನ್ ಎಂಪಿವಿ ಕಾರಿನ ಬಗ್ಗೆ ಸಂಸ್ಥೆಯು ಹೆಚ್ಚಿನ ನಿರೀಕ್ಷೆಯನ್ನಿಟ್ಟುಕೊಂಡಿದೆ. ಇದು 2016 ಆಟೋ ಎಕ್ಸ್ ಪೋದಲ್ಲಿ ಭರ್ಜರಿ ಪ್ರದರ್ಶನ ಕಂಡಿತ್ತು.

ಎರ್ಟಿಗೊ, ಮೊಬಿಲಿಯೊ ಡವಡವ; ಷೆವರ್ಲೆ ಸ್ಪಿನ್ ಟೆಸ್ಟಿಂಗ್ ಜೋರು!

ಷೆವರ್ಲೆ ಟ್ರೈಲ್ ಬ್ಲೇಜರ್ ಈಗಾಗಲೇ ಭಾರತ ಪ್ರವೇಶ ಪಡೆದಿದ್ದು, ಇದಾದ ಬೆನ್ನಲ್ಲೇ ತನ್ನ ಶ್ರೇಣಿಯ ವಾಹನಗಳನ್ನು ವಿಸ್ತರಿಸುವ ಯೋಜನೆಯಲ್ಲಿರುವ ಷೆವರ್ಲೆ ಆಕರ್ಷಕ ಸ್ಪಿನ್ ಕಾರನ್ನು ಪರಿಚಯಿಸಲಿದೆ.

ಎರ್ಟಿಗೊ, ಮೊಬಿಲಿಯೊ ಡವಡವ; ಷೆವರ್ಲೆ ಸ್ಪಿನ್ ಟೆಸ್ಟಿಂಗ್ ಜೋರು!

ಭಾರತದಲ್ಲಿ ಪ್ರಮುಖವಾಗಿಯೂ ಮಾರುತಿ ಎರ್ಟಿಗಾ, ಹೋಂಡಾ ಮೊಬಿಲಿಯೊ ಮತ್ತು ರೆನೊ ಲೊಡ್ಜಿ ಮಾದರಿಗಳಿಗೆ ಷೆವರ್ಲೆ ಸ್ಪಿನ್ ಪ್ರತಿಸ್ಪರ್ಧಿಯಾಗಲಿದೆ.

ಎರ್ಟಿಗೊ, ಮೊಬಿಲಿಯೊ ಡವಡವ; ಷೆವರ್ಲೆ ಸ್ಪಿನ್ ಟೆಸ್ಟಿಂಗ್ ಜೋರು!

ನೂತನ ಕಾರು 4360 ಎಂಎಂ ಉದ್ದ, 1735 ಎಂಎಂ ಅಗಲ, 1683 ಎತ್ತರ ಮತ್ತು 2620 ಎಂಎಂ ಅಗಲವನ್ನು ಪಡೆಯಲಿದೆ. ಅಂದರೆ ಎರ್ಟಿಗಾ ಮತ್ತು ಮೊಬಿಲಿಯೊಗಿಂತಲೂ ಹೆಚ್ಚು ಸ್ಥಳಾವಕಾಶವನ್ನು ಒಳಗೊಂಡಿರಲಿದೆ.

ಎರ್ಟಿಗೊ, ಮೊಬಿಲಿಯೊ ಡವಡವ; ಷೆವರ್ಲೆ ಸ್ಪಿನ್ ಟೆಸ್ಟಿಂಗ್ ಜೋರು!

ಹಾಗಿದ್ದರೂ ಎಂಜಿನ್ ಮಾನದಂಡಗಳ ಬಗ್ಗೆ ಯಾವುದೇ ಅಧಿಕೃತ ಮಾಹಿತಿಗಳು ಲಭ್ಯವಾಗಲಿದೆ. ಸದ್ಯ ದೊರಕಿರುವ ಮಾಹಿತಿಯಂತೆ ಎಂಜಾಯ್ ಕಾರಿನಲ್ಲಿರುವುದಕ್ಕೆ ಸಮಾನವಾದ 1.4 ಲೀಟರ್ ಪೆಟ್ರೋಲ್ ಮತ್ತು 1.3 ಲೀಟರ್ ಡೀಸೆಲ್ ಎಂಜಿನ್ ಬಳಕೆಯಾಗಲಿದೆ. ಅಲ್ಲದೆ 5 ಸ್ಪೀಡ್ ಮ್ಯಾನುವಲ್ ಜೊತೆಗೆ 6 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಇರಲಿದೆ.

ಎರ್ಟಿಗೊ, ಮೊಬಿಲಿಯೊ ಡವಡವ; ಷೆವರ್ಲೆ ಸ್ಪಿನ್ ಟೆಸ್ಟಿಂಗ್ ಜೋರು!

ಮೇಲೆ ತಿಳಿಸಿದ ಕಾರುಗಳು ಮಾತ್ರವಲ್ಲದೆ ಇದೇ ಬೆಲೆ ಶ್ರೇಣಿಯಲ್ಲಿ ಬಿಡುಗಡೆಗೊಂಡಿರುವ ಇನ್ನಿತರ ಕಾರುಗಳ ಪೈಪೇಟಿಯನ್ನು ಷೆವರ್ಲೆ ಸ್ಪಿನ್ ಎದುರಿಸಬೇಕಾಗುತ್ತದೆ. ಇದರಲ್ಲಿ ಪ್ರಮುಖವಾಗಿಯೂ ಟೊಯೊಟಾ ಇನ್ನೋವಾ ಕ್ರೈಸ್ಟಾ, ಹೋಂಡಾ ಬಿಆರ್ ಬಿ ಮತ್ತು ಟಾಟಾ ಹೆಕ್ಸಾ ಪ್ರಮುಖವಾಗಿರಲಿದೆ.

ಎರ್ಟಿಗೊ, ಮೊಬಿಲಿಯೊ ಡವಡವ; ಷೆವರ್ಲೆ ಸ್ಪಿನ್ ಟೆಸ್ಟಿಂಗ್ ಜೋರು!

ಈ ಪೈಕಿ ಟಾಟಾ ಹೆಕ್ಸಾ ಮತ್ತು ಹೋಂಡಾ ಬಿಆರ್ ವಿ ಇನ್ನಷ್ಟೇ ಬಿಡುಗಡೆಯಾಗಬೇಕಿದೆ. ಈ ಎಲ್ಲ ಏಳು ಸೀಟುಗಳ ಆವೃತ್ತಿಗಳು ಷೆವರ್ಲೆ ಸ್ಪಿನ್ ಓಟವನ್ನು ಕಠಿಣವಾಗಿಸಲಿದೆ.

ಬೆಲೆ ಪರಿಧಿ, ಬಿಡುಗಡೆ ಸಮಯ

ಬೆಲೆ ಪರಿಧಿ, ಬಿಡುಗಡೆ ಸಮಯ

2016 ಮಧ್ಯಂತರ ವೇಳೆಯಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಹೊಂದಿರುವ ಷೆವರ್ಲೆ ಸ್ಪಿನ್ ಅಂದಾಜು 7.5 ಲಕ್ಷ ರು.ಗಳಿಂದ 9.5 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ.


More from DriveSpark

Article Published On: Tuesday, April 12, 2016, 15:11 [IST]
English summary
Spied: Chevrolet Spin MPV Spotted Testing
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+