ಮರೆಮಾಚಿದ ಟಾಟಾ ಪೆಲಿಕನ್ ಎಕ್ಸ್ ಕ್ಲೂಸಿವ್ ಚಿತ್ರಗಳು ಸೆರೆ

Written By:

ಕಳೆದ ಕೆಲವು ಸಮಯಗಳಿಂದ ನ್ಯಾನೋ ತಳಹದಿಯಲ್ಲೇ ನೂತನ 'ಪೆಲಿಕನ್' ಹ್ಯಾಚ್ ಬ್ಯಾಕ್ ಕಾರನ್ನು ದೇಶದ ಅತಿ ದೊಡ್ಡ ವಾಹನ ಸಂಸ್ಥೆ ಟಾಟಾ ಮೋಟಾರ್ಸ್ ಅಭಿವೃದ್ಧಿಪಡಿಸುತ್ತಿರುವ ಬಗ್ಗೆ ನಾವು ವರದಿ ಮಾಡಿರುತ್ತೇವೆ. ಪ್ರಸ್ತುತ ಮರೆಮಾಚಿದ ಕಾರಿನ ಪ್ರಾಯೋಗಿಕ ಸಂಚಾರದ ವೇಳೆ ಎಕ್ಸ್ ಕ್ಲೂಸಿವ್ ಚಿತ್ರಗಳನ್ನು ಸೆರೆಹಿಡಿಯಲಾಗಿದೆ.

ನೋಡಲು ನ್ಯಾನೋದಂತಿರುವ ನೂತನ ಕಾರು ಪೆಲಿಕನ್ ಎಂಬ ಕೋಡ್ ಪಡೆದಿದ್ದು, ಜೆನ್ ಎಕ್ಸ್ ನ್ಯಾನೋ ಮತ್ತು ಟಿಯಾಗೊ ಹ್ಯಾಚ್ ಬ್ಯಾಕ್ ಕಾರಿನ ನಡುವಣ ಸ್ಥಾನದಲ್ಲಿ ಗುರುತಿಸಿಕೊಳ್ಳಲಿದೆ.

To Follow DriveSpark On Facebook, Click The Like Button
ಮರೆಮಾಚಿದ ಟಾಟಾ ಪೆಲಿಕನ್ ಎಕ್ಸ್ ಕ್ಲೂಸಿವ್ ಚಿತ್ರಗಳು ಸೆರೆ

12 ಇಂಚುಗಳ ಬದಲಾಗಿ 13 ಇಂಚುಗಳ ದೊಡ್ಡದಾದ ಚಕ್ರ ಮತ್ತು ಹೆಚ್ಚು ಶಕ್ತಿಶಾಲಿ ಎಂಜಿನ್ ಗಳನ್ನು ಇದರಲ್ಲಿ ಬಳಕೆ ಮಾಡಲಾಗುವುದು.

ಮರೆಮಾಚಿದ ಟಾಟಾ ಪೆಲಿಕನ್ ಎಕ್ಸ್ ಕ್ಲೂಸಿವ್ ಚಿತ್ರಗಳು ಸೆರೆ

ಜೆನ್ ಎಕ್ಸ್ ನ್ಯಾನೋ ಜೊತೆಗೆ ದೇಹ ವಿನ್ಯಾಸವನ್ನು ಹಂಚಿಕೊಳ್ಳಲಿರುವ ಪೆಲಿಕನ್, ಮುಂಭಾಗವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಪರಿಷ್ಕೃತಗೊಳಿಸಿರುವುದನ್ನು ಕಾಣಬಹುದಾಗಿದೆ.

ಮರೆಮಾಚಿದ ಟಾಟಾ ಪೆಲಿಕನ್ ಎಕ್ಸ್ ಕ್ಲೂಸಿವ್ ಚಿತ್ರಗಳು ಸೆರೆ

ಪರಿಷ್ಕೃತ ಹೆಡ್ ಲೈಟ್, ಬೊನೆಟ್, ಹೊಸ ಫ್ರಂಟ್ ಮತ್ತು ರಿಯರ್ ಬಂಪರ್ ನೀಡಲಾಗಿದೆ. ಇನ್ನು ಇಂಧನ ತುಂಬಿಸುವ ಕ್ಯಾಪನ್ನು ಹಿಂಭಾಗಕ್ಕೆ ವರ್ಗಾಯಿಸಲಾಗಿದೆ.

ಮರೆಮಾಚಿದ ಟಾಟಾ ಪೆಲಿಕನ್ ಎಕ್ಸ್ ಕ್ಲೂಸಿವ್ ಚಿತ್ರಗಳು ಸೆರೆ

ಕಾರಿನೊಳಗೆ ಅತಿ ನೂತನ ಡ್ಯಾಶ್ ಬೋರ್ಡ್ ಮತ್ತು ಆಸನ ವ್ಯವಸ್ಥೆಗಳನ್ನು ಕೊಡಲಾಗಿದ್ದು, ಅತ್ಯಾಕರ್ಷಕವೆನಿಸುತ್ತಿದೆ. ಅಂತೆಯೇ ಸ್ಟೀರಿಂಗ್ ವೀಲ್ ಹಿಂದುಗಡೆ ಇನ್ಸ್ಟ್ರುಮೆಂಟ್ ಕ್ಲಸ್ಟರ್ ನೀಡಲಾಗಿದೆ. ಆದರೆ ಸ್ಟೀರಿಂಗ್ ವೀಲ್ ನಲ್ಲಿ ಯಾವುದೇ ಸ್ವಿಚ್ ನಿಯಂತ್ರಣವನ್ನು ಕೊಡಲಾಗಿಲ್ಲ.

ಮರೆಮಾಚಿದ ಟಾಟಾ ಪೆಲಿಕನ್ ಎಕ್ಸ್ ಕ್ಲೂಸಿವ್ ಚಿತ್ರಗಳು ಸೆರೆ

ಟಿಯಾಗೊ ಕಾರಿನಲ್ಲಿರುವುದಕ್ಕೆ ಸಮಾನವಾದ ಎಸಿ ವೆಂಟ್ಸ್ ಗಳು ಇಲ್ಲಿವೆ. ಹಾಗೆಯೇ ಸಿಡಿ/ಎಂಪಿ3 ಸಿಸ್ಟಂ ಜೊತೆ ಬ್ಲೂಟೂತ್, ಹರ್ಮಾನ್ ಕನೆಕ್ಟ್ ನೆಕ್ಸ್ಟ್ ಇನ್ಪೋಟೈನ್ಮೆಂಟ್ ಸಿಸ್ಟಂಗಳು ಗಮನಾರ್ಹವೆನಿಸುತ್ತದೆ.

ಮರೆಮಾಚಿದ ಟಾಟಾ ಪೆಲಿಕನ್ ಎಕ್ಸ್ ಕ್ಲೂಸಿವ್ ಚಿತ್ರಗಳು ಸೆರೆ

ನೂತನ ಪೆಲಿಕನ್ ಗುಜರಾತ್‌ನ ಸನಂದ್ ಘಟಕದಿಂದಲೇ ನಿರ್ಮಾಣವಾಗಲಿದ್ದು, ನೂತನ 800 ಸಿಸಿ ಡೀಸೆಲ್ ಮತ್ತು ಹೆಚ್ಚು ಶಕ್ತಿಶಾಲಿ 1.0 ಲೀಟರ್ ಪೆಟ್ರೋಲ್ ನೊಂದಿಗೆ ಆಗಮನವಾಗುವ ಸಾಧ್ಯತೆಯಿದೆ.

ಇವನ್ನೂ ಓದಿ...

ಬರುತ್ತಿದೆ ಟಾಟಾ 'ಒಸ್ಪ್ರೆ' ಮಿನಿ ಎಸ್‌ಯುವಿ; ಎಕ್ಸ್ ಕ್ಲೂಸಿವ್ ಚಿತ್ರಗಳು

ಇವನ್ನೂ ಓದಿ...

ಆಲ್ಟೊಗೆ ಟಕ್ಕರ್ ನೀಡಲು ಟಾಟಾದಿಂದ ದೊಡ್ಡ ನ್ಯಾನೋ

ಚಿತ್ರ ಕೃಪೆ: Autocar India

English summary
Spied: Tata Nano Pelican Spotted Testing
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark