ಚಾಲಕ ಸಹಾಯಿ ತಂತ್ರಜ್ಞಾನ ಅಭಿವೃದ್ಧಿಪಡಿಸಲಿರುವ ಟಾಟಾ
ನೂತನ ತಂತ್ರಜ್ಞಾನ ಅವಿಷ್ಕಾರ ಮಾಡುವುದರಲ್ಲಿ ಕಾರ್ಯ ಮಗ್ನವಾಗಿರುವ ದೇಶದ ಅತಿ ದೊಡ್ಡ ವಾಹನ ಸಂಸ್ಥೆ ಟಾಟಾ ಮೋಟಾರ್ಸ್, ಈಗ ಚಾಲಕ ಸಹಾಯಿ ಕಾರುಗಳ ತಂತ್ರಜ್ಞಾನ ಅಭಿವೃದ್ಧಿಪಡಿಸುವುದರಲ್ಲಿ ತೊಡಗಿಸಿಕೊಂಡಿದೆ.
ವಿಶ್ವದ ಹಲವಾರು ಮುಂಚೂಣಿಯ ಸಂಸ್ಥೆಗಳು ಸ್ವಯಂಚಾಲಿತ ಕಾರುಗಳ ಅಭಿವೃದ್ಧಿ ಮತ್ತು ಅಧ್ಯಯನದಲ್ಲಿ ತೊಡಗಿರುವಂತೆಯೇ ಈ ನಿಟ್ಟಿನಲ್ಲಿ ಟಾಟಾ ಸಹ ಮಹತ್ತರ ಮೈಲುಗಲ್ಲನ್ನಿಡುತ್ತಿದೆ ಅಂದರೆ ತಪ್ಪಾಗಲಾರದು.

ಟಾಟಾ ಅಭಿವೃದ್ಧಿಪಡಿಸುತ್ತಿರುವ ನೂತನ ಡ್ರೈವರ್ ಅಸಿಸ್ಟನ್ಸ್ ಸಿಸ್ಟಂ ಅಥವಾ ಚಾಲಕ ಸಹಾಯಿ ವ್ಯವಸ್ಥೆಯು ನಿಕಟ ಭವಿಷ್ಯದಲ್ಲೇ ದೇಶದಲ್ಲಿರುವ ಸಂಸ್ಥೆಯ ಕಾರುಗಳಿಗೆ ಲಭ್ಯವಾಗಲಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಟಾಟಾ ಉನ್ನತಾಧಿಕಾರಿಗಳು, ಇಡೀ ವಿಶ್ವವೇ ಕಾಲಕ್ರಮೇಣ ಸ್ವಯಂಚಾಲಿತ ಕಾರುಗಳ ಚಲನವಲನಕ್ಕೆ ಒಗ್ಗುತ್ತಿದ್ದು, ಭಾರತ ಕೂಡಾ ಇಂತಹ ತಂತ್ರಜ್ಞಾನಗಳ ಮಹತ್ವವನ್ನು ಅರಿತುಕೊಂಡು ಇದನ್ನು ಆಳವಡಿಸಬೇಕಾಗಿದೆ ಎಂದಿದ್ದಾರೆ.

ಟಾಟಾ ಅಭಿವೃದ್ಧಿಪಡಿಸುತ್ತಿರುವ ತಂತ್ರಜ್ಞಾನಗಳಲ್ಲಿ ಢಿಕ್ಕಿ ತಪ್ಪಿಸುವುದು ಮತ್ತು ಆಟೋಮ್ಯಾಟಿಕ್ ಪಾರ್ಕಿಂಗ್ ವ್ಯವಸ್ಥೆಗಳು ಪ್ರಮುಖವಾಗಿದೆ.

ಪ್ರಯಾಣಿಕ ಮಾರುಕಟ್ಟೆಯಲ್ಲಿ ಹಿನ್ನೆಡೆ ಅನುಭವಿಸುತ್ತಿರುವ ಟಾಟಾ ಸಂಸ್ಥೆಯು ನೂತನ ತಂತ್ರಜ್ಞಾನಗಳೊಂದಿಗೆ ಭರ್ಜರಿ ಪುನರಾಗಮನ ಮಾಡಿಕೊಳ್ಳುವ ಗುರಿಯನ್ನಿಟ್ಟುಕೊಂಡಿದೆ.

ಇದಕ್ಕಾಗಿ ತನ್ನ ಅಧೀನತೆಯಲ್ಲಿರುವ ಬ್ರಿಟನ್ ಮೂಲದ ಐಕಾನಿಕ್ ಜಾಗ್ವಾರ್ ಲ್ಯಾಂಡ್ ರೋವರ್ ಮತ್ತು ಟಿಸಿಎಸ್ ನೆರವನ್ನು ಪಡೆಯುವ ಸಾಧ್ಯತೆಯಿದೆ.

ಟಾಟಾ ಸಂಸ್ಥೆಯು ಇತ್ತೀಚೆಗಷ್ಟೇ ಹ್ಯಾಚ್ ಬ್ಯಾಕ್ ಕಾರನ್ನು ಬಿಡುಗಡೆಗೊಳಿಸಿತ್ತು. ಇದರಲ್ಲಿ ಮ್ಯಾಪ್ ಮೈ ಇಂಡಿಯಾದ ಫ್ರಿ ಕಾರ್ ನೇವಿಗೇಷನ್ ಮತ್ತು ಜ್ಯೂಕ್ ಕಾರ್ ಆಪ್ ಗಳಂತಹ ಸೇವೆಗಳನ್ನು ನೀಡುತ್ತಿದೆ.

ಟೆಸ್ಲಾ, ವೋಲ್ವೋ, ಹೋಂಡಾ, ಫೋಕ್ಸ್ ವ್ಯಾಗನ್ ಜೊತೆಗೆ ಗೂಗಲ್ ಗಳಂತಹ ಸಂಸ್ಥೆಗಳು ಡ್ರೈವರ್ ಲೆಸ್ ಕಾರುಗಳು ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನಗಳ ವಾಹನಗಳ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದೆ.

ಹಾಗಿದ್ದರೂ ಇಂತಹ ತಂತ್ರಜ್ಞಾನಗಳನ್ನು ಆಳವಡಿಸುದಕ್ಕೆ ಹಲವಾರು ತೊಡಕುಗಳು ಎದುರಾಗಲಿದೆ. ಇವುಗಳಲ್ಲಿ ಪ್ರಮುಖವಾಗಿಯೂ ತಂತ್ರಜ್ಞಾನದ ವೆಚ್ಚ ಪ್ರಮುಖವಾಗಿರುತ್ತದೆ. ಉದಾಹರಣೆಗೆ ಲೈಟ್ ಡಿಟೆಕ್ಷನ್ ಆಂಡ್ ರಾಂಗಿಂಗ್ ( LiDAR) ತಂತ್ರಜ್ಞಾನವನ್ನು ಆಳವಡಿಸುವುದಾದ್ದಲ್ಲಿ 20 ಲಕ್ಷ ರು.ಗಳಷ್ಟು ಖರ್ಚು ತಗುಲಲಿದೆ. ಇದು ಕಾರಿನ ಒಟ್ಟು ಮೊತ್ತದ ಶೇಕಡಾ 50ರಷ್ಟಾಗಿದೆ. ಹಾಗಾಗಿ ಇಂತಹ ತಂತ್ರಜ್ಞಾನಗಳನ್ನು ಆಳವಡಿಸುವುದು ಕಷ್ಟಸಾಧ್ಯವಾಗಿದೆ.

ಸೆನ್ಸಾರ್ ತಂತ್ರಜ್ಞಾನದಿಂದ ಆರಂಭಿಸಿ ಕ್ಯಾಮೆರಾ ತಂತ್ರಜ್ಞಾನ, ರಾಡಾರ್ ತಂತ್ರಜ್ಞಾನ ಹೀಗೆ ಹಲವು ವಿವಿಧ ತಂತ್ರಜ್ಞಾನಗಳಿವೆ. ಇವುಗಳನ್ನು ಸಮರ್ಥವಾಗಿ ಬಳಕೆ ಮಾಡುವುದು ಸಂಸ್ಥೆಯ ಮುಂದಿರುವ ಸವಾಲಾಗಿರಲಿದೆ.

ಸೆನ್ಸಾರ್ ತಂತ್ರಜ್ಞಾನದಿಂದ ಆರಂಭಿಸಿ ಕ್ಯಾಮೆರಾ ತಂತ್ರಜ್ಞಾನ, ರಾಡಾರ್ ತಂತ್ರಜ್ಞಾನ ಹೀಗೆ ಹಲವು ವಿವಿಧ ತಂತ್ರಜ್ಞಾನಗಳಿವೆ. ಇವುಗಳನ್ನು ಸಮರ್ಥವಾಗಿ ಬಳಕೆ ಮಾಡುವುದು ಸಂಸ್ಥೆಯ ಮುಂದಿರುವ ಸವಾಲಾಗಿರಲಿದೆ.
- ಕ್ರಾಸ್ ಟ್ರಾಫಿಕ್ ಮಾನಿಟರ್,
- ಸಿಟಿ ಬ್ರೇಕ್ ಆಕ್ಟಿವ್ ಸಿಸ್ಟಂ
- ಟ್ರಾಫಿಕ್ ಚಿಹ್ನೆ ಗುರುತಿಸುವಿಕೆ ವ್ಯವಸ್ಥೆ,
- ಫಾರ್ವಡ್ ಢಿಕ್ಕಿ ಎಚ್ಚರಿಕೆ,
- ಲೇನ್ ನಿರ್ಗಮನ ಎಚ್ಚರಿಕೆ,
- ಬ್ಲೈಂಡ್ ಸ್ಪಾಟ್ ಮಾಹಿತಿ,
- ಹೈ ಬೀಮ್ ಸಪೋರ್ಟ್ ಸಿಸ್ಟಂ



Click it and Unblock the Notifications








