ಭಾರತದಲ್ಲಿ ಫಿಯೆಟ್-ಟಾಟಾ ಆದಿತೇ ಜೋಡಿ ನಂ.1 ?

ಟಾಟಾ ಜೊತೆಗಿನ ಪಾಲುದಾರಿಕೆಯೊಂದಿಗೆ ದೇಶದಲ್ಲಿ ಫಿಯೆಟ್ ಜೀಪ್ ಬ್ರಾಂಡ್ ಮತ್ತಷ್ಟು ಸ್ಪರ್ಧಾತ್ಮಕ ಬೆಲೆಗಳಲ್ಲಿ ಬಿಡುಗಡೆ ಮಾಡಲು ನೆರವಾಗಲಿದೆ.

By Nagaraja

ಭಾರತದ ಅತಿ ದೊಡ್ಡ ವಾಹನ ಸಂಸ್ಥೆ ಟಾಟಾ ಮೋಟಾರ್ಸ್ ಜೊತೆಗಾರಿಕೆಯೊಂದಿಗೆ ವ್ಯಾಪಾರ ವಹಿವಾಟು ಕುದುರಿಸಿಕೊಳ್ಳುವ ಯೋಜನೆಯಲ್ಲಿರುವ ಇಟಲಿಯ ಮೂಲದ ಫಿಯೆಟ್ ಕ್ಲೈಸ್ಲರ್ ಆಟೋಮೊಬೈಲ್ಸ್ ತಂತ್ರಜ್ಞಾನವನ್ನು ಹಂಚಿಕೊಳ್ಳಲು ಅತೀವ ಆಸಕ್ತಿಯನ್ನು ವ್ಯಕ್ತಪಡಿಸಿದೆ. ಇದು ಭಾರತದಲ್ಲಿರುವ ತನ್ನ ಸಾನಿಧ್ಯವನ್ನು ಮತ್ತಷ್ಟು ವೃದ್ಧಿಸಿಕೊಳ್ಳಲು ಫಿಯೆಟ್ ಗೆ ನೆರವಾಗಲಿದೆ.

ಭಾರತದಲ್ಲಿ ಫಿಯೆಟ್-ಟಾಟಾ ಆದಿತೇ ಜೋಡಿ ನಂ.1 ?

ಎಂಜಿನ್, ಗೇರ್ ಬಾಕ್ಸ್ ಜೊತೆಗೆ ಟಾಟಾ ಘಟಕದಲ್ಲಿ ಐಕಾನಿಕ್ ಜೀಪ್ ಕ್ರೀಡಾ ಬಳಕೆಯ ವಾಹನಗಳನ್ನು ಸ್ಥಳೀಯವಾಗಿ ನಿರ್ಮಿಸುವುದರ ಕುರಿತಂತೆ ಫಿಯೆಟ್ ಹೆಚ್ಚಿನ ಒಲವನ್ನು ತೋರಿದೆ.

ಭಾರತದಲ್ಲಿ ಫಿಯೆಟ್-ಟಾಟಾ ಆದಿತೇ ಜೋಡಿ ನಂ.1 ?

ಭವಿಷ್ಯದಲ್ಲಿ ಹೆಚ್ಚಿನ ಮಾದರಿಗಳನ್ನು ಪರಿಚಯಿಸಲು ಉತ್ಸುಕತೆಯನ್ನು ತೋರಲಾಗಿದೆ. ಒಂದೇ ಘಟಕದಿಂದ ಎಂಜಿನ್, ಗೇರ್ ಬಾಕ್ಸ್ ಹಂಚಿಕೊಳ್ಳುವ ಮೂಲಕ ವೆಚ್ಚ ಕಡಿತವನ್ನು ಗುರಿಯಿರಿಸಲಾಗಿದೆ.

ಭಾರತದಲ್ಲಿ ಫಿಯೆಟ್-ಟಾಟಾ ಆದಿತೇ ಜೋಡಿ ನಂ.1 ?

2 ಲೀಟರ್ ಡೀಸೆಲ್ ಎಂಜಿನ್ ಹಂಚಿಕೊಳ್ಳುವುದರ ಬಗ್ಗೆಯೂ ಟಾಟಾ ಮತ್ತು ಫಿಯೆಟ್ ಸಂಸ್ಥೆಗಳ ನಡುವೆ ಚರ್ಚೆಗಳು ನಡೆಯುತ್ತಿದೆ. ಇದು ಫಿಯೆಂಟ್ ಸಿ ಸೆಗ್ಮೆಂಟ್ (ಕೋಡ್ 556) ಮತ್ತು ಟಾಟಾ ಪ್ರೀಮಿಯಂ ಎಸ್ ಯುವಿಗಳಲ್ಲಿ (ಕೋಡ್ ಕ್ಯೂ5) ಬಳಕೆಯಾಗಲಿದೆ.

ಭಾರತದಲ್ಲಿ ಫಿಯೆಟ್-ಟಾಟಾ ಆದಿತೇ ಜೋಡಿ ನಂ.1 ?

ವಾಹನ ಘಟಕಗಳಲ್ಲಿ ಸಾಧ್ಯವಾದಷ್ಟು ತಂತ್ರಜ್ಞಾನವನ್ನು ಹಂಚಿಕೊಳ್ಳುವುದು ಫಿಯೆಟ್ ಗುರಿಯಾಗಿದೆ. ಈ ನೂತನ ಜುಗಲ್ ಬಂಧಿಯು ವಾಹನ ಕ್ಷೇತ್ರದಲ್ಲಿ ಹೊಸ ಕ್ರಾಂತಿಕಾರಿ ಬದಲಾವಣೆಗಳಿಗೆ ಸಾಕ್ಷಿಯಾಗಲಿದೆ.

ಭಾರತದಲ್ಲಿ ಫಿಯೆಟ್-ಟಾಟಾ ಆದಿತೇ ಜೋಡಿ ನಂ.1 ?

ಭಾರತಕ್ಕೆ ಈಗಾಗಲೇ ಜೀಪ್ ಬ್ರಾಂಡ್ ಲಗ್ಗೆಯಿಟ್ಟಿದೆ. ಈಗ ಮತ್ತಷ್ಟು ಉತ್ತಷ್ಟು ಉತ್ಪನ್ನಗಳನ್ನು ದೇಶಕ್ಕೆ ಪರಿಚಯಿಸಲಿದೆ. ದೇಶದಲ್ಲಿ ಬೆಲೆ ನಿರ್ಣಾಯಕ ಘಟಕವೆನಿಸಲಿರುವುದರಿಂದ ಟಾಟಾ ನೆರವನ್ನು ಪಡೆಯಲಿದೆ.

ಭಾರತದಲ್ಲಿ ಫಿಯೆಟ್-ಟಾಟಾ ಆದಿತೇ ಜೋಡಿ ನಂ.1 ?

ಫಿಯೆಟ್ ನ ನೂತನ ಕಾಂಪಾಸ್ ಎಸ್ ಯುವಿ, 526 ಎಂಬ ಕೋಡ್ ಪಡೆದಿದ್ದು, 10 ಲಕ್ಷ ರು.ಗಳ ಬೆಲೆ ಪರಿಧಿಯಲ್ಲಿ 2017 ದ್ವಿತಿಯಾರ್ಧದಲ್ಲಷ್ಟೇ ಮಾರುಕಟ್ಟೆಗೆ ಆಮನವಾಗಲಿದೆ.

More from DriveSpark

Article Published On: Saturday, November 19, 2016, 15:32 [IST]
English summary
Tata Motors And Fiat Chrysler Automobiles To Boost Partnership In India
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+