ಜನಪ್ರಿಯ ಟಾಟಾ ಕಾರುಗಳಿಗೆ ಆಕರ್ಷಕ ಆಫರ್
ದೇಶದ ಅತಿ ದೊಡ್ಡ ವಾಹನ ಸಂಸ್ಥೆ ಟಾಟಾ ಮೋಟಾರ್ಸ್, ಪ್ರಯಾಣಿಕ ಕಾರು ವಿಭಾಗದಲ್ಲೂ ಉತ್ತಮ ಜನಪ್ರಿಯತೆಯನ್ನು ಕಾಪಾಡಿಕೊಂಡಿದೆ. ಅಲ್ಲದೆ ನಿರಂತರ ಅಂತರಾಳದಲ್ಲಿ ಹೊಸ ಹಾಗೂ ಪರಿಷ್ಕೃತ ಮಾದರಿಗಳನ್ನು ಬಿಡುಗಡೆ ಮಾಡುವುದರಲ್ಲಿ ತಲ್ಲೀನವಾಗಿದೆ.
ಈಗ ಜುಲೈ ತಿಂಗಳಲ್ಲಿ ತನ್ನ ಕೆಲವು ಜನಪ್ರಿಯ ಮಾದರಿಗಳ ಖರೀದಿ ವೇಳೆಯಲ್ಲಿ ಟಾಟಾ ಸಂಸ್ಥೆಯು ಆಕರ್ಷಕ ಆಫರ್ ಗಳನ್ನು ಮುಂದಿಡುತ್ತಿದೆ. ಟಾಟಾದ ಕೆಲವು ಜನಪ್ರಿಯ ಮಾದರಿಗಳ ಖರೀದಿ ವೇಳೆಯಲ್ಲಿ ಗರಿಷ್ಠ 50,000 ರು.ಗಳ ವರೆಗೆ ಪ್ರಯೋಜನ ಗಿಟ್ಟಿಸಿಕೊಳ್ಳಬಹುದಾಗಿದೆ.

ಟಾಟಾ ನ್ಯಾನೋ
ವಿಶ್ವದ ಅಗ್ಗದ ಕಾರು ಟಾಟಾ ನ್ಯಾನೋ ಖರೀದಿ ವೇಳೆಯಲ್ಲಿ 30,000 ರು.ಗಳ ಪ್ರಯೋಜನ ಗಿಟ್ಟಿಸಿಕೊಳ್ಳಬಹುದಾಗಿದೆ. ಈ ಪೈಕಿ ತಲಾ 15,000 ರು.ಗಳ ನಗದು ಆಫರ್ ಮತ್ತು ಎಕ್ಸ್ ಚೇಂಜ್ ಬೋನಸ್ ಸೇರಿರಲಿದೆ.

ಟಾಟಾ ನ್ಯಾನೋ
ಟಾಟಾ ನ್ಯಾನೋದಲ್ಲಿರುವ 624 ಸಿಸಿ ಎಂಜಿನ್ 37.5 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಅಲ್ಲದೆ ಪ್ರತಿ ಲೀಟರ್ ಗೆ 21.9 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರುತ್ತದೆ.

ಟಾಟಾ ಬೋಲ್ಟ್
ಟಾಟಾ ಬೋಲ್ಟ್ ಹ್ಯಾಚ್ ಬ್ಯಾಕ್ ಕಾರಿನ ಖರೀದಿ ವೇಳೆಯಲ್ಲೂ ಗರಿಷ್ಠ 45,000 ರು.ಗಳ ಪ್ರಯೋಜನ ಗಿಟ್ಟಿಸಿಕೊಳ್ಳಬಹುದಾಗಿದೆ. ಇದರಲ್ಲಿ 25,000 ರು.ಗಳ ಎಕ್ಸ್ ಚೇಂಜ್ ಮತ್ತು 20,000 ರು.ಗಳ ನಗದು ರಿಯಾಯಿತಿಗಳು ಸೇರಿರಲಿದೆ.

ಟಾಟಾ ಬೋಲ್ಟ್
ಪೆಟ್ರೋಲ್ ಮತ್ತು ಡೀಸೆಲ್ ಆವೃತ್ತಿಗಳಲ್ಲಿ ಲಭ್ಯವಿರುವ ಟಾಟಾ ಬೋಲ್ಟ್ ಅನುಕ್ರಮವಾಗಿ 1193 ಸಿಸಿ ಪೆಟ್ರೋಲ್ ಮತ್ತು 1248 ಸಿಸಿ ಡೀಸೆಲ್ ಎಂಜಿನ್ ಗಳಿಂದ ನಿಯಂತ್ರಿಸಲ್ಪಡಲಿದೆ. ಇವೆರಡು 17.57 ಮತ್ತು 22.95 ಕೀ.ಮೀ. ಮೈಲೇಜ್ ನೀಡುವಷ್ಟು ಸಕ್ಷಮವಾಗಿದೆ.

ಟಾಟಾ ಜೆಸ್ಟ್
ಟಾಟಾ ಬೋಲ್ಟ್ ತರಹನೇ ಜೆಸ್ಟ್ ಕಾಂಪಾಕ್ಟ್ ಸೆಡಾನ್ ಕಾರಿನ ಖರೀದಿ ವೇಳೆಯಲ್ಲೂ ಗರಿಷ್ಠ 45,000 ರು.ಗಳ ಪ್ರಯೋಜನ ನಿಮ್ಮದಾಗಲಿದೆ. ಇವುಗಳಲ್ಲಿ 25,000 ರು.ಗಳ ಎಕ್ಸ್ ಚೇಂಜ್ ಮತ್ತು 20,000 ರು.ಗಳ ನಗದು ರಿಯಾಯಿತಿಗಳು ಸೇರಿವೆ.

ಟಾಟಾ ಜೆಸ್ಟ್
ಪೆಟ್ರೋಲ್ ಮತ್ತು ಡೀಸೆಲ್ ಆವೃತ್ತಿಗಳಲ್ಲಿ ಟಾಟಾ ಜೆಸ್ಟ್ ಮಾರಾಟದಲ್ಲಿದೆ. ಇದರ 1193 ಸಿಸಿ ಪೆಟ್ರೋಲ್ ಎಂಜಿನ್ 17.6 ಕೀ.ಮೀ. ಮತ್ತು 1248 ಸಿಸಿ ಡೀಸೆಲ್ ಎಂಜಿನ್ 23 ಕೀ.ಮೀ. ಇಂಧನ ಕ್ಷಮತೆಯನ್ನು ನೀಡಲಿದೆ.

ಟಾಟಾ ಸಫಾರಿ ಸ್ಟ್ರೋಮ್
ನೂತನ ಟಾಟಾ ಸಫಾರಿ ಸ್ಟ್ರೋಮ್ ಖರೀದಿ ವೇಳೆಯಲ್ಲಿ ಗರಿಷ್ಠ 50,000 ರು.ಗಳ ಪ್ರಯೋಜನ ಗಿಟ್ಟಿಸಿಕೊಳ್ಳಬಹುದಾಗಿದೆ. ಇದರಲ್ಲಿ 30,000 ರು.ಗಳ ಎಕ್ಸ್ ಚೇಂಜ್ ಮತ್ತು 20,000 ರು.ಗಳ ನಗದು ಆಫರ್ ಲಭ್ಯವಿರಲಿದೆ.

ಟಾಟಾ ಸಫಾರಿ ಸ್ಟ್ರೋಮ್
2179 ಸಿಸಿ ಡೀಸೆಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿರುವ ಟಾಟಾ ಸಫಾರಿ ಸ್ಟ್ರೋಮ್ ಪ್ರತಿ ಲೀಟರ್ ಗೆ 14 ಕೀ.ಮೀ. ಮೈಲೇಜ್ ನೀಡಲು ಸಕ್ಷಮವಾಗಿರಲಿದೆ.


Click it and Unblock the Notifications