ಉದಯಿಸುವ ಮೊದಲೇ ಅಸ್ತಮಿಸಿದ ಟಾಟಾ 'ಝಿಕಾ' ?

By Nagaraja

ಪ್ರತಿಯೊಂದು ಅಂಶಗಳ ಅಸ್ತಮದೊಂದಿಗೆ ಹೊಸತೊಂದರ ಉದಯವಾಗುತ್ತದೆ. ಇದು ಸೃಷ್ಟಿಯ ನಿಯಮ. ಅತ್ತ 'ಝಿಕಾ' ಎಂದೇ ಅರಿಯಲ್ಪಡುತ್ತಿದ್ದ ಟಾಟಾದ ನೂತನ ಹ್ಯಾಚ್ ಬ್ಯಾಕ್ ಕಾರಿಗೆ ಹೊಸ ನಾಮಕರಣವಾಗಿದೆ.

ಅದುವೇ, ಟಾಟಾ ಟಿಯಾಗೊ (TIAGO)

ಭಾರತದಲ್ಲಿ ಇನ್ನಷ್ಟೇ ಬಿಡುಗಡೆಯಾಗಬೇಕಾಗಿರುವ ಟಾಟಾ ಟಿಯಾಗೊ ಹ್ಯಾಚ್ ಬ್ಯಾಕ್ ಕಾರು ಒಂದು ಜಾಗತಿಕ ಉತ್ಪನ್ನವಾಗಿದ್ದು, ಅರ್ಜೇಂಟೀನಾದ ಖ್ಯಾತ ಫುಟ್ಬಾಲಿಗ ಲಿಯೊನೆಲ್ ಮೆಸ್ಸಿ ಮುಖ್ಯ ಪ್ರಚಾರ ರಾಯಭಾರಿಯಾಗಿಲಿದ್ದಾರೆ.

ಟಾಟಾ ಝಿಕಾ ಕಾರಿಗೆ ಹೊಸ ನಾಮಕರಣ - 'ಟಿಯಾಗೊ'

ನಾಮಕರಣ ಶೋಧನೆಗಾಗಿ ದೇಶದ ಅತಿ ದೊಡ್ಡ ಸಂಸ್ಥೆ ಟಾಟಾ ಇತ್ತೀಚೆಗಷ್ಟೇ ನಡೆಸಿರುವ #Fantastico ಅಭಿಯಾನದ ಮುಖಾಂತರ ವಾಹನ ಪ್ರೇಮಿಗಳಿಂದ ಅಭಿಪ್ರಾಯ ಸಂಗ್ರಹಿಸಿ ಹೊಸ ಹೆಸರನ್ನು ಘೋಷಣೆ ಮಾಡಲಾಗಿದೆ.

ಟಾಟಾ ಝಿಕಾ ಕಾರಿಗೆ ಹೊಸ ನಾಮಕರಣ - 'ಟಿಯಾಗೊ'

2016 ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನ ಕಂಡಿರುವ ಟಾಟಾದ ನೂತನ ಹ್ಯಾಚ್ ಬ್ಯಾಕ್ ಕಾರು ಯುವ ಗ್ರಾಹಕರನ್ನು ಗುರಿಯಾಗಿರಿಸಿಕೊಳ್ಳಲಿದೆ.

ಟಾಟಾ ಝಿಕಾ ಕಾರಿಗೆ ಹೊಸ ನಾಮಕರಣ - 'ಟಿಯಾಗೊ'

ಕಟ್ಟಿಂಗ್ ಎಡ್ಜ್ ಡಿಸೈನ್ ತಂತ್ರಜ್ಞಾನ, ಚಲನಶೀಲತೆ ಇವೆಲ್ಲವೂ ಟಾಟಾದ ನೂತನ ಕಾರಿನಲ್ಲಿ ಹೊಸ ಅಧ್ಯಾಯವನ್ನು ತೆರೆದುಕೊಳ್ಳಲಿದೆ. ಅಲ್ಲದೆ ಪ್ರಯಾಣಿಕ ಕಾರು ಮಾರುಕಟ್ಟೆಗೆ ಭರ್ಜರಿ ಪುನರಾಗಮನ ಮಾಡಿಕೊಳ್ಳುವ ಇರಾದೆಯಲ್ಲಿದೆ.

ಟಾಟಾ ಝಿಕಾ ಕಾರಿಗೆ ಹೊಸ ನಾಮಕರಣ - 'ಟಿಯಾಗೊ'

2016 ಮಾರ್ಚ್ ತಿಂಗಳಾಂತ್ಯದಲ್ಲಿ ಮಾರುಕಟ್ಟೆ ಪ್ರವೇಶಿಸಲಿರುವ ಟಾಟಾ ಟಿಯಾಗೊ ಅಭಿವೃದ್ಧಿಯಲ್ಲಿ ಟಾಟಾ ಹೆಚ್ಚಿನ ಗಮನ ಕೇಂದ್ರಿಕರಿಸಿತ್ತು. ಅಲ್ಲದೆ ಸಂಸ್ಥೆಯ ಪುಣೆ, ಬ್ರಿಟನ್ ಹಾಗೂ ಇಟಲಿಯಲ್ಲಿ ಸ್ಥಿತಗೊಂಡಿರುವ ಡಿಸೈನ್ ಸ್ಟುಡಿಯೋಗಳ ನೆರವಿನಿಂದ ಇದನ್ನು ವಿನ್ಯಾಸಗೊಳಿಸಲಾಗಿದೆ.

ಟಾಟಾ ಝಿಕಾ ಕಾರಿಗೆ ಹೊಸ ನಾಮಕರಣ - 'ಟಿಯಾಗೊ'

ಟಾಟಾ ನೂತನ ಕಾರಿನ ನಾಮಕರಣಕ್ಕಾಗಿ ಟಾಟಾ ಏರ್ಪಡಿಸಿರುವ ಫೆಂಟಾಸ್ಟಿಕೊ ಹಂಟ್ ಅಭಿಯಾನದಲ್ಲಿ 48 ದಶಲಕ್ಷಕ್ಕೂ ಹೆಚ್ಚು ಮಂದಿ ಸಾಮಾಜಿಕ ತಾಣಗಳಲ್ಲಿ ಭಾಗವಹಿಸಿದ್ದರು. ಅಲ್ಲದೆ 37,000ಕ್ಕೂ ಹೆಚ್ಚು ಮಂದಿ ಸಾಮಾಜಿಕ ಹಾಗೂ ಮೊಬೈಲ್ ಮುಖಾಂತರ ಸೂಕ್ತ ಹೆಸರನ್ನು ಸೂಚಿಸಿದ್ದರು.

ಟಾಟಾ ಝಿಕಾ ಕಾರಿಗೆ ಹೊಸ ನಾಮಕರಣ - 'ಟಿಯಾಗೊ'

ಅಂತಿಮವಾಗಿ ಆಯ್ಕೆಯಾಗಿರುವ ಮೂರು ಹೆಸರುಗಳ ಪೈಕಿ (ಟಿಯಾಗೊ, ಸಿವೆಟ್ ಮತ್ತು ಅಡೋರ್) ಟಿಯಾಗೊ ಆಯ್ಕೆ ಮಾಡಲಾಗಿದೆ. ಅಲ್ಲದೆ ಇದನ್ನು ಸೂಚಿಸಿರುವ ಲಿಬಿ ಥಾಮಸ್ ಎಂಬವರು ಫೆಂಟಾಸ್ಟಿಕೊ ಹಂಟ್ ಅಭಿಯಾನದ ವಿಜಯಿಶಾಲಿಯಾಗಿದ್ದಾರೆ.

ಟಾಟಾ ಝಿಕಾ ಕಾರಿಗೆ ಹೊಸ ನಾಮಕರಣ - 'ಟಿಯಾಗೊ'

ನೂತನ ಇಂಪಾಕ್ಟ್ (IMPACT) ಡಿಸೈನ್ ತತ್ವಶಾಸ್ತ್ರದಲ್ಲಿ ಮೂಡಿ ಬರಲಿರುವ ಮೊದಲ ಕಾರು ಇದಾಗಿದ್ದು, ದೀರ್ಘಾವಧಿಯ ವರೆಗೂ ಈ ಪ್ರಭಾವ ಕಂಡುಬರುವ ಆಶಾವಾದವನ್ನು ಸಂಸ್ಥೆ ಹೊಂದಿದೆ.

ಟಾಟಾ ಝಿಕಾ ಕಾರಿಗೆ ಹೊಸ ನಾಮಕರಣ - 'ಟಿಯಾಗೊ'

ನೂತನ ಟಾಟಾ ಕಾರಿನಲ್ಲಿ 1.2 ಲೀಟರ್ ರೆವೊಟ್ರಾನ್ ಪೆಟ್ರೋಲ್ ಹಾಗೂ 1.05 ಲೀಟರ್ ರೆನೊಟಾರ್ಕ್ ಡೀಸೆಲ್ ಎಂಜಿನ್ ಆಯ್ಕೆಯನ್ನು ನೀಡಲಾಗಿದೆ.

1.2 ಲೀಟರ್ ಪೆಟ್ರೋಲ್ ಎಂಜಿನ್: 85 ಅಶ್ವಶಕ್ತಿ, 114 ಎನ್‌ಎಂ ತಿರುಗುಬಲ ಬಹು ಚಾಲನಾ ವಿಧ (ಇಕೊ ಮತ್ತು ಸಿಟಿ). 1.5 ಲೀಟರ್ ಡೀಸೆಲ್ ಎಂಜಿನ್: 70 ಅಶ್ವಶಕ್ತಿ, 140 ಎನ್‌ಎಂ ತಿರುಗುಬಲ ಬಹು ಚಾಲನಾ ವಿಧ (ಇಕೊ ಮತ್ತು ಸಿಟಿ)

ಟಾಟಾ ಝಿಕಾ ಕಾರಿಗೆ ಹೊಸ ನಾಮಕರಣ - 'ಟಿಯಾಗೊ'

ನೂತನ ಝಿಕಾ ಪೆಟ್ರೋಲ್ ಎಂಟಿ ಲೆವೆಲ್ ವೆರಿಯಂಟ್ ನಾಲ್ಕು ಲಕ್ಷ ರು.ಗಳಷ್ಟು ದುಬಾರಿಯೆನಿಸುವ ಸಾಧ್ಯತೆಯಿದೆ. ಅಂತೆಯೇ ಡೀಸೆಲ್ ವೆರಿಯಂಟ್ ಇದಕ್ಕಿಂತಲೂ 75,000 ರು.ಗಳಷ್ಟು ದುಬಾರಿಯೆನಿಸಲಿದೆ.

ಪ್ರತಿಸ್ಪರ್ಧಿಗಳು

ಪ್ರತಿಸ್ಪರ್ಧಿಗಳು

ಮಾರುತಿ ಸೆಲೆರಿಯೊ, ಹ್ಯುಂಡೈ ಗ್ರಾಂಡ್ ಐ10 ಮಾದರಿಗಳಿಗೆ ನೂತನ ಟಾಟಾ ಟಿಯಾಗೊ ಕಾರು ಪ್ರತಿಸ್ಪರ್ಧಿಯೆನಿಸಲಿದೆ.

ಇವನ್ನೂ ಓದಿ

ಟಾಟಾ ಝಿಕಾ ಸಂಪೂರ್ಣ ಚಾಲನಾ ವಿಮರ್ಶೆ


Most Read Articles

Kannada
English summary
Tata Motors Renames Zica As Tiago
Story first published: Tuesday, February 23, 2016, 9:31 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X