ತೆರೆಮರೆಯಲ್ಲಿ ಸಜ್ಜಾಗುತ್ತಿರುವ 'ಟಾಟಾ ನೆಕ್ಸನ್' ಮಿನಿ ಎಸ್‌ಯುವಿ

Written By:

ಈಗಷ್ಟೇ ಟಿಯಾಗೊ ಹ್ಯಾಚ್ ಬ್ಯಾಕ್ ಕಾರನ್ನು ಬಿಡುಗಡೆಗೊಳಿಸಿರುವ ದೇಶದ ಅತಿ ದೊಡ್ಡ ವಾಹನ ಸಂಸ್ಥೆ ಟಾಟಾ ಮೋಟಾರ್ಸ್, ಮಗದೊಂದು ಅತ್ಯಾಕರ್ಷಕ ಕಾರಿನ ನಿರ್ಮಾಣದಲ್ಲಿ ತೊಡಗಿಸಿಕೊಂಡಿದೆ. ಇದರಂತೆ ನೂತನ ಟಾಟಾ ನೆಕ್ಸನ್ ಕಾಂಪಾಕ್ಟ್ ಕ್ರೀಡಾ ಬಳಕೆಯ ವಾಹನದ ಸಿದ್ಧತೆಯು ತೆರೆಮರೆಯಲ್ಲಿ ಜೋರಾಗಿ ನಡೆಯುತ್ತಿದೆ.

ಪುಣೆಯಲ್ಲಿ ಟಾಟಾ ನೆಕ್ಸನ್ ಟೆಸ್ಟಿಂಗ್ ವೇಳೆ ಎಕ್ಸ್ ಕ್ಲೂಸಿವ್ ಚಿತ್ರಗಳನ್ನು ಸೆರೆ ಹಿಡಿಯಲಾಗಿದೆ. ಹೊರಮೈ ಸಂಪೂರ್ಣವಾಗಿ ಮರೆ ಮಾಚಿರುವ ನೂತನ ನೆಕ್ಸನ್ ಮೊದಲ ನೋಟದಲ್ಲೇ ಅತ್ಯುತ್ತಮ ರಸ್ತೆ ಸಾನಿಧ್ಯವನ್ನು ಕಾಪಾಡಿಕೊಂಡಿದೆ.

ತೆರೆಮರೆಯಲ್ಲಿ ಸಜ್ಜಾಗುತ್ತಿರುವ 'ಟಾಟಾ ನೆಕ್ಸನ್' ಮಿನಿ ಎಸ್‌ಯುವಿ

ಇದಕ್ಕೂ ಮೊದಲು ವರ್ಷಾರಂಭದಲ್ಲಿ ನಡೆದ 2016 ಆಟೋ ಎಕ್ಸ್ ಪೋದಲ್ಲಿ ನಾಲ್ಕು ಮೀಟರ್ ಉದ್ದ ಪರಿಧಿಯೊಳಗಿನ ಕ್ರೀಡಾ ಬಳಕೆಯ ವಾಹನವನ್ನು (ಎಸ್‌ಯುವಿ) ಪರಿಚಯಿಸಲಾಗಿತ್ತು. ಇದರ ಅಭಿವೃದ್ಧಿಯು ಈಗಲೂ ನಡೆಯುತ್ತಿದೆ. ಮಾರುತಿ ವಿಟಾರಾ ಬ್ರಿಝಾಗೆ ಪ್ರತಿಸ್ಪರ್ಧಿಯಾಗಲಿರುವ ನೂತನ ಕಾರು ಜೆಸ್ಟಾ ಹಾಗೂ ಬೋಲ್ಟ್ ತಳಹದಿಯಲ್ಲೇ ನಿರ್ಮಾಣವಾಗಲಿದೆ.

ತೆರೆಮರೆಯಲ್ಲಿ ಸಜ್ಜಾಗುತ್ತಿರುವ 'ಟಾಟಾ ನೆಕ್ಸನ್' ಮಿನಿ ಎಸ್‌ಯುವಿ

ನೂತನ ಟಾಟಾ ಕಾರು 1.2 ಲೀಟರ್ ರೆವೊಟ್ರಾನ್ ಟರ್ಬೊಚಾರ್ಜ್ಡ್ ಮತ್ತು 1.5 ಲೀಟರ್ ಡೀಸೆಲ್ ಫೋರ್ ಸಿಲಿಂಡರ್ ರೆವೊಟಾರ್ಕ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದೆ. ಮ್ಯಾನುವಲ್ ಮತ್ತು ಎಎಂಟಿ ಗೇರ್ ಬಾಕ್ಸ್ ಆಯ್ಕೆಯೂ ಇರುತ್ತದೆ.

ತೆರೆಮರೆಯಲ್ಲಿ ಸಜ್ಜಾಗುತ್ತಿರುವ 'ಟಾಟಾ ನೆಕ್ಸನ್' ಮಿನಿ ಎಸ್‌ಯುವಿ

ನೂತನ ವಿನ್ಯಾಸ ತಂತ್ರಗಾರಿಕೆಯನ್ನು ಟಾಟಾ ನೆಕ್ಸನ್ ಅನುಸರಿಸುತ್ತದೆ. ಇವೆಲ್ಲವೂ ಭರ್ಜರಿ ಪುನರಾಗಮನ ಮಾಡಿಕೊಳ್ಳಲು ಟಾಟಾಗೆ ನೆರವಾಗಲಿದೆ.

ತೆರೆಮರೆಯಲ್ಲಿ ಸಜ್ಜಾಗುತ್ತಿರುವ 'ಟಾಟಾ ನೆಕ್ಸನ್' ಮಿನಿ ಎಸ್‌ಯುವಿ

ಟಾಟಾ ನೂತನ ಕಾರಿನಲ್ಲಿ ಫ್ರಂಟ್ ಏರ್ ಬ್ಯಾಗ್, ಎಬಿಎಸ್, ಇಬಿಡಿ, ಟಚ್ ಸ್ಕ್ರೀನ್ ಹರ್ಮಾನ್ ಇನ್ಪೋಟೈನ್ಮೆಂಟ್ ಸಿಸ್ಟಂ, ಪ್ರೊಜೆಕ್ಟರ್ ಹೆಡ್ ಲ್ಯಾಂಪ್, ಅಲಾಯ್ ವೀಲ್, ಫಾಗ್ ಲೈಟ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಮತ್ತು ಔಟ್ ಸೈಡ್ ರಿಯರ್ ವ್ಯೂ ಮಿರರ್ ಮತ್ತು ಸ್ಟ್ಯಾರ್ಟ್-ಸ್ಟಾಪ್ ವೈಶಿಷ್ಟ್ಯಗಳು ಸ್ಟ್ಯಾಂಡರ್ಡ್ ಆಗಿ ದೊರಕುವ ಸಾಧ್ಯತೆಯಿದೆ.

ತೆರೆಮರೆಯಲ್ಲಿ ಸಜ್ಜಾಗುತ್ತಿರುವ 'ಟಾಟಾ ನೆಕ್ಸನ್' ಮಿನಿ ಎಸ್‌ಯುವಿ

ಮಾರುತಿ ವಿಟಾರಾ ಬ್ರಿಝಾ ಹೊರತಾಗಿ ಫೋರ್ಡ್ ಇಕೊಸ್ಪೋರ್ಟ್, ಮಹೀಂದ್ರ ಟಿಯುವಿ300 ಮತ್ತು ನುವೊಸ್ಪೋರ್ಟ್ ಮಾದರಿಗಳಿಗೂ ನೂತನ ನೆಕ್ಸನ್ ಪ್ರತಿಸ್ಪರ್ಧಿಯಾಗಲಿದೆ.

ತೆರೆಮರೆಯಲ್ಲಿ ಸಜ್ಜಾಗುತ್ತಿರುವ 'ಟಾಟಾ ನೆಕ್ಸನ್' ಮಿನಿ ಎಸ್‌ಯುವಿ

ಅಂದ ಹಾಗೆ 2017ರ ವೇಳೆಯಲ್ಲಷ್ಟೇ ಟಾಟಾ ನೆಕ್ಸನ್ ಬಿಡುಗಡೆಯಾಗುವ ಸಾಧ್ಯತೆಯಿದೆ.

Image Credit: Rushlane

English summary
Tata Nexon Compact SUV Spied Testing Ahead Of 2017 Launch
Story first published: Friday, May 6, 2016, 12:20 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark