ಟಾಟಾ ಟಿಯಾಗೊ ಎಎಂಟಿ ಕಾರು ಬಿಡುಗಡೆಗೆ ಮೀನಾಮೇಷ

Written By:

ದೇಶದ ಅತಿ ದೊಡ್ಡ ವಾಹನ ಸಂಸ್ಥೆ ಟಾಟಾ ಮೋಟಾರ್ಸ್, ತನ್ನ ಜನಪ್ರಿಯ ಟಿಯೊಗೊ ಹ್ಯಾಚ್ ಬ್ಯಾಕ್ ಕಾರಿನ ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ (ಎಎಂಟಿ) ಮಾದರಿಯನ್ನು ಮುಂದಿನ ವರ್ಷದಲ್ಲಿ ಬಿಡುಗಡೆ ಮಾಡಲಿದೆ. ಈ ಮೂಲಕ ಟಾಟಾ ಸಂಸ್ಥೆಯು ಗರಿಷ್ಠ ಮಾರಾಟವನ್ನು ಗುರಿಯಿರಿಸಿಕೊಂಡಿದೆ.

To Follow DriveSpark On Facebook, Click The Like Button
ಟಾಟಾ ಟಿಯಾಗೊ ಎಎಂಟಿ ಕಾರು ಬಿಡುಗಡೆಗೆ ಮೀನಾಮೇಷ

ಟಾಟಾ ಪಾಲಿಗೆ ಅತಿ ಹೆಚ್ಚು ಯಶಸ್ಸನ್ನು ತಂದು ಕೊಟ್ಟಿರುವ ಟಿಯೊಗೊ, ಟಾಟಾ ಶ್ರೇಣಿಯ ಕಾರುಗಳಲ್ಲಿ ನಂ.1 ಸ್ಥಾನ ಗಿಟ್ಟಿಸಿಕೊಂಡಿದೆ.

ಟಾಟಾ ಟಿಯಾಗೊ ಎಎಂಟಿ ಕಾರು ಬಿಡುಗಡೆಗೆ ಮೀನಾಮೇಷ

ಟಾಟಾ ಟಿಯೊಗೊ ಪ್ರಸಕ್ತ ಸಾಲಿನ ಹಬ್ಬದ ಆವೃತ್ತಿಯಲ್ಲೇ ಬಿಡುಗಡೆಯಾಗಬೇಕಿತ್ತು. ಬಳಿಕ ವರ್ಷಾಂತ್ಯದ ವೇಳೆಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದ್ದರೂ ಈಗ ಬಿಡುಗಡೆಯನ್ನು 2017ನೇ ಸಾಲಿನ ಮೊದಲಾರ್ಧಕ್ಕೆ ಮುಂದೂಡಲಾಗಿದೆ.

ಟಾಟಾ ಟಿಯಾಗೊ ಎಎಂಟಿ ಕಾರು ಬಿಡುಗಡೆಗೆ ಮೀನಾಮೇಷ

ಟಾಟಾ ಸಂಸ್ಥೆಯು ಇತ್ತೀಚೆಗೆಷ್ಟೇ ಹೆಕ್ಸಾ ಪ್ರೀಮಿಯಂ ಕ್ರಾಸೋವರ್ ಕ್ರೀಡಾ ಬಳಕೆಯ ವಾಹನವನ್ನು ಬಿಡುಗಡೆಗೊಳಿಸಿತ್ತು. ಇದು ಸಂಸ್ಥೆಯ ಪಾಲಿಗೆ ಹೆಚ್ಚಿನ ಯಶಸ್ಸನ್ನು ತಂದು ಕೊಡುವ ನಿರೀಕ್ಷೆಯನ್ನಿಟ್ಟುಕೊಳ್ಳಲಾಗಿದೆ.

ಟಾಟಾ ಟಿಯಾಗೊ ಎಎಂಟಿ ಕಾರು ಬಿಡುಗಡೆಗೆ ಮೀನಾಮೇಷ

2016 ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಂಡಿರುವ ಕೈಟ್5 ಸೆಡಾನ್ ಹಾಗೂ ನೆಕ್ಸನ್ ಸಬ್ ಕಾಂಪಾಕ್ಟ್ ಕ್ರೀಡಾ ಬಳಕೆಯ ಕಾರಿನ ನಿರ್ಮಾಣದಲ್ಲೂ ಟಾಟಾ ತೊಡಗಿಸಿಕೊಂಡಿದೆ.

ಟಾಟಾ ಟಿಯಾಗೊ ಎಎಂಟಿ ಕಾರು ಬಿಡುಗಡೆಗೆ ಮೀನಾಮೇಷ

ಮುಂದಿನ ವರ್ಷದಲ್ಲೇ ಟಾಟಾ ಟಿಯಾಗೊ ತಳಹದಿಯ ಕೈಟ್ 5 ಕಾಂಪಾಕ್ಟ್ ಸೆಡಾನ್ ಸಾಹ ಬಿಡುಗಡೆಯಾಗಲಿದೆ.

ಟಾಟಾ ಟಿಯಾಗೊ ಎಎಂಟಿ ಕಾರು ಬಿಡುಗಡೆಗೆ ಮೀನಾಮೇಷ

ರೆನೊ ಹಾಗೂ ಆಲ್ಟೊ ಕಾರುಗಳು ಎಎಂಟಿ ಆವೃತ್ತಿಯನ್ನು ಹೊಂದಿರುವುದರಿಂದ ಹೆಚ್ಚು ವಿಳಂಬ ಮಾಡಿದರೆ ಅಪಾಯ ಎದುರಾಗಲಿದೆ ಎಂಬುದನ್ನು ಟಾಟಾ ಸ್ಪಷ್ಟವಾಗಿ ಮನಗಂಡಿದೆ.

ಟಾಟಾ ಟಿಯಾಗೊ ಎಎಂಟಿ ಕಾರು ಬಿಡುಗಡೆಗೆ ಮೀನಾಮೇಷ

ಇದರತ್ತ ಇನ್ನು ಒಂದು ಹೆಜ್ಜೆಯನ್ನು ಮುಂದಿಟ್ಟಿರುವ ಟಾಟಾ, ಎಎಂಟಿ ಕಾರಿನ ಟೆಸ್ಟಿಂಗ್ ಪ್ರಕ್ರಿಯೆಯನ್ನು ಆರಂಭಿಸಿದೆ. ಹಾಗಿದ್ದರೂ ತಾಂತ್ರಿಕತೆ ಬದಲಾಗಿ ವಿನ್ಯಾಸದಲ್ಲಿ ಹೆಚ್ಚಿನ ಬದಲಾವಣೆ ಕಂಡುಬರುವುದಿಲ್ಲ.

ಟಾಟಾ ಟಿಯಾಗೊ ಎಎಂಟಿ ಕಾರು ಬಿಡುಗಡೆಗೆ ಮೀನಾಮೇಷ

ಟಾಟಾ ನ್ಯಾನೋ ಪೆಟ್ರೋಲ್ ಹಾಗೂ ಜೆಸ್ಟ್ ಡೀಸೆಲ್ ಕಾರಿನಲ್ಲಿ ಎಎಂಟಿ ಆಯ್ಕೆಯನ್ನು ಟಾಟಾ ನೀಡುತ್ತಿದೆ. ಇದೀಗ ಹೊಸ ಟಿಯಾಗೊದ ಪೆಟ್ರೋಲ್ ಆವೃತ್ತಿಯನ್ನು ಇದನ್ನು ನಿರೀಕ್ಷಿಸಬಹುದಾಗಿದೆ.

ಟಾಟಾ ಟಿಯಾಗೊ ಎಎಂಟಿ ಕಾರು ಬಿಡುಗಡೆಗೆ ಮೀನಾಮೇಷ

ಇಟಲಿಯ ಐಕಾನಿಕ್ ಮ್ಯಾಗ್ನೆಟ್ಟಿ ಮರೆಲ್ಲಿ ಸಂಸ್ಥೆಯಿಂದ ಆಮದು ಮಾಡಲಾಗುವ ಎಫ್-ಟ್ರಾನಿಕ್ ಎಎಂಟಿ ಗೇರ್ ಬಾಕ್ಸ್, 1.2 ಲೀಟರ್ ರೆವೊಟ್ರಾನ್ ಪೆಟ್ರೋಲ್ ಎಂಜಿನ್ ನಲ್ಲಿ ಜೋಡಿಸಲಾಗುವುದು. ಇದು 114 ಎನ್ ಎಂ ತಿರುಗುಬಲದಲ್ಲಿ 83 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

English summary
Tata Tiago AMT To Be Launched In India Next Year
Story first published: Friday, December 23, 2016, 10:18 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark