ನಮ್ಮ ಬೆಂಗಳೂರು ಪ್ರವೇಶಿಸಿದ ಬಹುನಿರೀಕ್ಷಿತ ಟಿಯಾಗೊ
ದೇಶದ ಅತಿ ದೊಡ್ಡ ವಾಹನ ಸಂಸ್ಥೆ ಟಾಟಾ ಮೋಟಾರ್ಸ್, ಇತ್ತೀಚೆಗಷ್ಟೇ ಟಿಯಾಗೊ ಹ್ಯಾಚ್ ಬ್ಯಾಕ್ ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ. ಇದೀಗ ಸ್ಥಳೀಯ ಬಿಡುಗಡೆ ಕಾರ್ಯಕ್ರಮದ ಭಾಗವಾಗಿ ಬೆಂಗಳೂರಿನಲ್ಲಿ ಟಿಯಾಗೊ ಕಾರನ್ನು ಪರಚಯಿಸಿದೆ.
ಇದೇ ಸಂದರ್ಭದಲ್ಲಿ ಟಿಯಾಗೊ ಗ್ರಾಹಕರಿಗಾಗಿ ಹೊಸತಾದ 'ಸರ್ವೀಸ್ ಕನೆಕ್ಟ್' ಎಂಬ ಹೊಸ ಸರ್ವೀಸ್ ಅಪ್ಲಿಕೇಶನ್ ಗೂ ಚಾಲನೆ ನೀಡಲಾಗಿದೆ.

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ಬೆಂಗಳೂರು)
- ಟಿಯಾಗೊ ಎಕ್ಸ್‌ಬಿ ರೆವೊಟಾರ್ಕ್ ಡೀಸೆಲ್: 408,242 ರು.
- ಟಿಯಾಗೊ ಎಕ್ಸ್‌ಇ ರೆವೊಟಾರ್ಕ್ ಡೀಸೆಲ್: 443864 ರು.
- ಟಿಯಾಗೊ ಎಕ್ಸ್‌ಎಂ ರೆವೊಟಾರ್ಕ್ ಡೀಸೆಲ್: 483,527 ರು.
- ಟಿಯಾಗೊ ಎಕ್ಸ್‌ಟಿ ರೆವೊಟಾರ್ಕ್ ಡೀಸೆಲ್: 514073 ರು.
- ಟಿಯಾಗೊ ಎಕ್ಸ್‌ಝಡ್ ರೆವೊಟಾರ್ಕ್ ಡೀಸೆಲ್: 569409 ರು.
- ಟಿಯಾಗೊ ಎಕ್ಸ್‌ಬಿ ರೆವೊಟ್ರಾನ್ ಪೆಟ್ರೋಲ್: 372,484 ರು.
- ಟಿಯಾಗೊ ಎಕ್ಸ್‌ಎಂ ರೆವೊಟ್ರಾನ್ ಪೆಟ್ರೋಲ್: 402154 ರು.
- ಟಿಯಾಗೊ ಎಕ್ಸ್‌ಟಿ ರೆವೊಟ್ರಾನ್ ಪೆಟ್ರೋಲ್: 432694 ರು.
- ಟಿಯಾಗೊ ಎಕ್ಸ್‌ಝಡ್ ರೆವೊಟ್ರಾನ್ ಪೆಟ್ರೋಲ್: 489019 ರು.

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ಬೆಂಗಳೂರು)

ಮಾರುಕಟ್ಟೆಯಲ್ಲಿ ಇಂಡಿಕಾ ಇವಿ2 ಸ್ಥಾನವನ್ನು ತುಂಬಲಿರುವ ನೂತನ ಟಾಟಾ ಟಿಯಾಗೊ, ಈಗ ಮಾರಾಟದಲ್ಲಿರುವ ನ್ಯಾನೋ ಹಾಗೂ ಬೋಲ್ಟ್ ನಡುವಣ ಸ್ಥಾನದಲ್ಲಿ ಗುರುತಿಸಿಕೊಳ್ಳಲಿದೆ.

ಟಾಟಾ ಝಿಕಾದಲ್ಲಿ ಆಳವಡಿಸಲಾಗಿರುವ 1.2 ಲೀಟರ್ ರೆವೊಟ್ರಾನ್ ಪೆಟ್ರೋಲ್ ಎಂಜಿನ್ 84 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಇದರಂತೆ ಇದರ 1.05 ಲೀಟರ್ ರೆವೊಟಾರ್ಕ್ ಡೀಸೆಲ್ ಎಂಜಿನ್ 69 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಈ ಎರಡು ಎಂಜಿನ್ ಗಳು 5 ಸ್ಪೀಡ್ ಗೇರ್ ಬಾಕ್ಸ್ ಪಡೆಯಲಿದೆ.

ಇನ್ನೊಂದೆಡೆ ತನ್ನ ಗ್ರಾಹಕ ಸೇವೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದಿರುವ ಟಾಟಾ ಸಂಸ್ಥೆಯು ಖರೀದಿ ನಂತರದ ಅನುಭವವವನ್ನು ಮತ್ತಷ್ಟು ಸುಲಭಗೊಳಿಸಲು ಎಲ್ಲ ವೇಳೆಯಲ್ಲೂ ಸಮಸ್ಯೆ ಮುಕ್ತ ಸೇವಾ ಅನುಭವ ದೊರೆಯುವಂತಾಗಲು ಟಿಯಾಗೊ ಗ್ರಾಹಕರಿಗಾಗಿ ಹೊಸತಾದ ಸರ್ವಿಸ್ ಕನೆಕ್ಟ್ ಎಂಬ ಗ್ರಾಹಕ ಅಪ್ಲಿಕೇಷನ್ ತೆರೆದುಕೊಂಡಿದೆ.

ಟಾಟಾ ಟಿಯಾಗೊ ಸರ್ವಿಸ್ ಕೆನಕ್ಟ್ ಅಪ್ಲಿಕೇಷನ್ ಮುಖಾಂತರ ಉಚಿತ ಪಿಕಪ್ ಡ್ರಾಪ್ ಸೇವೆಗಳಲ್ಲದೆ ಸರ್ವಿಸ್ ಸ್ಟೇಷನ್ ನಲ್ಲಿ ರಾತ್ರಿಯ ಅವಧಿಗೆ ಕಾರನ್ನು ಇಟ್ಟುಕೊಳ್ಳಬೇಕಾದಾಗ ಟಾಟಾ ಮೋಟಾರ್ಸ್ ಸರ್ವಿಸ್ ಸಾಲದಾತ ಕಾರುಗಳನ್ನು ರಿಪೇರಿ ಸರ್ವೀಸ್ ಗೆ ನೀಡುತ್ತದೆ.

ಪುಣೆ, ಯುಕೆ ಮತ್ತು ಇಟಲಿಯಲ್ಲಿ ಸ್ಥಿತಗೊಂಡಿರುವ ಡಿಸೈನ್ ಸ್ಟುಡಿಯೋಗಳಲ್ಲಿ ವಿನ್ಯಾಸಗೊಳಿಸಲಾಗಿರುವ ನೂತನ ಟಿಯಾಗೊ ಅತ್ಯುತ್ತಮ ಚಲನಶೀಲತೆಯನ್ನು ಕಾಪಾಡಿಕೊಂಡಿದೆ.

ಷಡ್ಭುಜಾಕೃತಿಯ ಸಿಗ್ನೇಚರ್ ಗ್ರಿಲ್ ಮೇಲೆ ಟಾಟಾ ಲಾಂಛನ ಎದ್ದು ಕಾಣಿಸಲಿದೆ. ಇದು ಚಾಲಕರಿಗೆ ಆತ್ಮವಿಶ್ವಾಸವನ್ನು ತುಂಬಲಿದ್ದು, ಪ್ರೀಮಿಯಂ ಚಾಲನಾ ಅನುಭವ ನೀಡಲಿದೆ.

ಟಾಟಾ ಟಿಯಾಗೊದಲ್ಲಿರುವ ಸಿಟಿ ಮತ್ತು ಇಕೊ ಚಾಲನಾ ವಿಧಗಳು ಮಗದೊಂದು ವಿಶಿಷ್ಟತೆಯಾಗಿದೆ.

ಪರೀಕ್ಷಾ ಸ್ಥಿತಿಗಳ ಅಡಿಯಲ್ಲಿ, ರೆವೊಟ್ರಾನ್ 1.2ಲೀ ಪೆಟ್ರೋಲ್ ಮತ್ತು ರೆವೊಟಾರ್ಕ್ 1.05 ಲೀ ಡೀಸೆಲ್ ಎಂಜಿನ್ ಅನುಕ್ರಮವಾಗಿ 23.84 ಮತ್ತು 27.28 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರುತ್ತದೆ.

ನೂತನ ಟಿಯಾಗೊದಲ್ಲಿ ಹರ್ಮಾನ್ ಇನ್ಪೋಟೈನ್ಮೆಂಟ್ ವ್ಯವಸ್ಥೆಯು ಇರುತ್ತದೆ. ಹಾಗೆಯೇ ಟರ್ನ್ ಬೈ ಟರ್ನ್ ನೇವಿ ಮತ್ತು ಜ್ಯೂಕ್ ಕಾರ್ ಆಪ್ ಇತರ ಪ್ರಮುಖ ವೈಶಿಷ್ಟ್ಯಗಳಾಗಿದೆ.

ಸುರಕ್ಷತೆಗೂ ಹೆಚ್ಚಿನ ಆದ್ಯತೆ ಕೊಡಲಾಗಿದ್ದು, ಡ್ಯುಯಲ್ ಫ್ರಂಟ್ ಏರ್ ಬ್ಯಾಗ್ ಜೊತೆಗೆ ಎಬಿಎಸ್, ಇಬಿಡಿ, ಕಾರ್ನರ್ ಸ್ಟೆಬಿಲಿಟಿ ಕಂಟ್ರೋಲ್, ಇನ್ಪೋಟೈನ್ಮೆಂಟ್ ಸ್ಕ್ರೀನ್ ನಲ್ಲಿ ರಿಯರ್ ಪಾರ್ಕಿಂಗ್ ಸೆನ್ಸಾರ್ ಪರದೆ ಮುಂತಾದ ವ್ಯವಸ್ಥೆಗಳಿರಲಿದೆ.

ಆರು ಆಕರ್ಷಕ ಬಣ್ಣಗಳು
ಪಿಯರ್ಲ್ ಸೆಂಟ್ ವೈಟ್,
ಪ್ಲಾಟಿನಾಂ ಸಿಲ್ವರ್,
ಎಸ್ಪ್ರೆಸ್ಸೊ ಬ್ರೌನ್,
ಬೆರ್ರಿ ರೆಡ್,
ಸನ್ ರ್ಬಸ್ಟ್ ಆರೆಂಜ್,
ಸ್ಟ್ರೈಕರ್ ಬ್ಲೂ


Click it and Unblock the Notifications