ಟಿಯಾಗೊಗೆ ಹೆಚ್ಚಿದ ಬೇಡಿಕೆ; ಟಾಟಾ ಭರ್ಜರಿ ಪುನರಾಗಮನ?

By Nagaraja

ದೇಶದ ಅತಿ ದೊಡ್ಡ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್ ಇತ್ತೀಚೆಗಷ್ಟೇ ಟಿಯಾಗೊ ಹ್ಯಾಚ್ ಬ್ಯಾಕ್ ಕಾರನ್ನು ಬಿಡುಗಡೆಗೊಳಿಸಿತ್ತು. ಈಗ ಬಿಡುಗಡೆಯಾದ ಒಂದು ತಿಂಗಳೊಳಗೆ 15,000ಕ್ಕೂ ಹೆಚ್ಚು ಬುಕ್ಕಿಂಗ್ಸ್ ಗಿಟ್ಟಿಸಿಕೊಂಡಿದೆ.

ಟಾಟಾ ಸಂಸ್ಥೆಯು ನೀಡುವ ವಿವರಣೆಯಂತೆ ಟಿಯಾಗೊ ಕಾರನ್ನು ಈಗಾಗಲೇ 1,00,000ಕ್ಕೂ ಹೆಚ್ಚು ಮಂದಿ ವಿಚಾರಿಸಿದ್ದಾರೆ. ಇದು ಸಹ ಮಾರುಕಟ್ಟೆಯಲ್ಲಿ ಟಾಟಾ ಸಂಸ್ಥೆಗೆ ಧನಾತ್ಮಕ ಪರಿಣಾಮವನ್ನುಂಟು ಮಾಡಿದೆ.

ಟಿಯಾಗೊಗೆ ಹೆಚ್ಚಿದ ಬೇಡಿಕೆ; ಟಾಟಾ ಭರ್ಜರಿ ಪುನರಾಗಮನ?

2016 ಎಪ್ರಿಲ್ 06ರಂದು ಬಿಡುಗಡೆಯಾದ ಟಾಟಾ ಟಿಯಾಗೊ ಮೊದಲ ತಿಂಗಳಲ್ಲಿ 3,022 ಯುನಿಟ್ ಗಳಷ್ಟು ಮಾರಾಟವನ್ನು ಗಿಟ್ಟಿಸಿಕೊಂಡಿತ್ತು. ತನ್ಮೂಲಕ ಬಿಡುಗಡೆಯಾದ ಮೊದಲ ತಿಂಗಳಲ್ಲೇ ಟಾಟಾದ ಬೆಸ್ಟ್ ಸೆಲ್ಲಿಂಗ್ ಕಾರೆಂಬ ಗೌರವಕ್ಕೆ ಪಾತ್ರವಾಗಿತ್ತು.

ಟಿಯಾಗೊಗೆ ಹೆಚ್ಚಿದ ಬೇಡಿಕೆ; ಟಾಟಾ ಭರ್ಜರಿ ಪುನರಾಗಮನ?

ದೆಹಲಿ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ ಟಾಟಾ ಟಿಯಾಗೊ ಪೆಟ್ರೋಲ್ ಮತ್ತು ಡೀಸೆಲ್ ಆವೃತ್ತಿಗಳ ಪ್ರಾರಂಭಿಕ ಬೆಲೆ ಅನುಕ್ರಮವಾಗಿ 3.2 ಮತ್ತು 3.94 ಲಕ್ಷ ರು.ಗಳಾಗಿದೆ.

ಟಿಯಾಗೊಗೆ ಹೆಚ್ಚಿದ ಬೇಡಿಕೆ; ಟಾಟಾ ಭರ್ಜರಿ ಪುನರಾಗಮನ?

ಎಕ್ಸ್ ಬಿ, ಎಕ್ಸ್ ಇ, ಎಕ್ಸ್ ಎಂ, ಎಕ್ಸ್ ಟಿ ಮತ್ತು ಎಕ್ಸ್ ಝಡ್ ಗಳೆಂದ ವಿವಿಧ ವೆರಿಯಂಟ್ ಗಳಲ್ಲಿ ಲಭ್ಯವಿರುವ ಟಿಯಾಗೊ, ಕಳೆದ ತಿಂಗಳಲ್ಲಿ ಟಾಟಾ ಸಂಸ್ಥೆಗೆ ಶೇಕಡಾ 2.2ರಷ್ಟು ಮಾರಾಟ ವೃದ್ಧಿಸಲು ನೆರವಾಗಿತ್ತು.

ಟಿಯಾಗೊಗೆ ಹೆಚ್ಚಿದ ಬೇಡಿಕೆ; ಟಾಟಾ ಭರ್ಜರಿ ಪುನರಾಗಮನ?

ದರಲ್ಲಿರುವ 1.2 ಲೀಟರ್ ತ್ರಿ ಸಿಲಿಂಡರ್ ರವೊಟ್ರಾನ್ ಎಂಜಿನ್ 114 ಎನ್ ಎಂ ತಿರುಗುಬಲದಲ್ಲಿ 85 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಹಾಗೆಯೇ 1.05 ಲೀಟರ್ ತ್ರಿ ಸಿಲಿಂಡರ್ ರೆವೊಟಾರ್ಕ್ ಎಂಜಿನ್ 140 ಎನ್ ಎಂ ತಿರುಗುಬಲದಲ್ಲಿ 70 ಅಶ್ವಶಕ್ತಿ ಉತ್ಪಾದಿಸಲಿದೆ. ಅಂತೆಯೇ 5 ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿರುತ್ತದೆ.

ಟಿಯಾಗೊಗೆ ಹೆಚ್ಚಿದ ಬೇಡಿಕೆ; ಟಾಟಾ ಭರ್ಜರಿ ಪುನರಾಗಮನ?

ಮಹೀಂದ್ರ ಮೊಜೊ ಪೆಟ್ರೋಲ್ ಮತ್ತು ಡೀಸೆಲ್ ಆವೃತ್ತಿಗಳು ಅನುಕ್ರಮವಾಗಿ 23.84 ಮತ್ತು 27.28 ಲಕ್ಷ ರು.ಗಳಷ್ಟು ಮೈಲೇಜ್ ನೀಡುವಲ್ಲಿ ಸಕ್ಷಮವಾಗಿರಲಿದೆ.

Article Published On: Saturday, May 28, 2016, 17:09 [IST]
English summary
Tata Tiago Hits 15000 Bookings Within A Month
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+