ಲಿಯೊನೆಲ್ ಮೆಸ್ಸಿ ಮುಖಾಂತರ ಮಾರುತಿಗೆ ಹೊಡೆತ ನೀಡಲು ಟಾಟಾ 'ಟಿಯಾಗೊ' ಎಂಟ್ರಿ

Written By:

ಅಂತೂ ಕಾಯುವಿಕೆಗೆ ಕೊನೆಗೂ ವಿರಾಮ ಬಿದ್ದಿದ್ದು, ದೇಶದ ಅತಿ ದೊಡ್ಡ ವಾಹನ ತಯಾರಿಕ ಸಂಸ್ಥೆ ಟಾಟಾ ಮೋಟಾರ್ಸ್, ಅತಿ ನೂತನ ಟಿಯಾಗೊ ಹ್ಯಾಚ್ ಬ್ಯಾಕ್ ಕಾರನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.

ಆರಂಭಿಕ ಬೆಲೆ: 3.2 ಲಕ್ಷ ರು. (ಎಕ್ಸ್ ಶೋ ರೂಂ ದೆಹಲಿ)

ಟಾಟಾ ಟಿಯಾಗೊ; ಗುಣ ದೋಷ ವಿಮರ್ಶೆ

ಇದು ಬಿಡುಗಡೆಯ ಸುಸಂದರ್ಭದಲ್ಲಿ ಒದಗಿಸುತ್ತಿರುವ ಪರಿಚಯಾತ್ಮಕ ಬೆಲೆಯಾಗಿದ್ದು, ಹಾಗಾಗಿ ಇದರ ಗರಿಷ್ಠ ಪ್ರಯೋಜನ ಗಿಟ್ಟಿಸಿಕೊಳ್ಳಲು ಗ್ರಾಹಕರು ಬಹುಬೇಗನೇ ಟಾಟಾ ಟಿಯೊಗೊ ಬುಕ್ ಮಾಡಿಕೊಳ್ಳಬೇಕಾಗಿದೆ.

To Follow DriveSpark On Facebook, Click The Like Button
ಸೆಲೆರಿಯೊಗಿಂತಲೂ ಕಡಿಮೆ ಬೆಲೆ

ಸೆಲೆರಿಯೊಗಿಂತಲೂ ಕಡಿಮೆ ಬೆಲೆ

ಸ್ಪರ್ಧಾತ್ಮಕೆ ಬೆಲೆಗಳಲ್ಲಿ ಬಿಡುಗಡೆಯಾಗಿರುವ ಟಾಟಾ ಟಿಯಾಗೊ ತನ್ನ ಪ್ರತಿಸ್ಪರ್ಧಿಗಳಾದ ಸೆಲೆರಿಯೊಗಿಂತಲೂ 50,000 ಹಾಗೂ ಗ್ರ್ಯಾಂಡ್ ಐ10 ಗಿಂತಲೂ 1.2 ಲಕ್ಷ ರು.ಗಳಷ್ಟು ಕಡಿಮೆ ಬೆಲೆಯಲ್ಲಿ ಮಾರುಕಟ್ಟೆ ಪ್ರವೇಶಿಸಿದೆ.

ವೆರಿಯಂಟ್, ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

ವೆರಿಯಂಟ್, ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

ಪೆಟ್ರೋಲ್

ಎಕ್ಸ್‌ಬಿ: 3.20 ಲಕ್ಷ ರು.

ಎಕ್ಸ್‌ಇ: 3.59 ಲಕ್ಷ ರು.

ಎಕ್ಸ್‌ಎಂ: 3.89 ಲಕ್ಷ ರು.

ಎಕ್ಸ್‌ಟಿ: 4.19 ಲಕ್ಷ ರು.

ಎಕ್ಸ್‌ಝಡ್: 4.75 ಲಕ್ಷ ರು.

ವೆರಿಯಂಟ್, ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

ವೆರಿಯಂಟ್, ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

ಡೀಸೆಲ್

ಎಕ್ಸ್‌ಬಿ: 3.94 ಲಕ್ಷ ರು.

ಎಕ್ಸ್‌ಇ: 4.29 ಲಕ್ಷ ರು.

ಎಕ್ಸ್‌ಎಂ: 4.69 ಲಕ್ಷ ರು.

ಎಕ್ಸ್‌ಟಿ: 4.99 ಲಕ್ಷ ರು.

ಎಕ್ಸ್‌ಝಡ್: 5.54 ಲಕ್ಷ ರು.

ಡಿಸೈನ್ ನೆಕ್ಸ್ಟ್

ಡಿಸೈನ್ ನೆಕ್ಸ್ಟ್

ಟಾಟಾ ವಿನ್ಯಾಸದ ಮೇಲೆ ಹರಿಸಿರುವ ಗಮನದ ಪ್ರತಿರೂಪವೇ ಅತ್ಯುತ್ತಮ ಟಿಯಾಗೊ ಕಾರು ಸಿದ್ಧಗೊಂಡಿದೆ. ಇದರಲ್ಲಿ ಸಂಸ್ಥೆಯ ನೂತನ ಡಿಸೈನ್ ನೆಕ್ಸ್ಟ್ ತಂತ್ರಗಾರಿಕೆಯನ್ನು ಅನುಸರಿಸಲಾಗಿದೆ.

ಟಾಟಾ ಟಿಯಾಗೊ ಭರ್ಜರಿ ಎಂಟ್ರಿ

ಪುಣೆ, ಬ್ರಿಟನ್ ಹಾಗೂ ಇಟಲಿಯಲ್ಲಿ ಸ್ಥಿತಗೊಂಡಿರುವ ಡಿಸೈನ್ ಸ್ಟುಡಿಯೋಗಳ ಪರಿಶ್ರಮದಿಂದ ನೂತನ ಟಿಯಾಗೊ ಅಭಿವೃದ್ಧಿಪಡಿಸಿದೆ. ಇದು ಟಾಟಾದ ಭವಿಷ್ಯದ ವಾಹನಗಳತ್ತ ಮೆಲುಕು ಹಾಕುತ್ತಿದೆ.

ಟಾಟಾ ಟಿಯಾಗೊ ಭರ್ಜರಿ ಎಂಟ್ರಿ

ಇದರಲ್ಲಿರುವ ಹ್ಯೂಮಾನಿಟಿ ಲೈನ್, ಸ್ಲಿಂಗ್ ಶಾಟ್ ಲೈನ್, ಡೈಮಂಡ್ ಡಿಎಲ್‌ಒ ಕಾರಿಗೆ ಕಾಂಪಾಕ್ಟ್ ನೋಟ ನೀಡುತ್ತಿದ್ದು, ಪರಿಣಾಮಕಾರಿ ಎನಿಸಿಕೊಂಡಿದೆ. ಇದರ ಸಿಗ್ನೇಚರ್ ಗ್ರಿಲ್ ಮಧ್ಯಭಾಗದಲ್ಲಿ ಸಂಸ್ಥೆಯ ಲಾಂಛನ ಎದ್ದು ಕಾಣಿಸಲಿದೆ.

ಟಾಟಾ ಟಿಯಾಗೊ ಭರ್ಜರಿ ಎಂಟ್ರಿ

ಕಾರಿನೊಳಗೆ ಪ್ರೀಮಿಯಂ ಕಾರಿನಂತೆಯೇ ಭಾಸವಾಗಲಿದೆ. ಕ್ರೋಮ್ ಹ್ಯಾಂಡಲ್, ಫ್ಯಾಬ್ರಿಕ್ಸ್, ಬಣ್ಣ ಸಂಯೋಜನೆ, ಡ್ಯುಯಲ್ ಟೋನ್, ಏರ್ ವೆಂಟ್ಸ್, ಪ್ರೀಮಿಯಂ ಗ್ರಾಫಿಕ್ಸ್, ಎತ್ತರ ಹೊಂದಾಣಿಸಬಹುದಾದ ಹೆಡ್ ರೆಸ್ಟ್ ಮತ್ತು ಸೀಟು ಆರಾಮದಾಯಕ ಚಾಲನೆಯನ್ನು ಖಾತ್ರಿಪಡಿಸಲಿದೆ.

ಟಾಟಾ ಟಿಯಾಗೊ ಭರ್ಜರಿ ಎಂಟ್ರಿ

ಮುಂದಿನ ಪೀಳಿಗೆಯ ಹರ್ಮಾನ್ ಇನ್ಪೋಟೈನ್ಮೆಂಟ್ ಸಿಸ್ಟಂ ಡ್ಯಾಶ್ ಬೋರ್ಡ್ ನಲ್ಲಿರುವ ಪ್ರಮುಖ ವೈಶಿಷ್ಟ್ಯವಾಗಿರಲಿದೆ. ಅಲ್ಲದೆ 22 ಸ್ಟೋರೆಜ್ ಜಾಗವನ್ನು ಕೊಡಲಾಗಿದೆ.

ಟಾಟಾ ಟಿಯಾಗೊ ಭರ್ಜರಿ ಎಂಟ್ರಿ

ದೂರ ಪ್ರಯಾಣ ಅಥವಾ ವಾರಂತ್ಯದ ಪ್ರವಾಸಕ್ಕೆ ಸೂಕ್ತವಾಗುವ ರೀತಿಯಲ್ಲಿ 242 ಲೀಟರ್ ಗಳ ಢಿಕ್ಕಿ ಜಾಗವನ್ನು ಕೊಡಲಾಗಿದೆ.

ಹೊಸ ಎಂಜಿನ್

ಹೊಸ ಎಂಜಿನ್

ನೂತನ ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಟಿಯೊಗೊ ಲಭ್ಯವಾಗಲಿದೆ. ಇದರಲ್ಲಿ ರೆವೊಟ್ರಾನ್ 1.2 ಲೀಟರ್ ಪೆಟ್ರೋಲ್ ಮತ್ತು ರೆವೊಟಾರ್ಕ್ 1.05 ಲೀಟರ್ ಡೀಸೆಲ್ ಎಂಜಿನ್ ಆಳವಡಿಸಲಾಗಿದೆ.

ಟಾಟಾ ಟಿಯಾಗೊ ಭರ್ಜರಿ ಎಂಟ್ರಿ

ಇದರ ರೆವೊಟ್ರಾನ್ 1.2 ಲೀಟರ್ ಪೆಟ್ರೋಲ್ ಎಂಜಿನ್ 114 ಎನ್ ಎಂ ತಿರುಗುಬಲದಲ್ಲಿ 85 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಇನ್ನೊಂದೆಡೆ ರೆವೊಟಾರ್ಕ್ 1.05 ಲೀಟರ್ ಎಂಜಿನ್ 140 ಎನ್ ಎಂ ತಿರುಗುಬಲದಲ್ಲಿ 70 ಅಶ್ವಶಕ್ತಿಯನ್ನು ನೀಡಲಿದೆ.

ಬಹು ಚಾಲನಾ ವಿಧ

ಬಹು ಚಾಲನಾ ವಿಧ

ಈ ವಿಭಾಗದಲ್ಲಿ ಇದೇ ಮೊದಲ ಬಾರಿಗೆ ಬಹು ಚಾಲನಾ ವಿಧಗಳನ್ನು ಒದಗಿಸಲಾಗಿದೆ. ಗರಿಷ್ಠ ಇಂಧನ ಕ್ಷಮತೆಗಾಗಿ ಟಾಟಾ ಟಿಯಾಗೊದಲ್ಲಿ ಸಿಟಿ ಹಾಗೂ ಇಕೊ ಚಾಲನಾ ವಿಧವನ್ನು ನೀಡಲಾಗಿದೆ. ಇದಕ್ಕೆ ಅಡ್ವಾನ್ಸಡ್ ಎಂಜಿನ್ ಮ್ಯಾನೇಜ್ ಮೆಂಟ್ ಸಿಸ್ಟಂ ನೆರವಾಗಲಿದೆ.

ಸುರಕ್ಷತೆ

ಸುರಕ್ಷತೆ

ಸುರಕ್ಷತೆಗೂ ಹೆಚ್ಚಿನ ಆದ್ಯತೆ ಕೊಡಲಾಗಿದ್ದು, ಡ್ಯುಯಲ್ ಫ್ರಂಟ್ ಏರ್ ಬ್ಯಾಗ್ ಜೊತೆಗೆ ಎಬಿಎಸ್, ಇಬಿಡಿ, ಕಾರ್ನರ್ ಸ್ಟೆಬಿಲಿಟಿ ಕಂಟ್ರೋಲ್, ಇನ್ಪೋಟೈನ್ಮೆಂಟ್ ಸ್ಕ್ರೀನ್ ನಲ್ಲಿ ರಿಯರ್ ಪಾರ್ಕಿಂಗ್ ಸೆನ್ಸಾರ್ ಪರದೆ ಮುಂತಾದ ವ್ಯವಸ್ಥೆಗಳಿರಲಿದೆ.

ಟಾಟಾ ಟಿಯಾಗೊ ಭರ್ಜರಿ ಎಂಟ್ರಿ

ಇನ್ನು ಈ ವಿಭಾಗದಲ್ಲಿ ಇದೇ ಮೊದಲ ಬಾರಿಗೆ ಟರ್ನ್ ಬೈ ಟರ್ನ್ ನವಿ ಮತ್ತು ಜ್ಯೂಕ್ ಕಾರ್ ಅಪ್ಲಿಕೇಷನ್ ಗಳನ್ನು ಒದಗಿಸಲಾಗುತ್ತಿದೆ. ಇನ್ನೊಂದೆಡೆ ಇನ್ಪೋಟೈನ್ಮೆಂಟ್ ಸಿಸ್ಟಂನಲ್ಲಿ ಮ್ಯೂಸಿಕ್ ಜೊತೆಗೆ ಎಫ್, ಎಎಂ, ಯುಎಸ್ ಬಿ, ಐಪೊಡ್, ಆಕ್ಸ್, ಬ್ಲೂಯೂತ್ ಹಾಗೂ ಎಂಟು ಸ್ಪೀಕರ್ ಗಳ ಆಡಿಯೋ ಸಿಸ್ಟಂಗಳಿರುತ್ತದೆ.

ಆರು ಆಕರ್ಷಕ ಬಣ್ಣಗಳು

ಆರು ಆಕರ್ಷಕ ಬಣ್ಣಗಳು

ಪಿಯರ್ಲ್‌ ಸೆಂಟ್ ವೈಟ್,

ಪ್ಲಾಟಿನಾಂ ಸಿಲ್ವರ್,

ಎಸ್ಪ್ರೆಸ್ಸೊ ಬ್ರೌನ್,

ಬೆರ್ರಿ ರೆಡ್,

ಸನ್ ರ್ಬಸ್ಟ್ ಆರೆಂಜ್,

ಸ್ಟ್ರೈಕರ್ ಬ್ಲೂ

English summary
Tata Tiago Launched, Prices Start At Rs. 3.20 Lakhs
Please Wait while comments are loading...

Latest Photos