ಟಿಯಾಗೊಗೆ ಬೇಡಿಕೆ ಜಾಸ್ತಿಯಾದ ಬೆನ್ನಲ್ಲೇ ಬೆಲೆ ಏರಿಕೆ ಬಿಸಿ
ದೇಶದ ಅತಿ ದೊಡ್ಡ ವಾಹನ ಸಂಸ್ಥೆ ಟಾಟಾ ಮೋಟಾರ್ಸ್ ಬಿಡುಗಡೆ ಮಾಡಿರುವ ಟಾಟಾ ಟಿಯಾಗೊ ಹ್ಯಾಚ್ ಬ್ಯಾಕ್ ಕಾರಿಗೆ ಅತಿ ಹೆಚ್ಚು ಬೇಡಿಕೆ ಕಂಡುಬಂದಿದೆ. ಇದಾದ ಬೆನ್ನಲ್ಲೇ ಅಚ್ಚರಿಗೊಳಿಸುವ ಬೆಳವಣಿಗೆಯಲ್ಲಿ ತನ್ನ ಜನಪ್ರಿಯ ಹ್ಯಾಚ್ ಬ್ಯಾಕ್ ಕಾರಿನ ಬೆಲೆ ಏರಿಕೆಗೊಳಿಸಲು ಟಾಟಾ ಮೋಟಾರ್ಸ್ ನಿರ್ಧರಿಸಿದೆ.
ವಾಹನ ಮೂಲಗಳಿಂದ ಲಭ್ಯವಾಗಿರುವ ವರದಿಗಳ ಪ್ರಕಾರ ಟಾಟಾ ಟಿಯಾಗೊ ಈಗಾಗಲೇ 30,000ಕ್ಕೂ ಹೆಚ್ಚು ಬುಕ್ಕಿಂಗ್ ಗಿಟ್ಟಿಸಿಕೊಂಡಿದ್ದು, ಕಾಯುವಿಕೆ ಅವಧಿ ಎರಡು ತಿಂಗಳುಗಳಷ್ಟು ಕಾಲ ವಿಸ್ತರಿಸಿದೆ. ಈ ನಡುವೆ ಬೇಸ್ ವೆರಿಯಂಟ್ ಹೊರತುಪಡಿಸಿ ಟಿಯಾಗೊ ಪೆಟ್ರೋಲ್ ಹಾಗೂ ಡೀಸೆಲ್ ಆವೃತ್ತಿಗಳಿಗೆ 6,000 ರು.ಗಳಷ್ಟು ಬೆಲೆ ಏರಿಕೆಗೊಳಿಸಲು ಸಂಸ್ಥೆಯು ನಿರ್ಧರಿಸಿದೆ.

ಇದಕ್ಕೂ ಮೊದಲು ಮುಂಬೈ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ ಪೆಟ್ರೋಲ್ ಹಾಗೂ ಡೀಸೆಲ್ ಆವೃತ್ತಿಗಳಿಗೆ ಅನುಕ್ರಮವಾಗಿ 3.39 ಹಾಗೂ 5.84 ಲಕ್ಷ ರು.ಗಳ ಬೆಲೆಯಲ್ಲಿ ಬಿಡುಗಡೆಗೊಳಿಸಲಾಗಿತ್ತು. ಆದರೆ ಈಗ ಬೇಸ್ ವೆರಿಯಂಟ್ ಹೊರತುಪಡಿಸಿ ಇತರೆಲ್ಲ ಪೆಟ್ರೋಲ್ ಹಾಗೂ ಡೀಸೆಲ್ ವೆರಿಯಂಟ್ ಗಳಿಗೆ ಬೆಲೆ ಏರಿಕೆಯನ್ನು ಘೋಷಿಸಲಾಗಿದೆ.

ಪೆಟ್ರೋಲ್
ಎಕ್ಸ್‌ಬಿ
ಹೊಸ ದರ: 3.39 ಲಕ್ಷ ರು.
ಹಳೆಯ ದರ: 3.39 ಲಕ್ಷ ರು.
ಬದಲಾವಣೆ: ಇಲ್ಲ

ಪೆಟ್ರೋಲ್
ಎಕ್ಸ್‌ಇ
ಹೊಸ ದರ: 3.86 ಲಕ್ಷ ರು.
ಹಳೆಯ ದರ: 3.80 ಲಕ್ಷ ರು.
ಬದಲಾವಣೆ: 5,878 ರು. ಏರಿಕೆ

ಪೆಟ್ರೋಲ್
ಎಕ್ಸ್‌ಎಂ
ಹೊಸ ದರ: 4.17 ಲಕ್ಷ ರು.
ಹಳೆಯ ದರ: 4.11 ಲಕ್ಷ ರು.
ಬದಲಾವಣೆ: 5,878 ರು. ಏರಿಕೆ

ಪೆಟ್ರೋಲ್
ಎಕ್ಸ್‌ಟಿ
ಹೊಸ ದರ: 4.49 ಲಕ್ಷ ರು.
ಹಳೆಯ ದರ: 4.43 ಲಕ್ಷ ರು.
ಬದಲಾವಣೆ: 5,878 ರು. ಏರಿಕೆ

ಪೆಟ್ರೋಲ್
ಎಕ್ಸ್‌ಝಡ್
ಹೊಸ ದರ: 5.07 ಲಕ್ಷ ರು.
ಹಳೆಯ ದರ: 5.00 ಲಕ್ಷ ರು.
ಬದಲಾವಣೆ: 6401 ರು. ಏರಿಕೆ

ಡೀಸೆಲ್
ಎಕ್ಸ್‌ಬಿ
ಹೊಸ ದರ: 4.18 ಲಕ್ಷ ರು.
ಹಳೆಯ ದರ: 4.18 ಲಕ್ಷ ರು.
ಬದಲಾವಣೆ: ಇಲ್ಲ

ಡೀಸೆಲ್
ಎಕ್ಸ್‌ಇ
ಹೊಸ ದರ: 4.60 ಲಕ್ಷ ರು.
ಹಳೆಯ ದರ: 4.54 ಲಕ್ಷ ರು.
ಬದಲಾವಣೆ: 5878 ರು. ಏರಿಕೆ

ಡೀಸೆಲ್
ಎಕ್ಸ್‌ಎಂ
ಹೊಸ ದರ: 5.01 ಲಕ್ಷ ರು.
ಹಳೆಯ ದರ: 4.95 ಲಕ್ಷ ರು.
ಬದಲಾವಣೆ: 5878 ರು. ಏರಿಕೆ

ಡೀಸೆಲ್
ಎಕ್ಸ್‌ಟಿ
ಹೊಸ ದರ: 5.33 ಲಕ್ಷ ರು.
ಹಳೆಯ ದರ: 5.27 ಲಕ್ಷ ರು.
ಬದಲಾವಣೆ: 5,919 ರು. ಏರಿಕೆ

ಡೀಸೆಲ್
ಎಕ್ಸ್‌ಝಡ್
ಹೊಸ ದರ: 5.90 ಲಕ್ಷ ರು.
ಹಳೆಯ ದರ: 5.84 ಲಕ್ಷ ರು.
ಬದಲಾವಣೆ: 6,401 ರು. ಏರಿಕೆ

ಅಂದ ಹಾಗೆ ಪೆಟ್ರೋಲ್ ಹಾಗೂ ಡೀಸೆಲ್ ವೆರಿಯಂಟ್ ಗಳಲ್ಲಿ ಟಿಯಾಗೊ ಲಭ್ಯವಿರುತ್ತದೆ. ಇದರ 1.2 ಲೀಟರ್ ರೆವೊಟ್ರಾನ್ ಪೆಟ್ರೋಲ್ ಎಂಜಿನ್ 114 ಎನ್ ಎಂ ತಿರುಗುಬಲದಲ್ಲಿ 85 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಹಾಗೆಯೇ 1.1 ಲೀಟರ್ ರೆವೊಟಾರ್ಕ್ ಡೀಸೆಲ್ ಎಂಜಿನ್ 140 ಎನ್ ಎಂ ತಿರುಗುಬಲದಲ್ಲಿ 70 ಅಶ್ವಶಕ್ತಿಯನ್ನು ನೀಡಲಿದೆ. ಇವರೆಡು ಐದು ಸ್ಪೀಡ್ ಗೇರ್ ಬಾಕ್ಸ್ ಹೊಂದಿದೆ.

ಇನ್ನು ಮೈಲೇಜ್ ವಿಚಾರಕ್ಕೆ ಬಂದಾಗ ಪೆಟ್ರೋಲ್ ಹಾಗೂ ಡೀಸೆಲ್ ಆವೃತ್ತಿಗಳು ಪ್ರತಿ ಲೀಟರ್ ಗೆ ಅನುಕ್ರಮವಾಗಿ 23.84 ಹಾಗೂ 27.28 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ.


Click it and Unblock the Notifications








