ಬಹುನಿರೀಕ್ಷಿತ ಟಾಟಾ ಝಿಕಾ ಬಿಡುಗಡೆಗೆ ದಿನಗಣನೆ ಆರಂಭ
ಬಹುನಿರೀಕ್ಷಿತ ಟಾಟಾ ಝಿಕಾ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ದೇಶದ ಅತಿ ದೊಡ್ಡ ಟಾಟಾ ಮೋಟಾರ್ಸ್ ಸಂಸ್ಥೆಯು ಟಾಟಾ ಝಿಕಾ ಬಿಡುಗಡೆ ದಿನಾಂಕ ಘೋಷಿಸುವ ಮೂಲಕ ಈ ಸಂಬಂಧ ಹುಟ್ಟಿಕೊಂಡಿರುವ ಊಹಾಪೋಹಾಗಳಿಗೆ ತೆರೆ ಬಿದ್ದಿದೆ.
ಟಾಟಾ ಝಿಕಾ ಬಿಡುಗಡೆ ದಿನಾಂಕ: 2015 ಜನವರಿ 20
ಅತಿ ನೂತನ ಟಾಟಾ ಝಿಕಾ ಹ್ಯಾಚ್ ಬ್ಯಾಕ್ ಕಾರು 2015 ಜನವರಿ 20ರಂದು ಬಿಡುಗಡೆಯಾಗಲಿದೆ. ಇದು ಸಂಪೂರ್ಣವಾಗಿ ಹೊಸ ತಳಹದಿಯಲ್ಲಿ ನಿರ್ಮಾಣವಾಗಲಿದ್ದು, ಈಗ ಮಾರಾಟದಲ್ಲಿರುವ ಬೋಲ್ಟ್ ಕೆಳಗಡೆ ಗುರುತಿಸಿಕೊಳ್ಳಲಿದೆ.

ಟಾಟಾ ಝಿಕಾದಲ್ಲಿ ಆಳವಡಿಸಲಾಗಿರುವ 1.2 ಲೀಟರ್ ಪೆಟ್ರೋಲ್ ಎಂಜಿನ್ 84 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಇದರಂತೆ ಇದರ 1.05 ಲೀಟರ್ ಡೀಸೆಲ್ ಎಂಜಿನ್ 69 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಈ ಎರಡು ಎಂಜಿನ್ ಗಳು 5 ಸ್ಪೀಡ್ ಗೇರ್ ಬಾಕ್ಸ್ ಪಡೆಯಲಿದ್ದು, ಭವಿಷ್ಯದಲ್ಲಿ ಎಎಂಟಿ ಗೇರ್ ಬಾಕ್ಸ್ ಸಹ ಸೇರ್ಪಡೆಯಾಗಲಿದೆ.

ಇನ್ನು ಮನರಂಜನೆಗೂ ಹೆಚ್ಚಿನ ಆದ್ಯತೆ ಕೊಡಲಾಗಿದ್ದು, ಬೋಲ್ಟ್ ನಲ್ಲಿರುವುದಕ್ಕೆ ಸಮಾನವಾದ ಹರ್ಮಾನ್ ಮ್ಯೂಸಿಕ್ ಸಿಸ್ಟಂ ಕಂಡುಬರಲಿದೆ. ಇದರಲ್ಲದೆ 22 ಸ್ಟೋರೆಜ್ ಜಾಗ, ನೇವಿಗೇಷನ್ ಸಿಸ್ಟಂ, ಪಾರ್ಕಿಂಗ್ ಸೆನ್ಸಾರ್ ಮುಂತಾದ ಸೌಲಭ್ಯಗಳಿರಲಿದೆ.

ಸುರಕ್ಷತೆಗೂ ಹೆಚ್ಚಿನ ಆದ್ಯತೆ ಕೊಡಲಾಗಿದ್ದು ಡ್ಯುಯಲ್ ಏರ್ ಬ್ಯಾಗ್ ಜೊತೆ ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ (ಎಬಿಎಸ್), ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯುಷನ್ (ಇಬಿಡಿ), ಕಾರ್ನರ್ ಸ್ಟೆಬಿಲಿಟಿ ಕಂಟ್ರೋಲ್ ಮುಂತಾದ ವ್ಯವಸ್ಥೆಗಳಿರಲಿದೆ.

ನೂತನ ಟಾಟಾ ಝಿಕಾ ನಾಲ್ಕು ಲಕ್ಷ ರು.ಗಳ ಬೆಲೆ ಪರಿಧಿಯಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಇದು ಪ್ರಮುಖವಾಗಿಯೂ ಹ್ಯುಂಡೈ ಗ್ರಾಂಡ್ ಐ10 ಇತ್ಯಾದಿ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಲಿದೆ.

ಮಾರುಕಟ್ಟೆಯಲ್ಲಿ ಇಂಡಿಕಾ ಸ್ಥಾನವನ್ನು ತುಂಬಲಿರುವ ನೂತನ ಟಾಟಾ ಝಿಕಾ ಕಾರಿನಲ್ಲಿ ಡಿಸೈನ್ ನೆಕ್ಸ್ಟ್, ಡ್ರೈವ್ ನೆಕ್ಸ್ಟ್ ಹಾಗೂ ಕನೆಕ್ಟ್ ನೆಕ್ಸ್ಟ್ ತಂತ್ರಗಾರಿಕೆಯನ್ನು ಅನುಸರಿಸಲಾಗಿದೆ.


Click it and Unblock the Notifications