ನಿಮಗೆ ಅತಿ ಹೆಚ್ಚು ಮಾರಾಟವಾಗುವ ಕಾರೇ ಬೇಕೇ?

By Nagaraja

ಭಾರತೀಯ ವಾಹನ ಮಾರುಕಟ್ಟೆ ಶಿಪ್ರ ಗತಿಯಲ್ಲಿ ಬೆಳೆದು ಬರುತ್ತಿದ್ದು, ಪ್ರತಿಷ್ಠಿತ ಜಾಗತಿಕ ಬ್ರ್ಯಾಂಡ್ ಗಳು ದೇಶದತ್ತ ಗಮನ ಕೇಂದ್ರಿಕರಿಸಿದೆ. ದೇಶದ ವಾಹನ ಮಾರಾಟದ ಅಂಕಿಅಂಶಗಳನ್ನು ನಿಕಟವಾಗಿ ಪರಿಶೀಲಿಸುತ್ತಿರುವ ಮುಂಚೂಣಿಯ ಸಂಸ್ಥೆಗಳು ಅದಕ್ಕನುಗುಣವಾಗಿ ಹೊಸ ಹೊಸ ಮಾದರಿಗಳನ್ನು ಪರಿಚಯಿಸುತ್ತಿದೆ.

2014-2015ನೇ ಆರ್ಥಿಕ ಸಾಲಿಗೆ ಹೋಲಿಸಿದಾಗ 2015-2016ರಲ್ಲಿ ಸಾಕಷ್ಟು ಬದಲಾವಣೆಗಳು ಕಂಡುಬಂದಿದ್ದು, ಉಪಯುಕ್ತ ವಾಹನಗಳಿಗೆ ಬೇಡಿಕೆ ಹೆಚ್ಚಾಗುತ್ತಿರುವ ಅಂಶ ಕಂಡುಬಂದಿದೆ. ಇನ್ನೊಂದೆಡೆ ದೇಶದ ಜನಪ್ರಿಯ ಸಂಸ್ಥೆ ಮಾರುತಿ ಸುಜುಕಿ ತನ್ನ ಅಧಿಪತ್ಯವನ್ನು ಮುಂದುವರಿಸಿದೆ. ಪ್ರಸ್ತುತ ಲೇಖನದಲ್ಲಿ 2016 ಆರ್ಥಿಕ ಸಾಲಿನಲ್ಲಿ ಅತಿ ಹೆಚ್ಚು ಮಾರಾಟಗೊಂಡಿರುವ ಅಗ್ರ 10 ಪ್ರಯಾಣಿಕ ಕಾರುಗಳ ಬಗ್ಗೆ ಮಾಹಿತಿಯನ್ನು ಕೊಡಲಿದ್ದೇವೆ.

10. ಅಮೇಜ್

10. ಅಮೇಜ್

ಕಳೆದ ವರ್ಷವೂ ಕೊನೆಯ ಸ್ಥಾನದಲ್ಲಿದ್ದ ಹೋಂಡಾ ಅಮೇಜ್ ಪರಿಣಾಮಕಾರಿ ಎನಿಸಿಕೊಳ್ಳುವಲ್ಲಿ ವಿಫಲವಾಗಿತ್ತಲ್ಲದೆ ಒಟ್ಟಾರೆ ಮಾರಾಟವು 66703 ಯುನಿಟ್ ಗಳಿಂದ 54594 ಯುನಿಟ್ ಗಳಿಗೆ ಇಳಿಕೆಯಾಗಿದೆ.

ವ್ಯತ್ಯಾಸ: ಶೇಕಡಾ 18ರಷ್ಟು ಇಳಿಕೆ

09. ಹ್ಯುಂಡೈ ಇಯಾನ್

09. ಹ್ಯುಂಡೈ ಇಯಾನ್

ಆಲ್ಟೊ ಪ್ರತಿಸ್ಪರ್ಧಿ ಹ್ಯುಂಡೈ ಕಳೆದ ವರ್ಷ ಪಟ್ಟಿಯಲ್ಲೇ ಇರಲಿಲ್ಲ. ಆದರೆ 2015-16ನೇ ಆರ್ಥಿಕ ಸಾಲಿನಲ್ಲಿ ಗಮನಾರ್ಹ ಪ್ರದರ್ಶನ ನೀಡುವ ಮೂಲಕ 68199 ಯುನಿಟ್ ಗಳ ಮಾರಾಟ ದಾಖಲಿಸಿದೆ.

ವ್ಯತ್ಯಾಸ: ಶೇಕಡಾ 13ರಷ್ಟು ಇಳಿಕೆ

08. ಸಿಟಿ

08. ಸಿಟಿ

ಎಂಟನೇ ಸ್ಥಾನವನ್ನು ಮಗದೊಮ್ಮೆ ಕಾಯ್ದುಕೊಂಡಿರುವ ಹೋಂಡಾ ಸಿಟಿ 77384 ಯುನಿಟ್ ಗಳಿಂದ 77548 ಯುನಿಟ್ ಗಳಿಗೆ ಏರಿಕೆ ಕಂಡಿದೆ.

ವ್ಯತ್ಯಾಸ: ಶೇಕಡಾ 0.2

07. ಸೆಲೆರಿಯೊ

07. ಸೆಲೆರಿಯೊ

ಎಎಂಟಿ ಆಯ್ಕೆಯು ಇತರೆ ಕಾರುಗಳಿಂದ ಸೆಲೆರಿಯೊವನ್ನು ಭಿನ್ನವಾಗಿಸುತ್ತದೆ. ಮಾರಾಟದಲ್ಲೂ ಇದು ಪ್ರತಿಫಲಿಸುತ್ತಿದ್ದು, ಕಳೆದ ವರ್ಷವಿದ್ದ 68143 ಯುನಿಟ್ ಗಳ ಮಾರಟದೊಂದಿಗೆ ಒಂಬತ್ತನೇ ಸ್ಥಾನದಲ್ಲಿದ್ದ ಸೆಲೆರಿಯೊ 2016 ಆರ್ಥಿಕ ಸಾಲಿನಲ್ಲಿ 87428 ಯುನಿಟ್ ಗಳ ಮಾರಾಟದೊಂದಿಗೆ ಏಳನೇ ಸ್ಥಾನಕ್ಕೆ ನೆಗೆತ ಕಂಡಿದೆ.

ವ್ಯತ್ಯಾಸ: ಶೇಕಡಾ 28ರಷ್ಟು ಏರಿಕೆ

06. ಎಲೈಟ್ ಐ20

06. ಎಲೈಟ್ ಐ20

ಎಲೈಟ್ ಐ20 ಸಹ ಹ್ಯುಂಡೈ ಪಾಲಿಗೆ ವರದಾನವಾಗಿದ್ದು, ಒಟ್ಟಾರೆ ಮಾರಾಟದಲ್ಲಿ ಭರ್ಜರಿ ಏರುಗತಿ ಸಾಧಿಸಿದೆ. 2015ನೇ ಆರ್ಥಿಕ ಸಾಲಿನಲ್ಲಿದ್ದ 77747 ಯುನಿಟ್ ಗಳಿಂದ ಎಲೈಟ್ ಐ20 2016 ಆರ್ಥಿಕ ಸಾಲಿನಲ್ಲಿ 126028 ಯುನಿಟ್ ಗಳಿಗೆ ಏರುಗತಿ ಸಾಧಿಸಿದೆ.

ವ್ಯತ್ಯಾಸ: ಶೇಕಡಾ 62ರಷ್ಟು ಏರಿಕೆ.

05. ಗ್ರಾಂಡ್ ಐ10

05. ಗ್ರಾಂಡ್ ಐ10

ಹ್ಯುಂಡೈ ಗ್ರಾಂಡ್ ಐ10 ಅತ್ಯುತ್ತಮ ಹ್ಯಾಚ್ ಬ್ಯಾಕ್ ಕಾರುಗಳಲ್ಲಿ ಒಂದಾಗಿದ್ದು ಕಳೆದ ವರ್ಷ 99088 ಯುನಿಟ್ ಗಳಿಂದ 2016ನೇ ಆರ್ಥಿಕ ಸಾಲಿನಲ್ಲಿ ಒಟ್ಟು 126181 ಯುನಿಟ್ ಗಳ ಮಾರಾಟವನ್ನು ಗಿಟ್ಟಿಸಿಕೊಂಡಿದೆ.

ವ್ಯತ್ಯಾಸ: ಶೇಕಡಾ 27ರಷ್ಟು ಏರಿಕೆ

04. ವ್ಯಾಗನಾರ್

04. ವ್ಯಾಗನಾರ್

ಮೊದಲ ನಾಲ್ಕು ಸ್ಥಾನಗಳಲ್ಲಿ ಮಾರುತಿ ತನ್ನ ಅಧಿಪತ್ಯವನ್ನು ಮುಂದುವರಿಸಿದೆ. ಕಳೆದ ವರ್ಷ 161250 ಯುನಿಟ್ ಗಳಿಷ್ಟಿದ್ದ ವ್ಯಾಗನಾರ್ ಈ ಸಾಲಿನಲ್ಲಿ ಒಟ್ಟು 169555 ಯುನಿಟ್ ಗಳ ಮಾರಾಟ ದಾಖಲಿಸಿದೆ.

ವ್ಯತ್ಯಾಸ: ಶೇಕಡಾ 5ರಷ್ಟು ಏರಿಕೆ.

03. ಮಾರುತಿ ಸ್ಟಿಫ್ಟ್

03. ಮಾರುತಿ ಸ್ಟಿಫ್ಟ್

ದೇಶದ ಸರ್ವಕಾಲಿಕ ಶ್ರೇಷ್ಠ ಹ್ಯಾಚ್ ಬ್ಯಾಕ್ ಕಾರು ಎಂಬುದನ್ನು ನಿರೂಪಿಸಿರುವ ಮಾರುತಿ ಸುಜುಕಿ ಸ್ವಿಫ್ಟ್ ಒಟ್ಟಾರೆ ಮಾರಾಟದಲ್ಲಿ ಕೊಂಚ ಹಿನ್ನಡೆಕ್ಕೊಳಗಾಗಿದೆ. ಕಳೆದ ವರ್ಷ 201338 ಯುನಿಟ್ ಗಳಷ್ಟು ಮಾರಾಟ ಸಾಧಿಸಿದ್ದ ಸ್ವಿಫ್ಟ್ 2016ರಲ್ಲಿ 195043 ಯುನಿಟ್ ಗಳ ಮಾರಾಟ ಕಂಡಿದೆ.

ವ್ಯತ್ಯಾಸ: ಶೇಕಡಾ 4ರಷ್ಟು

02. ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್

02. ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್

ಕಳೆದ ವರ್ಷ ಮೂರನೇ ಸ್ಥಾನದಲ್ಲಿದ್ದ ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ಎರಡನೇ ಸ್ಥಾನಕ್ಕೆ ಜಿಗಿತ ಕಂಡಿದೆ. ಅಲ್ಲದೆ 192010 ಯುನಿಟ್ ಗಳಿಂದ 199100 ಯುನಿಟ್ ಗಳಿಗೆ ಏರಿಕೆಯನ್ನು ಸಾಧಿಸಿದೆ.

ವ್ಯತ್ಯಾಸ: ಶೇಕಡಾ 4ರಷ್ಟು ಏರಿಕೆ

01. ಮಾರುತಿ ಆಲ್ಟೊ

01. ಮಾರುತಿ ಆಲ್ಟೊ

ಕಳೆದ ವರ್ಷಕ್ಕೆ ಹೋಲಿಸಿದಾಗ ಮಾರಾಟದಲ್ಲಿ ಕೊಂಚ ಮಟ್ಟಿನ ಇಳಿಕೆ ಕಂಡುಬಂದರೂ ಮಾರುತಿ ಸುಜುಕಿ ಆಲ್ಟೊ ದೇಶದ ಜನಪ್ರಿಯ ಕಾರು ಎಂಬುದನ್ನು ಮಗದೊಮ್ಮೆ ಸಾಬೀತುಪಡಿಸಿದೆ. 2015ನೇ ಆರ್ಥಿಕ ಸಾಲಿನಲ್ಲಿ 264492 ಯುನಿಟ್ ಗಳ ಮಾರಾಟ ಕಂಡುಕೊಂಡಿರುವ ಮಾರುತಿ ಸುಜುಕಿ 2016ರಲ್ಲಿ ಒಟ್ಟಾರೆಯಾಗಿ 263422 ಯುನಿಟ್ ಗಳ ಮಾರಾಟವನ್ನು ಗಿಟ್ಟಿಸಿಕೊಂಡಿದೆ.

ವ್ಯತ್ಯಾಸ: ಶೇಕಡಾ 0.4ರಷ್ಟು ಇಳಿಕೆ

More from DriveSpark

Article Published On: Saturday, April 16, 2016, 16:27 [IST]
English summary
Top 10 most sold cars in India in fiscal 2016
Read more on ಟಾಪ್ 10 top 10
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+