10 ಲಕ್ಷ ಬಜೆಟ್‌ನಲ್ಲಿ ಲಭ್ಯವಾಗುವ 10 ಸೇಫ್ ಕಾರುಗಳು
2017ರ ವೇಳೆಯಾಗುವಾಗ ದೇಶದೆಲ್ಲ ಕಾರುಗಳಿಗೆ ಢಿಕ್ಕಿ ಪರೀಕ್ಷೆ ಕಡ್ಡಾಯವಾಗಲಿರುವಂತೆಯೇ ವಾಹನಗಳ ಭದ್ರತೆಯಲ್ಲೂ ಕ್ರಾಂತಿಕಾರಿ ಬದಲಾವಣೆಗಳು ಸಂಭವಿಸಲಿದೆ. ಯುರೋಪ್ ಎನ್‌ಸಿಎಪಿ ಕ್ರಾಶ್ ಟೆಸ್ಟ್ ಮಾದರಿಯಲ್ಲಿ ಭಾರತದಲ್ಲೂ ಅಪಘಾತ ಪರೀಕ್ಷೆಯನ್ನು ಕಡ್ಡಾಯಗೊಳಿಸಲಾಗುವುದು.
ವಿಶ್ವ ದರ್ಜೆಗೆ ಸಮಾನವಾಗಿ ಸುರಕ್ಷಾ ಮಾನದಂಡಗಳನ್ನು ಕಡ್ಡಾಯಗೊಳಿಸುವುದರೊಂದಿಗೆ ಪ್ರಯಾಣಿಕರು ಹೆಚ್ಚು ಸುರಕ್ಷಿತವಾಗಿ ಸಂಚರಿಸಬಹುದಾಗಿದೆ. ಭಾರತ್ ನ್ಯೂ ವೆಹಿಕಲ್ ಸೇಫ್ಟಿ ಅಸ್ಸೆಸ್ಮೆಂಟ್ ಪ್ರೋಗ್ರಾಂ (ಬಿಎನ್‌ವಿಎಸ್‌ಎಪಿ) ಜಾರಿಯಾಗಲಿರುವಂತೆಯೇ ಸದ್ಯ 10 ಲಕ್ಷ ರುಪಾಯಿಗಳ ಬೆಲೆ ಪರಿಧಿಯಲ್ಲಿ ದೇಶದಲ್ಲಿ ಲಭ್ಯವಿರುವ 10 ಸುರಕ್ಷಿತ ಕಾರುಗಳ ಬಗ್ಗೆ ಮಾಹಿತಿಯನ್ನು ಕೊಡುವ ಪ್ರಯತ್ನವನ್ನು ಇಲ್ಲಿ ಮಾಡಲಿದ್ದೇವೆ.

10. ಸ್ಕೋಡಾ ರಾಪಿಡ್
ಗುಣಮಟ್ಟದ ಕಾರುಗಳಿಗೆ ಮಗದೊಂದು ಉದಾಹರಣೆ ಸ್ಕೋಡಾ ಆಗಿದ್ದು, ತನ್ನ ರಾಪಿಡ್ ಕಾರಿನಲ್ಲೂ ಪ್ರಯಾಣಿಕರ ಭದ್ರತೆಗೆ ಹೆಚ್ಚಿನ ಆದ್ಯತೆ ಕೊಡಲಾಗಿದೆ.

09. ಹೋಂಡಾ ಜಾಝ್
ಕೆಲವು ಸಮಯಗಳ ಹಿಂದೆಯಷ್ಟೇ ಮಾರುಕಟ್ಟೆ ಪ್ರವೇಶಿಸಿರುವ ಹೋಂಡಾ ಜಾಝ್ ಈ ನಡುವೆ ವಾಹನ ಪ್ರೇಮಿಗಳ ಮನ ಗೆಲ್ಲುವಲ್ಲಿ ಯಶ ಕಂಡಿದೆ. ಪ್ರಸ್ತುತ ಹೋಂಡಾ ಜಾಝ್ 10 ಲಕ್ಷ ಬೆಲೆ ಪರಿಧಿಯಲ್ಲಿ ಲಭ್ಯವಾಗುವ 10 ಸುರಕ್ಷಿತ ಕಾರುಗಳ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದೆ.

08. ಫೋಕ್ಸ್ ವ್ಯಾಗನ್ ವೆಂಟೊ
ಜರ್ಮನಿಯ ಪ್ರಖ್ಯಾತ ಸಂಸ್ಥೆ ಫೋಕ್ಸ್ ವ್ಯಾಗನ್ ತನ್ನ ಜನಪ್ರಿಯ ವೆಂಟೊ ಮಾದರಿಯಲ್ಲೂ ಗರಿಷ್ಠ ಸುರಕ್ಷಾ ಮಾನದಂಡಗಳನ್ನು ಒದಗಿಸುತ್ತಿದೆ.

07. ಫೋಕ್ಸ್ ವ್ಯಾಗನ್ ಪೊಲೊ
ಮಾಲಿನ್ಯ ಮೋಸ ಹಗರಣದಿಂದಾಗಿ ಭಾರಿ ಹಿನ್ನಡೆಗೊಳಗಾಗಿರುವ ಫೋಕ್ಸ್ ವ್ಯಾಗನ್ ತನ್ನ ಶ್ರೇಣಿಯ ದೇಹ ರಚನೆಯಲ್ಲಿ ಮಾತ್ರ ಯಾವುದೇ ರಾಜಿಗೂ ತಯಾರಾಗಿಲ್ಲ ಎಂಬುದು ಅಷ್ಟೇ ಸತ್ಯ.

06. ಹ್ಯುಂಡೈ ಎಲೈಟ್ ಐ20
ಹ್ಯುಂಡೈ ಎಲೈಟ್ ಐ20 ಯಶಸ್ಸಿನ ಹಾದಿಯೇ ಕಾರಿನಲ್ಲಿರುವ ಸುರಕ್ಷಾ ವೈಶಿಷ್ಟ್ಯಗಳಿಗೆ ಕೈಗನ್ನಡಿಯಾಗಿದೆ. ಈಗಲೂ ಎಲೈಟ್ ಐ20 ಸಾಧಿಸುತ್ತಿರುವ ಗರಿಷ್ಠ ಮಾರಾಟಕ್ಕೆ ಇದುವೇ ಸಾಕ್ಷಿಯಾಗಿದೆ.

05. ಫೋರ್ಡ್ ಇಕೊಸ್ಪೋರ್ಟ್
ಅಮೆರಿಕ ಮೂಲದ ಫೋರ್ಡ್ ಸಂಸ್ಥೆಯು ತನ್ನೆಲ್ಲ ಶ್ರೇಣಿಯ ಕಾರುಗಳಲ್ಲೂ ಗರಿಷ್ಠ ಸುರಕ್ಷಾ ಮಾನದಂಡಗಳನ್ನು ಖಾತ್ರಿಪಡಿಸುತ್ತಿದೆ ಎಂಬುದರಲ್ಲಿ ಸಂಶಯವೇ ಇಲ್ಲ. ಇತ್ತ ಇಕೊಸ್ಪೋರ್ಟ್ ನಲ್ಲೂ ಕರ್ಟೈನ್, ಬದಿಯ ಏರ್ ಬ್ಯಾಗ್, ಡ್ಯುಯಲ್ ಫ್ರಂಟ್ ಏರ್ ಬ್ಯಾಗ್ ಮುಂತಾದ ಸೌಲಭ್ಯಗಳಿರುತ್ತದೆ.

04. ಟೊಯೊಟಾ ಎಟಿಯೋಸ್
ಟೊಯೊಟಾ ಎಟಿಯೋಸ್ ತನ್ನ ಗುಣಮಟ್ಟತೆಗಾಗಿ ಹೆಸರುವಾಸಿಯಾಗಿದ್ದು, ವಿಶಾಲವಾದ ಕ್ಯಾಬಿನ್ ಜಾಗವನ್ನು ಪಡೆದುಕೊಂಡಿದೆ. ಇದು ಕೂಡಾ ಎಬಿಎಸ್ ಹಾಗೂ ಟ್ವಿನ್ ಏರ್ ಬ್ಯಾಗ್ ಗಳನ್ನು ಒದಗಿಸುತ್ತಿದೆ.

03. ಫಿಯೆಟ್ ಪುಂಟೊ ಇವೊ
ಭಾರತದಲ್ಲಿ ಲಗ್ಗೆಯಿಟ್ಟಿರುವ ಇತಿಹಾಸ ಪ್ರಸಿದ್ಧ ಫಿಯೆಟ್‌ನ ಪುಂಟೊ ಇವೊ ಕಾರು ಪರಿಣಾಮಕಾರಿ ವಿನ್ಯಾಸವನ್ನು ಪಡೆದುಕೊಂಡಿದೆ. ಗುಣಮಟ್ಟದ ದೇಹ ರಚನೆಯು ಫಿಯೆಟ್ ಪುಂಟೊ ಇವೊ ಕಾರಿಗೆ ಬೆಂಬಲವಾಗಿ ನಿಲ್ಲಲಿದೆ.

02. ಫೋರ್ಡ್ ಆಸ್ಪೈರ್
ಫೋರ್ಡ್‌ನಿಂದ ಆಗಮನವಾಗಿರುವ ಮಗದೊಂದು ಆಕರ್ಷಕ ಕಾಂಪಾಕ್ಟ್ ಸೆಡಾನ್ ಕಾರು ಫಿಗೊ ಆಸ್ಪೈರ್ ಕಾರಿನಲ್ಲೂ ಡ್ಯುಯಲ್ ಏರ್ ಬ್ಯಾಗ್, ಎಬಿಎಸ್ ಹಾಗೂ ಇಬಿಡಿ ಭದ್ರತಾ ವೈಶಿಷ್ಟ್ಯಗಳನ್ನು ನೀಡಲಾಗುತ್ತಿದೆ.

ಫೋರ್ಡ್‌ನಿಂದ ಆಗಮನವಾಗಿರುವ ಮಗದೊಂದು ಆಕರ್ಷಕ ಕಾಂಪಾಕ್ಟ್ ಸೆಡಾನ್ ಕಾರು ಫಿಗೊ ಆಸ್ಪೈರ್ ಕಾರಿನಲ್ಲೂ ಡ್ಯುಯಲ್ ಏರ್ ಬ್ಯಾಗ್, ಎಬಿಎಸ್ ಹಾಗೂ ಇಬಿಡಿ ಭದ್ರತಾ ವೈಶಿಷ್ಟ್ಯಗಳನ್ನು ನೀಡಲಾಗುತ್ತಿದೆ.
ದೇಶದಲ್ಲಿ ಮಾರಾಟದಲ್ಲಿರುವ ಅತ್ಯಂತ ಸ್ಟೈಲಿಷ್ ಹ್ಯಾಚ್ ಬ್ಯಾಕ್ ಕಾರುಗಳಲ್ಲಿ ಒಂದಾಗಿರುವ ಫೋರ್ಡ್ ಫಿಗೊ ಕಾರಿನಲ್ಲಿ ಆರು ಏರ್ ಬ್ಯಾಗ್ ಗಳ ಜೊತೆಗೆ ಎಬಿಎಸ್, ಇಬಿಡಿ ಸೌಲಭ್ಯಗಳನ್ನು ನೀಡಲಾಗುತ್ತದೆ.


Click it and Unblock the Notifications