ಅಚ್ಚರಿಪಡಿಸುವ ಬೆಲೆಗಳಲ್ಲಿ ಟೊಯೊಟಾ ಇನ್ನೋವಾ ಭರ್ಜರಿ ಎಂಟ್ರಿ
ಸಾಕಷ್ಟು ಚರ್ಚೆಗೆ ಗ್ರಾಸವಾಗಿರುವ ಟೊಯೊಟಾ ಇನ್ನೋವಾ ಕ್ರೈಸ್ಟಾ ಬಹು ಬಳಕೆಯ ವಾಹನ ಭಾರತ ವಾಹನ ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಟ್ಟಿದೆ.
ಆರಂಭಿಕ ಬೆಲೆ ಮಾಹಿತಿ: 13.84 ಲಕ್ಷ ರು. (ಎಕ್ಸ್ ಶೋ ರೂಂ ಮುಂಬೈ)

ಇನ್ನೋವಾ ಕ್ರೈಸ್ಟಾ ಸಂಪೂರ್ಣ ಚಾಲನಾ ವಿಮರ್ಶೆಯನ್ನು ಓದಲು ಕ್ಲಿಕ್ಕಿಸಿ
ಟೊಯೊಟಾ ಇನ್ನೋವಾ ಕ್ರೈಸ್ಟಾ ಎಕ್ಸ್ ಕ್ಲೂಸಿವ್ ಚಿತ್ರಗಳು
ಬೆಲೆ ಮಾಹಿತಿ (ಎಕ್ಸ್ ಶೋ ರೂಂ ಮುಂಬೈ)
ಟೊಯೊಟಾ ಇನ್ನೋವಾ ಕ್ರೈಸ್ಟಾ 2.4 ಮ್ಯಾನುವಲ್
ಟೊಯೊಟಾ ಇನ್ನೋವಾ ಕ್ರೈಸ್ಟಾ 2.4 ಮ್ಯಾನುವಲ್ (7 ಸೀಟು): 13,83,677 ರು.
ಟೊಯೊಟಾ ಇನ್ನೋವಾ ಕ್ರೈಸ್ಟಾ 2.4 ಜಿ ಮ್ಯಾನುವಲ್ (8 ಸೀಟು): 13,88,177 ರು.
ಟೊಯೊಟಾ ಇನ್ನೋವಾ ಕ್ರೈಸ್ಟಾ 2.4 ಜಿಎಕ್ಸ್ ಮ್ಯಾನುವಲ್ (7 ಸೀಟು): 14,69,681 ರು.
ಟೊಯೊಟಾ ಇನ್ನೋವಾ ಕ್ರೈಸ್ಟಾ 2.4 ಜಿಎಕ್ಸ್ ಮ್ಯಾನುವಲ್ (8 ಸೀಟು): 14,74,181 ರು.
ಟೊಯೊಟಾ ಇನ್ನೋವಾ ಕ್ರೈಸ್ಟಾ 2.4 ವಿಎಕ್ಸ್ ಮ್ಯಾನುವಲ್ (7 ಸೀಟು): 17,53,397 ರು.
ಟೊಯೊಟಾ ಇನ್ನೋವಾ ಕ್ರೈಸ್ಟಾ 2.4 ವಿಎಕ್ಸ್ ಮ್ಯಾನುವಲ್ (8 ಸೀಟು): 17,57,897 ರು.
ಟೊಯೊಟಾ ಇನ್ನೋವಾ ಕ್ರೈಸ್ಟಾ 2.4 ಝಡ್ ಎಕ್ಸ್ ಮ್ಯಾನುವಲ್ (7 ಸೀಟು): 19,47,930 ರು.
ಟೊಯೊಟಾ ಇನ್ನೋವಾ ಕ್ರೈಸ್ಟಾ 2.8 ಆಟೋಮ್ಯಾಟಿಕ್
ಟೊಯೊಟಾ ಇನ್ನೋವಾ ಕ್ರೈಸ್ಟಾ 2.8 ಜಿಎಕ್ಸ್ ಆಟೋಮ್ಯಾಟಿಕ್ (7 ಸೀಟು): 15,99,681 ರು.
ಟೊಯೊಟಾ ಇನ್ನೋವಾ ಕ್ರೈಸ್ಟಾ 2.8 ಜಿಎಕ್ಸ್ ಆಟೋಮ್ಯಾಟಿಕ್ (8 ಸೀಟು): 16,04,181 ರು.
ಟೊಯೊಟಾ ಇನ್ನೋವಾ ಕ್ರೈಸ್ಟಾ 2.8 ಝಡ್ ಎಕ್ಸ್ ಆಟೋಮ್ಯಾಟಿಕ್ (7 ಸೀಟು): 20,77,930 ರು.
ಹಳೆಯ ಇನ್ನೋವಾಗಿಂತಲೂ 150 ಎಂಎಂ ಉದ್ದ, 70 ಎಂಎಂ ಅಗಲ ಮತ್ತು 35 ಎಂಎಂ ಹೆಚ್ಚು ಎತ್ತರವನ್ನು ಎರಡನೇ ತಲೆಮಾರಿನ ಇನ್ನೋವಾ ಪಡೆದಿದೆ. ಇದು ಒಟ್ಟಾರೆ 4735 ಎಂಎಂ ಉದ್ದ, 1830 ಎಂಎಂ ಅಗಲ, 1795 ಎಂಎಂ ಎತ್ತರ ಮತ್ತು 2750 ಎಂಎಂ ವೀಲ್ ಬೇಸ್ ಪಡೆದಿದೆ.
ಟಾಪ್ ಎಂಡ್ ಇನ್ನೋವಾ ಕಾರಿನಲ್ಲಿ ಸ್ಟ್ಯಾರ್ಟ್ ಸ್ಟಾಪ್ ಬಟನ್, ಸ್ಮಾರ್ಟ್ ಎಂಟ್ರಿ ಸಿಸ್ಟಂ, ಏಳು ಏರ್ ಬ್ಯಾಗ್, ಎಬಿಎಸ್, ಇಬಿಡಿ, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಏಳು ಇಂಚುಗಳ ಆಡಿಯೋ ಸಿಸ್ಟಂ ಜೊತೆ ನೇವಿಗೇಷನ್, ಎಲ್ ಇಡಿ ಹೆಡ್ ಲ್ಯಾಂಪ್ ಮತ್ತು 17 ಇಂಚುಗಳ ಅಲಾಯ್ ವೀಲ್ ಗಳಿರಲಿದೆ.
2.4 ಲೀಟರ್ ಮತ್ತು 2.8 ಲೀಟರ್ ಡೀಸೆಲ್ ಎಂಜಿನ್ ಗಳ ಆಯ್ಕೆಗಳಲ್ಲಿ ಲಭ್ಯವಿರುವ ಇನ್ನೋವಾ ಆರು ಸ್ಪೀಡ್ ಆಟೋಮ್ಯಾಟಿಕ್ ಮತ್ತು 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಗಳನ್ನು ಹೊಂದಿದೆ.


Click it and Unblock the Notifications


























































































