ಸ್ವಲ್ಪ ಕಾದಿರಿ; ಭಾರತೀಯರಿಗೆ ಫೋಕ್ಸ್‌ವ್ಯಾಗನ್ ಕೊಡುಗೆ
ಜರ್ಮನಿಯ ಮೂಲದ ಪ್ರತಿಷ್ಠಿತ ವಾಹನ ಸಂಸ್ಥೆ ಫೋಕ್ಸ್ ವ್ಯಾಗನ್ ಭಾರತೀಯರಿಗೆ ಅತಿ ನೂತನ ಕೊಡುಗೆಯೊಂದಿಗೆ ಮುಂದೆ ಬಂದಿದೆ. ಈ ಸಂಬಂಧ ರೋಚಕ ವಿಡಿಯೋವನ್ನು ಬಿಡುಗಡೆಗೊಳಿಸಲಾಗಿದೆ.
ವಿಡಿಯೋ ಉದ್ದಕ್ಕೂ ಭಾರಿ ಕುತೂಹಲವನ್ನು ಕಾದಿರಿಸಿರುವ ಫೋಕ್ಸ್ ವ್ಯಾಗನ್, ಭಾರತೀಯರಿಗೆ ದೇಶದಿಂದಲೇ ನಿರ್ಮಿಸಿರುವ ಕಾರನ್ನು ಕೊಡುಗೆಯಾಗಿ ನೀಡುತ್ತಿರುವುದಾಗಿ ತಿಳಿಸಿದೆ.
ಫೋಕ್ಸ್ ವ್ಯಾಗನ್ ಅತಿ ನೂತನ ಕಾರು 2016 ಆಟೋ ಎಕ್ಸ್ ಪೋದಲ್ಲಿ ಭರ್ಜರಿ ಅನಾವರಣಗೊಳ್ಳಲಿದೆ.
ಬಲ್ಲ ಮೂಲಗಳ ಪ್ರಕಾರ ಭಾರತೀಯ ವಾಹನ ಮಾರುಕಟ್ಟೆಗಾಗಿ ಅತಿ ನೂತನ ಕಾಂಪಾಕ್ಟ್ ಸೆಡಾನ್ ಕಾರನ್ನು ಫೋಕ್ಸ್ ವ್ಯಾಗನ್ ಬಿಡುಗಡೆ ಮಾಡಲಿದೆ. ಅನೇಕ ಬಾರಿ ಟೆಸ್ಟಿಂಗ್ ವೇಳೆ ಇದರ ರಹಸ್ಯ ಚಿತ್ರಗಳು ಹೊರ ಬಂದಿವೆ.
ಫೋಕ್ಸ್ ವ್ಯಾಗನ್ ಚಕನ್ ಘಟಕದಲ್ಲಿ ನೂತನ ಕಾರನ್ನು ಅಭಿವೃದ್ಧಿಪಡಿಸಲಾಗಿದೆ. ಇದು ಪೊಲೊ ಹ್ಯಾಚ್ ಬ್ಯಾಕ್ ಕಾರಿನೊಂದಿಗೆ ವಿನ್ಯಾಸ ಹಂಚಿಕೊಳ್ಳುವ ಸಾಧ್ಯತೆಯಿದೆ.
ಅಂದ ಹಾಗೆ ನಾಲ್ಕು ಮೀಟರ್ ಉದ್ದ ಪರಿಧಿಯೊಳಗೆ ನಿರ್ಮಾಣವಾಗಲಿರುವ ನೂತನ ಫೋಕ್ಸ್ ವ್ಯಾಗನ್ ಕಾರು 'ಎಮಿಯೊ' ಎಂಬ ಹೆಸರಿನಿಂದ ಗುರುತಿಸಲ್ಪಡಲಿದೆ.
ವಿಡಿಯೋ ವೀಕ್ಷಿಸಿ
ಚಿತ್ರಕೃಪೆ: OVERDRIVE.in


Click it and Unblock the Notifications















