25 ಲಕ್ಷ ದುಬಾರಿಯ ಫೋಕ್ಸ್ ವ್ಯಾಗನ್ ಪೊಲೊ ಜಿಟಿಐ ಹಾಟ್ ಹ್ಯಾಚ್ ಭಾರತಕ್ಕೆ ಎಂಟ್ರಿ

ಭಾರತದಲ್ಲಿ ನಿರ್ವಹಣಾ ಕಾರುಗಳಿಗೆ ಬೇಡಿಕೆ ಹೆಚ್ಚಾಗುತ್ತಿರುವಂತೆಯೇ ಫೋಕ್ಸ್ ವ್ಯಾಗನ್ ತನ್ನ ಶಕ್ತಿಶಾಲಿ ಹ್ಯಾಚ್ ಬ್ಯಾಕ್ ಕಾರನ್ನು ಬಿಡುಗಡೆಗೊಳಿಸಿದೆ.

By Nagaraja

ಜರ್ಮನಿಯ ಮೂಲದ ಪ್ರಖ್ಯಾತ ಸಂಸ್ಥೆಯಾಗಿರುವ ಫೋಕ್ಸ್ ವ್ಯಾಗನ್ ಅತ್ಯಂತ ಶಕ್ತಿಶಾಲಿ ಪೊಲೊ ಜಿಟಿಐ ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ. ಈ ಹಾಟ್ ಹ್ಯಾಚ್ ಬ್ಯಾಕ್ ಕಾರಿನ ಬೆಲೆ ಕೇಳಿದರೆ ಖಂಡಿತ ನೀವು ಗಾಬರಿಗೊಳ್ಳುವೀರಾ? ಏಕೆಂದರೆ ಬರೋಬ್ಬರಿ 189 ಅಶ್ವಶಕ್ತಿ ಉತ್ಪಾದಿಸುವ ಎಂಜಿನ್ ನೊಂದಿಗೆ ರಸ್ತೆಗಿಳಿದಿರುವ ನೂತನ ಪೊಲೊ ಜಿಟಿಐ ದೇಶದಲ್ಲಿ ಪುಣೆ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ 25.65 ಲಕ್ಷ ರು.ಗಳಷ್ಟು ದುಬಾರಿಯೆನಿಸಿದೆ.

25 ಲಕ್ಷ ದುಬಾರಿಯ ಫೋಕ್ಸ್ ವ್ಯಾಗನ್ ಪೊಲೊ ಜಿಟಿಐ ಹಾಟ್ ಹ್ಯಾಚ್ ಭಾರತಕ್ಕೆ ಎಂಟ್ರಿ

ನೂತನ ಪೊಲೊ ಜಿಟಿಐ ದೇಶದ ಮಾರುಕಟ್ಟೆಯಲ್ಲಿ ದೊರಕುವ ಅತ್ಯಂತ ಅಗ್ಗದ ನಿರ್ವಹಣಾ ಕಾರು ಎಂದೆನಿಸಿಕೊಂಡಿದೆ. ಇದು ನಿರ್ವಹಣಾ ಕಾರುಗಳನ್ನು ಇಷ್ಟಪಡುವ ಗ್ರಾಹಕರನ್ನು ತನ್ನತ್ತ ಕೈಬೀಸಿ ಕರೆಯಲಿದೆ.

25 ಲಕ್ಷ ದುಬಾರಿಯ ಫೋಕ್ಸ್ ವ್ಯಾಗನ್ ಪೊಲೊ ಜಿಟಿಐ ಹಾಟ್ ಹ್ಯಾಚ್ ಭಾರತಕ್ಕೆ ಎಂಟ್ರಿ

ಕೇವಲ ಸೀಮಿತ ಸಂಖ್ಯೆಯಲ್ಲಿ ಮಾತ್ರ ನೂತನ ಪೊಲೊ ಜಿಟಿಐ ದೇಶದಲ್ಲಿ ಮಾರಾಟವಾಗಲಿದ್ದು, ಬಹುಬೇಗನೇ ಬುಕ್ಕಿಂಗ್ ಮಾಡುವ 99 ಅದೃಷ್ಟ ಗ್ರಾಹಕರಿಗೆ ಮಾತ್ರ ಹಂಚಿಕೊಳ್ಳಲಾಗುವುದು.

25 ಲಕ್ಷ ದುಬಾರಿಯ ಫೋಕ್ಸ್ ವ್ಯಾಗನ್ ಪೊಲೊ ಜಿಟಿಐ ಹಾಟ್ ಹ್ಯಾಚ್ ಭಾರತಕ್ಕೆ ಎಂಟ್ರಿ

ಸದ್ಯಕ್ಕೆ ಟು ಡೋರ್ ಆವೃತ್ತಿಯಲ್ಲಿ ಮಾತ್ರ ಲಭ್ಯವಾಗಲಿರುವ ಪೊಲೊ ಜಿಟಿಐ, ಭವಿಷ್ಯದಲ್ಲಿ ಬೇಡಿಕೆಗೆ ಅನುಸಾರವಾಗಿ ಫೈವ್ ಡೋರ್ ವೆರಿಯಂಟ್ ಪರಿಚಯವಾಗಲಿದೆ.

25 ಲಕ್ಷ ದುಬಾರಿಯ ಫೋಕ್ಸ್ ವ್ಯಾಗನ್ ಪೊಲೊ ಜಿಟಿಐ ಹಾಟ್ ಹ್ಯಾಚ್ ಭಾರತಕ್ಕೆ ಎಂಟ್ರಿ

ಅತ್ಯಂತ ಜನಪ್ರಿಯ ಹಾಟ್ ಹ್ಯಾಚ್ ಬ್ಯಾಕ್ ಕಾರುಗಳಲ್ಲಿ ಒಂದಾಗಿರುವ ಪೊಲೊ ಜಿಟಿಐ, ರಾಲಿ ವಿಜೇತ ಪೊಲೊ ಡಬ್ಲ್ಯುಆರ್ ಸಿ ಕಾರಿನ ಬೇಸ್ ವೆರಿಯಂಟ್ ಆಗಿದೆ.

25 ಲಕ್ಷ ದುಬಾರಿಯ ಫೋಕ್ಸ್ ವ್ಯಾಗನ್ ಪೊಲೊ ಜಿಟಿಐ ಹಾಟ್ ಹ್ಯಾಚ್ ಭಾರತಕ್ಕೆ ಎಂಟ್ರಿ

ಭಾರತದಲ್ಲಿ ಬಿಡುಗಡೆಯಾದ ಪೊಲೊ ಜಿಟಿಐ, ಶಕ್ತಿಶಾಲಿ 1.8 ಲೀಟರ್ ಟಿಎಸ್ ಐ ಎಂಜಿನ್ ಗಿಟ್ಟಿಸಿಕೊಂಡಿದ್ದು, 250 ಎನ್ ಎಂ ತಿರುಗುಬಲದಲ್ಲಿ 189 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

25 ಲಕ್ಷ ದುಬಾರಿಯ ಫೋಕ್ಸ್ ವ್ಯಾಗನ್ ಪೊಲೊ ಜಿಟಿಐ ಹಾಟ್ ಹ್ಯಾಚ್ ಭಾರತಕ್ಕೆ ಎಂಟ್ರಿ

ಇನ್ನು ಪೊಲೊ ಜಿಟಿ ಟಿಎಸ್ ಐ ಮಾದರಿಯಲ್ಲಿರುವುದಕ್ಕೆ ಸಮಾನವಾದ ಏಳು ಸ್ಪೀಡ್ ಡಿಎಸ್ ಜಿ ಗೇರ್ ಬಾಕ್ಸ್ ಆಳವಡಿಕೆಯಾಗಲಿದೆ.

25 ಲಕ್ಷ ದುಬಾರಿಯ ಫೋಕ್ಸ್ ವ್ಯಾಗನ್ ಪೊಲೊ ಜಿಟಿಐ ಹಾಟ್ ಹ್ಯಾಚ್ ಭಾರತಕ್ಕೆ ಎಂಟ್ರಿ

ನೂತನ ಪೊಲೊ ಜಿಟಿಐ ಕೇವಲ 7.2 ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ. ಮತ್ತು ಗಂಟೆಗೆ ಗರಿಷ್ಠ 235 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ.

25 ಲಕ್ಷ ದುಬಾರಿಯ ಫೋಕ್ಸ್ ವ್ಯಾಗನ್ ಪೊಲೊ ಜಿಟಿಐ ಹಾಟ್ ಹ್ಯಾಚ್ ಭಾರತಕ್ಕೆ ಎಂಟ್ರಿ

ವೈಶಿಷ್ಟ್ಯಗಳ ಬಗ್ಗೆ ಚರ್ಚಿಸುವುದಾದ್ದಲ್ಲಿ, ಎಲ್ ಇಡಿ ಹೆಡ್ ಲ್ಯಾಂಪ್, ಹೊಸತಾದ ಹನಿಕೊಂಬ್ ಜಿಟಿಐ ಗ್ರಿಲ್ ಮತ್ತು ಪರಿಷ್ಕೃತ ಬಂಪರ್ ಗಳನ್ನು ಪಡೆಯಲಿದೆ.

25 ಲಕ್ಷ ದುಬಾರಿಯ ಫೋಕ್ಸ್ ವ್ಯಾಗನ್ ಪೊಲೊ ಜಿಟಿಐ ಹಾಟ್ ಹ್ಯಾಚ್ ಭಾರತಕ್ಕೆ ಎಂಟ್ರಿ

ಇನ್ನುಳಿದಂತೆ ಹಿಂದುಗಡೆ ಸ್ಪಾಯ್ಲರ್, 16 ಇಂಚುಗಳ ಅಲಾಯ್ ಚಕ್ರಗಳು, ಡ್ಯುಯಲ್ ಟಿಪ್ ಎಕ್ಸಾಸ್ಟ್ ವ್ಯವಸ್ಥೆ, ಕೆಂಪು ಎಫ್ ಆರ್ ಐ ಟ್ರೇಡ್ ಮಾರ್ಕ್, ಕ್ರಮಬದ್ಧವಾದ ಜಿಟಿಐ ಲಾಂಛನ ಇತ್ಯಾದಿ ವೈಶಿಷ್ಟ್ಯಗಳು ಕಂಡುಬರಲಿದೆ.

25 ಲಕ್ಷ ದುಬಾರಿಯ ಫೋಕ್ಸ್ ವ್ಯಾಗನ್ ಪೊಲೊ ಜಿಟಿಐ ಹಾಟ್ ಹ್ಯಾಚ್ ಭಾರತಕ್ಕೆ ಎಂಟ್ರಿ

ನೂತನ ಪೊಲೊ ಜಿಟಿಐ ದೇಶದಲ್ಲಿ ಹೆಚ್ಚಿನ ಮಾರಾಟವನ್ನು ಗುರಿಯಿರಿಸಿಕೊಂಡಿಲ್ಲ. ಆದರೆ ಖಂಡಿತವಾಗಿಯೂ ಸಂಸ್ಥೆಯ ಮೌಲ್ಯವನ್ನಂತೂ ಹೆಚ್ಚಿಸಲಿದೆ.

More from DriveSpark

Article Published On: Thursday, November 3, 2016, 13:50 [IST]
English summary
Volkswagen Polo GTI Launched In India; Prices Start At Rs. 25.65 Lakh
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+