ಜಗತ್ತಿನ ಮೊತ್ತ ಮೊದಲ ಕೀಲೆಸ್ ಕಾರು 'ವೋಲ್ವೋ'
ಹೊಸ ಹೊಸ ತಂತ್ರಜ್ಞಾನವನ್ನು ಅವಿಷ್ಕಾರ ಮಾಡುವುದರಲ್ಲಿ ಸದಾ ಒಂದು ಹೆಜ್ಜೆ ಮುಂದಿರುವ ವಿಶ್ವದ ಮುಂಚೂಣಿಯ ಸಂಸ್ಥೆಯಾಗಿರುವ ವೋಲ್ವೋ ಮಗದೊಂದು ನೂತನ ತಂತ್ರಗಾರಿಕೆಯೊಂದಿಗೆ ಮುಂದೆ ಬಂದಿದೆ.
Also Read: ಕಿರುಕುಳವನ್ನುಂಟು ಮಾಡುವ 10 ಕಾರು ತಂತ್ರಜ್ಞಾನಗಳು
ಕಾರಿನಲ್ಲಿ ಗರಿಷ್ಠ ಸುರಕ್ಷಾ ಮಾನದಂಡಗಳಿಗೆ ಆದ್ಯತೆಯನ್ನು ಕೊಡುತ್ತಿರುವ ಸ್ವೀಡನ್ ಮೂಲದ ವೋಲ್ವೋ ಈಗ ಕೀಲೆಸ್ ಕಾರಿನ ತಂತ್ರಜ್ಞಾನವನ್ನು ಪರಿಚಯಿಸುತ್ತಿದೆ. ಇದು ಹೇಗೆ ಕಾರ್ಯ ನಿರ್ವಹಿಸಲಿದೆ ಎಂಬುದನ್ನು ಚಿತ್ರಪುಟದ ಮೂಲಕ ತಿಳಿಯೋಣವೇ...

ಇನ್ನು ಮುಂದೆ ಕಾರು ಕೀಲಿ ಕಳೆದು ಹೋಗುವ ಅಥವಾ ಮರೆತು ಹೋಗುವ ಭಯ ಬೇಡ. ಯಾಕೆಂದರೆ ಸಾಂಪ್ರದಾಯಿಕ ಕಾರು ಕೀಗಳಿಗೆ ಗುಡ್ ಬೈ ಹೇಳುವ ಸಮಯ ಬಂದಿದ್ದು, ಈ ನಿಟ್ಟಿನಲ್ಲಿ ವೋಲ್ವೋ ಹೊಸ ತಂತ್ರಜ್ಞಾನವನ್ನು ಅವಿಷ್ಕರಿಸಿದೆ.

ಸಾಮಾನ್ಯ ಕೀಗಳ ಬದಲಾಗಿ ವೋಲ್ವೋ ನೂತನ ಕಾರಿನಲ್ಲಿ ಬ್ಲೂಟೂತ್ ಸಂಪರ್ಕಿತ ಡಿಜಿಟಲ್ ಕೀ ಬಳಕೆ ಮಾಡಲಾಗುತ್ತದೆ. ಇದನ್ನು ಗ್ರಾಹಕರ ಫೋನ್ ಗಳಲ್ಲಿ ವೋಲ್ವೋ ಆಪ್ ಮುಖಾಂತರ ಸಕ್ರಿಯಗೊಳಿಸಬಹುದಾಗಿದೆ.

2017ರ ವೇಳೆಯಾಗುವಾಗ ಮಾರುಕಟ್ಟೆ ಪ್ರವೇಶಿಸುವ ನಿರೀಕ್ಷೆ ಹೊಂದಿರುವ ನೂತನ ತಂತ್ರಗಾರಿಕೆಯು, ಒಂದು ಸಾಮಾನ್ಯ ಕೀ ಮಾಡುವ ಎಲ್ಲ ಕಾರ್ಯಗಳನ್ನು ಮಾಡಲಿದೆ. ಅಂದರೆ ಡೋರ್ ಲಾಕ್, ಅನ್ ಲಾಕ್ ನಿಂದ ಹಿಡಿದು ಎಂಜಿನ್ ಸ್ಟಾರ್ಟ್ ಹಾಗೂ ಸ್ಟಾಪ್ ಮಾಡಬಹುದಾಗಿದೆ.

ಇಲ್ಲಿ ಗಮನಾರ್ಹ ಸಂಗತಿಯೆಂದರೆ ವೋಲ್ವೋ ಡಿಜಿಟಲ್ ಕೀಯನ್ನು ನಿಮ್ಮ ಸ್ನೇಹಿತರೊಂದಿಗೂ ಹಂಚಿಕೊಳ್ಳಬಹುದಾಗಿದೆ. ಈ ಮೂಲಕ ನಿಮ್ಮ ಅಲಭ್ಯತೆಯಲ್ಲೂ ಸ್ನೇಹಿತರು ಕಾರನ್ನು ನಿರ್ವಹಿಸಬಹುದಾಗಿದೆ. ಈ ಎಲ್ಲ ಪ್ರಕ್ರಿಯೆಗೆ ವೋಲ್ವೋ ಮೊಬೈಲ್ ಆಪ್ ಅಗತ್ಯವಾಗಿದೆ.

ಹಾಗೊಂದು ವೇಳೆ ನೀವು ನಗರ ಬಿಟ್ಟು ಬೇರೆ ನಗರಕ್ಕೆ ತೆರಳುವಾಗ ವೋಲ್ವೋ ಕೀಲೆಸ್ ತಂತ್ರಜ್ಞಾನವು ಅತಿ ಹೆಚ್ಚು ನೆರವಿಗೆ ಬರಲಿದ್ದು, ಮೊಬೈಲ್ ಮುಖಾಂತರವೇ ಕಾರನ್ನು ನಿರ್ವಹಿಸಬಹುದಾಗಿದೆ.

ಒಟ್ಟಿನಲ್ಲಿ ಇನ್ನು ಮುಂದೆ ವೋಲ್ವೋ ಕಾರಿಗೆ ಬೀಗದ ಕೈಯ ಅಗತ್ಯ ಬರುವುದಿಲ್ಲ. ಇಲ್ಲಿ ನಿಮ್ಮ ಮೊಬೈಲ್ ಫೋನ್ ನಲ್ಲಿ ಕೀ ರೂಪದಲ್ಲಿ ಸೇವೆ ನೀಡಲಿದೆ.

ಚೀನಾ ಸಂಶೋಧಕರಿಂದ ಮೆದುಳು ನಿಯಂತ್ರಿತ ಕಾರು ಅವಿಷ್ಕಾರ


Click it and Unblock the Notifications