ಶುಭ ಸಮಾಚಾರ; ವೋಲ್ವೋ ಹೈಬ್ರಿಡ್ ಕಾರು ಭಾರತಕ್ಕೆ

By Nagaraja

ಇಂಧನ ಚಾಲಿತ ವಾಹನಗಳಿಗೆ ಪರ್ಯಾಯ ವ್ಯವಸ್ಥೆ ಹುಡುಕುತ್ತಿರುವ ಜಗತ್ತಿನ ಮುಂಚೂಣಿಯ ಸಂಸ್ಥೆಗಳ ಜೊತೆ ಕೈಜೋಡಿಸಿಕೊಂಡಿರುವ ಸ್ವೀಡನ್ ಮೂಲದ ವೋಲ್ವೋ ಸಂಸ್ಥೆಯು ಪ್ರಸಕ್ತ ಸಾಲಿನಲ್ಲೇ ಹೈಬ್ರಿಡ್ ಕಾರುಗಳನ್ನು ಭಾರತದಲ್ಲಿ ಬಿಡುಗಡೆ ಮಾಡಲಿದೆ.

Also Read: ವೋಲ್ವೋ ಎಸ್60 ಕ್ರಾಸ್ ಕಂಟ್ರಿ ಲಗ್ಷುರಿ ಸೆಡಾನ್ ಕಾರು ಬಿಡುಗಡೆ ಮುಂದಕ್ಕೆ ಓದಿ

ಈಗಷ್ಟೇ ಎಸ್60 ಕ್ರಾಸ್ ಕಂಟ್ರಿ ಐಷಾರಾಮಿ ಸೆಡಾನ್ ಕಾರನ್ನು ಬಿಡುಗಡೆ ಮಾಡುವ ಮೂಲಕ ಗಮನ ಸೆಳೆದಿರುವ ವೋಲ್ವೋ ಸಂಸ್ಥೆಯು ತನ್ನ ಶ್ರೇಣಿಯ ಹೈಬ್ರಿಡ್ ಕಾರುಗಳನ್ನು ದೇಶದಲ್ಲಿ ಬಿಡುಗಡೆ ಮಾಡುವ ಮೂಲಕ ಮತ್ತಷ್ಟು ಮಾರಾಟ ಗುರಿಯನ್ನು ಇರಿಸಿಕೊಂಡಿದೆ.

ವೋಲ್ವೋ ಹೈಬ್ರಿಡ್ ಕಾರು ಭಾರತಕ್ಕೆ

2016ನೇ ಸಾಲಿನಲ್ಲೇ ಎಕ್ಸ್‌ಸಿ90 ಹೈಬ್ರಿಡ್ ಕ್ರೀಡಾ ಬಳಕೆಯ ವಾಹನವನ್ನು ಭಾರತದಲ್ಲಿ ಬಿಡುಗಡೆ ಮಾಡಲು ವೋಲ್ವೋ ಸಂಸ್ಥೆ ಉತ್ಸುಕತೆ ವ್ಯಕ್ತಪಡಿಸಿದೆ.

ವೋಲ್ವೋ ಹೈಬ್ರಿಡ್ ಕಾರು ಭಾರತಕ್ಕೆ

ಪ್ಲಗ್ ಇನ್ ಹೈಬ್ರಿಡ್ ವ್ಯವಸ್ಥೆಯ ವೋಲ್ವೋ ಎಕ್ಸ್ ಸಿ90, ವಿದೇಶಗಳಲ್ಲಿ ಮೂರು ವೆರಿಯಂಟ್ ಗಳಲ್ಲಿ ಲಭ್ಯರುತ್ತದೆ. ಅವುಗಳೆಂದರೆ ಮೊಮೆಂಟಮ್, ಆರ್ ಡಿಸೈನ್ ಮತ್ತು ಇನ್ಸ್ ಕ್ರಿಪ್ಷನ್.

ವೋಲ್ವೋ ಹೈಬ್ರಿಡ್ ಕಾರು ಭಾರತಕ್ಕೆ

ಹೆಸರಲ್ಲೇ ಸೂಚಿಸಿರುವಂತೆಯೇ ವೋಲ್ವೋ ಹೈಬ್ರಿಡ್ ಕಾರುಗಳು ಪೆಟ್ರೋಲ್ ಜೊತೆಗೆ ಎಲೆಕ್ಟ್ರಿಕ್ ಮೋಟಾರು ಪಡೆಯಲಿದೆ.

ವೋಲ್ವೋ ಹೈಬ್ರಿಡ್ ಕಾರು ಭಾರತಕ್ಕೆ

ಭಾರತದಲ್ಲಿ ವೋಲ್ವೋ ಹೈಬ್ರಿಡ್ ಕಾರುಗಳು ಸರಿ ಸುಮಾರು 40ರಂದ 50 ಲಕ್ಷ ರು.ಗಳಷ್ಟು ದುಬಾರಿಯೆನಿಸುವ ಸಾಧ್ಯತೆಯಿದೆ.

ವೋಲ್ವೋ ಹೈಬ್ರಿಡ್ ಕಾರು ಭಾರತಕ್ಕೆ

ಇನ್ನು ಕಾರಿನಡಿಯಲ್ಲಿ 2.0 ಲೀಟರ್ ಪೆಟ್ರೋಲ್ ಜೊತೆಗೆ ಎಲೆಕ್ಟ್ರಿಕ್ ಮೋಟಾರು ಜೋಡಣೆಯಾಗಲಿದೆ. ಈ ಪೈಕಿ ಪೆಟ್ರೋಲ್ ಎಂಜಿನ್ ಮುಂದಿನ ಚಕ್ರಗಳಿಗೂ ಎಲೆಕ್ಟ್ರಿಕ್ ಮೋಟಾರು ಹಿಂಭಾಗದ ಚಕ್ರಗಳಿಗೂ ಶಕ್ತಿಯನ್ನು ರವಾನಿಸಲಿದೆ.

ವೋಲ್ವೋ ಹೈಬ್ರಿಡ್ ಕಾರು ಭಾರತಕ್ಕೆ

ಎಮಿಷನ್ ಮಾನ್ಯತಾ ಮಟ್ಟದ ಬಗ್ಗೆ ಭಾರತೀಯ ಸರಕಾರವು ಕಟ್ಟುನಿಟ್ಟಾದ ನಿಯಮ ರೂಪುಗೊಳಿಸುತ್ತಿದ್ದು, ಈ ನಿಟ್ಟಿನಲ್ಲಿ ಲಗ್ಷುರಿ ಕಾರು ವಿಭಾಗದಲ್ಲಿ ಅತ್ಯುತ್ತಮ ಕಾರು ಒದಗಿಸುವುದರಲ್ಲಿ ವೋಲ್ವೋ ತನ್ನ ಬದ್ಧತೆಯನ್ನು ಪ್ರದರ್ಶಿಸಲಿದೆ.

ವೋಲ್ವೋ ಹೈಬ್ರಿಡ್ ಕಾರು ಭಾರತಕ್ಕೆ

ಕೇಂದ್ರ ಸರಕಾರದ ಫೇಮ್ (Faster Adoption and Manufacturing of Hybrid and Electric vehicles in India) ಯೋಜನೆಯ ನೆರವನ್ನು ಪಡೆಯಲಿರುವ ವೋಲ್ವೋ ಎಕ್ಸ್ ಸಿ90 ಹೈಬ್ರಿಡ್ ಕಾರು ಸ್ಪರ್ಧಾತ್ಮಕ ಬೆಲೆ ಕಾಪಾಡಿಕೊಳ್ಳಲು ಸಹಕಾರಿಯಾಗಲಿದೆ.

ವೋಲ್ವೋ ಹೈಬ್ರಿಡ್ ಕಾರು ಭಾರತಕ್ಕೆ

ಹಾಗಿದ್ದರೂ ಈ ಎಲ್ಲದರ ಬಗ್ಗೆ ಸಂಸ್ಥೆಯಿಂದ ಇನ್ನಷ್ಟೇ ಸ್ಪಷ್ಟನೆ ಬರಬೇಕಾಗಿದೆ. ಸದ್ಯ ಲಭ್ಯವಿರುವ ಮಾಹಿತಿಗಳ ಪ್ರಕಾರ ವೋಲ್ವೋ ಎಕ್ಸ್ ಸಿ 90 ಹೈಬ್ರಿಡ್ ಕಾರು ಭಾರತ ಪ್ರವೇಶಿಸುವುದು ನಿಚ್ಚಳವೆನಿಸಿದೆ.

More from DriveSpark

Article Published On: Monday, March 14, 2016, 17:16 [IST]
English summary
Volvo Hybrid Models Coming To Indian Market During 2016
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+