2017 ವೋಲ್ವೋ ವಿ40 ಮತ್ತು ವಿ40 ಕ್ರಾಸ್ ಕಂಟ್ರಿ ಭಾರತದಲ್ಲಿ ಬಿಡುಗಡೆ

2017 ವೋಲ್ವೋ ವಿ40 ಮತ್ತು ವಿ40 ಕ್ರಾಸ್ ಕಂಟ್ರಿ ಮಾದರಿಗಳು ದೇಶಕ್ಕೆ ಭರ್ಜರಿ ಪ್ರವೇಶ ಪಡೆದಿದೆ.

By Nagaraja

ಸ್ವೀಡನ್ ಮೂಲದ ಪ್ರತಿಷ್ಠತ ವಾಹನ ಸಂಸ್ಥೆ ವೋಲ್ವೋ ಕಾರ್ಸ್, ಭಾರತದಲ್ಲಿ ಅತಿ ನೂತನ 2017 ವೋಲ್ವೋ ವಿ40 ಮತ್ತು ವಿ40 ಕ್ರಾಸ್ ಕಂಟ್ರಿ ಮಾದರಿಗಳನ್ನು ಬಿಡುಗಡೆಗೊಳಿಸಿದೆ.

2017 ವೋಲ್ವೋ ವಿ40 ಮತ್ತು ವಿ40 ಕ್ರಾಸ್ ಕಂಟ್ರಿ ಭಾರತದಲ್ಲಿ ಬಿಡುಗಡೆ

2017 ವೋಲ್ವೋ ವಿ40 ಮತ್ತು ವಿ40 ಕ್ರಾಸ್ ಕಂಟ್ರಿ ಮಾದರಿಗಳು ಭಾರತದಲ್ಲಿ ಅನುಕ್ರಮವಾಗಿ ದೆಹಲಿ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ 25.49 ಮತ್ತು 27.2 ಲಕ್ಷ ರುಪಾಯಿಗಳಷ್ಟು ದುಬಾರಿಯೆನಿಸಲಿದೆ.

ಸಂಪೂರ್ಣ ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

ಸಂಪೂರ್ಣ ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

ವಿ40 ಡಿ3 ಕೈನಾಟಿಕ್: 25.49 ಲಕ್ಷ ರು.

ವಿ4 ಡಿ3 ಆರ್-ಡಿಸೈನ್: 28.53 ಲಕ್ಷ ರು.

ವೋಲ್ವೋ ವಿ40 ಕ್ರಾಸ್ ಕಂಟ್ರಿ

ವೋಲ್ವೋ ವಿ40 ಕ್ರಾಸ್ ಕಂಟ್ರಿ

ವಿ40 ಕ್ರಾಸ್ ಕಂಟ್ರಿ ಡಿ3 ಇನ್ಸ್ ಸ್ಕ್ರಿಪ್ಷನ್: 29.4 ಲಕ್ಷ ರು.

ವಿ40 ಕ್ರಾಂಸ್ ಕಂಟ್ರಿ ಟಿ4 ಮೊಮೆಂಟಮ್: 27.2 ಲಕ್ಷ ರು.

2017 ವೋಲ್ವೋ ವಿ40 ಮತ್ತು ವಿ40 ಕ್ರಾಸ್ ಕಂಟ್ರಿ ಭಾರತದಲ್ಲಿ ಬಿಡುಗಡೆ

ವೋಲ್ವೋ ವಿ40 ಮತ್ತು ವಿ40 ಕ್ರಾಸ್ ಕಂಟ್ರಿ ಮಾದರಿಗಳು 2.0 ಲೀಟರ್ ಟರ್ಬೊಚಾರ್ಜ್ಡ್ ಫೋರ್ ಸಿಲಿಂಡರ್ ಡೀಸೆಲ್ ಎಂಜಿನ್ ಗಿಟ್ಟಿಸಿಕೊಳ್ಳಲಿದ್ದು, 320 ಎನ್ ಎಂ ತಿರುಗುಬಲದಲ್ಲಿ 148 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

2017 ವೋಲ್ವೋ ವಿ40 ಮತ್ತು ವಿ40 ಕ್ರಾಸ್ ಕಂಟ್ರಿ ಭಾರತದಲ್ಲಿ ಬಿಡುಗಡೆ

ಈ ಪೈಕಿ ಟಾಪ್ ಎಂಡ್ ವಿ40 ಕ್ರಾಸ್ ಕಂಟ್ರಿ ಮಾದರಿಯಲ್ಲಿರುವ 2.0 ಲೀಟರ್ ಟರ್ಬೊಚಾರ್ಜ್ಡ್ ಪೆಟ್ರೋಲ್ ಎಂಜಿನ್ 300 ಎನ್ ಎಂ ತಿರುಗುಬಲದ್ಲಲಿ 187 ಅಶ್ವಶಕ್ತಿಯನ್ನು ನೀಡಲಿದೆ.

2017 ವೋಲ್ವೋ ವಿ40 ಮತ್ತು ವಿ40 ಕ್ರಾಸ್ ಕಂಟ್ರಿ ಭಾರತದಲ್ಲಿ ಬಿಡುಗಡೆ

ವಿ40 ಮತ್ತು ವಿ40 ಕ್ರಾಸ್ ಕಂಟ್ರಿ ಮಾದರಿಗಳ ಈ ಎಲ್ಲ ಎಂಜಿನ್ ವೆರಿಯಂಟ್ ಗಳು ಆರು ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಪಡೆಯಲಿದೆ.

2017 ವೋಲ್ವೋ ವಿ40 ಮತ್ತು ವಿ40 ಕ್ರಾಸ್ ಕಂಟ್ರಿ ಭಾರತದಲ್ಲಿ ಬಿಡುಗಡೆ

ವಿನ್ಯಾಸದತ್ತ ಗಮನ ಹಾಯಿಸುವುದಾದ್ದಲ್ಲಿ ವೋಲ್ವೋ ಸಂಸ್ಥೆಯ ಸಿಗ್ನೇಚರ್ ಥಾರ್ಸ್ ಹ್ಯಾಮರ್ ಎಲ್ ಇಡಿ ಹೆಡ್ ಲೈಟ್ ಪ್ರಮುಖ ಆಕರ್ಷಣೆಯಾಗಲಿದೆ.

2017 ವೋಲ್ವೋ ವಿ40 ಮತ್ತು ವಿ40 ಕ್ರಾಸ್ ಕಂಟ್ರಿ ಭಾರತದಲ್ಲಿ ಬಿಡುಗಡೆ

ಕಾರಿನೊಳಗೆ ಹೆಚ್ಚಿನ ವೈಶಿಷ್ಟ್ಯಗಳಿಗೆ ಆದ್ಯತೆ ಕೊಡಲಾಗಿದ್ದು, ಡ್ಯುಯಲ್ ಟೋನ್ ಇಂಟಿರಿಯರ್ ಜೊತೆಗೆ ಲೆಥರ್ ಹೋದಿಕೆಗಳಿರಲಿದೆ.

2017 ವೋಲ್ವೋ ವಿ40 ಮತ್ತು ವಿ40 ಕ್ರಾಸ್ ಕಂಟ್ರಿ ಭಾರತದಲ್ಲಿ ಬಿಡುಗಡೆ

ಸುರಕ್ಷತೆಗೂ ಹೆಚ್ಚಿನ ಆದ್ಯತೆ ಕೊಡಲಾಗಿದ್ದು, ಪಾದಚಾರಿ ಏರ್ ಬ್ಯಾಗ್, 2 ಹಂತದ ಫ್ರಂಟ್ ಏರ್ ಬ್ಯಾಗ್ ಜೊತೆಗೆ ಚಾಲಕ ಮೊಣಕಾಲು ಏರ್ ಬ್ಯಾಗ್, ಮುಂಭಾಗದ ಸೀಟುಗಳಿಗೆ ಪ್ರಿ ಟೆನ್ಷನರ್, ಡೈನಾಮಿಕ್ ಸ್ಟೆಬಿಲಿಟಿ, ಟ್ರಾಕ್ಷನ್ ಕಂಟ್ರೋಲ್, ಎಮರ್ಜನ್ಸಿ ಬ್ರೇಕ್ ಅಸಿಸ್ಟ್ ಜೊತೆಗೆ ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ, ಸೈಡ್ ಇಂಪಾಕ್ಟ್ ಪ್ರೊಟೆಕ್ಷನ್, ವಿಪ್ ಲ್ಯಾಶ್ ಪ್ರೊಟೆಕ್ಷನ್ ಮತ್ತು ಸುರಕ್ಷಾ ಸಂರಚನೆಯನ್ನು ಒಳಗೊಂಡಿರಲಿದೆ.

2017 ವೋಲ್ವೋ ವಿ40 ಮತ್ತು ವಿ40 ಕ್ರಾಸ್ ಕಂಟ್ರಿ ಭಾರತದಲ್ಲಿ ಬಿಡುಗಡೆ

ಭಾರತದಲ್ಲಿ ಪ್ರಮುಖವಾಗಿಯೂ ಬಿಎಂಡಬ್ಲ್ಯು 1 ಸಿರೀಸ್ ಮತ್ತು ಮರ್ಸಿಡಿಸ್ ಎ ಕ್ಲಾಸ್ ಮಾದರಿಗಳಿಗೆ ವೋಲ್ವೋ ವಿ40 ಕಾರು ಪ್ರತಿಸ್ಪರ್ಧಿಯಾಗಲಿದೆ.

More from DriveSpark

Article Published On: Friday, December 16, 2016, 13:07 [IST]
English summary
2017 Volvo V40 & V40 Cross Country Launched In India; Prices Start At Rs 25.49 Lakh
Read more on ವೋಲ್ವೋ volvo
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+