ಹಬ್ಬಕ್ಕೆ ಫೋಕ್ಸ್ ವ್ಯಾಗನ್ ಕೊಡುಗೆ ಏನು ಗೊತ್ತಾ?

By Nagaraja

ಭಾರತೀಯರಿಗಾಗಿ ಭಾರತದಲ್ಲಿ ನಿರ್ಮಿತ ಫೋಕ್ಸ್ ವ್ಯಾಗನ್ ಎಮಿಯೊ ಕಾರನ್ನು ಸ್ವಲ್ಪ ಸಮಯಗಳ ಹಿಂದೆಯಷ್ಟೇ ಜರ್ಮನಿ ಮೂಲದ ಪ್ರಖ್ಯಾತ ಫೋಕ್ಸ್ ವ್ಯಾಗನ್ ಸಂಸ್ಥೆ ಪರಿಚಯಿಸಿತ್ತು. ಬಿಡುಗಡೆ ವೇಳೆ ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ಮಾತ್ರ ಲಭ್ಯವಾಗಿದ್ದ ಎಮಿಯೊ ಡೀಸೆಲ್ ಆವೃತ್ತಿಯು ನಿಕಟ ಭವಿಷ್ಯದಲ್ಲೇ ಬಿಡುಗಡೆ ಮಾಡುವುದಾಗಿ ಸಂಸ್ಥೆಯು ಭರವಸೆಯನ್ನು ನೀಡಿತ್ತು.

ಈಗ ಹೇಳಿದಂತೆ ನುಡಿದಿರುವ ಈ ಜರ್ಮನ್ ಸಂಸ್ಥೆಯೀಗ ಎಮಿಯೊ ಡೀಸೆಲ್ ಆವೃತ್ತಿಯನ್ನು ಬಿಡುಗಡೆ ಮಾಡಲು ಸಜ್ಜಾಗುತ್ತಿದೆ. ಇದು ಹಬ್ಬದ ಆವೃತ್ತಿಯಲ್ಲಿ ಬಿಡುಗಡೆಯಾಗಲಿದ್ದು, ಗ್ರಾಹಕರಿಗೆ ಪರಿಪೂರ್ಣ ಕೊಡುಗೆಯಾಗಿರಲಿದೆ.

ಫೋಕ್ಸ್ ವ್ಯಾಗನ್ ಎಮಿಯೊ

ಹಾಗಿದ್ದರೂ ಬೆಲೆ ಬಗ್ಗೆ ವಿವರಗಳು ಇನ್ನಷ್ಟೇ ಬಹಿರಂಗವಾಗಬೇಕಿದೆ. ಇನ್ನು ಎಮಿಯೊ ಪೆಟ್ರೋಲ್ ಆವೃತ್ತಿಗೆ ಸಮಾನವಾದ ವೈಶಿಷ್ಟ್ಯಗಳನ್ನು ಪಡೆಯುವ ಸಾಧ್ಯತೆಯಿದೆ.

ಕಾರಿನಡಿಯಲ್ಲಿ 1.5 ಲೀಟರ್ ಡೀಸೆಲ್ ಎಂಜಿನ್ ಬಳಕೆಯಾಗಲಿದ್ದು 230 ಎನ್ ಎಂ ತಿರುಗುಬಲದಲ್ಲಿ 110 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಇನ್ನು ಮ್ಯಾನುವಲ್ ಗೇರ್ ಬಾಕ್ಸ್ ಇದರಲ್ಲಿರಲಿದೆ.

ಮೂರು ವೆರಿಯಂಟ್ ಗಳಲ್ಲಿ ಎಮಿಯೊ ಡೀಸೆಲ್ ಕಾರು ಆಗಮನಾಗಲಿದೆ. ಅವುಗಳೆಂದರೆ ಟ್ರೆಂಡ್ ಲೈನ್, ಕಂಫರ್ಟ್ ಲೈನ್ ಮತ್ತು ಹೈಲೈನ್.


More from DriveSpark

Article Published On: Monday, September 26, 2016, 16:54 [IST]
English summary
Volkswagen Likely To Launch All-New Product Ahead Of Festive Season
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+