ಹಲವು ವಿಶೇಷತೆಗಳಿಗೆ ಕಾರಣವಾಗಿದೆ ಬಿಡುಗಡೆಯಾಗಲಿರುವ 2017ರ ಸ್ಕೋಡಾ ಒಕ್ಟಿವಿಯಾ..!

Written By:

ಐಷಾರಾಮಿ ಕಾರುಗಳನ್ನು ಉತ್ಪಾದನೆ ಮಾಡುವಲ್ಲಿ ಮುಂಚೂಣಿಯಲ್ಲಿರುವ ಜೆಕ್ ಗಣರಾಜ್ಯದ ಸ್ಕೋಡಾ ಸಂಸ್ಥೆಯು 2017ರ ಒಕ್ಟಿವಿಯಾ ಕಾರನ್ನು ಬಿಡುಗಡೆ ಮಾಡುತ್ತಿದ್ದು, ಹೊಸ ಕಾರಿನ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸದ್ಯ ಜನಪ್ರಿಯತೆ ಹೊಂದುತ್ತಿರುವ ಸ್ಕೋಡಾ ಸಂಸ್ಥೆಯು 2017ರ ಒಕ್ಟಿವಿಯಾ ಮಾದರಿಯನ್ನು ಇದೇ ತಿಂಗಳು 13ರಂದು ಭಾರತದಲ್ಲಿ ಬಿಡುಗಡೆ ಮಾಡುತ್ತಿದ್ದು, ಇದೊಂದು ಪೂರ್ಣ ಪ್ರಮಾಣದ ಪ್ರಿಮಿಯಂ ಸೆಡಾನ್ ಕಾರು ಮಾದರಿಯಾಗಿದೆ.

ಈ ಹಿಂದೆ ಒಕ್ಟಾವಿಯಾ ಕಾರು ಮಾರಾಟದಲ್ಲಿ ಬೃಹತ್ ಪ್ರಮಾಣದ ಮಾರಾಟ ದಾಖಲಿಸಿದ್ದ ಸ್ಕೋಡಾ, ಅದೇ ಮಾದರಿಯನ್ನು ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆಗಳಿಗೆ ಅನುಗುಣವಾಗಿ ಹೊಸ ರೀತಿಯಲ್ಲಿ ಬಿಡುಗಡೆ ಮಾಡುತ್ತಿದೆ.

ಒಕ್ಟಿವಿಯಾ ಕಾರು ಮಾದರಿಯೂ 1.4-ಲೀಟರ್ ಮತ್ತು 1.8-ಲೀಟರ್ ಟಿಎಸ್ಐ ಪೆಟ್ರೋಲ್ ಎಂಜಿನ್ ಹೊಂದಿದ್ದು, 2.0-ಲೀಟರ್ ಟಿಡಿಐ ಡೀಸೆಲ್ ಎಂಜಿನ್ ಪಡೆದುಕೊಳ್ಳುವ ಮೂಲಕ ಈ ಹಿಂದಿನ ಮಾದರಿಗಳಿಂತ ಅತ್ಯುತ್ತಮ ಸೆಡಾನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಇದರ ಜೊತೆಗೆ ಒಕ್ಪಿವಿಯಾ ಮಾದರಿಯೂ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಹಾಗೂ 7-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಹೊಂದಿದ್ದು, 20ರಿಂದ 25 ಲಕ್ಷದ ವರೆಗೆ ಬೆಲೆ ನಿಗದಿಯಾಗಬಹುದೆಂದು ಅಂದಾಜಿಸಲಾಗಿದೆ.

ಹೊರ ವಿನ್ಯಾಸಗಳು ಸ್ಪೋರ್ಟ್ ಕಾರಿನ ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿದ್ದು, ಕಾರಿನ ಬಂಪರ್ ಮತ್ತು ಹೆಡ್‌ಲ್ಯಾಂಪ್ ಭಾಗದ ವಿನ್ಯಾಸಗಳನ್ನು ವಿಶೇಷವಾಗಿ ವಿನ್ಯಾಸ ಮಾಡಲಾಗಿದೆ. ಜೊತೆಗೆ 8-ಇಂಚಿನ ಇನ್ಫೋಮೆಟಿವ್ ಟಚ್ ಸ್ಕ್ರೀನ್, ಆ್ಯಪಲ್ ಕಾರ್ ಪ್ಲೇ ವ್ಯವಸ್ಥೆಯನ್ನು ಅಳವಡಿಸಲಾಗಿದೆ.

ಸುರಕ್ಷತೆಗೂ ಒಕ್ಚಿವಿಯಾ ಮಾದರಿಯಲ್ಲಿ ಹೆಚ್ಚಿನ ಒತ್ತು ನೀಡಲಾಗಿದ್ದು, 8 ಏರ್‌ಬ್ಯಾಗ್, ಎಬಿಎಸ್ ಮತ್ತು ಇಎಸ್‌ಪಿ ತಂತ್ರಜ್ಞಾನಗಳ ವ್ಯವಸ್ಥೆ ಹೊಂದಿದೆ.

ಇನ್ನು ಹೊಸ ಬಗೆಯ ವೈಶಿಷ್ಟ್ಯತೆಗಳನ್ನು ಹೊಂದಿರುವ ಸ್ಕೋಡಾ ಒಕ್ಟಿವಿಯಾ ಕಾರು ಇದೇ ತಿಂಗಳು 13ರಂದು ಬಿಡುಗಡೆಯಾಗುತ್ತಿದ್ದು, ಬಿಡುಗಡೆಯ ಸಂಪೂರ್ಣ ಮಾಹಿತಿಗಳನ್ನು ನಿಮ್ಮ ಡ್ರೈವ್ ಸ್ಪಾರ್ಕ್ ನೀಡಲಿದೆ.

Read more on ಸ್ಕೋಡಾ skoda
English summary
Read in Kannada about 2017 Skoda Octavia Preview.
Story first published: Tuesday, July 11, 2017, 19:39 [IST]
Please Wait while comments are loading...

Latest Photos