ಬಿಡುಗಡೆಗಾಗಿ ಸಜ್ಜುಗೊಳ್ಳುತ್ತಿದೆ 2018ರ ಫೋರ್ಡ್ ಫಿಗೊ ಫೇಸ್‌ಲಿಫ್ಟ್ ಕಾರು
ಅತ್ಯುತ್ತಮ ಬೇಡಿಕೆ ಹೊಂದಿರುವ ಫೋರ್ಡ್ ಫಿಗೊ ಆವೃತ್ತಿಯ ಫೇಸ್‌ಲಿಫ್ಟ್ ಮಾದರಿಯು 2018ರ ಜನವರಿ ಅಂತ್ಯಕ್ಕೆ ಬಿಡುಗಡೆಗೊಳ್ಳಲಿದ್ದು, ಈ ಹಿನ್ನೆಲೆ ಹೊಸ ಕಾರಿನ ಸ್ಪಾಟ್ ಟೆಸ್ಟಿಂಗ್ ಪ್ರಕ್ರಿಯೆ ಕೈಗೊಳ್ಳಲಾಗುತ್ತಿದೆ.
ಹ್ಯಾಚ್‌ಬ್ಯಾಕ್ ಕಾರು ಆವೃತ್ತಿಗಳಲ್ಲಿ ಅತ್ಯುತ್ತಮ ಬೇಡಿಕೆ ಹೊಂದಿರುವ ಫೋರ್ಡ್ ಫಿಗೊ ಆವೃತ್ತಿಯ ಫೇಸ್‌ಲಿಫ್ಟ್ ಮಾದರಿಯು 2018ರ ಜನವರಿ ಅಂತ್ಯಕ್ಕೆ ಬಿಡುಗಡೆಗೊಳ್ಳಲಿದ್ದು, ಈ ಹಿನ್ನೆಲೆ ಹೊಸ ಕಾರಿನ ಸ್ಪಾಟ್ ಟೆಸ್ಟಿಂಗ್ ಪ್ರಕ್ರಿಯೆ ಕೈಗೊಳ್ಳಲಾಗುತ್ತಿದೆ.

ಈ ಹಿಂದೆ 2010ರಲ್ಲಿ ಫಸ್ಟ್ ಜನರೇಷನ್ ಹಾಗೂ 2015ರಲ್ಲಿ ಸೇಕೆಂಡ್ ಜನರೇಷನ್ ಫಿಗೊ ಹ್ಯಾಚ್‌ಬ್ಯಾಕ್ ಕಾರು ಆವೃತ್ತಿಯನ್ನು ಪರಿಚಯಿಸಿದ್ದ ಫೋರ್ಡ್ ಸಂಸ್ಥೆಯು ಇದೀಗ ಅದೇ ಆವೃತ್ತಿಯ ಫೇಸ್‌ಲಿಫ್ಟ್ ಮಾದರಿಯನ್ನು ಬಿಡುಗಡೆ ಮಾಡುವ ತವಕದಲ್ಲಿದ್ದು, ಈ ಹಿನ್ನೆಲೆ ಸ್ಪಾರ್ಟ್ ಟೆಸ್ಟಿಂಗ್ ನಡೆಸುತ್ತಿದೆ.

ಹೀಗಾಗಿ ಹ್ಯಾಚ್‌ಬ್ಯಾಕ್ ಕಾರು ಪ್ರಿಯರ ಗಮನಸೆಳೆದಿರುವ ಫೇಸ್‌ಲಿಫ್ಟ್ ಫಿಗೊ ಆವೃತ್ತಿಯು ಈ ಹಿಂದಿನ ಸೇಕೆಂಡ್ ಜನರೇಷನ್ ಮಾದರಿಯಲ್ಲೇ ತಾಂತ್ರಿಕ ಅಂಶಗಳನ್ನು ಹೊಂದಿದ್ದು, ಹೊರವಿನ್ಯಾಸದಲ್ಲಿ ಗುರುತರ ಬದಲಾವಣೆಗಳನ್ನು ಪಡೆದುಕೊಂಡಿದೆ.

ಇನ್ನು ಕೆಲವು ವರದಿಗಳ ಪ್ರಕಾರ ಈ ಹಿಂದಿನ 2015ರ ಸೇಕೆಂಡ್ ಜನರೇಷನ್ ಮಾದರಿಯು ಮಾರಾಟದಲ್ಲಿ ಹಿನ್ನಡೆ ಅನುಭವಿಸುತ್ತಿದ್ದು, ಇದಕ್ಕಾಗಿ ಗ್ರಾಹಕರನ್ನು ಸೆಳೆಯುವ ಉದ್ದೇಶಗಳೊಂದಿಗೆ ಫೇಸ್‌ಲಿಫ್ಟ್ ಮಾದರಿಯನ್ನು ಪರಿಚಯಿಸುವ ಇರಾದೆಯಲ್ಲಿದೆ.

ಎಂಜಿನ್ ಸಾಮರ್ಥ್ಯ
1.5-ಲೀಟರ್ ಡಿಸೇಲ್ ಎಂಜಿನ್ ಹಾಗೂ 1.5-ಲೀಟರ್ ಎಂಜಿನ್‌ನೊಂದಿಗೆ ಖರೀದಿ ಲಭ್ಯವಾಗಲಿರುವ ಫಿಗೊ ಫೇಸ್‌ಲಿಫ್ಟ್ ಆವೃತ್ತಿಯು ಇಕೋ ಸ್ಪೋರ್ಟ್ ಮಾದರಿಯಲ್ಲೇ ಶಕ್ತಿ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದ್ದು, ಮುಂಬರುವ ಆಟೋ 2018 ಮೇಳದಲ್ಲಿ ಪ್ರದರ್ಶನಗೊಳ್ಳುವ ನೀರಿಕ್ಷೆಯಲ್ಲಿದೆ.

2018ರ ಆಟೋ ಮೇಳದಲ್ಲಿ ಪ್ರದರ್ಶನಗೊಂಡ ನಂತರವಷ್ಟೇ ಬಿಡುಗಡೆ ಬಗ್ಗೆ ಮಾಹಿತಿ ಹಂಚಿಕೊಳ್ಳಲಿರುವ ಫೋರ್ಡ್ ಸಂಸ್ಥೆಯು ಹ್ಯಾಚ್‌ಬ್ಯಾಕ್ ಆವೃತ್ತಿಗಳಲ್ಲೇ ಅತಿ ವಿನೂತನ ಕಾರು ಮಾದರಿಯಾಗುವ ನೀರಿಕ್ಷೆ ಹೊಂದಿದೆ.

ಡ್ರೈವ್ ಸ್ಪಾರ್ಕ್ ಅಭಿಪ್ರಾಯ
ಉತ್ತಮ ಕಾರ್ಯಕ್ಷಮತೆಯಲ್ಲಿ ಮುಂಚೂಣಿಯಲ್ಲಿರುವ ಫೋರ್ಡ್ ಕಾರುಗಳು ಭಾರತೀಯ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಇತ್ತೀಚಿನ ಮಾರುಕಟ್ಟೆ ಬೇಡಿಕೆ ಅನುಗುಣವಾಗಿ ಇಕೋ ಸ್ಪೋರ್ಟ್, ಫಿಗೊ ಆವೃತ್ತಿಗಳು ಫೇಸ್‌ಲಿಫ್ಟ್ ಆವೃತ್ತಿಗಳೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ.


Click it and Unblock the Notifications








