ಲಾರಿ ಮತ್ತು ಬಸ್ ನಡುವೆ ಡಿಕ್ಕಿ- ಭೀಕರ ಅಪಘಾತದಲ್ಲಿ 22 ಮಂದಿ ಸಜೀವ ದಹನ

Written By:

ಉತ್ತರ ಪ್ರದೇಶದ ಬರೇಲಿ ಬಳಿ ಲಾರಿ ಮತ್ತು ಬಸ್ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, 22 ಜನರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, 15 ಮಂದಿಗೆ ಗಂಭೀರ ಗಾಯಗಳಾಗಿರುವ ಘಟನೆ ನಡೆದಿದೆ.

To Follow DriveSpark On Facebook, Click The Like Button
ಲಾರಿ ಮತ್ತು ಬಸ್ ಡಿಕ್ಕಿ- ಭೀಕರ ಅಪಘಾತದಲ್ಲಿ 22 ಮಂದಿ ದುರ್ಮರಣ

ಮಧ್ಯರಾತ್ರಿ 1 ಗಂಟೆಗೆ ಈ ಅಪಘಾತ ಸಂಭವಿಸಿದ್ದು, ಬಸ್‌ಗೆ ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ 22 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನು 15 ಮಂದಿಗೆ ಗಂಭೀರ ಗಾಯಗಳಾಗಿವೆ.

ಚಿತ್ರ ಕೃಪೆ- ಹಿಂದೂಸ್ತಾನ್ ಟೈಮ್ಸ್

ಲಾರಿ ಮತ್ತು ಬಸ್ ಡಿಕ್ಕಿ- ಭೀಕರ ಅಪಘಾತದಲ್ಲಿ 22 ಮಂದಿ ದುರ್ಮರಣ

ಘಟನೆಗೆ ಬಸ್ ಚಾಲಕನ ಅತಿಯಾದ ವೇಗವೇ ಕಾರಣ ಎನ್ನಲಾಗಿದ್ದು, ವೇಗವಾಗಿ ಡಿಕ್ಕಿ ಹೊಡೆದ ಪರಿಣಾಮ ಬಸ್ ಹೊತ್ತಿ ಉರಿದಿದೆ.

ಚಿತ್ರ ಕೃಪೆ- ಎಬಿಪಿ ನ್ಯೂಸ್

ಲಾರಿ ಮತ್ತು ಬಸ್ ಡಿಕ್ಕಿ- ಭೀಕರ ಅಪಘಾತದಲ್ಲಿ 22 ಮಂದಿ ದುರ್ಮರಣ

ಬರೇಲಿ ಮತು ಶಾಹ್‍ಜಹಾನ್‍ಪುರ ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ನಿರ್ಮಾಣ ಪ್ರಗತಿಯಲ್ಲಿದ್ದು, ಲಾರಿ ಓವರ್‌ಟೆಕ್ ಮಾಡುವ ವೇಳೆ ಈ ದುರಂತ ನಡೆದಿದೆ.

ಲಾರಿ ಮತ್ತು ಬಸ್ ಡಿಕ್ಕಿ- ಭೀಕರ ಅಪಘಾತದಲ್ಲಿ 22 ಮಂದಿ ದುರ್ಮರಣ

ಅಪಘಾತದ ನಂತರ ಬಸ್ಸಿನ ಡೀಸೆಲ್ ಟ್ಯಾಂಕ್ ಸ್ಫೋಟಗೊಂಡಿದ್ದು, ಒಮ್ಮೆಲೆ ಬೆಂಕಿ ಹೊತ್ತಿಕೊಂಡಿದೆ. ಈ ವೇಳೆ ಬಸ್ ಪ್ರಯಾಣಿಕರು ನಿದ್ರೆಯಲ್ಲಿದ್ದಿದ್ದರಿಂದ ಬಸ್‍ನಿಂದ ಕೆಳಗಿಯಲು ಸಾಧ್ಯವಾಗಿಲ್ಲ.

ಚಿತ್ರ ಕೃಪೆ- ಅಮರ್ ಉಜಾಲಾ

ಲಾರಿ ಮತ್ತು ಬಸ್ ಡಿಕ್ಕಿ- ಭೀಕರ ಅಪಘಾತದಲ್ಲಿ 22 ಮಂದಿ ದುರ್ಮರಣ

ಇನ್ನು ಕೆಲ ಪ್ರಯಾಣಿಕರು ಕಿಟಕಿಯಿಂದ ಹೊರ ಬರಲು ಪ್ರಯತ್ನಿಸಿದ್ದು, ನಿದ್ರೆಗೆ ಜಾರಿದ್ದ ಕೆಲವರು ಬೆಂಕಿಗೆ ಆಹುತಿಯಾಗಿದ್ದಾರೆ.

ಚಿತ್ರ ಕೃಪೆ- ಜಾಗರಣ್

ಲಾರಿ ಮತ್ತು ಬಸ್ ಡಿಕ್ಕಿ- ಭೀಕರ ಅಪಘಾತದಲ್ಲಿ 22 ಮಂದಿ ದುರ್ಮರಣ

ಕೆಲ ವರದಿಯ ಪ್ರಕಾರ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬರಲು ಸುಮಾರು ಒಂದೂವರೆ ಗಂಟೆ ಬೇಕಾಯ್ತು ಎನ್ನಲಾಗಿದ್ದು, ಘಟನೆ ನಂತರ ಬಸ್ ಮತ್ತು ಟ್ರಕ್ ಎರಡಕ್ಕೂ ಬೆಂಕಿ ಹೊತ್ತಿಕೊಂಡಿದೆ.

ಚಿತ್ರ ಕೃಪೆ- ಹಿಂದೂಸ್ತಾನ್ ಟೈಮ್ಸ್

ಲಾರಿ ಮತ್ತು ಬಸ್ ಡಿಕ್ಕಿ- ಭೀಕರ ಅಪಘಾತದಲ್ಲಿ 22 ಮಂದಿ ದುರ್ಮರಣ

ಉತ್ತರಪ್ರದೇಶ ರಾಜ್ಯ ಸಾರಿಗೆ ಸಂಸ್ಥೆಗೆ ಸೇರಿದ ಬಸ್ ಇದಾಗಿದ್ದು, ನವದೆಹಲಿಯಿಂದ ಉತ್ತರಪ್ರದೇಶದ ಗೊಂಡಾ ಜಿಲ್ಲೆಯ ಕಡೆಗೆ ಹೋಗುತ್ತಿತ್ತು ಎನ್ನಲಾಗಿದೆ.

ಲಾರಿ ಮತ್ತು ಬಸ್ ಡಿಕ್ಕಿ- ಭೀಕರ ಅಪಘಾತದಲ್ಲಿ 22 ಮಂದಿ ದುರ್ಮರಣ

ಇನ್ನು ಹೊತ್ತಿ ಉರಿದ ಬಸ್‍ನಲ್ಲಿ ಒಟ್ಟು ಎಷ್ಟು ಜನ ಇದ್ದರು ಎಂಬುವುದು ಇದುವರೆಗೂ ಯಾವುದೇ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ.

ಚಿತ್ರ ಕೃಪೆ- ದೈನಿಕ್ ಭಾಸ್ಕರ್

ಲಾರಿ ಮತ್ತು ಬಸ್ ಡಿಕ್ಕಿ- ಭೀಕರ ಅಪಘಾತದಲ್ಲಿ 22 ಮಂದಿ ದುರ್ಮರಣ

ಇನ್ನು ಗಾಯಾಳುಗಳಿಗೆ ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಿಸಲಾಗುತ್ತಿದ್ದು, ಘಟನೆ ಕುರಿತಂತೆ ಉತ್ತರ ಪ್ರದೇಶ ಪೊಲೀಸರು ತೀವ್ರ ತನಿಖೆ ನಡೆದಿದ್ದಾರೆ.

ಚಿತ್ರ ಕೃಪೆ- ಎಬಿಪಿ ನ್ಯೂಸ್

Read more on ಅಪಘಾತ accident
English summary
Read in Kannada about accident in uttarpradesh atleast 22 people death, 15 injured.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark