ಮಾರಾಟದಲ್ಲಿ ಹೋಂಡಾ ಕಂಪನಿಯನ್ನು ಹಿಂದಿಕ್ಕಿದ ಟೊಯೊಟಾ

Written By:

ಭಾರತದ ಮಾರುಕಟ್ಟೆಯಲ್ಲಿ ಟಾಟಾ ಮೋಟರ್ಸ್ ಕಂಪನಿ ಮಾತ್ರ ಹೋಂಡಾವನ್ನು ಮಾರಾಟ ವಿಭಾಗದಲ್ಲಿ ಮೀರಿಸಿಲ್ಲ, ಟೊಯೊಟಾ ಕಿರ್ಲೋಸ್ಕರ್ ಮೋಟಾರ್ಸ್ ಕೂಡ ಹೋಂಡಾ ಕಂಪನಿಯನ್ನು 6ನೇ ಸ್ಥಾನಕ್ಕೆ ತಳ್ಳಲು ಯಶಸ್ವಿಯಾಗಿದೆ.

To Follow DriveSpark On Facebook, Click The Like Button
ಮಾರಾಟದಲ್ಲಿ ಹೋಂಡಾ ಕಂಪನಿಯನ್ನು ಹಿಂದಿಕ್ಕಿದ ಟೊಯೊಟಾ

ಹೌದು, ಟೊಯೊಟಾ ಸಂಸ್ಥೆಯು ಸದ್ಯ ಈ ವರ್ಷದ ನವೆಂಬರ್ ತಿಂಗಳಿನಲ್ಲಿ 12,734 ಕಾರುಗಳನ್ನು ಮಾರಾಟ ಮಾಡುವ ಮೂಲಕ ಭಾರತದ ಐದನೇ ಅತಿದೊಡ್ಡ ವಾಹನ ತಯಾರಕ ಸಂಸ್ಥೆಯಾಗಿ ಹೊರ ಹೊಮ್ಮಿದೆ. ಹೋಂಡಾ ತನ್ನ ಸ್ಥಾನವನ್ನು ಟೊಯೊಟಾ ಕಂಪನಿಗೆ ಬಿಟ್ಟುಕೊಟ್ಟಿದೆ.

ಮಾರಾಟದಲ್ಲಿ ಹೋಂಡಾ ಕಂಪನಿಯನ್ನು ಹಿಂದಿಕ್ಕಿದ ಟೊಯೊಟಾ

ಟೊಯೊಟಾ ಕಂಪನಿಯ ಇನೋವಾ ಕ್ರಿಸ್ತಾ ಎಂಪಿವಿ, ಎಟಿಯೋಸ್ ಲಿವಾ ಹ್ಯಾಚ್‌ಬ್ಯಾಕ್ ಮತ್ತು ಫಾರ್ಚುನರ್ ಐಷಾರಾಮಿ ಎಸ್‌ಯುವಿಗಳ ಯಶಸ್ವಿ ಮಾರಾಟದ ಕಾರಣ ಟೊಯೊಟಾ ಕಂಪನಿಯು ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಿದೆ.

ಮಾರಾಟದಲ್ಲಿ ಹೋಂಡಾ ಕಂಪನಿಯನ್ನು ಹಿಂದಿಕ್ಕಿದ ಟೊಯೊಟಾ

ಮತ್ತೊಂದೆಡೆ, ಹೋಂಡಾ ತನ್ನ ಕಳಪೆ ಕಾರ್ಯಕ್ಷಮತೆಯಿಂದಾಗಿ ಒಂದು ಸ್ಥಾನ ಕೆಳಗಿಳಿದಿದೆ. ಅತ್ಯುತ್ತಮ ಮಾರಾಟವಾಗುವ ಸಿಟಿ ಸೆಡಾನ್ ಕೇವಲ 3,000 ಕಾರುಗಳು ಮಾತ್ರ ಮಾರಾಟವಾಗಿದೆ. ಇದರಿಂದ ಸರಾಸರಿ 4,500 ಮಾಸಿಕ ಮಾರಾಟ ಕಡಿಮೆಯಾಗಿದೆ.

ಮಾರಾಟದಲ್ಲಿ ಹೋಂಡಾ ಕಂಪನಿಯನ್ನು ಹಿಂದಿಕ್ಕಿದ ಟೊಯೊಟಾ

2018ರಲ್ಲಿ, ಹೋಂಡಾ ಕಂಪನಿಯು ಮತ್ತೆ ತನ್ನ ಪ್ರಾಬಲ್ಯವನ್ನು ಮೆರೆಯುವ ಲಕ್ಷಣಗಳು ಗೋಚರಿಸುತ್ತಿವೆ. ಹೋಂಡಾ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಕಾರುಗಳನ್ನು ಬಿಡುಗಡೆಗೊಳಿಸುವ ಯೋಜನೆ ರೂಪಿಸಿರುವುದು ಇದಕ್ಕೆ ಮುಖ್ಯ ಕಾರಣವಾಗಿದೆ.

ಮಾರಾಟದಲ್ಲಿ ಹೋಂಡಾ ಕಂಪನಿಯನ್ನು ಹಿಂದಿಕ್ಕಿದ ಟೊಯೊಟಾ

2018 ರಲ್ಲಿ, ಹೋಂಡಾ ಕಂಪನಿಯು ಹೊಸ ಅಮೇಜ್ ಕಾಂಪ್ಯಾಕ್ಟ್ ಸೆಡಾನ್ ಪ್ರಾರಂಭಿಸುತ್ತದೆ. ಇದು ಉತ್ತಮ ಮಾರಾಟಗೊಳ್ಳುವ ನಿರೀಕ್ಷೆಯಿದೆ ಹಾಗು ಭಾರತೀಯ ಮಾರುಕಟ್ಟೆಯಲ್ಲಿ ಮೊದಲ ಬಾರಿಗೆ ಸಿಆರ್-ವಿ ಡೀಸೆಲ್ ಚಾಲಿತ ಆವೃತ್ತಿಯನ್ನು ಸಹ ಪ್ರಾರಂಭಿಸುತ್ತದೆ.

ಮಾರಾಟದಲ್ಲಿ ಹೋಂಡಾ ಕಂಪನಿಯನ್ನು ಹಿಂದಿಕ್ಕಿದ ಟೊಯೊಟಾ

ಹ್ಯುಂಡೈ ಕ್ರೆಟಾದೊಂದಿಗೆ ಸ್ಪರ್ಧಿಸಲಿರುವ ಎಚ್ಆರ್-ವಿ ಕಾಂಪ್ಯಾಕ್ಟ್ ಎಸ್‌ಯುವಿ ಮುಂದಿನ ವರ್ಷ ಭಾರತಕ್ಕೆ ಬರುವ ಮತ್ತೊಂದು ವಾಹನವಾಗಿದೆ. ಮತ್ತೊಂದೆಡೆ, ಟೊಯೊಟಾ ಕಂಪನಿಯು ಭಾರತದಲ್ಲಿ ಮುಂದಿನ ವರ್ಷ ಕೇವಲ ಒಂದು ವಾಹನವನ್ನು ಮಾತ್ರ ಬಿಡುಗಡೆಗೊಳಿಸಿದೆ.

Read more on honda ಹೋಂಡಾ
English summary
sales : After Tata Motors, Toyota now overtakes Honda in India
Story first published: Wednesday, December 6, 2017, 17:53 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark