ಸಂಶೋಧನೆಗಳನ್ನು ಉತ್ತೇಜಿಸಲು ಅಶೋಕ್ ಲೈಲ್ಯಾಂಡ್-ಐಐಟಿ ಮದ್ರಾಸ್ ನಡುವೆ ಹೊಸ ಒಡಂಬಡಿಕೆ
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮದ್ರಾಸ್‌ನಲ್ಲಿರುವ ಸೆಂಟರ್ ಆಫ್ ಬ್ಯಾಟರಿ ಎಂಜನಿಯರಿಂಗ್ ವಿಭಾಗವನ್ನು ಪ್ರೋತ್ಸಾಹಿಸಲು ಮುಂದಾಗಿರುವ ಪ್ರತಿಷ್ಠಿತ ವಾಹನ ಉತ್ಪಾದನಾ ಸಂಸ್ಥೆ ಅಶೋಕ್ ಲೈಲ್ಯಾಂಡ್ ಹೊಸ ಒಡಂಬಡಿಕೆಗೆ ಸಹಿ ಹಾಕಿದೆ.
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮದ್ರಾಸ್‌ನಲ್ಲಿರುವ ಸೆಂಟರ್ ಆಫ್ ಬ್ಯಾಟರಿ ಎಂಜನಿಯರಿಂಗ್ ವಿಭಾಗವನ್ನು ಪ್ರೋತ್ಸಾಹಿಸಲು ಮುಂದಾಗಿರುವ ಪ್ರತಿಷ್ಠಿತ ವಾಹನ ಉತ್ಪಾದನಾ ಸಂಸ್ಥೆ ಅಶೋಕ್ ಲೈಲ್ಯಾಂಡ್ ಹೊಸ ಒಡಂಬಡಿಕೆಗೆ ಸಹಿ ಹಾಕಿದೆ.

ಉದ್ಯಮ ವಲಯ ಮತ್ತು ಸಂಶೋಧಕರ ನಡುವೆ ಸಹಕಾರವನ್ನು ಒದಗಿಸುವ ಮೂಲಕ ನಡೆಯುತ್ತಿರುವ ಸಂಶೋಧನೆಗಳಿಗೆ ಸಹಾಯ ಮಾಡಬಹುದಾದ ಮೆಮೊರಾಂಡಮ್ ಆಫ್ ಅಂಡರ್‌ಸ್ಟ್ಯಾಂಡಿಂಗ್(ತಿಳುವಳಿಕೆಯ ಸ್ಮರಣಿಕೆ)ಗೆ ಪರಸ್ಪರ ಸಹಿ ಹಾಕಿರುವ ಅಶೋಕ್ ಲೈಲ್ಯಾಂಡ್ ಮತ್ತು ಐಐಟಿ ಮದ್ರಾಸ್ ಹೊಸ ಯೋಜನೆಗೆ ಮುಂದಾಗಿವೆ.

ಈಗಾಗಲೇ ದೇಶಿಯವಾಗಿ ಅತ್ಯುತ್ತಮ ಬ್ಯಾಟರಿ ಎಂಜನಿಯರಿಂಗ್ ವಿಭಾಗದಲ್ಲಿ ಹೊಸ ಹೊಸ ಸಂಶೋಧನೆಗಳನ್ನು ಕೈಗೊಳ್ಳುವ ಮೂಲಕ ಮಹತ್ವದ ಸಾಧನೆ ಮಾಡಿರುವ ಐಐಟಿ ಮದ್ರಾಸ್ ಸಂಸ್ಥೆಯು, ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಗೆ ಉತ್ತೇಜನ ನೀಡುತ್ತಿದೆ.

ಈ ಹಿನ್ನೆಲೆ ಅಶೋಕ್ ಲೈಲ್ಯಾಂಡ್ ಕೂಡಾ ಅತ್ಯುತ್ತಮ ಬ್ಯಾಟರಿ ಸಲಕರಣೆಗಳ ಮೂಲಕ ಹೆಚ್ಚಿನ ಮಟ್ಟದ ಎಲೆಕ್ಟ್ರಿಕ್ ಬಸ್‌ಗಳ ಉತ್ಪಾದನೆಗೆ ಮುಂದಾಗಿದ್ದು, ಇದಕ್ಕಾಗಿಯೇ ಮದ್ರಾಸ್ ಐಐಟಿ ಸೆಂಟರ್ ಆಫ್ ಬ್ಯಾಟರಿ ಎಂಜನಿಯರಿಂಗ್ ವಿಭಾಗವನ್ನು ಪ್ರೋತ್ಸಾಹಿಸುವ ಸಹಕಾರ ಪಡೆಯಲಿದೆ.

ಇದಲ್ಲದೇ 2030ರ ವೇಳೆಗೆ ದೇಶದಲ್ಲಿ ಶೇ.90 ರಷ್ಟು ವಾಹನಗಳು ಎಲೆಕ್ಟ್ರಿಕ್ ಎಂಜಿನ್ ಮಯವಾಗಲಿದ್ದು, ಭವಿಷ್ಯದ ಯೋಜನೆಗಳನ್ನು ಸಹಕಾರಗೊಳಿಸಲು ನಿಟ್ಟಿನಲ್ಲಿ ಕೈಗೊಳ್ಳಲಾಗಿರುವ ಅಶೋಕ್ ಲೈಲ್ಯಾಂಡ್-ಐಐಟಿ ಮದ್ರಾಸ್ ನಡುವಿನ ಹೊಸ ಒಡಂಬಡಿಕೆ ಮಹತ್ವ ಪಡೆಯುವುದರಲ್ಲಿ ಯಾವುದೇ ಸಂದೇಹವಿಲ್ಲ.

ಡ್ರೈವ್ ಸ್ಪಾರ್ಕ್ ಅಭಿಪ್ರಾಯ
ಪ್ರಸ್ತುತ ದಿನಗಳಲ್ಲಿ ಉದ್ಯಮ ಮತ್ತು ಸಂಶೋಧನಾ ವಲಯಗಳು ತದ್ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿದ್ದು, ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಐಐಟಿ ಮದ್ರಾಸ್ ಮತ್ತು ಅಶೋಕ್ ಲೈಲ್ಯಾಂಡ್ ಮಹತ್ವದ ಯೋಜನೆಗೆ ಮುಂದಾಗಿರುವುದು ಗಮನಾರ್ಹ ಸಂಗತಿ.


Click it and Unblock the Notifications








