ಕರೋನಾ ಸಂಕಷ್ಟ: ಪಿಎಂ ಪರಿಹಾರ ನಿಧಿಗೆ ದೇಣಿಗೆ ನೀಡಿದ ಅಶೋಕ್ ಲೈಲ್ಯಾಂಡ್

ಮಹಾಮಾರಿ ಕರೋನಾ ವೈರಸ್‌ನಿಂದಾಗಿ ಸರ್ಕಾರಗಳ ಆರ್ಥಿಕ ಪರಿಸ್ಥಿತಿಯು ಶೋಚನೀಯ ಸ್ಥಿತಿ ತಲುಪಿದ್ದು, ಆಟೋ ಉತ್ಪಾದನಾ ಕಂಪನಿಗಳು ಸಂಕಷ್ಟದ ಸಮಯದಲ್ಲೂ ಸರ್ಕಾರದ ಜೊತೆಗೆ ಕೈಜೋಡಿಸಿವೆ.

ಕರೋನಾ ಸಂಕಷ್ಟ: ಪಿಎಂ ಪರಿಹಾರ ನಿಧಿಗೆ ದೇಣಿಗೆ ನೀಡಿದ ಅಶೋಕ್ ಲೈಲ್ಯಾಂಡ್

ಹಿಂದುಜಾ ಸಮೂಹದ ಅಶೋಕ್ ಲೈಲ್ಯಾಂಡ್ ಕಂಪನಿಯು ಕೂಡಾ ಕರೋನಾ ವೈರಸ್‌ನಿಂದ ಸಂಕಷ್ಟಕ್ಕೆ ಸಿಲುಕಿರುವ ಕೇಂದ್ರ ಸರ್ಕಾರಕ್ಕೆ ಆರ್ಥಿಕ ನೆರವು ನೀಡಿದ್ದು, 41 ಲಕ್ಷ ರೂಪಾಯಿ ದೇಣಿಗೆ ನೀಡಿದೆ. ಅಶೋಕ್ ಲೈಲ್ಯಾಂಡ್ ಕಂಪನಿಯ ಉದ್ಯೋಗಿಗಳೇ ತಮ್ಮ ಆದಾಯದಲ್ಲಿ ಇಂತಿಷ್ಟು ಪ್ರಮಾಣದ ದೇಣಿಗೆ ನೀಡಿದ್ದು, ದೇಣಿಗೆ ಹಣವನ್ನು ಪ್ರಧಾನಮಂತ್ರಿಗಳ ತುರ್ತು ಪರಿಹಾರ ನಿಧಿಗೆ ಸಲ್ಲಿಕೆ ಮಾಡಲಾಗಿದೆ.

ಕರೋನಾ ಸಂಕಷ್ಟ: ಪಿಎಂ ಪರಿಹಾರ ನಿಧಿಗೆ ದೇಣಿಗೆ ನೀಡಿದ ಅಶೋಕ್ ಲೈಲ್ಯಾಂಡ್

ಜೊತೆಗೆ ಲಾಕ್‌ಡೌನ್‌ನಿಂದಾಗಿ ಸಮಸ್ಯೆ ಸಿಲುಕಿರುವ ಸಾವಿರಾರು ದಿನಗೂಲಿ ಕಾರ್ಮಿಕರಿಗೆ ದಿನಂಪ್ರತಿ ಆಹಾರ ಪೊಟ್ಟಣಗಳನ್ನು ವಿತರಣೆ ಮಾಡುತ್ತಿದ್ದು, ಅಗತ್ಯವಿರುವ ಜನರಿಗೆ ಮಾಸ್ಕ್, ಸ್ಯಾನಿಟೈಜರ್ ಮತ್ತು ಫೇಸ್‌ಶೀಲ್ಡ್‌ಗಳನ್ನು ಪೂರೈಕೆ ಮಾಡುತ್ತಿದೆ.

MOST READ: ಲಾಕ್‌ಡೌನ್ ಸಂಕಷ್ಟ- ಆಟೋ ಚಾಲಕರ ಬ್ಯಾಂಕ್ ಖಾತೆ ಸೇರಿದ ರೂ.5 ಸಾವಿರ ಪರಿಹಾರ..

ಕರೋನಾ ಸಂಕಷ್ಟ: ಪಿಎಂ ಪರಿಹಾರ ನಿಧಿಗೆ ದೇಣಿಗೆ ನೀಡಿದ ಅಶೋಕ್ ಲೈಲ್ಯಾಂಡ್

ಇನ್ನು ವೈರಸ್ ಅಟ್ಟಹಾಸ ಹೆಚ್ಚಾಗುತ್ತಿದ್ದಂತೆ ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಲಾಕ್ ಡೌನ್ ವಿಧಿಸಲಾಗಿದ್ದು, ಎಲ್ಲಾ ರೀತಿಯ ವಾಣಿಜ್ಯ ಚಟುವಟಿಕೆಗಳನ್ನು ಸ್ಥಗಿತಗೊಂಡಿವೆ. ಈ ಹಿನ್ನಲೆಯಲ್ಲಿ ಭಾರತ ಸೇರಿ ವಿಶ್ವದ ಹಲವು ರಾಷ್ಟ್ರಗಳ ಆರ್ಥಿಕ ಪರಿಸ್ಥಿತಿ ಶೋಚನೀಯ ಸ್ಥಿತಿ ತಲುಪಿದೆ.

ಕರೋನಾ ಸಂಕಷ್ಟ: ಪಿಎಂ ಪರಿಹಾರ ನಿಧಿಗೆ ದೇಣಿಗೆ ನೀಡಿದ ಅಶೋಕ್ ಲೈಲ್ಯಾಂಡ್

ಇದರಿಂದ ಕರೋನಾ ವೈರಸ್ ವಿರುದ್ಧ ಹೋರಾಟಕ್ಕಾಗಿ ಆರಂಭಿಸಲಾಗಿರುವ ದೇಣಿಗೆ ಸಂಗ್ರಹ ಅಭಿಯಾನಕ್ಕೆ ಈಗಾಗಲೇ ಭಾರೀ ಪ್ರಮಾಣದ ನೆರವು ಹರಿದು ಬಂದಿದ್ದು, ಉದ್ಯಮಿಗಳು, ಚಿತ್ರ ನಟರು, ಸರ್ಕಾರಿ ಅಧಿಕಾರಿಗಳು ಮತ್ತು ಜನಸಾಮಾನ್ಯರು ಸಹ ತಮ್ಮ ಕೈಲಾದಷ್ಟು ದೇಣಿಗೆ ನೀಡಿ ಕರೋನಾ ವಿರುದ್ಧ ಸರ್ಕಾರದ ಹೋರಾಟಕ್ಕೆ ಶಕ್ತಿ ತುಂಬಿದ್ದಾರೆ.

MOST READ: ಲಾಕ್‌ಡೌನ್ ಎಫೆಕ್ಟ್- ವಿನಾಯ್ತಿ ಸಿಕ್ಕರೂ ವಾಹನ ಉತ್ಪಾದನೆಗೆ ಮುಂದಾಗದ ಆಟೋ ಕಂಪನಿಗಳು

ಕರೋನಾ ಸಂಕಷ್ಟ: ಪಿಎಂ ಪರಿಹಾರ ನಿಧಿಗೆ ದೇಣಿಗೆ ನೀಡಿದ ಅಶೋಕ್ ಲೈಲ್ಯಾಂಡ್

ಅದರಲ್ಲೂ ಆಟೋ ಉತ್ಪಾದನಾ ಕಂಪನಿಗಳು ಕರೋನಾ ವಿರುದ್ದ ಹೋರಾಟಕ್ಕಾಗಿ ಸಂಕಷ್ಟದ ಸಮಯದಲ್ಲೂ ಸರ್ಕಾರದ ಜೊತೆ ನಿಂತಿರುವುದಲ್ಲದೆ ವೈದ್ಯಕೀಯ ಉಪಕರಣಗಳ ತಯಾರಿಕೆಗೆ ಚಾಲನೆ ನೀಡಿವೆ.

ಕರೋನಾ ಸಂಕಷ್ಟ: ಪಿಎಂ ಪರಿಹಾರ ನಿಧಿಗೆ ದೇಣಿಗೆ ನೀಡಿದ ಅಶೋಕ್ ಲೈಲ್ಯಾಂಡ್

ಆರೋಗ್ಯ ಕೇಂದ್ರಗಳಿಗೆ ಅಗತ್ಯವಿರುವ ಟೆಸ್ಟಿಂಗ್ ಕಿಟ್, ವೆಂಟಿಲೆಟರ್ ಮತ್ತು ಐಸಿಯು ಯುನಿಟ್‌ಗೆ ಅಗತ್ಯವಿರುವ ಸೌಲಭ್ಯಗಳನ್ನು ನೀಡುವುದಾಗಿ ಘೋಷಣೆ ಮಾಡಿದ್ದು, ಆರೋಗ್ಯ ಇಲಾಖೆಯ ಬೇಡಿಕೆಗಳನ್ನು ಪೂರೈಸಲು ಸಿದ್ದವಾಗುತ್ತಿವೆ.

MOST READ: ಲಾಕ್ ಡೌನ್ ಎಫೆಕ್ಟ್- ಮಾರ್ಗ ಮಧ್ಯದಲ್ಲೇ ಉಳಿದ ಸಾವಿರಾರು ಕೋಟಿ ಮೌಲ್ಯದ ಹೊಸ ವಾಹನಗಳು

ಕರೋನಾ ಸಂಕಷ್ಟ: ಪಿಎಂ ಪರಿಹಾರ ನಿಧಿಗೆ ದೇಣಿಗೆ ನೀಡಿದ ಅಶೋಕ್ ಲೈಲ್ಯಾಂಡ್

ಇದರ ಜೊತೆಗೆ ಗ್ರಾಮೀಣ ಭಾಗದಲ್ಲಿನ ಆರೋಗ್ಯ ಸೌಕರ್ಯ ಮತ್ತು ಮೂಲಭೂತ ಸೌಕರ್ಯಗಳ ನಿರ್ಮಾಣಕ್ಕಾಗಿ ವಿಶೇಷ ಆದ್ಯತೆ ನೀಡುವುದಾಗಿ ಹೇಳಿಕೊಂಡಿರುವ ಆಟೋ ಕಂಪನಿಗಳು ಪರಿಸರ ಮತ್ತು ಆರೋಗ್ಯ ಕಾಳಜಿಗೆ ವಿಶೇಷ ಆಸಕ್ತಿ ವಹಿಸಿದ್ದು, ಶೀಘ್ರದಲ್ಲೇ ವೈದ್ಯಕೀಯ ಉಪಕರಣಗಳನ್ನು ಸರಬರಾಜು ಮಾಡುವುದಾಗಿ ಘೋಷಣೆ ಮಾಡಿವೆ.

ಕರೋನಾ ಸಂಕಷ್ಟ: ಪಿಎಂ ಪರಿಹಾರ ನಿಧಿಗೆ ದೇಣಿಗೆ ನೀಡಿದ ಅಶೋಕ್ ಲೈಲ್ಯಾಂಡ್

ಇನ್ನು ಚೀನಾದಿಂದ ಶುರುವಾದ ಕರೋನಾ ವೈರಸ್ ದಾಳಿಯು ಇದೀಗ ಇಡೀ ವಿಶ್ವವನ್ನೇ ವ್ಯಾಪಿಸಿದ್ದು, ಇದುವರೆಗೆ 32 ಲಕ್ಷ ಜನರಲ್ಲಿ ಸೋಂಕು ಕಾಣಿಸಿಕೊಂಡಿರುವುದಲ್ಲದೆ 2.28 ಲಕ್ಷ ಜನ ಪ್ರಾಣಕಳೆದುಕೊಂಡಿದ್ದಾರೆ. ಸೋಂಕಿತರಲ್ಲಿ ಇದುವರೆಗೆ ಸುಮಾರು 10.10 ಲಕ್ಷ ಜನ ಗುಣಮುಖರಾಗಿದ್ದು, ಶೇ.3 ರಷ್ಟು ಸೋಂಕು ಪಿಡಿತರ ಸ್ಥಿತಿ ಶೋಚನೀಯವಾಗಿದೆ.

MOST READ: ಕರೋನಾ ವೈರಸ್ ವಿರುದ್ದದ ಹೋರಾಟಕ್ಕೆ ಭಾರೀ ಪ್ರಮಾಣದ ದೇಣಿಗೆ ನೀಡಿದ ಟಿವಿಎಸ್ ಮೋಟಾರ್

ಕರೋನಾ ಸಂಕಷ್ಟ: ಪಿಎಂ ಪರಿಹಾರ ನಿಧಿಗೆ ದೇಣಿಗೆ ನೀಡಿದ ಅಶೋಕ್ ಲೈಲ್ಯಾಂಡ್

ಹೀಗಾಗೀ ವೈರಸ್ ತಡೆಗಾಗಿ ಈಗಾಗಲೇ ವಿಶ್ವದ ಎಲ್ಲಾ ರಾಷ್ಟ್ರಗಳು ಒಗ್ಗಟ್ಟಿನಿಂದ ಹೋರಾಟ ನಡೆಸುತ್ತಿದ್ದು, ಈ ಹಿನ್ನಲೆಯಲ್ಲಿ ಸದ್ಯ ವಾಹನಗಳ ಉತ್ಪಾದನೆಯನ್ನು ಸ್ಥಗಿತಗೊಳಿಸಿರುವ ಆಟೋ ಉತ್ಪಾದನಾ ಘಟಕಗಳಲ್ಲೇ ಅಗತ್ಯ ವೈದಕೀಯ ಉಪಕರಣಗಳಾದ ವೆಂಟಿಲೆಟರ್, ಮಾಸ್ಕ್‌, ಟೆಸ್ಟಿಂಗ್ ಕಿಟ್ ಉತ್ಪಾದನೆ ಶುರು ಮಾಡಲಾಗಿದೆ.

More from DriveSpark

Article Published On: Thursday, April 30, 2020, 17:51 [IST]
English summary
Ashok Leyland employees contribute Rupees 41 Lakhs to PM CARES Fund. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+