ಆಡಿ ಎ5 ಸ್ಪೋರ್ಟ್ ಬ್ಯಾಕ್ ಕಾರು ಬಿಡುಗಡೆ- ಆರಂಭಿಕ ಬೆಲೆ ರೂ.54.02 ಲಕ್ಷ..!!

2ನೇ ತಲೆಮಾರಿನ ಎ5 ಸ್ಪೋರ್ಟ್ ಬ್ಯಾಕ್ ಕಾರು ಆವೃತ್ತಿಗಳನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದ್ದು, ವಿನೂತನ ಕಾರುಗಳ ಆರಂಭಿಕ ಬೆಲೆಯೂ ರೂ.50.02 ಲಕ್ಷಕ್ಕೆ ಹಾಗೂ ಉನ್ನತ ಮಾದರಿಯೂ ರೂ.70.60 ಲಕ್ಷಕ್ಕೆ ಖರೀದಿಗೆ ಲಭ್ಯವಾಗಿವೆ.

By Praveen

ಜರ್ಮನ್ ಐಷಾರಾಮಿ ಕಾರು ಉತ್ಪಾದನಾ ಸಂಸ್ಥೆಯಾದ ಆಡಿ ತನ್ನ 2ನೇ ತಲೆಮಾರಿನ ಎ5 ಸ್ಪೋರ್ಟ್ ಬ್ಯಾಕ್ ಕಾರು ಆವೃತ್ತಿಗಳನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದ್ದು, ವಿನೂತನ ಕಾರುಗಳ ಆರಂಭಿಕ ಬೆಲೆಯೂ ರೂ.50.02 ಲಕ್ಷಕ್ಕೆ ಹಾಗೂ ಉನ್ನತ ಮಾದರಿಯೂ ರೂ.70.60 ಲಕ್ಷಕ್ಕೆ ಖರೀದಿಗೆ ಲಭ್ಯವಾಗಿವೆ.

ಆಡಿ ಎ5 ಸ್ಪೋರ್ಟ್ ಬ್ಯಾಕ್ ಕಾರು ಬಿಡುಗಡೆ- ಬೆಲೆ ರೂ.54.02 ಲಕ್ಷ..!!

ಎ5 ಸ್ಪೋರ್ಟ್ ಬ್ಯಾಕ್ ಆವೃತ್ತಿಯ ಜೊತೆಗೆ ಎ5 ಕ್ರಾಬಿಯೊಲೆಟ್ ಮತ್ತು ಎಸ್5 ಸ್ಪೋರ್ಟ್ ಬ್ಯಾಕ್ ಮಾದರಿಗಳನ್ನು ಕೂಡಾ ಬಿಡುಗಡೆಗೊಳಿಸಲಾಗಿದ್ದು, ಆಡಿ ಉತ್ಪಾದಿತ ಐಷಾರಾಮಿ ಕಾರು ಮಾದರಿಗಳಲ್ಲೇ ಇವು ಅತಿ ಹೆಚ್ಚು ಸುಧಾರಿತ ಎಂಜಿನ್ ಮಾದರಿಗಳಾಗಿವೆ.

ಆಡಿ ಎ5 ಸ್ಪೋರ್ಟ್ ಬ್ಯಾಕ್ ಕಾರು ಬಿಡುಗಡೆ- ಬೆಲೆ ರೂ.54.02 ಲಕ್ಷ..!!

ಕಾರು ಮಾದರಿಗಳು ಬೆಲೆಗಳು
ಎ5 ಸ್ಪೋರ್ಟ್ ಬ್ಯಾಕ್ ರೂ. 54.02 ಲಕ್ಷ
ಎ5 ಕ್ರಾಬಿಯೊಲೆಟ್ ರೂ. 67.51 ಲಕ್ಷ
ಎಸ್5 ಸ್ಪೋರ್ಟ್ ಬ್ಯಾಕ್ ರೂ. 70. 60 ಲಕ್ಷ

ಆಡಿ ಎ5 ಸ್ಪೋರ್ಟ್ ಬ್ಯಾಕ್ ಕಾರು ಬಿಡುಗಡೆ- ಬೆಲೆ ರೂ.54.02 ಲಕ್ಷ..!!

ಇನ್ನು ಬಿಡುಗಡೆಯಾದ ಎ5 ಸ್ಪೋರ್ಟ್ ಬ್ಯಾಕ್, ಎ5 ಕ್ರಾಬಿಯೊಲೆಟ್ ಮತ್ತು ಎಸ್5 ಸ್ಪೋರ್ಟ್ ಬ್ಯಾಕ್ ಆವೃತ್ತಿಗಳೆಲ್ಲವೂ ಸೆಡಾನ್ ಆವೃತ್ತಿಗಳಾಗಿದ್ದು, ದೂರದ ಪ್ರಯಾಣಕ್ಕೆ ಅನುಕೂಲವಾಗುವಂತೆ ಕಾರಿನ ಒಳ ವಿನ್ಯಾಸಗಳನ್ನು ಕೈಗೊಳ್ಳಲಾಗಿದೆ.

Recommended Video

Audi A5 Sportback, A5 Cabriolet And S5 Sportback Previewed In India - DriveSpark
ಆಡಿ ಎ5 ಸ್ಪೋರ್ಟ್ ಬ್ಯಾಕ್ ಕಾರು ಬಿಡುಗಡೆ- ಬೆಲೆ ರೂ.54.02 ಲಕ್ಷ..!!

ಡ್ಯಾಶ್ ಬೋರ್ಡ್, ಸೀಟುಗಳ ವಿನ್ಯಾಸ, ಸಭ್ಯತೆಯ ಹೆಡ್ ರೂಮ್, ಲೆಗ್ ರೂಮ್, ಸುಧಾರಿತ ಇನ್ಫೋಟೈನ್‌ಮೆಂಟ್ ಸೇರಿದಂತೆ ಹಲವು ಸೌಲಭ್ಯಗಳನ್ನು ಒದಗಿಸಲಾಗಿದ್ದು, 3ಡಿ ಹೆಡ್‌ಲ್ಯಾಂಪ್‌ಗಳು, ಸ್ಯಾಟಿನ್ ಫಿನಿಶ್ ವಿಂಗ್ ಕನ್ನಡಿಗಳು, ಪ್ಲಾಟಿನಂ ಸಿಂಗಲ್ ಫ್ರೇಮ್ ಗ್ರೀಲ್‌ನಂತಹ ವಿಶಿಷ್ಠ ವಿನ್ಯಾಸಗಳು ಎ5 ಸ್ಪೋರ್ಟ್ ಬ್ಯಾಕ್ ಆವೃತ್ತಿಗಳಿಗೆ ಹೊಸ ಲುಕ್ ನೀಡುವಂತಿದ್ದು, ಬಾಹ್ಯ ಶೈಲಿಯು ಕೂಡಾ ಆಕರ್ಷಣೆಗೆ ಕಾರಣವಾಗಿದೆ.

ಆಡಿ ಎ5 ಸ್ಪೋರ್ಟ್ ಬ್ಯಾಕ್ ಕಾರು ಬಿಡುಗಡೆ- ಬೆಲೆ ರೂ.54.02 ಲಕ್ಷ..!!

ಇದಲ್ಲದೇ ಹೊಸ ಕಾರುಗಳನ್ನು ಸಂಪೂರ್ಣ ಸುಧಾರಿತ ತಂತ್ರಜ್ಞಾನಗಳೊಂದಿಗೆ ಅಭಿವೃದ್ಧಿಗೊಳಿಸಲಾಗಿದ್ದು, ಕಾರಿನ ಮುಂಭಾಗದ ನೋಟದಲ್ಲಿ ಸ್ಪೋರ್ಟ್ ಲುಕ್ ನೀಡುವ ಮೂಲಕ ಪ್ರಮುಖ ಕಾರು ಮಾದರಿಗಳಿಗೆ ತೀವ್ರ ಸ್ಪರ್ಧೆ ಒಡ್ಡುವ ರೀತಿಯಲ್ಲಿ ವಿನ್ಯಾಸ ಕೈಗೊಳ್ಳಲಾಗಿದೆ.

ಆಡಿ ಎ5 ಸ್ಪೋರ್ಟ್ ಬ್ಯಾಕ್ ಕಾರು ಬಿಡುಗಡೆ- ಬೆಲೆ ರೂ.54.02 ಲಕ್ಷ..!!

ಎಂಜಿನ್

ಎ5 ಸ್ಪೋರ್ಟ್ ಬ್ಯಾಕ್ ಹಾಗೂ ಎ5 ಕ್ರಾಬಿಯೊಲೆಟ್ ಆವೃತ್ತಿಗಳು 2.0-ಲೀಟರ್ 4 ಸಿಲಿಂಡರಿನ ಟರ್ಬೋ ಡೀಸೆಲ್ ಎಂಜಿನ್ ಹೊಂದಿದ್ದು, 197-ಬಿಎಚ್‌ಪಿ ಮತ್ತು 400-ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿಯನ್ನು ಹೊಂದಿವೆ.

ಆಡಿ ಎ5 ಸ್ಪೋರ್ಟ್ ಬ್ಯಾಕ್ ಕಾರು ಬಿಡುಗಡೆ- ಬೆಲೆ ರೂ.54.02 ಲಕ್ಷ..!!

ಅಂತೆಯೇ ಎಸ್5 ಸ್ಪೋರ್ಟ್ ಬ್ಯಾಕ್ ಆವೃತ್ತಿಯು 3.0-ಲೀಟರ್ ವಿ6 ಎಂಜಿನ್ ಹೊಂದಿದ್ದು, 349-ಬಿಎಚ್‌ಪಿ ಹಾಗೂ ಆರೋಗ್ಯಕರ 500-ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿಯೊಂದಿಗೆ 7-ಸ್ಪೀಡ್ ಡ್ಯುಯಲ್ ಕ್ಲಚ್ ಟ್ರಾನ್ಸ್‌ಮಿಷನ್ ಹೊಂದಿದೆ.

ಆಡಿ ಎ5 ಸ್ಪೋರ್ಟ್ ಬ್ಯಾಕ್ ಕಾರು ಬಿಡುಗಡೆ- ಬೆಲೆ ರೂ.54.02 ಲಕ್ಷ..!!

ಜೊತೆಗೆ ಆಲ್ ವೀಲ್ಹ್ ಡ್ರೈವ್ ತಂತ್ರಜ್ಞಾನವನ್ನು ಕೂಡಾ ಎ5 ಸ್ಪೋರ್ಟ್ ಬ್ಯಾಕ್ ಆವೃತ್ತಿಗಳಲ್ಲಿ ಒದಗಿಸಲಾಗಿದ್ದು, ಕೇವಲ 4.7 ಸೇಕೆಂಡುಗಳಲ್ಲಿ 100 ಕಿಮಿ ವೇಗ ಪಡೆಯುವ ಮೂಲಕ ಗಂಟೆಗೆ 200 ಕಿಮಿ ದೂರವನ್ನು ಕ್ರಮಿಸಬಲ್ಲವು.

ಆಡಿ ಎ5 ಸ್ಪೋರ್ಟ್ ಬ್ಯಾಕ್ ಕಾರು ಬಿಡುಗಡೆ- ಬೆಲೆ ರೂ.54.02 ಲಕ್ಷ..!!

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಆಡಿ ಎ5 ಆವೃತ್ತಿಗಳ ಬಗೆಗೆ ಹೇಳುವುದಾದರೆ ಅತ್ಯುತ್ತಮ ಕಾರ್ಯಕ್ಷಮತೆ ಮತ್ತು ಐಷಾರಾಮಿ ವಿನ್ಯಾಸಗಳನ್ನು ಒದಗಿಸಿರುವ ಹಿನ್ನೆಲೆ ಬಿಎಂಡಬ್ಲ್ಯು 3-ಸೀರಿಸ್, ಮರ್ಸಿಡಿಸ್ ಎಸ್ ಕ್ಲಾಸ್, ವೋಲ್ಪೋ ಎಸ್60 ಮಾದರಿಗಳಿಗೆ ತೀವ್ರ ಸ್ಪರ್ಧಿ ಒಡ್ಡುವ ತವಕದಲ್ಲಿವೆ.

More from DriveSpark

Article Published On: Thursday, October 5, 2017, 16:05 [IST]
English summary
Read in Kannada about Audi A5 Launched In India. Prices Start At Rs 54.02 Lakh.
Read more on ಆಡಿ audi sedan
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+